ಫೆ.20 ರಂದು ಬರುತ್ತಿದೆ 10 ಸಾವಿರ ಬೆಲೆ ನಿರೀಕ್ಷಿತ Realme P4 Lite 4G!
ಭಾರತೀಯ ಮೊಬೈಲ್ ಮಾರುಕಟ್ಟೆಗೆ ಮತ್ತೊಂದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಒಂದು ಇದೇ ವಾರದಲ್ಲಿ ಸೇರ್ಪಡೆಯಾಗುವುದು ಇಂದು ಅಧಿಕೃತವಾಗಿದೆ. ಜನಪ್ರಿಯ ಮೊಬೈಲ್ ಬ್ರ್ಯಾಂಡ್ Realme ತನ್ನ ಹೊಸ Realme P4 Lite 4G ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ಇದೇ ಫೆಬ್ರವರಿ 20, 2026 ರಂದು ಬಿಡುಗಡೆ ಮಾಡುವುದಾಗಿ ಇಂದು ಅಧಿಕೃತವಾಗಿ ಘೋಷಿಸಿದ್ದು, ಹೆಚ್ಚು ಬ್ಯಾಟರಿ ಬ್ಯಾಕಪ್ ಮತ್ತು ದೈನಂದಿನ ಬಳಕೆಗೆ ಸಮತೋಲನದ ಕಾರ್ಯಕ್ಷಮತೆ ಬಯಸುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. ಈ ಹೊಸ ಫೋನ್ ಕುರಿತ ಪ್ರಮುಖ ಮಾಹಿತಿಗಳು ಕೆಳಕಂಡಂತಿವೆ.
UNISOC T7250 ಚಿಪ್‌ಸೆಟ್: ಮೂಲಭೂತ ಬಳಕೆಗಾಗಿ
ಮುಂಬರುವ ಈ Realme P4 Lite 4G ಫೋನ್‌ನಲ್ಲಿ UNISOC T7250 ಆಕ್ಟಾ-ಕೋರ್ ಪ್ರೊಸೆಸರ್ ಬಳಸಲಾಗಿದೆ ಎಂಬುದನ್ನು ಕಂಪೆನಿ ಸ್ಪಷ್ಟಪಡಿಸಿದೆ. ಇದರಿಂದ ಮೂಲಭೂತ ಕಾರ್ಯಕ್ಷಮತೆಯ ಮೇಲೆ ಹೆಚ್ಚು ಒತ್ತು ನೀಡಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಸಾಮಾಜಿಕ ಜಾಲತಾಣಗಳು, ಬ್ರೌಸಿಂಗ್, ವಿಡಿಯೋ ವೀಕ್ಷಣೆ ಹಾಗೂ ಸಾಮಾನ್ಯ ಆಪ್ ಬಳಕೆಗೆ ಇದು ಸಾಕಷ್ಟು ಇರಲಿದೆ. ಆದರೆ ಹೆವಿ ಗೇಮಿಂಗ್ ಅಥವಾ ಹೆಚ್ಚಿನ ಮಲ್ಟಿಟಾಸ್ಕಿಂಗ್ ಮಾಡುವವರಿಗೆ ಇದು ಪ್ರೀಮಿಯಂ ಕಾರ್ಯಕ್ಷಮತೆಯನ್ನು ನೀಡುವ ಸಾಧನವಲ್ಲ ಎಂದು ಹೇಳಬಹುದು.
6300mAh ಬ್ಯಾಟರಿ: ಈ ವಿಭಾಗದ ಹೈಲೈಟ್
Realme P4 Lite 4G ಯ ಪ್ರಮುಖ ಆಕರ್ಷಣೆ ಅದರ 6300mAh ಸಾಮರ್ಥ್ಯದ ಬ್ಯಾಟರಿ. ಕಂಪನಿ ಹೇಳುವಂತೆ, ಇದು ತನ್ನ ವಿಭಾಗದಲ್ಲೇ ಅತಿದೊಡ್ಡ ಬ್ಯಾಟರಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣ ಬಳಕೆ, ವಿಡಿಯೋ ಸ್ಟ್ರೀಮಿಂಗ್, ಆನ್‌ಲೈನ್ ತರಗತಿಗಳು, ವಾಯ್ಸ್ ಮತ್ತು ವಿಡಿಯೋ ಕರೆಗಳು ಮುಂತಾದ ದಿನನಿತ್ಯದ ಚಟುವಟಿಕೆಗಳಿಗೆ ಹೆಚ್ಚು ಕಾಲ ಚಾರ್ಜ್ ಉಳಿಯುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಹೆಚ್ಚು ಪ್ರಯಾಣಿಸುವವರಿಗೆ ಇದು ಉಪಯುಕ್ತ ಆಯ್ಕೆಯಾಗಬಹುದು.

