Realme ಪ್ರಿಯರಿಗೆ ಸರ್ಪ್ರೈಸ್.. ಸದ್ದಿಲ್ಲದೆ ಎರಡು ಫೋನ್ ಲಾಂಚ್: ಬೆಲೆ ಎಷ್ಟು?
Realme ಪ್ರಿಯರಿಗೆ ಡಬಲ್ ಸರ್ಪ್ರೈಸ್ ಗಿಫ್ಟ್! ಸದ್ದಿಲ್ಲದೆ ಎರಡು ಫೋನ್‌ಗಳನ್ನು ಲಾಂಚ್ ಮಾಡಿದ ರಿಯಲ್‌ಮಿ. ಎರಡೂ ಮೊಬೈಲ್‌ಗಳು ಕೈಗೆಟುಕುವ ಬೆಲೆಗೆ ಪರಿಚಯಿಸಿದೆ. ಹೌದು, ಸ್ಮಾರ್ಟ್‌ಫೋನ್ ಬ್ರಾಂಡ್ Realme ತನ್ನ ಇತ್ತೀಚಿನ V-ಸರಣಿಯ ಸ್ಮಾರ್ಟ್‌ಫೋನ್‌ಗಳಾದ Realme V60 ಮತ್ತು V60 ಫೋನ್‌ಗಳನ್ನು ಚೀನಾದಲ್ಲಿ ಸದ್ದಿಲ್ಲದೆ ಬಿಡುಗಡೆ ಮಾಡಿದೆ. Realmeನ ಈ ಎರಡೂ ಹೊಸ ಫೋನ್‌ಗಳನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಎರಡೂ ಫೋನ್‌ಗಳಲ್ಲಿ ನೀವು ಬಹುತೇಕ ಒಂದೇ ವಿನ್ಯಾಸ ಮತ್ತು ಹಾರ್ಡ್‌ವೇರ್ ಅನ್ನು ಕಾಣಬಹುದು. ಈ ಫೋನ್‌ಗಳ ವಿಶೇಷತೆಗಳು, ಬೆಲೆ ಮತ್ತು ಲಭ್ಯತೆಯನ್ನು ತಿಳಿಯೋಣ ಬನ್ನಿ.
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಭಾರೀ ಬೇಡಿಕೆ ಪಡೆದಿವೆ. ಈ ಫೋನ್‌ಗಳ ಉತ್ತಮ ಫೀಚರ್ಸ್‌ನಿಂದಾಗಿ ಗ್ರಾಹಕರು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಕಂಪನಿ ಕೂಡ ಉತ್ತಮ ಫೀಚರ್ಸ್ ಹೊಂದಿರುವ ಮೊಬೈಲ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ Realme V60, V60s ಫೋನ್‌ಗಳನ್ನು ಪರಿಚಿಯಿಸಿದೆ. ಈ ಫೋನ್‌ಗಳು 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ HD+ ಪ್ಯಾನೆಲ್ ಡಿಸ್ಪ್ಲೇಯನ್ನು ಹೊಂದಿವೆ. ಇದರ ರೆಸಲ್ಯೂಶನ್ 720 x 1604 ಪಿಕ್ಸೆಲ್‌ಗಳು ಮತ್ತು ಬ್ರೈಟ್‌ನೆಸ್ 625nits ಹೊಂದಿದೆ.

Realme V60, V60s ಫೋನ್‌ನ ವಿಶೇಷತೆಗಳು
ಈ ಫೋನ್‌ಗಳ ಸ್ಟೋರೇಜ್ ಬಗ್ಗೆ ಹೇಳುವುದಾದರೆ, ಇದು 6GB, 8GB RAM ಆಯ್ಕೆಗಳೊಂದಿಗೆ 128GB, 256GB ಇಂಟರ್ನಲ್ ಸ್ಟೋರೇಜ್ ವೇರಿಯಂಟ್ ಹೊಂದಿದೆ. ಇದರೊಂದಿಗೆ, ಇದು ವರ್ಚುವಲ್ RAM ವಿಸ್ತರಣೆಯನ್ನು 8GB ವರೆಗೆ ಬೆಂಬಲಿಸುತ್ತದೆ. ಆಪರೇಟಿಂಗ್ ಸಿಸ್ಟಮ್ ಬಗ್ಗೆ ತಿಳಿಸುವುದಾದರೆ, ಈ ಫೋನ್ ಆಂಡ್ರಾಯ್ಡ್ 14 ಅನ್ನು ಹೊಂದಿದೆ. ಇದರಲ್ಲಿ ರಿಯಲ್‌ಮಿಯ ಕಸ್ಟಮ್ ಯುಐ, ರಿಯಲ್‌ಮಿ ಯುಐ 5.0 ಅನ್ನು ಮೊದಲೇ ಅಳವಡಿಲಾಗಿದೆ.
ರಿಯಲ್‌ಮಿ V60 ಮತ್ತು V60s ಮೊಬೈಲ್‌ಗಳ ಪ್ರೊಸೆಸರ್ ಬಗ್ಗೆ ತಿಳಿಯುವುದಾದರೆ, ಕಾರ್ಯಕ್ಷಮತೆಗಾಗಿ ಮೀಡಿಯಾ ಟೆಕ್ ಡೈಮೆನ್ಶನ್ 6300 ಚಿಪ್‌ಸೆಟ್ ಅನ್ನು ಇದರಲ್ಲಿ ಸೇರಿಸಲಾಗಿದೆ. ಈ ಆಕ್ಟಾ-ಕೋರ್ ಪ್ರೊಸೆಸರ್ ಎರಡು ಕಾರ್ಟೆಕ್ಸ್-A76 ಕೋರ್‌ಗಳನ್ನು 2.4GHz ನಲ್ಲಿ ಹೊಂದಿದೆ. ಜೊತೆಗೆ ಆರು ಕಾರ್ಟೆಕ್ಸ್-A55 ಕೋರ್‌ಗಳನ್ನು 2.0GHz ನಲ್ಲಿ ಕಾರ್ಯಕ್ಷಮತೆಯ ಕಾರ್ಯಗಳಿಗಾಗಿ ಅಳಡಿಸಲಾಗಿದೆ.
ಅದ್ಭುತ ಕ್ಯಾಮೆರಾ, ಪವರ್ ಫುಲ್ ಬ್ಯಾಟರಿ
ಕ್ಯಾಮೆರಾ ಸೆಟಪ್ ನೋಡುವುದಾದರೆ, ಇದು 32MP ರಚನೆ ಮತ್ತು LED ಫ್ಲ್ಯಾಷ್ ಅನ್ನು ಹೊಂದಿದೆ. ಇದರೊಂದಿಗೆ, ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 8MP ಪಂಚ್ ಹೋಲ್ ಕ್ಯಾಮೆರಾವನ್ನು ಹೊಂದಿದೆ. ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, ಕಂಪನಿಯು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಬೆಲೆ ಎಷ್ಟು? ಹೇಗೆ ಖರೀದಿಸಬಹುದು
ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಈ ಫೋನ್‌ನ ಬೆಲೆಯ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಪ್ರಸ್ತುತ ಕಂಪನಿಯು ಚೀನಾದಲ್ಲಿ Realme V60 ಮತ್ತು V60s ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. Realme V60 ಮತ್ತು Realme V60s ಅನ್ನು ಸ್ಟಾರ್ ಗೋಲ್ಡ್ ಮತ್ತು ಟರ್ಕೋಯಿಸ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಫೋನ್‌ಗಳು ಚೀನಾದಲ್ಲಿ Realme ನ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಿರುತ್ತವೆ.

