Home
ಮೊಬೈಲ್

ಭಾರತದಲ್ಲಿ ರಿಯಲ್‌ಮಿ P4 ಸರಣಿ ಬಿಡುಗಡೆ: ಹೊಸ ಅಲೆಯನ್ನೇ ಸೃಷ್ಟಿಸುವ ಸಾಧ್ಯತೆ!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ರಿಯಲ್‌ಮಿ P4 ಸರಣಿಯು ಇಂದು (20 ಆಗಸ್ಟ್) ಅಧಿಕೃತವಾಗಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ, ಈ ಸರಣಿಯಲ್ಲಿ ರಿಯಲ್‌ಮಿ P4 ಪ್ರೊ 5G ಮತ್ತು ರಿಯಲ್‌ಮಿ P4 5G ಎರಡು ಸ್ಮಾರ್ಟ್‌ಫೋನ್‌ಗಳು ಪರಿಚಯಗೊಂಡಿದ್ದು, ಹೊಸ ತಂತ್ರಜ್ಞಾನ ಮತ್ತು ಆಕರ್ಷಕ ಬೆಲೆಯೊಂದಿಗೆ ಈ ಫೋನ್‌ಗಳು ದೇಶದ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬಂದಿದೆ. ಈ ಲೇಖನದಲ್ಲಿ ಹೊಸ ರಿಯಲ್‌ಮಿ P4 ಪ್ರೊ 5G ಮತ್ತು ರಿಯಲ್‌ಮಿ P4 5G ಎರಡೂ ಫೋನ್‌ಗಳ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳ ಕುರಿತು ಸಮಗ್ರ ಮಾಹಿತಿಯನ್ನು ನೊಡೋಣ ಬನ್ನಿ.

ರಿಯಲ್‌ಮಿ P4 ಪ್ರೊ 5G:ಪ್ರಮುಖ ವೈಶಿಷ್ಟ್ಯಗಳು
ರಿಯಲ್‌ಮಿ P4 ಸರಣಿಯಲ್ಲಿ ಪ್ರೊ ಮಾದರಿಯಾದ ರಿಯಲ್‌ಮಿ P4 ಪ್ರೊ 5G ಫೋನ್ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಇದು 144Hz ರಿಫ್ರೆಶ್ ರೇಟ್ ಮತ್ತು 6,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ 6.8 ಇಂಚಿನ ಪೂರ್ಣ-HD+ (1,080×2,800 ಪಿಕ್ಸೆಲ್‌ಗಳು) AMOLED 4D ಕರ್ವ್+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಮಾಡುತ್ತದೆ.

ಕಾರ್ಯಕ್ಷಮತೆಗಾಗಿ, ಈ ಫೋನ್ ಸ್ನಾಪ್‌ಡ್ರಾಗನ್ 7 Gen 4 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು 12GB ವರೆಗೆ LPDDR4X RAM ಮತ್ತು 256GB ವರೆಗೆ UFS 3.1 ಸಂಗ್ರಹಣೆಯನ್ನು ಒಳಗೊಂಡಿದೆ. ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6 ನೊಂದಿಗೆ ಈ ಫೋನ್ ಕಾರ್ಯನಿರ್ವಹಿಸಲಿದೆ.

ಗೇಮಿಂಗ್‌ಗಾಗಿ, ಈ ಫೋನ್‌ನಲ್ಲಿ AI-ಬೆಂಬಲಿತ ಹೈಪರ್ ವಿಷನ್ ಚಿಪ್‌ಸೆಟ್ ಇರುವುದು ವಿಶೇಷ. ಇದು ಗೇಮಿಂಗ್ ಅನುಭವವನ್ನು ಹೆಚ್ಚಿಸಿ, ಫ್ರೇಮ್ ರೇಟ್ ಮತ್ತು ಸ್ಪಷ್ಟತೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ. 7,000 ಚದರ ಮಿಮೀ ಏರ್‌ಫ್ಲೋ VC ಕೂಲಿಂಗ್ ಸಿಸ್ಟಮ್‌ನಿಂದ ಫೋನ್ ಅಧಿಕ ಬಿಸಿಯಾಗುವುದನ್ನು ತಡೆಯಬಹುದು ಎಂದು ಕಂಪೆನಿ ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ ರಿಯಲ್‌ಮಿ P4 ಪ್ರೊ 5G ಫೋ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX896 ಪ್ರಾಥಮಿಕ ಸೆನ್ಸರ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಅನ್ನು ಹೊಂದಿದೆ. ಸೆಲ್ಫಿಗಾಗಿ 50 ಮೆಗಾಪಿಕ್ಸೆಲ್ OV50D ಸೆನ್ಸರ್ ನೀಡಲಾಗಿದೆ. ಎರಡೂ ಕ್ಯಾಮೆರಾಗಳು 60fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್‌ಗೆ ಸಹಕರಿಸುತ್ತವೆ.

ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ, ಈ ಫೋನ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 10W ರಿವರ್ಸ್ ಚಾರ್ಜಿಂಗ್ ಬೆಂಬಲಿಸುವ 7,000mAh ಬ್ಯಾಟರಿ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, ವೈ-ಫೈ 6 ಮತ್ತು ಬ್ಲೂಟೂತ್ 5.4 ಸೇರಿವೆ.

ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP65 ಮತ್ತು IP66 ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇದರ ಮತ್ತೊಂದು ವೈಶಿಷ್ಟ್ಯ. ಈ ಫೋನ್ 7.68mm ದಪ್ಪ ಮತ್ತು 187g ತೂಕವನ್ನು ಹೊಂದಿದೆ.

ಭಾರತದಲ್ಲಿ ರಿಯಲ್‌ಮಿ P4 ಸರಣಿ ಬಿಡುಗಡೆ: ಹೊಸ ಅಲೆಯನ್ನೇ ಸೃಷ್ಟಿಸುವ ಸಾಧ್ಯತೆ!

ರಿಯಲ್‌ಮಿ P4 5G : ಪ್ರಮುಖ ವೈಶಿಷ್ಟ್ಯಗಳು
ರಿಯಲ್‌ಮಿ P4 ಸರಣಿಯಲ್ಲಿ ಮೂಲ ಮಾದರಿಯಾಗಿರುವ ರಿಯಲ್‌ಮಿ P4 5G ಕೂಡ ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಸಿದ್ಧವಾಗಿದೆ. ಇದು 144Hz ರಿಫ್ರೆಶ್ ರೇಟ ಮತ್ತು 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ 6.77 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ.

ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಚಿಪ್‌ಸೆಟ್ ಮತ್ತು ಹೈಪರ್ ವಿಷನ್ ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 8GB ವರೆಗೆ RAM ಮತ್ತು 256GB ವರೆಗೆ ಸಂಗ್ರಹಣೆಯನ್ನು ಬೆಂಬಲಿಸುತ್ತದೆ. ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6 ನಿಂದ ಫೋನ್ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ರಿಯಲ್‌ಮಿ P4 5G, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. AI ಎಡಿಟ್ ಜಿನೀ ಮತ್ತು AI ಟ್ರಾವೆಲ್ ಸ್ನ್ಯಾಪ್‌ನಂತಹ AI-ಆಧಾರಿತ ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿದೆ.

ಇನ್ನುಳಿದಂತೆ, ಪ್ರೊ ಮಾದರಿಯಂತೆ, ಈ ರಿಯಲ್‌ಮಿ P4 5G ಫೋನ್ ಕೂಡ ಅದೇ ಬ್ಯಾಟರಿ, ಚಾರ್ಜಿಂಗ್, ಬಿಲ್ಡ್ ಮತ್ತು ಕನೆಕ್ಟಿವಿಟಿ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ, ಈ ಫೋನ್ 7.58mm ದಪ್ಪವಿದೆ.

ಭಾರತದಲ್ಲಿ ರಿಯಲ್‌ಮಿ P4 ಸರಣಿ ಬಿಡುಗಡೆ: ಹೊಸ ಅಲೆಯನ್ನೇ ಸೃಷ್ಟಿಸುವ ಸಾಧ್ಯತೆ!

