Home
ಮೊಬೈಲ್

₹10 ಸಾವಿರ ಬೆಲೆಯ 5G ಫೋನ್ ಆಗಿ ಬರಬಹುದು Realme P4 Lite!

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಫೋನ್‌ಗಳ ಪಟ್ಟಿಯಲ್ಲಿ Realme P ಸರಣಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ Realme ಕಂಪೆನಿಯು ಕೂಡ ತನ್ನ P ಸರಣಿಯನ್ನು ಹೆಚ್ಚೆಚ್ಚು ವಿಸ್ತರಿಸುವ ಕಾರ್ಯವನ್ನು ಮುಂದುವರೆಸಿದ್ದು, ಇತ್ತೀಚಿನ ಜನಪ್ರಿಯ Realme P4 Lite ಅಡಿಯಲ್ಲಿ ಶೀಘ್ರವೇ 5G ಆವೃತ್ತಿಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಹೊಸ 5G ಫೋನ್ ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ Realme P4 Lite 4G ಮಾದರಿಗೆ ಮುಂದುವರೆದ ಅಪ್‌ಡೇಟ್ ಆಗಿ ಬರುವ ನಿರೀಕ್ಷೆಯಿದೆ.

ಜನಪ್ರಿಯ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಹೊಸದಾಗಿ ತೆರೆಯಲಾಗಿರುವ ಮೈಕ್ರೋಸೈಟ್‌ನಲ್ಲಿ 5G ಆವೃತ್ತಿಯಲ್ಲಿ Realme P4 Lite ಫೋನ್ ಬರುವುದು ಖಚಿತವಾಗಿದೆ. ಈ ಮೈಕ್ರೋಸೈಟ್‌ನಲ್ಲಿ ಫೋನ್‌ನ ಸಂಪೂರ್ಣ ತಾಂತ್ರಿಕ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಅದರ URL ಮೂಲಕ ನೋಡಿದರೆ, ಈ ಸಾಧನವನ್ನು Realme P4 Lite 5G ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ತರುವುದಾಗಿ ಸ್ಪಷ್ಟವಾಗಿದೆ. ಮತ್ತು ಲೈವ್ ಆಗಿರುವ ವಿಶೇಷ ಮೈಕ್ರೋಸೈಟ್‌ನಿಂದ ಮುಂಬರುವ ಈ 5G ಫೋನ್‌ನ ವಿನ್ಯಾಸದ ಬಗ್ಗೆ ಕೆಲವು ಪ್ರಮುಖ ಸುಳಿವುಗಳನ್ನು ನೀಡಲಾಗಿದೆ.

Realme ಕಂಪನಿ ಕೆಲವು ಟೀಸರ್ ಚಿತ್ರಗಳನ್ನು ಹಂಚಿಕೊಂಡಿದೆ. ಇವುಗಳ ಪ್ರಕಾರ Realme P4 Lite 5G ಫೋನ್‌ನ ಹಿಂಭಾಗದಲ್ಲಿ ಮೂರು ಪ್ರತ್ಯೇಕ ಕಟ್‌ಔಟ್‌ಗಳು ಕಾಣಿಸುತ್ತವೆ. ಇದರಿಂದ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರುವ ನಿರೀಕ್ಷೆ ವ್ಯಕ್ತವಾಗಿದೆ. ಕ್ಯಾಮೆರಾ ಭಾಗದ ಪಕ್ಕದಲ್ಲಿ ಇನ್ನೊಂದು ಸಣ್ಣ ಕಟ್‌ಔಟ್ ಕೂಡ ಕಂಡುಬರುತ್ತಿದ್ದು, ಅದು LED ಫ್ಲ್ಯಾಶ್‌ಗೆ ಇರಬಹುದು ಎಂದು ಊಹಿಸಲಾಗಿದೆ. ಆದಾಗ್ಯೂ, ಫೋನ್‌ನ ಅಧಿಕೃತ ಬಿಡುಗಡೆ ದಿನಾಂಕ, ಬಳಸಲಿರುವ ಚಿಪ್‌ಸೆಟ್, ಬ್ಯಾಟರಿ ಸಾಮರ್ಥ್ಯ, ಕ್ಯಾಮೆರಾ ವಿವರಗಳು ಹಾಗೂ ಬೆಲೆ ಕುರಿತು ಕಂಪನಿ ಇನ್ನೂ ಮಾಹಿತಿ ನೀಡಿಲ್ಲ.

