Realme P4x 5G ಲಾಂಚ್: ₹13,499 ಕ್ಕೆ 7,000mAh ಬ್ಯಾಟರಿಯ ಶಕ್ತಿಶಾಲಿ ಫೋನ್!
ರಿಯಲ್‌ಮಿ ತನ್ನ ಹೊಸ P ಸರಣಿಯ ಹೊಸ ಸ್ಮಾರ್ಟ್‌ಫೋನ್ Realme P4x 5G ಅನ್ನು ಭಾರತಕ್ಕೆ ಇಂದು (4, ಗುರುವಾರ) ಪರಿಚಯಿಸಿದೆ. ನಿರೀಕ್ಷೆಯಂತೆಯೇ, 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, ಸ್ಮೂತ್ 144Hz ಡಿಸ್‌ಪ್ಲೇ, ಸುರಕ್ಷತೆಗೆ IP64 ರೇಟಿಂಗ್ ಮತ್ತು ಮಿಡ್-ರೇಂಜ್ ಸೆಗ್ಮೆಂಟ್‌ಗೆ ತಕ್ಕಂತೆ ಉತ್ತಮ ಚಿಪ್‌ಸೆಟ್ ಜೊತೆಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಆರಂಭಿಕ ಕೊಡುಗೆಯಾಗಿ 13,499 ರೂ.ಗಳಿಗೆ ಲಭ್ಯವಾಗುತ್ತದೆ. ಹಾಗಾದರೆ, ಹೊಸ Realme P4x 5G ಸ್ಮಾರ್ಟ್‌ಫೋನ್ ಹೇಗಿದೆ?, ಪ್ರಮುಖ ಫೀಚರ್ಸ್ ಯಾವುವು ಮತ್ತು ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
Realme P4x 5G: ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Realme P4x 5G ಫೋನ್ ಅನ್ನು ಮೂರು ವೇರಿಯಂಟ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇವುಗಳು ಕ್ರಮವಾಗಿ 6GB + 128GB: ₹15,499, 8GB + 128GB: ₹16,999 ಮತ್ತು 8GB + 256GB: ₹17,999 ಬೆಲೆ ಹೊಂದಿವೆ. ಆದರೆ, ಲಾಂಚ್ ಆಫರ್‌ನಲ್ಲಿ ಬೇಸ್ ಮಾದರಿಯನ್ನು ₹13,499 ಬೆಲೆಯಲ್ಲಿ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ. ಈ ಫೋನ್ ಮಾರಾಟವು ಡಿಸೆಂಬರ್ 1ರಂದು ಮಧ್ಯಾಹ್ನ 12 ಗಂಟೆಗೆ Flipkart ಮತ್ತು Realme ಅಧಿಕೃತ ಸ್ಟೋರ್‌ನಲ್ಲಿ ಆರಂಭವಾಗಲಿದ್ದುಮ ಮ್ಯಾಟ್ ಸಿಲ್ವರ್, ಎಲಿಗಂಟ್ ಪಿಂಕ್ ಮತ್ತು ಲೇಕ್ ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ಇರಲಿದೆ.
Realme P4x 5G: ಪ್ರಮುಖ ಫೀಚರ್ಸ್ ಮತ್ತು ವೈಶಿಷ್ಟ್ಯಗಳು
ಹೊಸ Realme P4x 5G ಫೋನ್ ಲಂಬವಾದ, ಪಿಲ್-ಆಕಾರದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಏರೋಸ್ಪೇಸ್-ಪ್ರೇರಿತ ವಿನ್ಯಾಸವನ್ನು ಹೊಂದಿದೆ.ಹಿಂಭಾಗದ ಫಲಕದಲ್ಲಿ ಗಾಜು ಮತ್ತು ಪ್ಲಾಸ್ಟಿಕ್ ಸಂಯೋಜನೆಯನ್ನು ಹೊಂದಿರುವ ನಿರ್ಮಾಣವಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇರುವುದನ್ನು ಕಾಣಬಬಹುದು. ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್ 6.72 ಇಂಚಿನ Full HD LCD ಸ್ಕ್ರೀನ್ ಹೊಂದಿದೆ ಮತ್ತು ಗರಿಷ್ಠ 1,000 ನಿಟ್ಸ್ ಬ್ರೈಟ್ನೆಸ್ ಒದಗಿಸುತ್ತದೆ. ಸ್ಮೂತ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಜೊತೆಗೆ ನೇರ ಬೆಳಕಿನಲ್ಲಿಯೂ ವಿಷಯ ಸ್ಪಷ್ಟವಾಗಿಸುವ ಭರವಸೆಯನ್ನು ನೀಡುತ್ತದೆ.

