Home
ಮೊಬೈಲ್

ಇಂದಿನಿಂದ 'ರಿಯಲ್‌ ಮಿ ಎಕ್ಸ್' ಸೇಲ್ ಆರಂಭ!..ತಲೆಕೆಡಿಸಿದ ರಿಯಲ್‌ಮಿ ಕಂಪೆನಿ!

ಭಾರತದಲ್ಲಿ ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ''ರಿಯಲ್‌ ಮಿ ಎಕ್ಸ್'' ಸ್ಮಾರ್ಟ್‌ಫೋನಿನ ಮೊದಲ ಫ್ಲಾಶ್‌ಸೇಲ್ ಇಂದಿನಿಂದ ಆರಂಭವಾಗಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 SoC, ಪಾಪ್-ಅಪ್ ಸೆಲ್ಫಿ ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಯ 3,765mAh ಬ್ಯಾಟರಿಯಂತಹ ಆಕರ್ಷಕ ವಿಶೇಷಣಗಳೊಂದಿಗೆ ಬಂದಿರುವ ರಿಯಲ್‌ ಮಿ ಎಕ್ಸ್ ಸ್ಮಾರ್ಟ್‌ಪೋನ್ ಅನ್ನು "ಹೇಟ್-ಟು-ವೇಟ್" ಎಂಬ ಟ್ಯಾಗ್‌ಲೈನ್ ಅಡಿಯಲ್ಲಿ ಇಂದು ಮಾರಾಟಕ್ಕೆ ಇಡಲಾಗುತ್ತಿದೆ.

ಇಂದಿನಿಂದ 'ರಿಯಲ್‌ ಮಿ ಎಕ್ಸ್' ಸೇಲ್ ಆರಂಭ!..ತಲೆಕೆಡಿಸಿದ ರಿಯಲ್‌ಮಿ ಕಂಪೆನಿ!

ವಿಚಿತ್ರವೆಂದರೆ, ರಿಯಲ್‌ ಮಿ ಎಕ್ಸ್ ಸ್ಮಾರ್ಟ್‌ಫೋನಿನ ಅಧಿಕೃತ ಸೇಲ್ ಜುಲೈ 24 ರಿಂದ ಆರಂಭವಾಗಲಿದೆ. ಆದರೆ, ರಿಯಲ್‌ಮಿ ಇಂದು ತನ್ನ ಅಭಿಮಾನಿಗಳಿಗಾಗಿ ಈ ಸೇಲ್ ಅನ್ನು ಆಯೋಜಿಸುತ್ತಿದ್ದು, ಹೇಟ್-ಟು-ವೇಟ್ ಮಾರಾಟದಲ್ಲಿ ಸ್ಮಾರ್ಟ್‌ಫೋನ್ ಬುಕ್ ಮಾಡಿದವರಿಗೆ ಮೊದಲು ಸ್ಮಾರ್ಟ್‌ಫೋನ್ ಲಭ್ಯವಾಗುವ ನಿರೀಕ್ಷೆ ಇದೆ. ಹೇಟ್-ಟು-ವೇಟ್ ಮಾರಾಟವು ಇಂದು ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ.ಕಾಮ್‌ಗಳಲ್ಲಿ ಸ್ಮಾರ್ಟ್‌ಫೋನ್ ಮಾರಾಟಕ್ಕೆ ತೆರೆದುಕೊಳ್ಳಲಿದೆ.

ಜುಲೈ 24, 2019 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಅಧಿಕೃತ ವೆಬ್‌ಸೈಟ್‌ನಲ್ಲಿ ನೇರ ಮಾರಾಟಕ್ಕೆ ಬರಲಿದೆ. ಇದು ರಿಯಲ್‌ ಮಿ ಎಕ್ಸ್ ಸ್ಮಾರ್ಟ್‌ಪೋನಿನ ವಿಶೇಷ ಮಾರಾಟವಾಗಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡುವುದಾಗಿ ತಿಳಿಸಿ ರಿಯಲ್‌ಮಿ ಕುತೋಹಲ ಹೆಚ್ಚಿಸಿದೆ. ಹಾಗಾದರೆ, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿರುವ ರಿಯಲ್‌ಮಿ ಎಕ್ಸ್ ಸ್ಮಾರ್ಟ್‌ಪೋನ್ ಹೇಗಿದೆ?, ಫೀಚರ್ಸ್ ಯಾವುದು? ಬೆಲೆ ಎಷ್ಟು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ನೋಚ್‌ಲೆಸ್‌ ಡಿಸ್‌ಪ್ಲೇ

ನೋಚ್‌ಲೆಸ್‌ ಡಿಸ್‌ಪ್ಲೇ

ರಿಯಲ್‌ ಮಿ ಎಕ್ಸ್ 6.53-ಇಂಚಿನ ಪೂರ್ಣ-ಎಚ್‌ಡಿ + (1080x2340 ಪಿಕ್ಸೆಲ್‌ಗಳು) AMOLED ನೋಚ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ ರೆಶಲ್ಯೂಶನ್‌ ಒಳಗೊಂಡಿದೆ. ಡಿಸ್‌ಪ್ಲೇಯ ಸುತ್ತಲೂ ಅತಿ ಕಡಿಮೆ ಅಂಚನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿದೆ. ಗೇಮ್ಸ್‌ ಆಡಲು ಮತ್ತು ವಿಡಿಯೊ ವೀಕ್ಷಿಸಲು ಡಿಸ್‌ಪ್ಲೇಯು ಅತ್ಯುತ್ತಮ ಎನಿಸಲಿದೆ.

