Home
ಮೊಬೈಲ್

Realme P4x 5G ಲಾಂಚ್‌ಗೆ ಕೌಂಟ್‌ಡೌನ್: ಫೀಚರ್ಸ್, ಪ್ರೈಸ್ ಲೀಕ್!

Realme ತನ್ನ ಜನಪ್ರಿಯ P-ಸಿರೀಸ್‌ಗೆ ಹೊಸದಾದ Realme P4x 5G ಎಂಬ ಸ್ಮಾರ್ಟ್‌ಫೋನ್ ಅನ್ನು ಮುಂದಿನ ವಾರ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಅಧಿಕೃತ ಲಾಂಚ್‌ಗೂ ಮುನ್ನ ಕಂಪನಿಯು Realme P4x 5G ಸಾಧನದ ಹಲವು ವಿವರಗಳನ್ನು ಟೀಸರ್‌ಗಳ ಮೂಲಕ ಹಂಚಿಕೊಂಡಿದೆ. ಇದೇ ವೇಳೆ, ಜನಪ್ರಿಯ ಟಿಪ್‌ಸ್ಟರ್ Anvin (ZionsAnvin) ಅವರು ಹಂಚಿಕೊಂಡಿರುವ ಹೊಸ ಟ್ವಿಟರ್ ಪೋಸ್ಟ್ ಒಂದು ಮುಂಬರುವ Realme P4x 5G ಫೋನಿನ ಬಹುತೇಕ ಎಲ್ಲಾ ವೈಶಿಷ್ಟ್ಯಗಳನ್ನು ಲೀಕ್ ಮಾಡಿದೆ.!

ಈಗಾಗಲೇ Realme ಕಂಪೆನಿಯು ದೃಢಪಡಿಸಿರುವಂತೆ, Realme P4x 5G ನಲ್ಲಿ MediaTek Dimensity 7400-Ultra ಚಿಪ್‌ಸೆಟ್ ಬಳಸಲಾಗಿದೆ. ಈ ಪ್ರೊಸೆಸರ್ AnTuTu ಬೆಂಚ್ಮಾರ್ಕ್‌ನಲ್ಲಿ 780K ಅಂಕಗಳಿಗಿಂತ ಹೆಚ್ಚು ಸಾಧನೆ ನೀಡುವ ಸಾಮರ್ಥ್ಯ ಹೊಂದಿದೆ. ಸಾಧನವು ದೀರ್ಘಕಾಲದ ಗೇಮಿಂಗ್ ವೇಳೆ ತಾಪಮಾನ ನಿಯಂತ್ರಣಕ್ಕಾಗಿ 5300mm² VC ವ್ಯವಸ್ಥೆ ಇರಲಿದೆ. ಹಾಗೂ 7000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ. 144Hz LCD ಡಿಸ್‌ಪ್ಲೇ ಜೊತೆಗೆ ಗರಿಷ್ಠ 1,000 ನಿಟ್ಸ್ ಬ್ರೈಟ್ನೆಸ್ ಹೊಂದಿರಲಿದೆ.

ಇದೀಗ ಟಿಪ್‌ಸ್ಟರ್ Anvin (ZionsAnvin) ಅವರು ಒದಗಿಸುವ ವಿವರಗಳ ಪ್ರಕಾರ, Realme P4x 5G ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 2MP ಸೆಕೆಂಡರಿ ಲೆನ್ಸ್ ಇರಬಹುದು. ಸೆಲ್ಫಿಗಳಿಗೆ 8MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ ಎಂದು ವರದಿಯಾಗಿದೆ. ಈ ಸಾಧನವು 8GB RAM ಮತ್ತು 256GB ವರೆಗೆ UFS 3.1 ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಾಗಬಹುದು. ಜೊತೆಗೆ, ಹೆಚ್ಚುವರಿ 10GB ವರೆಗೆ ವರ್ಚುವಲ್ RAM ಸಪೋರ್ಟ್ ಕೂಡ ಇರಲಿದೆ ಎಂದು Anvin ಅವರು ಮಾಹಿತಿ ಲೀಕ್ ಮಾಡಿದ್ದಾರೆ.

Realme P4x 5G ಲಾಂಚ್‌ಗೆ ಕೌಂಟ್‌ಡೌನ್: ಫೀಚರ್ಸ್, ಪ್ರೈಸ್ ಲೀಕ್!

ಇಷ್ಟೇ ಅಲ್ಲದೆ, ಬ್ಯಾಟರಿ ವಿಭಾಗದಲ್ಲಿ ಫೋನ್‌ಗೆ 45W ವೇಗವಾದ ಚಾರ್ಜಿಂಗ್ ಸಪೋರ್ಟ್ ಲಭ್ಯವಿರಬಹುದು. ಗೇಮಿಂಗ್ ಕ್ಷೇತ್ರದಲ್ಲಿ BGMI ಗೆ 90fps ಮತ್ತು Free Fire Max ಗೆ 120fps ಬೆಂಬಲ ದೊರೆಯಲಿದೆಯೆಂಬುದೂ ಲೀಕ್ ಮಾಹಿತಿಯಲ್ಲಿ ತಿಳಿಸಲಾಗಿದೆ. ಈ ಮೂಲಕ ಮುಂಬರುವ Realme P4x 5G ಫೋನಿನ ಒಂದು ನೋಟ ದೊರೆತಿದೆ. Realme ಅಧಿಕೃತವಾಗಿ ಘೋಷಿಸಿರುವಂತೆ, ಈ Realme P4x 5G ಸ್ಮಾರ್ಟ್‌ಫೋನಿನ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಭಾಕಿ ಉಳಿದಿರುವುದರಿಂದ, ಈ ಲೀಕ್ ಗಮನಸೆಲೆದಿದೆ.

Realme P4x 5G ಫೋನ್ ಇದೇ ಡಿಸೆಂಬರ್ 4 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಅನಾವರಣಗೊಳ್ಳಲಿದೆ. ಇದೇ ಸಂದರ್ಭದಲ್ಲಿ Realme Watch 5 ಸ್ಮಾರ್ಟ್‌ವಾಚ್ ಅನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಲಾಂಚ್ ನಂತರ ಫೋನ್ Flipkart ಮತ್ತು Realme‌ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಲಭ್ಯವಿರಲಿದೆ. ಬೆಲೆ ಬಗ್ಗೆ ಮಾತನಾಡುವುದಾದರೆ, Realme P4x 5G ನ ಆರಂಭಿಕ ದರ ₹15,000 ಕ್ಕಿಂತ ಕಡಿಮೆ ಇರಬಹುದೆಂದು ಉದ್ಯಮ ಮೂಲಗಳು ತಿಳಿಸಿವೆ. ಆದರೆ, ಈ ಮಾಹಿತಿ ಇನ್ನು ಖಚಿತವಾಗಿಲ್ಲ.

Realme P-ಸಿರೀಸ್‌ಗೆ ಹೊಸದಾದ Realme P4x 5G ಎಂಬ ಸ್ಮಾರ್ಟ್‌ಫೋನ್ ಕುರಿತು ನಿಮ್ಮ ಅನಿಸಿಕೆಗಳೇನು?, ಈ ಪೋನ್ ಬಿಡುಗಡೆಗಾಗಿ ನೀವು ಕಾತುರದಿಂದ ಕಾಯುತ್ತಿದ್ದೀರಾ?, ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Realme has officially confirmed that the upcoming Realme P4x 5G will be powered by the MediaTek Dimensity 7400-Ultra chipset. Impressively, this processor is capable of delivering over 7.8 lakh points on the AnTuTu benchmark, highlighting its strong performance capabilities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+