Home
ಮೊಬೈಲ್

Realme P4x 5G vs Vivo T4x 5G ಹೋಲಿಕೆ: 15 ಸಾವಿರಕ್ಕೆ ಯಾವ ಫೋನ್ ಬೆಸ್ಟ್?

ಭಾರತದ ಮಧ್ಯಮ ಬೆಲೆ ವಿಭಾಗಕ್ಕೆ ಹೊಸ ಸ್ಪರ್ಧೆ ಒದಗಿಸಿರುವುದು Realme P4x 5G ಸ್ಮಾರ್ಟ್‌ಫೋನ್. ಕೇವಲ ಮೂರು ದಿನಗಳ ಹಿಂದಷ್ಟೇ ದೇಶದಲ್ಲಿ ಲಾಂಚ್ ಮಾಡಲಾದ ಈ ಹೊಸ ಸ್ಮಾರ್ಟ್‌ಫೋನ್ ಹಲವು ಮಧ್ಯಮ-ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಇದು ನೇರವಾಗಿ Vivo ಕಂಪೆನಿಯ ಬಜೆಟ್ ವಿಭಾಗದ Vivo T4x 5G ಫೋನ್‌ಗೆ ನಿಖರ ಪೈಪೋಟಿ ನೀಡುತ್ತಿದೆ. ಈ ಎರಡೂ ಫೋನ್‌ಗಳು ಆಕರ್ಷಕ ಬೆಲೆಯಲ್ಲೇ ಉತ್ತಮ ಫೀಚರ್‌ಗಳನ್ನು ಒದಗಿಸುತ್ತಿರುವುದು ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗಾದರೆ, ಗೇಮಿಂಗ್, ದಿನನಿತ್ಯದ ಬಳಕೆ ಮತ್ತು ಭಾರಿ ಮಲ್ಟಿಟಾಸ್ಕಿಂಗ್‌ಗೆ ಯಾವ ಫೋನ್ ಹೆಚ್ಚು ಮೌಲ್ಯ ನೀಡುತ್ತದೆ? ಎಂಬುದನ್ನು ಒಂದು ಸರಳ ಹೋಲಿಕೆಯಲ್ಲಿ ನೋಡೋಣ.

ಬೆಲೆ ಮತ್ತು ಮಾದರಿಗಳು: ಬಜೆಟ್‌ನಲ್ಲಿ ಯಾವುದು ಲಾಭದಾಯಕ?
Realme ತನ್ನ P4x 5G ಬೆಲೆಯನ್ನು ಸ್ವಲ್ಪ ಹೆಚ್ಚಾಗಿರಿಸಿದೆ. ಇದರ 6GB + 128GB ಮಾದರಿಯ ₹15,499 ರಿಂದ ಶುರುವಾಗುತ್ತದೆ, ಮತ್ತು ಇದರ 8GB + 256GB ಮಾದರಿಯು ₹17,999 ಬೆಲೆ ಹೊಂದಿದೆ.ಇದರ ಬಣ್ಣ ಆಯ್ಕೆಗಳು Matte Silver, Elegant Pink ಮತ್ತು Lake Green.
ಇತ್ತ Vivo ತನ್ನ T4x 5G ಅನ್ನು ಹೆಚ್ಚು ಬಜೆಟ್-ಫ್ರೆಂಡ್ಲಿಯಾಗಿ ಇರಿಸಿದೆ ಎಂದು ಹೇಳಬಹುದು. ಇದರ 6GB + 128GB ಮಾದರಿಯು ₹13,999 ನಿಂದ ಪ್ರಾರಂಭವಾಗಿ, 8GB + 256GB ಮಾದರಿಯು ₹16,999 ಬೆಲೆ ಹೊಂದಿದೆ. ಇದು Pronto Purple ಮತ್ತು Marine Blue ಬಣ್ಣಗಳಲ್ಲಿ ಲಭ್ಯ.
ಹೀಗಾಗಿ, ಕಡಿಮೆ ಬಜೆಟ್ ಬಳಕೆದಾರರಿಗೆ Vivo ಆಕರ್ಷಕ ಆಯ್ಕೆ ಎಂದು ಹೇಳಬಹುದು.

