ಬಿಡುಗಡೆಗೆ ಮುನ್ನವೇ Realme P3 Ultra 5G ವಿನ್ಯಾಸದ ಸಂಪೂರ್ಣ ವಿವರಗಳು ಬಹಿರಂಗ!
ಯುವ ಸ್ಮಾರ್ಟ್‌ಫೋನ್ ಪ್ರಿಯರು ಬಹು ನಿರೀಕ್ಷಿತವಾಗಿ ಎದುರುನೋಡುತ್ತಿರುವ Realme P3 5G ಮತ್ತು Realme P3 Ultra 5G ಸ್ಮಾರ್ಟ್‌ಫೋನ್‌ಗಳು ಇದೇ ಮಾರ್ಚ್ 19 ರಂದು ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿರುವುದನ್ನು ನೀವು ಈಗಾಗಲೇ ತಿಳಿದಿರಬಹುದು. ಇದೀಗ ಈ ಸರಣಿಯಲ್ಲಿನ ಪ್ರೊ ಮಾದರಿ Realme P3 Ultra 5G ಸ್ಮಾರ್ಟ್‌ಫೋನಿನ ಅಧಿಕೃತ ವಿನ್ಯಾಸವು ಹೇಗಿರುತ್ತದೆ ಎಂಬುದರ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿದೆ. Realme ಕಂಪನಿಯು ಬಿಡುಗಡೆ ಮಾಡಿದ ಟೀಸರ್ ಪ್ರಕಾರ, ಈ ಹೊಸ Realme P3 Ultra 5G ಸ್ಮಾರ್ಟ್‌ಫೋನ್ 'ಮೂನ್ ಡಾರ್ಕ್' ವಿನ್ಯಾಸದಲ್ಲಿ ಬರಲಿದೆ, ಮತ್ತು ಇದು ಹಗುರವಾದ ನಿರ್ಮಾಣ ಮತ್ತು ಕ್ವಾಡ್-ಕರ್ವ್ಡ್ ಡಿಸ್ಪ್ಲೇಯೊಂದಿಗೆ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ.
ಈ ವಿನ್ಯಾಸವು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಹಸಿರು ಹಾಲೋ ಪರಿಣಾಮವನ್ನು ಉಂಟುಮಾಡುವ ಬೆಳಕಿನ-ಸಂವೇದನಾ ಬಣ್ಣ ಬದಲಾವಣೆಯನ್ನು ಒಳಗೊಂಡಿದ್ದು, ಚಂದ್ರನ ಮಣ್ಣಿನ ವಿನ್ಯಾಸಕ್ಕೆ ಪೂರಕವಾಗಿದೆ. ಇದರಿಂದ ಬಳಕೆದಾರರಿಗೆ ಚಂದ್ರನ ಮೇಲ್ಮೈ ಧೂಳನ್ನು ಸ್ಪರ್ಶಿಸುವ ಅನುಭವವನ್ನು ನೀಡುತ್ತದೆ ಎಂದು ಕಂಪನಿಯು ತಿಳಿಸಿದೆ. ಇದರ ಜೊತೆಗೆ, Realme P3 Ultra 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಅತ್ಯಂತ ತೆಳ್ಳಗಿನ ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಹೊಂದಿರುವ ಸಾಧನ, ಇದರ ದಪ್ಪ 7.38 ಮಿಮೀ ಮತ್ತು ತೂಕ 183 ಗ್ರಾಂ ಎಂದು ಕಂಪನಿಯು ಜಾಹಿರಾತು ನೀಡಿದೆ. ಇಷ್ಟೇ ಅಲ್ಲದೆ, ನೆಪ್ಚೂನ್ ಬ್ಲೂ ಮತ್ತು ಓರಿಯನ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿರುವ ಈ ಸ್ಮಾರ್ಟ್‌ಫೋನಿನಲ್ಲಿರುವ ಚಿಪ್‌ಸೆಟ್, ಡಿಸ್‌ಪ್ಲೇ, ಬ್ಯಾಟರಿ, ಚಾರ್ಜಿಂಗ್ ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಕುರಿತು ಹೆಚ್ಚಿನ ಮಾಹಿತಿಗಳನ್ನು ಕೂಡ ಬಹಿರಂಗಪಡಿಸಲಾಗಿದೆ.

Realme P3 5G ಮತ್ತು P3 Ultra 5G ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳ ಕುರಿತಂತೆ ಹೆಚ್ಚಿನ ವಿವರಗಳನ್ನು ನೋಡೋಣ.
