ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್ ಖರೀದಿಗೆ ಕ್ಯೂ ನಿಲ್ಲೋದು ಗ್ಯಾರಂಟಿ!

|

ಭಾರತಕ್ಕೆ ಶಿಯೋಮಿ ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಮುನ್ನವೇ ರಿಯಲ್‌ಮಿಯ ಬಹುನಿರೀಕ್ಷಿತ ಫೋನ್ ಒಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಸಂಬಂಧ ಫ್ಲಿಪ್‌ಕಾರ್ಟ್‌ನಲ್ಲಿ ಟೀಸರ್ ಚಿತ್ರ ಒಂದನ್ನು ರಿಯಲ್‌ಮಿ ಪ್ರಕಟಿಸಿದ್ದು, ಮನರಂಜನೆಯ ಬಾಸ್ ಎಂಬುದನ್ನು ಉಲ್ಲೇಖಿಸಿ ಮೊಬೈಲ್ ಪ್ರಿಯರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಹೌದು, ಭಾರತ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿರುವ ರಿಯಲ್‌ಮಿ ಇದೀಗ ಅತ್ಯಂತ ಕಡಿಮೆ ಬೆಲೆಯ ನೋಚ್ ವಿನ್ಯಾಸದ ಸ್ಮಾರ್ಟ್‌ಪೋನ್ ಒಂದನ್ನು ದೇಶದ ಮಾರುಕಟ್ಟೆಗೆ ತರುತ್ತಿದೆ ಎಂದು ಹೇಳಲಾಗಿದ್ದು, ಕೇವಲ 6000 ರೂ. ಆಸುಪಾಸಿನಲ್ಲಿ 'ರಿಯಲ್‌ಮಿ ಎ1' ಎಂಬ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿದೆ.

ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್ ಖರೀದಿಗೆ ಕ್ಯೂ ನಿಲ್ಲೋದು ಗ್ಯಾರಂಟಿ!

6000 ಕ್ಕಿಂತ ಕಡಿಮೆ ಬೆಲೆಯಲ್ಲಿ ಡಿಸ್‌ಪ್ಲೇ ನೋಚ್, ಡ್ಯುಯಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿರಲಿದ್ದು, ಗ್ರಾಹಕರ ಮನವನ್ನು ತಣಿಸುವ ನಿರೀಕ್ಷೆಯನ್ನು ಹೊಂದಿದೆ. ಹಾಗಾದರೆ, ಮನರಂಜನೆಯ ಬಾಸ್ ಎಂದು ಕರೆಸಿಕೊಂಡು ಸದ್ದು ಮಾಡುತ್ತಿರುವ ರಿಯಲ್‌ಮಿ ಕಂಪೆನಿಯ 'ರಿಯಲ್ ಮಿ ಎ1' ಫೋನ್ ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ರಿಯಲ್‌ ಮಿ ಎ1 ವಿನ್ಯಾಸ

ರಿಯಲ್‌ ಮಿ ಎ1 ವಿನ್ಯಾಸ

ರಿಯಲ್‌ ಮಿ ಕಂಪೆನಿ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ್ದ 'ರಿಯಲ್ ಮಿ C1' ಸ್ಮಾರ್ಟ್‌ಫೋನಿನ ವಿನ್ಯಾಸವನ್ನೇ ಈ ರಿಯಲ್‌ ಮಿ ಎ1 ಸ್ಮಾರ್ಟ್‌ಫೋನ್ ಕೂಡ ಹೊಂದಿರಲಿದೆ ಎಂದು ಹೇಳಲಾಗಿದೆ. ನೋಚ್ ಡಿಸ್‌ಪ್ಲೇ, ನೋಚ್ ಒಳಗೆ ಸೆಲ್ಫಿ ಕ್ಯಾಮೆರಾ, AI ಫೇಸ್‌ ಅನ್‌ಲಾಕ್ ಫೀಚರ್ ಜೊತೆಗೆ ಬೆಜಲ್ ಲೆಸ್‌ ಯುನಿಬಾಡಿ ಗ್ಲಾಸ್ ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ.

ಡಿಸ್‌ಪ್ಲೇ ಸಾಮರ್ಥ್ಯ?

ಡಿಸ್‌ಪ್ಲೇ ಸಾಮರ್ಥ್ಯ?

