Home
ಮೊಬೈಲ್

ಭಾರತದಲ್ಲಿ Realme P4x 5G ಲಾಂಚ್‌ಗೆ 3 ದಿನಗಳಷ್ಟೇ ಬಾಕಿ: ಬೆಲೆ ವಿವರಗಳು ಲೀಕ್!

Realme ಕಂಪೆನಿಯು ತನ್ನ ಹೊಸ P-ಸಿರೀಸ್ ಫೋನ್ Realme P4x 5G ಅನ್ನು ಭಾರತದಲ್ಲಿ ಈ ವಾರ ಬಿಡುಗಡೆ ಮಾಡಲು ತಯಾರಾಗಿದೆ. ಅಧಿಕೃತ ಅನಾವರಣಕ್ಕೆ ಕೆವಲ ಮೂರು ದಿನಗಳು ಬಾಕಿ ಇರುವಾಗ, ಈ Realme P4x 5G ಫೋನಿನ ಬೆಲೆ ಮತ್ತು ಸ್ಟೋರೇಜ್ ವೇರಿಯಂಟ್‌ಗಳಿಗೆ ಸಂಬಂಧಿಸಿದ ಮಾಹಿತಿಗಳು ಆನ್‌ಲೈನ್‌ನಲ್ಲಿ ಹೊರಬಿದ್ದಿವೆ. ಕಂಪನಿಯು ಈಗಾಗಲೇ ಈ ಹೊಸ ಮಾದರಿಯ ಚಿಪ್‌ಸೆಟ್ ಹಾಗೂ ಬ್ಯಾಟರಿ ಸಾಮರ್ಥ್ಯವನ್ನು ದೃಢಪಡಿಸಿದೆ. ಇದರ ಜೊತೆಗೆ ಪ್ರಖ್ಯಾತ ಟಿಪ್‌ಸ್ಟಾರ್ ಓರ್ವರಿಂದ ಬೆಲೆ ವಿವರಗಳು ಸಹ ಲೀಕ್ ಆಗಿವೆ.!

Realme P4x 5G: ಭಾರತದಲ್ಲಿ ನಿರೀಕ್ಷಿತ ಬೆಲೆ
ಹೌದು, ಟೆಕ್ ಲೀಕರ್ ಅಭಿಷೇಕ್ ಯಾದವ್ ಅವರು ಹಂಚಿಕೊಂಡ ಇತ್ತೀಚಿನ ಮಾಹಿತಿಯ ಪ್ರಕಾರ, Realme P4x 5G ಫೋನ್ ಭಾರತದಲ್ಲಿ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿರುವ ಸಾಧ್ಯತೆ ಇದೆ. 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಬೇಸ್ ಮಾದರಿಯ ಬೆಲೆ ₹15,999 ಇರಬಹುದು. ಇದಕ್ಕಿಂತ ಮೇಲಿನ 8GB RAM + 128GB ಸ್ಟೋರೇಜ್ ಮಾದರಿ ₹17,499 ಮತ್ತು 8GB RAM + 256GB ಸ್ಟೋರೇಜ್ ವೇರಿಯಂಟ್ ₹19,499 ಆಗಿರಬಹುದು ಎಂದು ಹೇಳಲಾಗಿದೆ. ಆದರೆ, ಬಿಡುಗಡೆ ಕೊಡುಗೆಗಳ ಕುರಿತು ಯಾವುದೇ ಮಾಹಿತಿಯನ್ನು ಒದಗಿಸಿಲ್ಲ.

ಡಿಸೆಂಬರ್ 4ರಂದು ಅಧಿಕೃತ ಅನಾವರಣ
ನಾವು ಈಗಾಗಲೇ ತಿಳಿದಿರುವಂತೆ, ದೇಶದಲ್ಲಿ Realme P4x 5G ಫೋನ್ ಅನ್ನು ಇದೇ ಡಿಸೆಂಬರ್ 4 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಪರಿಚಯಿಸಲಾಗುಗುತ್ತದೆ. ಇದರ ಜೊತೆಗೆ ಕಂಪನಿಯು ತನ್ನ ಹೊಸ ಸ್ಮಾರ್ಟ್‌ವಾಚ್ Realme Watch 5 ಸಾಧನವನ್ನೂ ಅನಾವರಣಗೊಳಿಸುತ್ತದೆ. Realme ಮತ್ತು Flipkart ಅವರ ವೇದಿಕೆಗಳಲ್ಲಿ ಈಗಾಗಲೇ ಈ ಸಾಧನಕ್ಕೆ ಸಂಬಂಧಿಸಿದ ಟೀಸರ್‌ಗಳು ಲಭ್ಯವಿದ್ದು, ಈಗಾಗಲೇ ಹಲವಾರು ವೈಶಿಷ್ಟ್ಯಗಳು ದೃಢಪಟ್ಟಿವೆ.

