ಭಾರತಕ್ಕೆ ಡಿ.4 ರಂದು Realme P4x 5G ಎಂಟ್ರಿ: ಪ್ರಮುಖ ವೈಶಿಷ್ಟ್ಯಗಳು ಬಹಿರಂಗ!
ಭಾರತದ ಮಾರುಕಟ್ಟೆಗೆ ಇದೇ ಡಿಸೆಂಬರ್ 4 ರಂದು ಮಿಡ್-ರೇಂಜ್ ಸ್ಮಾರ್ಟ್‌ಫೋನ್ Realme P4x 5G ಬಿಡುಗಡೆಯಾಗುವುದು ಈಗಾಗಲೇ ಖಚಿತವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ Realme P4x 5G ಈ ಫೋನ್‌ಗೆ ಸಂಬಂಧಿಸಿದ ವಿಶೇಷ ಮೈಕ್ರೋಸೈಟ್ ಸಕ್ರಿಯಗೊಂಡಿದ್ದು, ದೇಶದಲ್ಲಿ ಈ ಮಿಡ್‌ರೇಂಜ್ ಫೋನ್ ಲಭ್ಯವಾಗುವುದನ್ನು ದೃಢಪಡಿಸಲಾಗಿದೆ. ಇತ್ತೀಚಿಗೆ ಈ ಪೋರ್ಟಲ್ ನವೀಕರಿಸಲ್ಪಟ್ಟಿದ್ದು, ಮುಂಬರುವ Realme P4x 5G ಫೋನಿನ ವಿನ್ಯಾಸ, ಬಣ್ಣ ಆಯ್ಕೆಗಳು ಹಾಗೂ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಪ್ರಕಟಿಸಲಾಗಿದೆ. !
ಫ್ಲಿಪ್‌ಕಾರ್ಟ್‌ನಲ್ಲಿ ನವೀಕರಿಸಿದ ಮೈಕ್ರೋಸೈಟ್ ಪ್ರಕಾರ, Realme ತನ್ನ ಮುಂಬರುವ Realme P4x 5G ಫೋನ್ ಲಾಂಚ್ ಕಾರ್ಯಕ್ರಮವನ್ನು ಡಿಸೆಂಬರ್ 4ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ಹಮ್ಮಿಕೊಂಡಿದೆ. ದೇಶದಲ್ಲಿ ಈ ಫೋನ್ ಬಿಳಿ, ಹಸಿರು ಮತ್ತು ಪಿಂಕ್ ಮೂರು ಬಣ್ಣಗಳಲ್ಲಿ ಖರೀದಿಸಲು ಅವಕಾಶ ಇರುತ್ತದೆ ಎಂದು ತಿಳಿದುಬಂದಿದೆ. ಫೀಚರ್ಸ್‌ಗಳಲ್ಲಿ, ಈ ಫೋನ್ ಮಿಲಿಟರಿ ಗ್ರೇಡ್ MIL-STD 810H ಬಿಲ್ಡ್, 144Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಹಾಗೂ 1,000 ನಿಟ್ಸ್ ಪೀಕ್ ಬ್ರೈಟ್ನೆಸ್ ಒದಗಿಸುತ್ತದ ಎಂಬುದನ್ನು ತಿಳಿಸಲಾಗಿದೆ.
ಕಾರ್ಯಕ್ಷಮತೆಗಾಗಿ, Realme P4x 5G ಫೋನ್ 4nm MediaTek Dimensity 7400 Ultra 5G ಚಿಪ್‌ಸೆಟ್ ಹೊಂದಿರಲಿದ್ದು, ಇದು ಗರಿಷ್ಠ 2.6GHz ವೇಗ ಒದಗಿಸುವ ಸಾಮರ್ಥ್ಯ ಹೊಂದಿದೆ. ಈ ಫೋನ್ AnTuTu ಬೆಂಚ್ಮಾರ್ಕ್‌ನಲ್ಲಿ 7,80,000ಕ್ಕೂ ಹೆಚ್ಚು ಸ್ಕೋರ್ ದಾಖಲಿಸಿದ್ದು, ಮಿಡ್-ರೇಂಜ್ ವಿಭಾಗದ ಪೋನ್ ಎಂದು ಹೇಳಬಹುದು. ಹಾಗೆಯೇ, ಈ ಫೋನಿನಲ್ಲಿ 8GB RAM ಮತ್ತು 256GB UFS 3.1 ಸ್ಟೋರೇಜ್ ಲಭ್ಯವಿದೆ. ಜೊತೆಗೆ 10GB ವರ್ಚುವಲ್ RAM ಬೆಂಬಲದಿಂದ ಒಟ್ಟು 18GB RAM ಲಭ್ಯವಾಗಲಿದೆ.