ಸ್ನ್ಯಾಪ್‌ಡ್ರಾಗನ್ 710

ಸ್ನ್ಯಾಪ್‌ಡ್ರಾಗನ್ 710

ರಿಯಲ್ ಮಿ 3 ಪ್ರೊ ದಲ್ಲಿಯೂ ಸಹ ಕಂಪನಿಯು ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿತ್ತು. ಈಗ ರಿಯಲ್ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿದೆ. ಮಲ್ಟಿಟಾಸ್ಕ್‌ ಕೆಲಸಗಳು ಸುಲಭವಾಗಿ ಮಾಡಬಹುದಾಗಿದ್ದು, ಗೇಮ್‌ ಆಡಲು ಸಹ ಪೂರಕವಾಗಿರಲಿದೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ಸದ್ಯ ಟ್ರೆಂಡಿಂಗ್‌ನಲ್ಲಿರುವ ಫೀಚರ್ಸ್‌ಗಳಲ್ಲಿ 48ಎಂಪಿ ಕ್ಯಾಮೆರಾ ಆಯ್ಕೆಯು ಸಹ ಒಂದಾಗಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನ್ ಸಹ ಹಿಂಬದಿಯಲ್ಲಿ 48ಎಂಪಿ ಕ್ಯಾಮೆರಾ ಫೀಚರ್‌ ಅನ್ನು ಹೊಂದಿದ್ದು, ಸೋನಿಯ IMX586 ಸೆನ್ಸಾರ್‌ ಈ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಅದರ ಅಪರ್ಚರ್ f/1.7 ಸಾಮರ್ಥ್ಯದಲ್ಲಿದೆ.

ಪಾಪ್‌ಅಪ್‌ ಸೆಲ್ಫಿ

ಪಾಪ್‌ಅಪ್‌ ಸೆಲ್ಫಿ

ಈಗಿನ ಪ್ರಮುಖ ಸ್ಮಾರ್ಟ್‌ಪೋನ್‌ಗಳಲ್ಲಿ ಸೆಲ್ಫಿಗಾಗಿ ಪಾಪ್‌ಅಪ್‌ ಕ್ಯಾಮೆರಾ ಆಯ್ಕೆಯನ್ನು ಒದಗಿಸಲಾಗುತ್ತಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನಿನ 16ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾವುನ್ನು ಒದಗಿಸಿದ್ದು, ಅದು 0.7 ಸೆಕೆಂಡ್ಸ್‌ನ ಒಳಗೆ ತೆರೆದುಕೊಳ್ಳುತ್ತದೆ.

VOOC 3.0

VOOC 3.0

ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್ಫೋನ್‌ನಲ್ಲಿ 3,765mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಬ್ಯಾಟರಿಯು ದೀರ್ಘಕಾಲದವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ VOOC 3.0 ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್‌ ಪಡೆದುಕೊಳ್ಳುತ್ತದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ರಿಯಲ್‌ಮಿ ಫೋನಿನ 4 ಜಿಬಿ + 128 ಜಿಬಿ ರೂಪಾಂತರದ ಬೆಲೆಯನ್ನು 16,999 ರೂ.ಗಳಿಗೆ ಬಿಡುಗಡೆ ಮಾಡಿದ್ದು, 8 ಜಿಬಿ + 128 ಜಿಬಿ ಫೋನ್ ಬೆಲೆಯನ್ನು 19,999 ರೂ ಎಂದು ಘೋಷಿಸಿದೆ. ಇವುಗಳ ಜೊತೆಗೆ ಬ್ರ್ಯಾಂಡ್ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಣ್ಣಗಳಲ್ಲಿ ಮಾಸ್ಟರ್ ಆವೃತ್ತಿಯನ್ನು 19,999 ರೂ.ಗಳಿಗೆ ಬಿಡುಗಡೆ ಮಾಡಿದ್ದರೆ, ಸ್ಪೈಡರ್ಮ್ಯಾನ್ ಫಾರ್ ಫ್ರಮ್ ಹೋಮ್ ವಿಶೇಷ ಆವೃತ್ತಿಯ ಉಡುಗೊರೆ ಪೆಟ್ಟಿಗೆಯನ್ನು 20,999 ರೂ.ಗಳಿಗೆ ಬಿಡುಗಡೆ ಮಾಡುವ ಮೂಲಕ ರಿಯಲ್‌ಮಿ ಕಂಪೆನಿ ಮೊಬೈಲ್ ಪ್ರಿಯರ ಗಮನಸೆಳೆದಿದೆ.

Best Mobiles in India

English summary
Realme X Hate-to-Wait Sale Today on Flipkart, Realme Online Store at 8pm: Price, Specifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+