₹10 ಸಾವಿರ ಬೆಲೆಯ 5G ಫೋನ್ ಆಗಿ ಬರಬಹುದು Realme P4 Lite!

Realme P4 Lite 4G : ಹೋಲಿಕೆಗಾಗಿ ನೋಡುವುದಾದರೆ,
ಮೊದಲೇ ಹೇಳಿದಂತೆ, ಶೀಘ್ರದಲ್ಲೇ ಬಿಡುಗಡೆಯಾಗಲಿರುವ Realme P4 Lite 5G ಫೋನ್ ಮೂಲತಃ ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಯಾದ Realme P4 Lite ಮಾದರಿಯ 5G ಆವೃತ್ತಿಯಾಗಲಿದೆ. ಈ ಫೋನ್ ಫೆಬ್ರವರಿ 24ರಂದು ಭಾರತದಲ್ಲಿ ಪರಿಚಯಗೊಂಡಿದ್ದು, ಅದರ ಆರಂಭಿಕ ಬೆಲೆ ರೂ. 9,999 ಆಗಿದೆ. ಈ ಬೆಲೆ 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗಾಗಿ ನಿಗದಿಪಡಿಸಲಾಗಿದೆ. ಪ್ರಸ್ತುತ ಈ ಫೋನ್ Flipkart ನಲ್ಲಿ Beach Gold, Obsidian Black ಮತ್ತು Sea Blue ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಲು ಲಭ್ಯವಿದೆ.

ವಿಶೇಷಣಗಳ ವಿಷಯಕ್ಕೆ ಬಂದರೆ, Realme P4 Lite ನಲ್ಲಿ 6.74 ಇಂಚಿನ HD+ (720 × 1600 ಪಿಕ್ಸೆಲ್) ಡಿಸ್ಪ್ಲೇ ನೀಡಲಾಗಿದೆ. ಈ ಪರದೆ 90Hz ರಿಫ್ರೆಶ್ ರೇಟ್‌ನ್ನು ಬೆಂಬಲಿಸುವುದರ ಜೊತೆಗೆ ಗರಿಷ್ಠ 563 ನಿಟ್ಸ್ ಬ್ರೈಟ್‌ನೆಸ್ ಒದಗಿಸುತ್ತದೆ. ಫೋನ್ 12nm ತಂತ್ರಜ್ಞಾನದಲ್ಲಿ ನಿರ್ಮಿತವಾದ ಆಕ್ಟಾ-ಕೋರ್ Unisoc T7250 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಇದರ ಗರಿಷ್ಠ ಕ್ಲಾಕ್ ವೇಗ 1.8GHz ಆಗಿದೆ. ಜೊತೆಗೆ ಧೂಳು ಮತ್ತು ನೀರಿನ ಸಿಂಪಡಣೆಯಿಂದ ರಕ್ಷಣೆ ನೀಡುವ IP54 ರೇಟಿಂಗ್ ಕೂಡ ಫೋನ್‌ಗೆ ನೀಡಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, ಫೋನ್ 13 ಮೆಗಾಪಿಕ್ಸೆಲ್ ಸಿಂಗಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 6,300mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದ್ದು, 15W ವೈರ್ಡ್ ಚಾರ್ಜಿಂಗ್ ಬೆಂಬಲವನ್ನು ಒದಗಿಸುತ್ತದೆ. ಈಗ ಇದೇ ಮಾದರಿಯ 5G ಆವೃತ್ತಿ ಬಿಡುಗಡೆಯಾಗಲಿರುವುದರಿಂದ, ಕಡಿಮೆ ಬೆಲೆಯಲ್ಲೇ 5G ಫೋನ್ ಬೇಕೆಂದಿರುವ ಭಾರತೀಯ ಬಳಕೆದಾರರಲ್ಲಿ ಈ ಫೋನ್‌ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಹೊಸ ಫೋನ್ ಬೆಲೆಯು ಸಹ 10 ಸಾವಿರ ವಿಭಾಗದಲ್ಲಿ ಇರುವ ಸಾಧ್ಯತೆ ಇದೆ.

Best Mobiles in India

English summary
Realme is preparing to launch the Realme P4 Lite 5G in India as an upgrade to the recently released P4 Lite 4G. A new Flipkart microsite has confirmed the upcoming device, hinting at its design and suggesting that the budget 5G smartphone could debut soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+