ಡಿಸ್ಪ್ಲೇ ಮತ್ತು ವಿನ್ಯಾಸ: ರಿಫ್ರೆಶ್ ರೇಟ್ ಮತ್ತು ಹೊಳಪು
Realme P4x 5G ಮತ್ತು Vivo T4x 5G ಎರಡೂ ಫೋನ್‌ಗಳು 6.72-ಇಂಚಿನ Full HD+ ಡಿಸ್ಪ್ಲೇ ಹೊಂದಿವೆ. ಆದರೆ Realme 144Hz ರಿಫ್ರೆಶ್ ರೇಟ್‌ನಿಂದ ಗೇಮಿಂಗ್ ಮತ್ತು ಸ್ಕ್ರೋಲಿಂಗ್ ಅನ್ನು ಇನ್ನಷ್ಟು ಸ್ಮೂತ್ ಮಾಡುತ್ತದೆ. Vivo ಯಲ್ಲಿ 120Hz ರಿಫ್ರೆಶ್ ರೇಟ್ ಇದೆ, ಇದು ವೇಗವಾಗಿದ್ದರೂ Realme ಗಿಂತ ಸ್ವಲ್ಪ ಕಡಿಮೆ. ಇವುಗಳಲ್ಲಿ Realme 1000 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡುವ ಕಾರಣ ಬಿಸಿಲಿನಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ವಿನ್ಯಾಸದ ವಿಷಯದಲ್ಲಿ Vivo ಸ್ವಲ್ಪ ಹಗುರ ಮತ್ತು ಸ್ಲಿಮ್ ಇದ್ದು, ಹಿಡಿದಾಗ ಸುಲಭವಾಗಿದೆ.

ಪರ್ಫಾರ್ಮೆನ್ಸ್ ಮತ್ತು ಹಾರ್ಡ್‌ವೇರ್: ಶಕ್ತಿ ಎಲ್ಲಿ ಹೆಚ್ಚು?
Realme P4x 5G ನಲ್ಲಿ MediaTek Dimensity 7400 Ultra ಚಿಪ್‌ಸೆಟ್ ಇದ್ದು, 18GB ವರೆಗೆ ವರ್ಚುವಲ್ RAM ಬೆಂಬಲ ಕೊಡುತ್ತದೆ. 2TB ವರೆಗೆ microSD ಕಾರ್ಡ್ ಬಳಸಬಹುದು. ಇದು ದೀರ್ಘ ಬಳಕೆ ಮತ್ತು ಗೇಮಿಂಗ್‌ಗೆ ಸೂಕ್ತ.
Vivo T4x 5G ನಲ್ಲಿ MediaTek Dimensity 7300 ಇದೆ, 8GB RAM ವರೆಗೆ ಸಾಥ್. ದಿನನಿತ್ಯದ ಬಳಕೆ, OTT, ಆಫೀಸ್ ಕಾರ್ಯಗಳಿಗಾಗಿ ಇದು ಸಮತೋಲನಿತ ಚಿಪ್‌ಸೆಟ್ ಆಗಿದೆ.
ಹೆಚ್ಚಿನ ಶಕ್ತಿ ಮತ್ತು future-proof ಪರ್ಫಾರ್ಮೆನ್ಸ್ ಬೇಕಾದವರಿಗೆ Realme ಬಲವಾದ ಆಯ್ಕೆ.

ಕ್ಯಾಮೆರಾ: ಸಾಮಾನ್ಯ ಬಳಕೆದಾರರಿಗೆ ಸಾಕಷ್ಟು ಉತ್ತಮವಾದ ಅನುಭವ
Realme P4x 5G ಮತ್ತು Vivo T4x 5G ಎರಡೂ ಫೋನ್‌ಗಳಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 8MP ಸೆಲ್ಫಿ ಸೆನ್ಸಾರ್ ಇದೆ. Vivo ತನ್ನ ಫೋನ್‌ಗೆ AI photography ವೈಶಿಷ್ಟ್ಯಗಳನ್ನು ನೀಡುತ್ತದೆ, ಫೋಟೋಗಳನ್ನು ಸ್ವಲ್ಪ ಹೆಚ್ಚು ಶಾರ್ಪ್ ಮತ್ತು ಬ್ರೈಟ್ ಮಾಡುತ್ತದೆ. Realme ಹೆಚ್ಚು ನೈಸರ್ಗಿಕ ಛಾಯಾಗ್ರಹಣ ಅನುಭವ ನೀಡುತ್ತದೆ.ಸಾಮಾನ್ಯ ಫೋಟೋ ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಎರಡೂ ಫೋನ್‌ಗಳ ಕ್ಯಾಮೆರಾ ಸಮಾನ ಮಟ್ಟದಲ್ಲಿ ಕೆಲಸ ಮಾಡುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್: ಸ್ಪಷ್ಟವಾಗಿ ಗೆದ್ದಿರುವುದು ಯಾರು?
Realme P4x 5G ಈ ವಿಭಾಗದಲ್ಲಿ ದೊಡ್ಡ ಮುನ್ನಡೆ ಹೊಂದಿದೆ. ಇದು 7000mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಜೊತೆಗೆ reverse charging ಮತ್ತು bypass charging ಸೌಲಭ್ಯವನ್ನು ಹೊಂದಿದೆ.
ಇತ್ತ Vivo T4x 5G ಫೋನ್ 6500mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್ ನೀಡುತ್ತದೆ. ದಿನಪೂರ್ತಿ ಬಳಕೆ ಎರಡೂ ಫೋನ್‌ಗಳಲ್ಲಿ ಸಾಧ್ಯ. ಆದರೆ Realme ಹೆಚ್ಚು ದೀರ್ಘ ಬ್ಯಾಟರಿ ಲೈಫ್ ಕೊಡುತ್ತದೆ.