ಕಾರ್ಯಕ್ಷಮತೆಗಾಗಿ, Realme P4x 5G ನಲ್ಲಿ 6nm MediaTek Dimensity 7400 Ultra ಪ್ರೊಸೆಸರ್ ಬಳಸಲಾಗಿದೆ. ಜೊತೆಗೆ 8GB RAM ಮತ್ತು 256GB ವರೆಗೆ ಮೆಮೊರಿಯನ್ನು ಹೊಂದಿದೆ. ಇದರಲ್ಲಿ 18GB ವರೆಗಿನ ವರ್ಚುವಲ್ RAM ಸಹ ದೊರೆಯಲಿದೆ. ಬಳಕೆದಾರರು ಮೈಕ್ರೋ SD ಕಾರ್ಡ್ ಸಹಾಯದಿಂದ 2TB ವರೆಗೆ ಮೆಮೊರಿ ವಿಸ್ತರಿಸಬಹುದು. ಹಾಗೆಯೇ, ತಾಪಮಾನ ಹೆಚ್ಚಾಗದಂತೆ, ಫೋನ್‌ನಲ್ಲಿ Frozen Crown Cooling System ಬಳಸಲಾಗಿದೆ. 5300mm² ವ್ಯೇಪರ್ ಚೇಂಬರ್, ಕಾಪರ್-ಗ್ರಾಫೈಟ್ ಲೇಯರ್ ಮತ್ತು ಸ್ಟೀಲ್ ಪ್ಲೇಟ್ ಸಂಯೋಜನೆಯು ತಾಪಮಾನವನ್ನು ನಿಯಂತ್ರಿಸುತ್ತದೆ
ಕ್ಯಾಮೆರಾ ವಿಭಾಗದಲ್ಲಿ, Realme P4x 5G ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದ್ದು, 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ದ್ವಿತೀಯ ಸಂವೇದಕವನ್ನು ಹೊಂದಿದೆ. ಸೆಲ್ಫಿಗಳಿಗಾಗಿ, 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಈ ಫೋನಿನ ದೊಡ್ಡ ಆಕರ್ಷಣೆ ಅದರ 7,000mAh ಮ್ಯಾಸಿವ್ ಬ್ಯಾಟರಿ. 45W ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. ಜೊತೆಗೆ ಬೈಪಾಸ್ ಚಾರ್ಜಿಂಗ್, ರಿವರ್ಸ್ ವೈರ್ಡ್ ಚಾರ್ಜಿಂಗ್ ಎಂಬ ಹೆಚ್ಚುವರಿ ವೈಶಿಷ್ಟ್ಯಗಳಿವೆ.ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64-ರೇಟೆಡ್ ಬಿಲ್ಡ್ ಸಹ ಹೊಂದಿದೆ.
ಕನೆಕ್ಟಿವಿಟಿ ಮತ್ತು ಆಡಿಯೋ ವಿಭಾಗದಲ್ಲಿ, ಈ Realme P4x 5G ಫೋನ್‌ನಲ್ಲಿ 5G, 4G LTE, Wi-Fi, Bluetooth, GPS ಹಾಗೂ USB Type-C ಪೋರ್ಟ್ ಸೇರಿದಂತೆ ಎಲ್ಲಾ ಪ್ರಮುಖ ಕನೆಕ್ಟಿವಿಟಿ ಆಯ್ಕೆಗಳು ಒದಗಿಸಲಾಗಿದೆ. ಡ್ಯುಯಲ್ ಸ್ಪೀಕರ್‌ಗಳು ಮಲ್ಟಿಮೀಡಿಯಾ ಅನುಭವವನ್ನು ಉತ್ತಮಗೊಳಿಸುತ್ತವೆ. ಇನ್ನು ಈ ಫೋನ್ 8.39mm ದಪ್ಪ ಮತ್ತು 208g ತೂಕವನ್ನು ಹೊಂದಿದೆ. ಒಟ್ಟಾರೆ ಸಾರಾಂಶವಾಗಿ, ಉತ್ತಮ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿ Realme P4x 5G ಫೋನ್ ಪರಿಚಯಗೊಂಡಿದ್ದು, ನೋಡಲು ಆಕರ್ಷಕವಾಗಿದೆ ಎಂದೆನಿಸುತ್ತದೆ.


Click it and Unblock the Notifications