ರಿಯಲ್‌ ಮಿ ಎ1 ಸ್ಮಾರ್ಟ್‌ಫೋನ್ 19:9 ಅನುಪಾತನದಲ್ಲಿ 6.2 ಇಂಚಿನ HD+ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿರುವ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಇರಲಿದೆ. 'ರಿಯಲ್ ಮಿ C1' ಸ್ಮಾರ್ಟ್‌ಫೋನಿನಲ್ಲಿನ ಡಿಸ್‌ಪ್ಲೇ ಸಾಮರ್ಥ್ಯ ಕೂಡ ಇದೇ ಆಗಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

'ರಿಯಲ್ ಮಿ ಎ1' ನಲ್ಲಿ ಒಕ್ಟಾಕೋರ್‌ನ 1.8GHz ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಇರಲಿದೆ ಎನ್ನಲಾಗಿದೆ. ಗೇಮಿಂಗ್‌ ಮತ್ತಿತರ ಮಲ್ಟಿಮೀಡಿಯಾ ಅನುಭವಗಳನ್ನು ಉತ್ತಮಗೊಳಿಸಲು ಆಡ್ರಿನೋ 506 GPU ಕೂಡ ಕಾಣಬಹುದಾಗಿದೆ. ಇದು ಆಂಡ್ರಾಯ್ಡ್ 8.1 ಓರಿಯೋ ಬೆಂಬಲಿತ ColorOS 5.1 ನಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಮೆಮೊರಿ ಸಾಮರ್ಥ್ಯ

ಮೆಮೊರಿ ಸಾಮರ್ಥ್ಯ

ರಿಯಲ ಮಿ ಎ1 ಸ್ಮಾರ್ಟ್‌ಫೋನ್ 2GB ಅಥವಾ 3GB RAM ವೇರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಅಂದಾಜಿಸಲಾಗಿದೆ. 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಕೂಡ ಇರಲಿದೆ.

ಕ್ಯಾಮೆರಾ ಸಾಮರ್ಥ್ಯ?

ಕ್ಯಾಮೆರಾ ಸಾಮರ್ಥ್ಯ?

ರಿಯಲ್ ಮಿ C1ನಲ್ಲಿ ನೀಡಲಾಗಿದ್ದ ಕ್ಯಾಮೆರಾ ಸೆಟಪ್ ಅನ್ನೇ ಈ ರಿಯಲ್ ಮಿ ಎ1 ಸ್ಮಾರ್ಟ್‌ಫೋನಿನಲ್ಲಿ ನೀಡಲಾಗುತ್ತಿದೆ. ಹಿಂಭಾಗದಲ್ಲಿ 13 MP+2 MP ಲೆನ್ಸ್ ಡ್ಯುಯಲ್‌ ರಿಯರ್ ಕ್ಯಾಮೆರಾ ಅಳವಡಿಸಲಾಗಿದ್ದು,ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. AI ಬೆಂಬಲಿತ ರಿಯಲ್ ಮಿ C1 ಸೆಲ್ಫಿ ಕ್ಯಾಮೆರಾ ಉತ್ತಮ ಕ್ಯಾಮೆರಾ ಎಂಬುದನ್ನು ಇಲ್ಲಿ ನಾವು ಗಮನಿಸಬೇಕು.

4230mAh ಬ್ಯಾಟರಿ

4230mAh ಬ್ಯಾಟರಿ

ರಿಯಲ್ ಮಿ ಎ1 ಸ್ಮಾರ್ಟ್‌ಫೋನಿನಲ್ಲಿ 4230mAh ಬ್ಯಾಟರಿ ಶಕ್ತಿಯನ್ನು ನೀಡಲಾಗುತ್ತದೆ ಎಂದು ಹೇಲಲಾಗಿದೆ, ಈಗಾಗಲೇ ರಿಯಲ್ ಮಿ C1 ಸ್ಮಾರ್ಟ್‌ಫೋನ್ ಹೊಂದಿರುವ ಬಹುಮುಖ್ಯ ಫೀಚರ್ ಇದಾಗಿದ್ದು, ಈ ಸ್ಮಾರ್ಟ್‌ಫೋನ್ ಎರಡು ದಿನಗಳ ಕಾಲ ಬ್ಯಾಟರಿ ಲೈಫ್ ನೀಡುತ್ತದೆ. ಅಲ್ಲದೇ ಪವರ್ ಸೇವಿಂಗ್ ಮೋಡ್ ಇದ್ದು, ದೀರ್ಘ ಬ್ಯಾಟರಿ ಬಾಳಿಕೆಯನ್ನು ಕಾಣಬಹುದು.

Best Mobiles in India

English summary
Realme teases new entertainment-focussed smartphone on Flipkart. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X