Realme P4x 5G vs Vivo T4x 5G ಹೋಲಿಕೆ: 15 ಸಾವಿರಕ್ಕೆ ಯಾವ ಫೋನ್ ಬೆಸ್ಟ್?

ಹೆಚ್ಚುವರಿ ಫೀಚರ್‌ಗಳು: ಬಳಕೆದಾರರಿಗೆ ಯಾವುದು ಸೂಕ್ತ?
Realme P4x 5G
Frozen Crown Cooling System
ದೊಡ್ಡ ವೇಪರ್ ಚೇಂಬರ್
Hi-Res ಆಡಿಯೋ ಮತ್ತು ಉತ್ತಮ ಸ್ಪೀಕರ್‌ಗಳು

Vivo T4x 5G
ಹೆಚ್ಚಿನ ಸೆನ್ಸಾರ್ ಬೆಂಬಲ
refined FuntouchOS 15 ಅನುಭವ
USB OTG ಬೆಂಬಲ
Realme ಗೇಮಿಂಗ್ ಮತ್ತು ಹೆವಿ ಯೂಸೇಜ್‌ಗೆ ಸೂಕ್ತ. Vivo ಬೃಹತ್ ಬಳಕೆದಾರರಿಗೆ simple ಮತ್ತು clean ಅನುಭವ ನೀಡುತ್ತದೆ.

Realme P4x 5G vs Vivo T4x 5G:: ಯಾವ ಫೋನ್ ಬೆಸ್ಟ್?
Realme P4x 5G ಅನ್ನು ಇವರು ಖರೀದಿಸಬಹುದು.
ಗೇಮಿಂಗ್ ಮತ್ತು ಹೆವಿ ಯೂಸೇಜ್ ಪ್ರಿಯರು
ದೊಡ್ಡ ಬ್ಯಾಟರಿ ಬೇಕಿರುವವರು
ಹೈ-ರಿಫ್ರೆಶ್ ರೇಟ್ ಡಿಸ್ಪ್ಲೇ ಬಯಸುವವರು
ದೀರ್ಘಕಾಲಕ್ಕೆ ಬಳಸುವ future-ready ಫೋನ್ ಹುಡುಕುವವರು.

Vivo T4x 5G ಅನ್ನು ಅನ್ನು ಇವರು ಖರೀದಿಸಬಹುದು.
ಕಡಿಮೆ ಬಜೆಟ್‌ನಲ್ಲಿ ಉತ್ತಮ ಫೋನ್ ಬಯಸುವವರು
ಪ್ರತಿದಿನದ ಸಮತೋಲನಿತ ಫೋನ್ ಬೇಡಿಕೆ ಇರುವವರು
ಹಗುರ ಮತ್ತು ಸ್ಲಿಮ್ ವಿನ್ಯಾಸ ಇಷ್ಟಪಡುವವರು

ಒಟ್ಟಾರೆಯಾಗಿ, ಹೆಚ್ಚಿನ ಪರ್ಫಾರ್ಮೆನ್ಸ್ ಮತ್ತು ದೊಡ್ಡ ಬ್ಯಾಟರಿ ಬಯಸುವವರು Realme ಖರೀದಿಸುವುದು ಉತ್ತಮ. ಬಜೆಟ್-ಪ್ರಿಯರಿಗೆ Vivo ಅತ್ಯುತ್ತಮ ಮೌಲ್ಯವನ್ನು ನೀಡುತ್ತದೆ. ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು?, ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Realme P4x 5G smartphone has quickly gained attention in the market. Launched in India just three days ago, it comes equipped with several mid-premium features. The device takes direct competition to Vivo’s budget segment offering, the Vivo T4x 5G.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+