11,999 ರೂ.ಗೆ 'ರಿಯಲ್ ಮಿ ಯು1' ಲಾಂಚ್!..'ರೆಡ್‌ಮಿ ನೋಟ್ 6 ಪ್ರೊ' ಕಥೆ ಕ್ಲೋಸ್!
ಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎಂಬ ಹೆಸರನ್ನು ಪಡೆದಿರುವ ರಿಯಲ್‌ಮಿ ಭಾರತೀಯರಿಗಿಂದು ಹಬ್ಬದ ಔತಣ ನೀಡಿದೆ. ಮೊನ್ನೆ ಮೊನ್ನೆಯಷ್ಟೇ ಲಾಂಚ್ ಆಗಿ ಗಮನಸೆಳೆದಿದ್ದ ಶಿಯೋಮಿ ಕಂಪೆನಿಯ 'ರೆಡ್‌ಮಿ ನೋಟ್ ಪ್ರೊ'ಗೆ ಸೆಡ್ಡುಹೊಡೆಯಲು 'ರಿಯಲ್ ಮಿ ಯು1' ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಇಂದು ಬಿಡುಗಡೆಯಾಗಿದೆ.
ಹೌದು, ರಿಯಲ್‌ಮಿ 1, ರಿಯಲ್‌ಮಿ 2, ರಿಯಲ್‌ಮಿ 2 ಪ್ರೊ ಮತ್ತು ರಿಯಲ್‌ಮಿ C1 ಸ್ಮಾರ್ಟ್‌ಫೋನ್‌ಗಳ ಯಶಸ್ಸಿನಲ್ಲಿ ತೇಲಾಡುತ್ತಿರುವ ರಿಯಲ್‌ಮಿ ಇದೀಗ ಅತ್ಯಂತ ಕಡಿಮೆ ಬೆಲೆಯಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ವಿಶ್ವದಲ್ಲೇ ಮೊದಲ ಬಾರಿಗೆ 'ಮೀಡಿಯಟೆಕ್ ಹೀಲಿಯೊ ಪಿ70' ಚಿಪ್‌ಸೆಟ್ ಹೊತ್ತು ಬಂದಿರುವ ಹೆಗ್ಗಳಿಕೆ ಪಡೆದ ಸ್ಮಾರ್ಟ್‌ಫೋನ್ ಇದಾಗಿದೆ.

ಅತ್ಯುತ್ತಮ 'ಮೀಡಿಯಟೆಕ್ ಹೀಲಿಯೊ ಪಿ70' ಚಿಪ್‌ಸೆಟ್ ಪ್ರೊಸೆಸರ್ ಹೊಂದಿರುವ 'ಮೀಡಿಯಟೆಕ್ ಹೀಲಿಯೊ ಪಿ70' ಚಿಪ್‌ಸೆಟ್ ಸೆಲ್ಫಿ ಪ್ರಿಯರನ್ನು ಸಹ ತನ್ನ ಬುಟ್ಟಿಗೆ ಹಾಕಿಕೊಳ್ಳಲು ರೆಡಿಯಾಗಿದೆ. ಹಾಗಾದರೆ, ಭಾರತದಲ್ಲಿ ಇಂದು ಲಾಂಚ್ ಆದ ರಿಯಲ್ ಮಿ ಯು1 ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ವಿಶೇಷತೆಗಳು ಯಾವುವು? ಬೆಲೆಗಳು ಎಷ್ಟು ಎಂಬುದನ್ನು ದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ರಿಯಲ್ ಮಿ ಯು1' ಲುಕ್ ಹೇಗಿದೆ?
ಇತ್ತೀಚಿನ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುವ ಲುಕ್‌ನಲ್ಲಿ 'ರಿಯಲ್ ಮಿ ಯು1' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ನೀವು ರಿಯಲ್‌ಮಿ 2 ಪ್ರೊ ಸ್ಮಾರ್ಟ್‌ಫೋನ್ ಅನ್ನು ಬಳಸಿದ್ದರೆ 'ರಿಯಲ್ ಮಿ ಯು1' ಲುಕ್ ಬಗ್ಗೆ ನಾವೇನು ಹೆಚ್ಚು ಹೇಳಬೇಕಿಲ್ಲ. ಆದರೆ, ಮುಂಬಾಗದಲ್ಲಿ ನೋಚ್, ಹಿಂಬಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಬಾಡಿ ಅರೆಪಾರದರ್ಶಕ ಪಾಲಿಕಾರ್ಬೊನೇಟ್ ಗಾಜಿನಿಂದ ಆವೃತವಾಗಿದೆ.