ರಿಯಲ್‌ಮಿ P4 ಸರಣಿ: ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ P4 ಪ್ರೊ 5G ಫೋನ್ ಬೆಲೆಯು 8GB RAM ಮತ್ತು 128GB ಸಂಗ್ರಹಣೆಯ ಆಯ್ಕೆಗೆ ರೂ. 24,999 ರಿಂದ ಪ್ರಾರಂಭವಾಗುತ್ತದೆ. ಇದರ 8GB + 256GB ಮತ್ತು 12GB + 256GB ಮಾದರಿಗಳು ಕ್ರಮವಾಗಿ ರೂ. 26,999 ಮತ್ತು ರೂ. 28,999 ಕ್ಕೆ ಲಭ್ಯವಿವೆ.

ಗ್ರಾಹಕರು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ರೂ. 3,000 ರಿಯಾಯಿತಿ ಮತ್ತು ರೂ. 2,000 ವಿನಿಮಯ ಕೊಡುಗೆಯನ್ನು ಪಡೆಯಬಹುದು. ಇದರ ಜೊತೆಗೆ, ಮೂರು ತಿಂಗಳ ಉಚಿತ EMI ಆಯ್ಕೆಯೂ ಇದೆ.

ಈ ರಿಯಲ್‌ಮಿ P4 ಪ್ರೊ 5G ಫೋನ್ ಆಗಸ್ಟ್ 27 ರಿಂದ ಮಾರಾಟಕ್ಕೆ ಬರಲಿದ್ದು, ಫೋನ್ ಅನ್ನು ಬಿರ್ಚ್ ವುಡ್, ಡಾರ್ಕ್ ಓಕ್ ವುಡ್ ಮತ್ತು ಮಿಡ್‌ನೈಟ್ ಐವಿ ಬಣ್ಣಗಳಲ್ಲಿ ಖರೀದಿಸಬಹುದು.

ಇತ್ತ ಮೂಲ ರಿಯಲ್‌ಮಿ P4 5G ಯ ಬೆಲೆಯು 6GB + 128GB ಮಾದರಿಗೆ ರೂ. 18,499 ರಿಂದ ಆರಂಭವಾಗುತ್ತದೆ. 8GB + 128GB ಮತ್ತು 8GB + 256GB ಮಾದರಿಗಳು ಕ್ರಮವಾಗಿ ರೂ. 19,499 ಮತ್ತು ರೂ. 21,499 ಕ್ಕೆ ಲಭ್ಯವಿದೆ.

ಈ ಫೋನ್ ಖರೀದಿಸುವವರಿಗೆ ಆಯ್ದ ಕಾರ್ಡ್‌ಗಳ ಮೇಲೆ ರೂ. 2,500 ಬ್ಯಾಂಕ್ ಕೊಡುಗೆ ಮತ್ತು ರೂ. 1,000 ವಿನಿಮಯ ರಿಯಾಯಿತಿ ಸಿಗಲಿದೆ. ಆಗಸ್ಟ್ 20 ರಂದು ಆರಂಭಿಕ ಮಾರಾಟದ ನಂತರ, ಆಗಸ್ಟ್ 25 ರಿಂದ ಎಲ್ಲಾ ಚಾನೆಲ್‌ಗಳ ಮೂಲಕ ಫೋನ್ ವ್ಯಾಪಕವಾಗಿ ಲಭ್ಯವಾಗಲಿದೆ.

ರಿಯಲ್‌ಮಿ P4 ಪ್ರೊ 5G ಮತ್ತು ರಿಯಲ್‌ಮಿ P4 5G ಎರಡು ಫೋನ್‌ಗಳ್ನು ರಿಯಲ್‌ಮಿ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಫೋನ್‌ಗಳನ್ನು ಖರೀದಿಸಬಹುದು. ಈ ಹೊಸ ರಿಯಲ್‌ಮಿ P4 ಸರಣಿಯು ಮಧ್ಯಮ ಶ್ರೇಣಿಯ ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸುವ ಸಾಧ್ಯತೆ ಇದೆ. ಹೆಚ್ಚಿನ ಕಾರ್ಯಕ್ಷಮತೆ ಮತ್ತು ಕೈಗೆಟಕುವ ಬೆಲೆಯೊಂದಿಗೆ, ಇದು ಅನೇಕ ಗ್ರಾಹಕರ ಆಯ್ಕೆಯಾಗಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Realme has launched the P4 Pro 5G and P4 5G smartphones in India, with the highlight being a massive 7,000mAh battery, 5G connectivity, and competitive features aimed at power users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+