ಇಂದು Realme P3x 5G ಫಸ್ಟ್ ಸೇಲ್; ಬೆಲೆ ಎಷ್ಟು? ಆಫರ್ ಏನಿದೆ? ಇಲ್ಲಿವೆ ಟಾಪ್ 5 ಫೀಚರ್ಸ್
ರಿಯಲ್‌ಮಿ ಪ್ರಿಯರಿಗೆ ಇಂದು ಸಂತೋಷದ ದಿನ. ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿರುವ 5G ಫೋನ್ ಅಧಿಕೃತವಾಗಿ ಗ್ರಾಹಕರ ಕೈ ಸೇರಲಿದೆ. ಹೌದು, ಬಹುನಿರೀಕ್ಷಿತ ರಿಯಲ್‌ಮಿ P3x 5G (realme P3x 5G) ಮೊಬೈಲ್ ದೇಶೀಯ ಮಾರುಟ್ಟೆಗೆ ಲಗ್ಗೆ ಇಟ್ಟಿದೆ. ಅಂದಹಾಗೆ, ಈ ಹೊಸ ಸ್ಮಾರ್ಟ್‌ಲಾಂಚ್ ಆಫರ್‌ಗಳೊಂದಿಗೆ ಇಂದು (ಫೆಬ್ರವರಿ 28) ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಹಾಗಿದ್ರೆ, ಈ ಹೊಸ ರಿಯಲ್‌ಮಿ ಫೋನಿನ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ರಿಯಲ್‌ಮಿ P3x 5G ಜೊತೆಗೆ ರಿಯಲ್‌ಮಿ P3 ಪ್ರೊ 5G (realme P3 Pro 5G) ಸಹ ಬಿಡುಗಡೆಯಾಗಿತ್ತು. ಈ ಮೊಬೈಲ್ ಈಗಾಗಲೇ ಮಾರಾಟ ಪ್ರಾರಂಭಿಸಿದೆ. ಇದೀಗ ರಿಯಲ್‌ಮಿ P3x ಮಾರಾಟಕ್ಕೆ ಸಜ್ಜಾಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 128GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಲಭ್ಯವಿದೆ. ಈ ರಿಯಲ್‌ಮಿ ಫೋನ್ ಬಜೆಟ್ ಬೆಲೆಯಲ್ಲಿ ಬರುತ್ತದೆ.

ರಿಯಲ್‌ಮಿ P3x 5G ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವು 13,999 ರೂ.ಗೆ ಬಿಡುಗಡೆಯಾಗಿದೆ. 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ 14,999 ರೂ. ಇದೆ. ಕಂಪನಿಯು ಮೊದ ಮಾರಾಟದ ಪ್ರಯುಕ್ತ ಕೆಲವು ಆಫರ್ ಘೋಷಿಸಿದೆ. ನೀವು 1,000 ರೂ. ಬ್ಯಾಂಕ್ ಆಫರ್ ಲಾಭ ಪಡೆಯಬಹುದು. ಜೊತೆಗೆ 500 ಎಕ್ಸ್‌ಚೇಂಜ್ ಬೋನಸ್ ಸಹ ಲಭ್ಯವಿದೆ. ಈ ಫೋನ್ ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ಅಧಿಕೃತವಾಗಿ ಮಾರಾಟ ಪ್ರಾರಂಭಿಸಲಿದೆ. ನೀವು ಮಿಡ್‌ನೈಟ್ ಬ್ಲೂ, ಲೂನಾರ್ ಸಿಲ್ವರ್ ಮತ್ತು ಸ್ಟೆಲ್ಲರ್ ಪಿಂಕ್ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು.
ರಿಯಲ್‌ಮಿ P3x 5G: ಟಾಪ್ 5 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1.5K ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 1,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಫೋನಿನಲ್ಲಿ ವೆಟ್ ಟಚ್ ತಂತ್ರಜ್ಞಾನ ಸಹ ಲಭ್ಯವಿದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ P3x 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್ ಹೊಂದಿದೆ. ಇದು ಪ್ರೊಸೆಸರ್‌ನಲ್ಲಿ ಬಿಡುಗಡೆಯಾದ ವಿಶ್ವದ ಪ್ರಥಮ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6GB RAM ಮತ್ತು 8GB RAM ಆಯ್ಕೆ ಲಭ್ಯವಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್
ರಿಯಲ್‌ಮಿ P3x 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರಲ್ಲಿ OTG ಮತ್ತು ರಿವರ್ಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನಲ್ಲಿ ಎಐ (AI) ಎರೇಸ್, ಬೆಸ್ಟ್ ಫೇಸ್, ಮೋಷನ್ ಡಿಬಲ್ರ್, ಎಐ ರೆಕಾರ್ಡಿಂಗ್ ಸಾರಾಂಶ, ಎಐ ರೈಟರ್, ಗೂಗಲ್ ಸರ್ಕಲ್ ಟು ಸರ್ಚ್ ಮತ್ತು ಎಐ ರಿಪ್ಲೈ ಸೇರಿದಂತೆ ಮುಂತಾದ ಫೀಚರ್ಸ್ ಲಭ್ಯವಿದೆ.


Click it and Unblock the Notifications