Realme P3 Ultra 5G ವೈಶಿಷ್ಟ್ಯಗಳು
Realme P3 Ultra ಫೋನ್, MediaTek Dimensity 8350 ಚಿಪ್‌ಸೆಟ್‌ನೊಂದಿಗೆ, ವಿಶ್ವದ ಮೊದಲ ಹ್ಯಾಂಡ್‌ಸೆಟ್ ಆಗಿ ಬಿಡುಗಡೆಗೊಳ್ಳಲಿದೆ ಎಂದು ಕಂಪನಿಯು ಈಗಾಗಲೇ ದೃಢಪಡಿಸಿದೆ. ಇದು 1.45 ಮಿಲಿಯನ್‌ಗಿಂತ ಹೆಚ್ಚು AnTuTu ಸ್ಕೋರ್ ಅನ್ನು ಸಾಧಿಸಿದೆ ಎಂದು ತಿಳಿಸಲಾಗಿದೆ. ಫೋನ್ 12GB LPDDR5x RAM ಮತ್ತು 256GB UFS 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. Realme P3 Ultra 5G Gಫೋಮ್ಬೂಸ್ಟ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ಬಳಕೆದಾರರ ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ. BGMI ನಲ್ಲಿ ಮೂರು ಗಂಟೆಗಳ ಕಾಲ 90fps ಗೇಮ್‌ಪ್ಲೇ ಮತ್ತು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಎಂದು ತಿಳಿಸಲಾಗಿದೆ. ಹ್ಯಾಂಡ್‌ಸೆಟ್ 6050mm² VC ಕೂಲಿಂಗ್ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ. ಇದಲ್ಲದೆ, 2,500Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿರುವ ಡಿಸ್‌ಪ್ಲೇ, 6,000mAh ಬ್ಯಾಟರಿ ಮತ್ತು 80W AI ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ, ಇದು ಗೇಮಿಂಗ್ ಸಮಯದಲ್ಲಿ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ. ಇದು ಐದು ವರ್ಷಗಳ ಬಾಳಿಕೆ ನೀಡುತ್ತದೆ ಎಂದು ಹೇಳಲಾಗಿದೆ.
Realme P3 5G ವೈಶಿಷ್ಟಗಳು
Realme P3 5G ಸ್ಮಾರ್ಟ್‌ಫೋನ ಸ್ನಾಪ್‌ಡ್ರಾಗನ್ 6 Gen 4 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದು ಶೇಕಡಾ 15 ರಷ್ಟು ಸುಧಾರಿತ CPU ಕಾರ್ಯಕ್ಷಮತೆಯನ್ನು ಒದಗಿಸುತ್ತದೆ ಎಂದು ತಿಳಿಸಲಾಗಿದೆ. ಈ ಸ್ಮಾರ್ಟ್‌ಫೋನ್ AnTuTu ಪರೀಕ್ಷೆಯಲ್ಲಿ 7,50,000 ಅಂಕಗಳನ್ನು ಗಳಿಸಿದೆ ಎಂದು ಕಂಪನಿಯು ಹೇಳಿದೆ. ಈ ಹ್ಯಾಂಡ್‌ಸೆಟ್ AI ಮೋಷನ್ ಕಂಟ್ರೋಲ್ ಮತ್ತು AI ಅಲ್ಟ್ರಾ ಟಚ್ ಕಂಟ್ರೋಲ್ ಸೇರಿದಂತೆ GT ಬೂಸ್ಟ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. Realme P3 5G ಫೋನ್ BGMI ಗಾಗಿ 90fps ಗೇಮ್‌ಪ್ಲೇ ಅನ್ನು ಬೆಂಬಲಿಸುತ್ತದೆ ಎಂದು ಕಂಪನಿಯು ದೃಢಪಡಿಸಿದೆ. ಸುಧಾರಿತ ಶಾಖ ಪ್ರಸರಣಕ್ಕಾಗಿ, ಇದು ಏರೋಸ್ಪೇಸ್-ಗ್ರೇಡ್ ಕೂಲಿಂಗ್ ಅನ್ನು ಹೊಂದಿದೆ. ಆಂಟೆನಾ ಅರೇ ಮ್ಯಾಟ್ರಿಕ್ಸ್ 2.0 ತಂತ್ರಜ್ಞಾನವು "ಸಬ್‌ವೇಗಳಂತಹ ಕಡಿಮೆ-ಸಿಗ್ನಲ್ ಪ್ರದೇಶಗಳಲ್ಲಿ" ಹ್ಯಾಂಡ್‌ಸೆಟ್‌ನ ಸಂಪರ್ಕವನ್ನು ಶೇಕಡಾ 30 ರಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಲಾಗಿದೆ. ಇದೇ ಮಾರ್ಚ್ 19 ರಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಕುರಿತಂತೆ ಮತ್ತಷ್ಟು ವಿವರಗಳನ್ನು ತಿಳಿಯಲು ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.


Click it and Unblock the Notifications