'ರಿಯಲ್ ಮಿ ಯು1' ಲುಕ್ ಡಿಸ್‌ಪ್ಲೇ!
90.8% ಸ್ಕ್ರೀನ್ ಟು ಬಾಡಿ ರೆಷ್ಯೂನೊಂದಿಗೆ ಲುಕ್‌ನಲ್ಲಿ 'ರಿಯಲ್ ಮಿ ಯು1' ಸ್ಮಾರ್ಟ್‌ಫೋನ್ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸಮನಾದ ಕೆಲವು ಡಿಸ್‌ಪ್ಲೇ ಫೀಚರ್ಸ್ ಹೊಂದಿದೆ. 19.5:9 ಆಕಾರ ಅನುಪಾತದಲ್ಲಿ 2340 x 1080p ಸಾಮರ್ಥ್ಯದ 6.3 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. 2.5D ಕರ್ವಡ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಹೊಂದಿರುವ ಈ ಸ್ಮಾರ್ಟ್‌ಪೋನ್ ಡಿಸ್‌ಪ್ಲೇ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇಯನ್ನು ನೆನಪಿಸುತ್ತದೆ.

ಮೀಡಿಯಟೆಕ್ ಹೀಲಿಯೊ ಪಿ70' ಪ್ರೊಸೆಸರ್
ಮೊದಲೇ ಹೇಳಿದಂತೆ 'ರಿಯಲ್ ಮಿ ಯು1' ಸ್ಮಾರ್ಟ್‌ಫೋನಿನಲ್ಲಿ 'ಮೀಡಿಯಟೆಕ್ ಹೀಲಿಯೊ ಪಿ70' ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ. ಆಕ್ಟಕೋರ್ ಬೇಸ್ 12nm ಫ್ಯಾಬ್ರಿಕೇಶನ್ ಪ್ರೊಸೆಸರ್ ಇದಾಗಿದ್ದು, ಈ ಪ್ರೊಸೆಸರ್ ಅನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಪೋನ್ ಇದಾಗಿದೆ. ಅಂಟುಂಟು ಬೆಂಚ್‌ಮಾರ್ಕ್ ಸ್ಕೋರ್‌ನಲ್ಲಿ 144761 ಪಾಯಿಂಟ್‌ಗಳನ್ನು ಪಡೆದುಕೊಂಡಿರುವ ಈ ಸ್ಮಾರ್ಟ್‌ಫೋನ್, 114335 ಪಾಯಿಂಟ್ ಪಡೆದುಕೊಂಡ ರಿಯಲ್‌ಮಿ 2 ಪ್ರೊ ಗಿಂತಲೂ 30% ಹೆಚ್ಚು ಸ್ಕೋರ್ ಪಡೆದುಕೊಂಡಿದೆ.

ಕ್ಯಾಮೆರಾ ಸೆಟಪ್!
ರಿಯಲ್ ಮಿ ಯು1' ಸ್ಮಾರ್ಟ್‌ಫೋನ್ 25MP ಸೆಲ್ಫಿ ಕ್ಯಾಮೆರಾವನ್ನು ಹೊಂದುವ ಮೂಲಕ ಸೆಲ್ಫಿ ಪ್ರಿಯರಿಗೆ ಭರ್ಜರಿ ಆಯ್ಕೆಯೊಂದನ್ನು ನೀಡಿದೆ. ಬಜೆಟ್ ಸ್ಮಾರ್ಟ್‌ಪೋನ್‌ಗಳ ಬೆಲೆಯಲ್ಲೇ 25MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಏಕೈಕ ಸ್ಮಾರ್ಟ್‌ಪೋನ್ ಇದಾಗಿದೆ. ಇನ್ನು ಹಿಂಬಾಗದಲ್ಲಿ 13MP ಪ್ರೈಮರಿ ಹಾಗೂ 2MP ಡೆಪ್ತ್ ಸೆನ್ಸಾರ್ ಎರಡು ರಿಯರ್ ಕ್ಯಾಮೆರಾಗಳನ್ನು ಸ್ಮಾರ್ಟ್‌ಪೋನಿನಲ್ಲಿ ನೋಡಬಹುದು. ಪೊಟ್ರೆಟ್ ಮೂಡ್ ಬೆಂಬಲಿಸುವ ಪ್ರೈಮರಿ ಕ್ಯಾಮೆರಾದಲ್ಲಿ 30fps @ ವೇಗದಲ್ಲಿ 1080p ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಬಹುದಾಗಿದೆ.

ಬ್ಯಾಟರಿ ಶಕ್ತಿ ಹೇಗಿದೆ?
10W ಸ್ಟ್ಯಾಂಡರ್ಡ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 3500 mAh ಲಿ-ಐಯಾನ್ ಬ್ಯಾಟರಿಯೊಂದಿಗೆ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. 0 ರಿಂದ 100% ವರೆಗೆ ಚಾರ್ಜ್ ಮಾಡಲು ಸಾಧನವು 2 ರಿಂದ 2.5 ಗಂಟೆಗಳ ಸಮಯವನ್ನು ಮಾತ್ರ ತೆಗೆದುಕೊಳ್ಳುತ್ತದೆ ಹಾಗೂ ಒಂದೇ ಚಾರ್ಜ್‌ನಲ್ಲಿ 1.5 ರಿಂದ 2 ದಿನಗಳ ವರೆಗೆ ಬ್ಯಾಟರಿ ಬಾಳಿಕೆ ಇರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. 10W ಸ್ಟ್ಯಾಂಡರ್ಡ್ ಚಾರ್ಜಿಂಗ್ ಸಾಮರ್ಥ್ಯದ ಯುಎಸ್‌ಬಿ ಪೋರ್ಟ್ ಡೇಟಾ ಸಿಂಕ್ ಮಾಡಲು ಸಹಕರಿಸಲಿದೆ ಎಂದು ತಿಳಿದುಬಂದಿದೆ.

ಇತರೆ ಏನೆಲ್ಲಾ ಫೀಚರ್ಸ್?
ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ ಹೊಂದಿರುವ ಸ್ಮಾರ್ಟ್‌ಫೋನ್ ಎರಡರಲ್ಲೂ 4G LTE ಮತ್ತು VoLTE ಅನ್ನು ಬೆಂಬಲಿಸುತ್ತದೆ. ಬ್ಲೂಟೂತ್ 4.2 ನೊಂದಿಗೆ ಫೋನ್ ಡ್ಯೂಯಲ್-ಬ್ಯಾಂಡ್ Wi-Fi (2.4 GHz ಮತ್ತು 5.0GHz) ಅನ್ನು ಬೆಂಬಲಿಸುವ ಈ ಸ್ಮಾರ್ಟ್‌ಫೋನ್ ಫೇಸ್ ಅನ್‌ಲಾಕ್ ಫೀಚರ್ ಅನ್ನು ಸಹ ಹೊಂದಿರುವುದು ವಿಶೇಷ ಎನ್ನಬಹುದು, ಆದರೆ, ಇದು ಫಿಂಗರ್ಪ್ರಿಂಟ್ ಸೆನ್ಸಾರ್ನಂತೆ ಸುರಕ್ಷಿತವಾಗಿಲ್ಲ ಎಂದು ಹೇಳಬಹುದು. ಇನ್ನುಳಿದಂತೆ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್‌ಫೋನ್ ಬೆಲೆ ಎಷ್ಟು?
ಇಂದಷ್ಟೇ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ 'ರಿಯಲ್ ಮಿ ಯು1' ಸ್ಮಾರ್ಟ್‌ಫೋನ್ 3GB+32GB ಹಾಗೂ 4GB+64GB ಎರಡು ಮಾದರಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 3GB RAM ಮತ್ತು 32GB ಆಂತರಿಕ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 11,999 ರೂಪಾಯಿಗಳಾದರೆ, 4GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 14,999 ರೂಪಾಯಿಗಳಾಗಿವೆ. ಒಟ್ಟಾರೆಯಾಗಿ ಬಜೆಟ್ ಸ್ಮಾರ್ಟ್‌ಪೋನ್‌ಗಳ ಸಾಲಿನಲ್ಲಿ ಈಗ ರಿಯಲ್‌ಮಿ ಯು1 ಮೊದಲ ಸ್ಥಾನದಲ್ಲಿ ನಿಲ್ಲಲಿದೆ ಎಂದು ಹೇಳಬಹುದು.


Click it and Unblock the Notifications







