ಇನ್-ಬಿಲ್ಟ್ AC ಜೊತೆಗೆ ಭಾರೀ 15,000mAh ಬ್ಯಾಟರಿ ಫೋನ್ ನಾಳೆ ಅನಾವರಣ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ ರಿಯಲ್‌ಮಿ ತನ್ನ ಮುಂಬರುವ 828 ಫ್ಯಾನ್ ಫೆಸ್ಟಿವಲ್‌ನಲ್ಲಿ ಎರಡು ಹೊಸ ಮತ್ತು ಗಮನಾರ್ಹ ಆವಿಷ್ಕಾರಗಳನ್ನು ಪ್ರದರ್ಶಿಸಲು ಸಿದ್ಧವಾಗಿದೆ. ಅದರಲ್ಲಿ ಮೊದಲನೆಯದು ಬೃಹತ್ 15,000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್, ಮತ್ತು ಇನ್ನೊಂದು "ರಿಯಲ್‌ಮಿ ಚಿಲ್ ಫ್ಯಾನ್ ಫೋನ್" ಎಂದು ಕರೆಯಲ್ಪಡುವ ಇನ್-ಬಿಲ್ಟ್ AC ಕೂಲಿಂಗ್ ಸಿಸ್ಟಮ್ ಹೊಂದಿರುವ ಮಾದರಿ.! ಈ ಹೊಸ ಆವಿಷ್ಕಾರಗಳು ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಹೊಸ ಸಾಧ್ಯತೆಗಳನ್ನು ತೆರೆಯುವ ನಿರೀಕ್ಷೆಯಿದೆ.
ಹೌದು, 15,000mAh ಬ್ಯಾಟರಿ ಹೊಂದಿರುವ ಫೋನ್ ಅನ್ನು ಪರಿಚಯಿಸುವುದಾಗಿ ರಿಯಲ್‌ಮಿ ಪ್ರಕಟಿಸಿದೆ. ಕಂಪೆನಿಯ ಪ್ರಕಾರ, ಈ ಫೋನ್ ಒಂದೇ ಚಾರ್ಜ್‌ನಲ್ಲಿ 18.45 ಗಂಟೆಗಳ ನಿರಂತರ ವಿಡಿಯೋ ರೆಕಾರ್ಡಿಂಗ್ ಅಥವಾ 50 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಇದು ಸಾಮಾನ್ಯ ಬಳಕೆಯಲ್ಲಿ ಐದು ದಿನಗಳಿಗಿಂತ ಹೆಚ್ಚು ಬಾಳಿಕೆ ಬರುತ್ತದೆ ಎಂದು ಹೇಳಲಾಗಿದ್ದು, ಇದು ಮೊಬೈಲ್ ಬಳಕೆಯ ಅನುಭವವನ್ನು ಮತ್ತಷ್ಟು ಸುಧಾರಿಸಬಹುದು. ಆದರೆ, ಈ ಬೃಹತ್ ಬ್ಯಾಟರಿ ಮಾದರಿ ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಸಾಮೂಹಿಕ ಉತ್ಪಾದನೆಗೆ ಸಿದ್ಧವಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಈ ಫೆಸ್ಟಿವಲ್‌ನಲ್ಲಿ ಮತ್ತೊಂದು ಆಸಕ್ತಿದಾಯಕ ಆವಿಷ್ಕಾರವೆಂದರೆ "ರಿಯಲ್‌ಮಿ ಚಿಲ್ ಫ್ಯಾನ್ ಫೋನ್". ಈ ಫೋನ್‌ನಲ್ಲಿ AC ಯಂತೆ ಆನ್ ಆಗುವ ಒಂದು ಇನ್-ಬಿಲ್ಟ್ ಫ್ಯಾನ್ ಇದೆ. ಈ ತಂತ್ರಜ್ಞಾನವು ಫೋನ್‌ನ ಆಂತರಿಕ ತಾಪಮಾನವನ್ನು 6°C ವರೆಗೆ ಕಡಿಮೆ ಮಾಡುತ್ತದೆ ಎಂದು ರಿಯಲ್‌ಮಿ ಹೇಳಿದೆ. ಫೋನ್‌ನ ಸೈಡ್ ಫ್ರೇಮ್‌ನಲ್ಲಿ ಸಣ್ಣ ವೆಂಟ್ ಅನ್ನು ಸಹ ವೀಡಿಯೋ ಟ್ರೇಲರ್‌ಗಳಲ್ಲಿ ಕಾಣಬಹುದು. ರಿಯಲ್‌ಮಿಯ ಗ್ಲೋಬಲ್ ಮಾರ್ಕೆಟಿಂಗ್ ಉಪಾಧ್ಯಕ್ಷ ಚೇಸ್ ಕ್ಸು ಅವರು, ಮನೆಯಲ್ಲಿ AC ಆನ್ ಮಾಡಿದಂತೆ ಈ ಕೂಲಿಂಗ್ ವ್ಯವಸ್ಥೆ ಕೆಲಸ ಮಾಡುತ್ತದೆ ಎಂದು ವಿವರಿಸಿದ್ದಾರೆ.