ಈ Realme V60 ನ 6GB/128GB ಸ್ಟೋರೇಜ್ ವೇರಿಯಂಟ್ ಬೆಲೆ ಅಂದಾಜು 13,500 ರೂ. (1,199 CNY/$175 USD) ಇದೆ. ಇದರ 8GB/256GB ಸ್ಟೋರೇಜ್ ಮಾದರಿಯು 16,000 ರೂ. (1,399 CNY/$205 USD) ಇದೆ. Realme V60sನ 6GB/128GB ಸ್ಟೋರೇಜ್ ವೇರಿಯಂಟ್ ಬೆಲೆ ಅಂದಾಜು 16,000 ರೂ. (1,399 CNY/$205 USD) ಇದೆ. ಇದರ 8GB/256GB ಸ್ಟೋರೇಜ್ ಮಾದರಿಯ ಬೆಲೆ 20,500 ರೂ. (1,799 CNY/$265 USD) ಇದೆ.
Realme V60 ಮತ್ತು V60s ಸಂಪೂರ್ಣ ಫೀಚರ್ಸ್
- ಡಿಸ್ಲ್ಪೇ: 720×1604 ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ LCD ಡಿಸ್ಪ್ಲೇ. ಇದರ ಡಿಸ್ಲ್ಪೇ 625 nits ಗರಿಷ್ಠ ಬ್ರೈಟ್‌ನೆಸ್ ತಲುಪಬಹುದು ಮತ್ತು ರಾತ್ರಿಯ ಬಳಕೆಗಾಗಿ 1nitsಗೆ ಮಂದವಾಗಬಹುದು.
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 6300SoC, ಇದು ಮಧ್ಯಮ ಶ್ರೇಣಿಯ ಪ್ರೊಸೆಸರ್ ಆಗಿದೆ, ಇದು ಸಮತೋಲಿತ ಕಾರ್ಯಕ್ಷಮತೆಯನ್ನು ನೀಡುತ್ತದೆ.
- ಕ್ಯಾಮೆರಾ: 32 ಮೆಗಾಪಿಕ್ಸೆಲ್ ಹಿಂಭಾಗದ ಸಂವೇದಕ ಮತ್ತು 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ
- ಬ್ಯಾಟರಿ: 5000mAh ಬ್ಯಾಟರಿ ಜೊತೆಗೆ 10W ವೈರ್ಡ್ ಚಾರ್ಜಿಂಗ್
- ಸ್ಟೋರೇಜ್: 4GB/64GB ಯಿಂದ 12GB/512GB ಈ ಹ್ಯಾಂಡ್‌ಸೆಟ್‌ಗಳಿಗೆ RAM ಕಾನ್ಫಿಗರೇಶನ್‌ಗಳಾಗಿವೆ. ಇದಲ್ಲದೆ, Realme V60 ಮತ್ತು 60S 8GB ವರೆಗೆ ವರ್ಚುವಲ್ RAM ವಿಸ್ತರಣೆಯನ್ನು ನೀಡುತ್ತದೆ.
- ಇತರೆ ಫೀಚರ್‌ಗಳು: IP64 ಪ್ರಮಾಣೀಕರಣಗಳು, ಅಂದರೆ ಈ ಫೋನ್‌ಗಳು ನೀರು ಮತ್ತು ಧೂಳು ನಿರೋಧಕವಾಗಿರುತ್ತವೆ.


Click it and Unblock the Notifications