ಕ್ಯಾಮೆರಾ ವಿಭಾಗದಲ್ಲಿ, Realme P4x 5G ಫೋನಿನ ಹಿಂಭಾಗದಲ್ಲಿ 50MP AI ಕ್ಯಾಮೆರಾ ಇರುವುದನ್ನು ಖಚಿತಪಡಿಸಲಾಗಿದ್ದು, ಇದು 4K ವೀಡಿಯೋ ಚಿತ್ರೀಕರಣಕ್ಕೆ ಶಕ್ತವಾಗಿದೆ ಎಂದು ತಿಳಿಸಲಾಗಿದೆ. ಕಂಪನಿಯ ಪ್ರಕಾರ, Realme P4x 5G ಒಂದೇ ಚಾರ್ಜ್‌ನಲ್ಲಿ ಸುಮಾರು 9 ಗಂಟೆಗಳ FPS ಗೇಮಿಂಗ್ ಮತ್ತು 20.6 ಗಂಟೆಗಳ YouTube ವೀಕ್ಷಣೆ ನೀಡಲಿದೆ. ತಾಪಮಾನ ನಿಯಂತ್ರಣಕ್ಕಾಗಿ, ಫೋನ್‌ನಲ್ಲಿ 5,300 sq mm VC FrostCare ಕೂಲಿಂಗ್ ಸಿಸ್ಟಮ್ ಇದು, CPU ತಾಪಮಾನವನ್ನು ಸುಮಾರು 20°C ವರೆಗೆ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
Realme ಇನ್ನೂ Realme P4x 5G ಫೋನಿನ ಅಧಿಕೃತ ಬೆಲೆಯನ್ನು ದೃಢೀಕರಿಸಿಲ್ಲ, ಆದರೆ ಬಹು ಮೂಲಗಳಿಂದ ವರದಿಗಳು ಈ ಫೋನಿನ ನಿರೀಕ್ಷಿತ ಬೆಲೆಯನ್ನು ಸುಮಾರು ₹15,999 ಇರಬಹುದು ಎಂದು ಸೂಚಿಸಿವೆ. ಹಾಗೆಯೇ, ಈ ಫೋನ್ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 7,000mAh "ಟೈಟಾನ್ ಬ್ಯಾಟರಿ", ಮುಂಭಾಗದಲ್ಲಿ 8MP ಕ್ಯಾಮೆರಾ ಇರಲಿದೆ ಎಂದು ಹೇಳಿವೆ. Realme ತನ್ನ ಮುಂಬರುವ ಫೋನ್‌ನ ಬಣ್ಣ ಹಾಗೂ ವಿವಿಧ ವೈಶಿಷ್ಟ್ಯಗಳನ್ನು ಟೀಸರ್ ಮಾಡಿದ್ದರೂ, ಸಂಪೂರ್ಣ ಹಾಗೂ ನಿಖರ ವೈಶಿಷ್ಟ್ಯಗಳನ್ನು ಘೋಷಿಸದೇ ಕುತೂಹಲ ಮೂಡಿಸಿದೆ.
Realme ಕಂಪನಿಯು ಮುಂದಿನ ದಿನಗಳಲ್ಲಿ Realme P4x 5G ಫೋನ್‌ನ ಅಧಿಕೃತ ವೈಶಿಷ್ಟ್ಯಗಳು ಮತ್ತು ಬೆಲೆಯ ಕುರಿತು ಹೆಚ್ಚಿನ ವಿವರಗಳನ್ನು ಪ್ರಕಟಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ಕನ್ನಡ ಗಿಜ್‌ಬಾಟ್ ಅನ್ನು ಫಾಲೊ ಮಾಡುತ್ತಿರಿ. ಮತ್ತು ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