ದೊಡ್ಡ ಬ್ಯಾಟರಿ, ಆದರೆ ಸ್ಲಿಮ್ ವಿನ್ಯಾಸ
6300mAh ಬ್ಯಾಟರಿ ಇದ್ದರೂ, Realme P4 Lite 4G ಫೋನ್ ಕೇವಲ 7.94 ಮಿಮೀ ದಪ್ಪ ಹೊಂದಿದೆ ಎಂದು ಕಂಪನಿ ಹೇಳಿದೆ. ಅಂದರೆ, ದಪ್ಪ ಮತ್ತು ಭಾರವಾಗಿರುವ ಫೋನ್ ಎಂಬ ಭಾವನೆ ಬರದಂತೆ ವಿನ್ಯಾಸ ಮಾಡಲಾಗಿದೆ. ಜೊತೆಗೆ IP54 ರೇಟಿಂಗ್ ಇರುವುದರಿಂದ ಧೂಳು ಮತ್ತು ನೀರಿನ ಸಣ್ಣ ಹೊಡೆತಗಳಿಂದ ರಕ್ಷಣೆ ಸಿಗಲಿದೆ. ಇದು ಸಂಪೂರ್ಣ ಜಲನಿರೋಧಕ ಸಾಧನವಲ್ಲ, ಆದರೆ ದೈನಂದಿನ ಬಳಕೆಯಲ್ಲಿ ಹೆಚ್ಚುವರಿ ಸುರಕ್ಷತೆ ನೀಡುವಂತೆ ವಿನ್ಯಾಸಗೊಂಡಿದೆ.
AI ವೈಶಿಷ್ಟ್ಯಗಳೂ ಲಭ್ಯ
ಈ ಹೊಸ Realme P4 Lite 4G ಫೋನಿನ ಸಾಫ್ಟ್‌ವೇರ್ ಭಾಗದಲ್ಲಿ AI ಆಧಾರಿತ ಕೆಲವು ವೈಶಿಷ್ಟ್ಯಗಳನ್ನು realme ಒದಗಿಸುತ್ತಿದೆ. Circle to Search, AI ಫೋಟೋ ಸುಧಾರಣೆ ಹಾಗೂ Noise Reduction Call 2.0 ಮುಂತಾದ ಆಯ್ಕೆಗಳು ಬಳಕೆದಾರ ಅನುಭವವನ್ನು ಸುಲಭಗೊಳಿಸಲು ಸಹಾಯ ಮಾಡಲಿವೆ. ಇವುಗಳಲ್ಲಿ ವಿಶೇಷವಾಗಿ ಕರೆಗಳ ವೇಳೆ ಹಿನ್ನಲೆ ಶಬ್ದವನ್ನು ಕಡಿಮೆ ಮಾಡುವ Noise Reduction Call 2.0 ಫೀಚರ್ ತಂತ್ರಜ್ಞಾನವು ಗಮನಸೆಳೆಯಲಿದೆ ಎಂದು ಹೇಳಲಾಗಿದೆ.
ಬೆಲೆ ಇರೀಕ್ಷೆ ಹೇಗಿದೆ?
ಈವರೆಗೆ Realme P4 Lite 4G ಬೆಲೆ, ಮಾರಾಟ ವೇದಿಕೆಗಳು ಅಥವಾ ಮೊದಲ ಮಾರಾಟ ದಿನಾಂಕದ ಬಗ್ಗೆ ಕಂಪನಿ ಮಾಹಿತಿ ಹಂಚಿಕೊಂಡಿಲ್ಲ. ಫೆಬ್ರವರಿ 20ರ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಎಲ್ಲಾ ವಿವರಗಳು ಪ್ರಕಟವಾಗುವ ನಿರೀಕ್ಷೆ ಇದೆ. ಆದರೆ, ಫೀಚರ್ಸ್‌ಗಳನ್ನು ನೋಡಿದಾಗ, ಭಾರತದಲ್ಲಿ Realme P4 Lite 4G ಫೋನ್ ಬೆಲೆ ಸುಮಾರು ₹10,000ಕ್ಕಿಂತ ಕಡಿಮೆ ಇರುವ ನಿರೀಕ್ಷೆಯಿದೆ. 4G ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸ್ಪರ್ಧೆ ಇನ್ನೂ ತೀವ್ರವಾಗಿರುವುದರಿಂದ, ಇದರ ಬೆಲೆ ನಿಗದಿಯು ಸ್ಪರ್ಧಾತ್ಮಕವಾಗಿರಲಿದೆ. ಒಟ್ಟಿನಲ್ಲಿ, ಹೆಚ್ಚು ಬ್ಯಾಟರಿ ಬ್ಯಾಕಪ್, ಸ್ಲಿಮ್ ವಿನ್ಯಾಸ ಮತ್ತು ದೈನಂದಿನ ಬಳಕೆಗೆ ತಕ್ಕ ಕಾರ್ಯಕ್ಷಮತೆ ಹುಡುಕುತ್ತಿರುವ ಬಳಕೆದಾರರಿಗೆ Realme P4 Lite 4G ಗಮನಾರ್ಹ ಆಯ್ಕೆಯಾಗಬಹುದು. ಅಧಿಕೃತ ಬಿಡುಗಡೆ ಬಳಿಕ ಸಂಪೂರ್ಣ ವಿವರಗಳು ಸ್ಪಷ್ಟವಾಗಲಿವೆ.


Click it and Unblock the Notifications