ಭಾರತದಲ್ಲಿ Realme P4x 5G ಲಾಂಚ್‌ಗೆ 3 ದಿನಗಳಷ್ಟೇ ಬಾಕಿ: ಬೆಲೆ ವಿವರಗಳು ಲೀಕ್!

ದೃಢಪಡಿಸಿದ ವೈಶಿಷ್ಟ್ಯಗಳು
ಮುಂಬರುವ ಈ Realme P4x 5G ಫೋನ್ ಹಸಿರು, ಗುಲಾಬಿ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ AI- ಆಧಾರಿತ 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಘಟಕದೊಂದಿಗೆ ಬರುವುದನ್ನು ದೃಢಪಡಿಸಲಾಗಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ 5G ಚಿಪ್‌ಸೆಟ್‌ನಲ್ಲಿ 18GB ವರೆಗೆ ಡೈನಾಮಿಕ್ RAM ಗೆ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಮತ್ತು ಈ 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಟೀಸ್ ಮಾಡಲಾಗಿದೆ.

ಮಧ್ಯಮ ಬೆಲೆಯಲ್ಲಿ ಬರುವ ಸಾಧ್ಯತೆ ಇದ್ದರೂ, ಈ Realme P4x 5G ಫೋನ್ ಉಷ್ಣ ನಿರ್ವಹಣೆಗಾಗಿ, 5,300 ಚದರ mm ವೇಪರ್ ಚೇಂಬರ್ (VC) ಹೊಂದಿರುತ್ತದೆ. ಇನ್ನು ಇದರ ಡಿಸ್ಪ್ಲೇ 144Hz ವರೆಗೆ ರಿಫ್ರೆಶ್ ರೇಟ್ ಮತ್ತು 1,000 nits ಗರಿಷ್ಠ ಹೊಳಪನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸಲಾಗಿದೆ. ಇನ್ನು ವದಂತಿಗಳಂತೆ, ಈ ಫೋನ್ 6.72-ಇಂಚಿನ ಪೂರ್ಣ-HD+ ಡಿಸ್ಪ್ಲೇ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಹೊಂದಿರುತ್ತದೆ. ಹಾಗೂ, ಸೆಲ್ಫಿಗಳಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ, Realme P4x 5G ಫೋನ್ ಮಧ್ಯಮ ಬೆಲೆಯ 5G ಫೋನ್ ವಿಭಾಗದಲ್ಲಿ ಗಮನಾರ್ಹ ಸ್ಪರ್ಧಿಯಾಗುವ ಸಾಧ್ಯತೆ ಇದೆ. ಇದರ 7,000mAh ದೊಡ್ಡ ಬ್ಯಾಟರಿ, 144Hz ಹೈ ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಹೊಸ 5G ಚಿಪ್‌ಸೆಟ್‌ಗಳಂತಹ ವೈಶಿಷ್ಟ್ಯಗಳಿಂದ, ಈ ಸಾಧನದ ಅಧಿಕೃತ ಲಾಂಚ್‌ಗಾಗಿ ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆ ಉಂಟಾಗಿದೆ. ಟಿಪ್‌ಸ್ಟಾರ್ ಅಭಿಷೇಕ್ ಯಾದವ್ ಅವರು ಹಂಚಿಕೊಂಡ ಬೆಲೆಗಳ ಮಾಹಿತಿಯು ನಿಖರವಾಗಿದ್ದರೆ, ಇದು ಅತ್ಯಂತ ಸಂತಸದ ಸುದ್ದಿಯಾಗಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Realme P4x 5G is all set to launch in India this week. With just three days left for the official launch, details regarding the price and storage variants of the Realme P4x 5G have surfaced online. The company has already confirmed the chipset and battery capacity of the new model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+