ಈಗಾಗಲೇ ಕೆಲವು ಗೇಮಿಂಗ್ ಫೋನ್‌ಗಳಲ್ಲಿ ಇನ್-ಬಿಲ್ಟ್ ಫ್ಯಾನ್‌ಗಳು ಇವೆ. ಆದರೆ, ಈ ಫೋನ್‌ನಲ್ಲಿರುವ "AC" ಕೂಲಿಂಗ್ ಸಿಸ್ಟಮ್ ಹೊಸ ತಂತ್ರಜ್ಞಾನವಾಗಿದೆ. ಈ ರೀತಿಯ ಸಕ್ರಿಯ ಕೂಲಿಂಗ್ ಪರಿಹಾರಗಳು ಫೋನ್‌ನ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು. ಆದರೆ, ಇದನ್ನು ಸಾಮಾನ್ಯ ಗ್ರಾಹಕ ಫೋನ್‌ಗೆ ಸಂಯೋಜಿಸುವುದರಿಂದ ಬರುವ ಸವಾಲುಗಳನ್ನು ಎದುರಿಸಲು ರಿಯಲ್‌ಮಿ ಎಷ್ಟು ಸಿದ್ಧವಾಗಿದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಇದು ಸಾಧ್ಯವಾಗಿದ್ದರೆ, ಸ್ಮಾರ್ಟ್‌ಫೋನ್ ಲೋಕದಲ್ಲಿ ಮತ್ತೊಂದು ಸಂಚಲನಕ್ಕೆ ಕಾರಣವಾಗಲಿದೆ.
ಇದಲ್ಲದೆ, ರಿಯಲ್‌ಮಿ ಅದೇ ಸಮಾರಂಭದಲ್ಲಿ "ರಿಯಲ್‌ಮಿಯ ಫ್ಲಫಿ ಎಡಿಷನ್" ಅನ್ನು ಸಹ ಅನಾವರಣಗೊಳಿಸುವುದಾಗಿ ಘೋಷಿಸಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲದಿದ್ದರೂ, ಇದು ವಿನ್ಯಾಸ ಮತ್ತು ಕಾರ್ಯಕ್ಷಮತೆಯನ್ನು ಸಾಧಿಸುವ ಕಂಪನಿಯ ಪ್ರಯತ್ನವನ್ನು ಸೂಚಿಸುತ್ತದೆ. ರಿಯಲ್‌ಮಿ 828 ಫ್ಯಾನ್ ಫೆಸ್ಟಿವಲ್ ಆಗಸ್ಟ್ 27, 2025 ರಂದು ಚೀನಾ ಸ್ಟ್ಯಾಂಡರ್ಡ್ ಟೈಮ್ 11 AM ಕ್ಕೆ ಪ್ರಾರಂಭವಾಗಲಿದ್ದು, ಈ ನವೀನ ಉತ್ಪನ್ನಗಳು ನಿಜವಾಗಿಯೂ ಮಾರುಕಟ್ಟೆಯಲ್ಲಿ ಬದಲಾವಣೆ ತರುತ್ತವೆಯೇ ಅಥವಾ ಕೇವಲ ತಂತ್ರಜ್ಞಾನದ ಪ್ರದರ್ಶನವಾಗಿ ಉಳಿಯುತ್ತವೆಯೇ ಎಂದು ನಾವು ನೋಡಬೇಕಿದೆ.
ರಿಯಲ್‌ಮಿ ಕಳೆದ ವರ್ಷ ಪ್ರದರ್ಶಿಸಿದ 10,000mAh ಬ್ಯಾಟರಿ ಕಾನ್ಸೆಪ್ಟ್ ಫೋನ್ ಅನ್ನು ವಾಣಿಜ್ಯ ಉತ್ಪನ್ನವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಲೀಕರ್ ಡಿಜಿಟಲ್ ಚಾಟ್ ಸ್ಟೇಷನ್ ಹೇಳಿದೆ. ಒಂದು ವೇಳೆ ರಿಯಲ್‌ಮಿ 828 ಫ್ಯಾನ್ ಫೆಸ್ಟಿವಲ್ ನಲ್ಲಿ ಈ ಹೊಸ ತಂತ್ರಜ್ಞಾನಗಳು ಭವಿಷ್ಯದ ಸ್ಮಾರ್ಟ್‌ಫೋನ್‌ಗಳಿಗೆ ದಾರಿ ತೋರಿಸಬಹುದೇ?. ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








