Home
ಮೊಬೈಲ್

ಭಾರತದಲ್ಲಿ ''ರಿಯಲ್‌ ಮಿ ಎಕ್ಸ್'' ರಿಲೀಸ್!..ಬೆಲೆ, ಫೀಚರ್ಸ್ ಕಂಪ್ಲೀಟ್ ಡೀಟೇಲ್ಸ್!

ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿರುವ ''ರಿಯಲ್‌ ಮಿ'' ತನ್ನ ಇತ್ತೀಚಿನ ಜನಪ್ರಿಯ ''ರಿಯಲ್‌ ಮಿ ಎಕ್ಸ್'' ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಿಯಲ್‌ಮಿ ಎಕ್ಸ್ ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ಮಾಡ್ಯೂಲ್, 19.5: 9 ಡಿಸ್ಪ್ಲೇ ಪ್ಯಾನಲ್ ಮತ್ತು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 SoC ಅನ್ನು ಒಳಗೊಂಡಿರುವ ಈ ಫೋನ್ ದೇಶದಲ್ಲಿ 16,999 ರೂಪಾಯಿಗಳಿಂದ ಆರಂಭವಾಗಿದೆ.

ಭಾರತದಲ್ಲಿ ''ರಿಯಲ್‌ ಮಿ ಎಕ್ಸ್'' ರಿಲೀಸ್!.ಬೆಲೆ, ಫೀಚರ್ಸ್ ಕಂಪ್ಲೀಟ್ ಡೀಟೇಲ್ಸ್!

ಹೌದು, ರಿಯಲ್‌ಮಿ ಫೋನ್‌ನ 4 ಜಿಬಿ + 128 ಜಿಬಿ ರೂಪಾಂತರದ ಬೆಲೆಯನ್ನು 16,999 ರೂ.ಗಳಿಗೆ ಬಿಡುಗಡೆ ಮಾಡಿದ್ದು, 8 ಜಿಬಿ + 128 ಜಿಬಿ ಫೋನ್ ಬೆಲೆಯನ್ನು 19,999 ರೂ ಎಂದು ಘೋಷಿಸಿದೆ. ಇವುಗಳ ಜೊತೆಗೆ ಬ್ರ್ಯಾಂಡ್ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಣ್ಣಗಳಲ್ಲಿ ಮಾಸ್ಟರ್ ಆವೃತ್ತಿಯನ್ನು 19,999 ರೂ.ಗಳಿಗೆ ಬಿಡುಗಡೆ ಮಾಡಿದ್ದರೆ, ಸ್ಪೈಡರ್ಮ್ಯಾನ್ ಫಾರ್ ಫ್ರಮ್ ಹೋಮ್ ವಿಶೇಷ ಆವೃತ್ತಿಯ ಉಡುಗೊರೆ ಪೆಟ್ಟಿಗೆಯನ್ನು 20,999 ರೂ.ಗಳಿಗೆ ಬಿಡುಗಡೆ ಮಾಡುವ ಮೂಲಕ ರಿಯಲ್‌ಮಿ ಕಂಪೆನಿ ಮೊಬೈಲ್ ಪ್ರಿಯರ ಗಮನಸೆಳೆದಿದೆ.

ಇನ್ನು ರಿಯಲ್‌ ಮಿ ಎಕ್ಸ್ ಸ್ಮಾರ್ಟ್‌ಪೋನ್ ಶೇಷ ಮಾರಾಟವು ಜುಲೈ 18, 2019 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ಆದರೆ, ಜುಲೈ 24, 2019 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಅಧಿಕೃತ ವೆಬ್‌ಸೈಟ್‌ನಲ್ಲಿ ನೇರ ಮಾರಾಟಕ್ಕೆ ಬರಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗಾದರೆ, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿರುವ ರಿಯಲ್‌ಮಿ ಎಕ್ಸ್ ಸ್ಮಾರ್ಟ್‌ಪೋನ್ ಹೇಗಿದೆ?, ಸ್ಮಾರ್ಟ್‌ಫೋನಿನಲ್ಲಿರುವ ವಿಶೇಷ ಫೀಚರ್ಸ್ ಯಾವುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ನೋಚ್‌ಲೆಸ್‌ ಡಿಸ್‌ಪ್ಲೇ

ನೋಚ್‌ಲೆಸ್‌ ಡಿಸ್‌ಪ್ಲೇ

ರಿಯಲ್‌ ಮಿ ಎಕ್ಸ್ 6.53-ಇಂಚಿನ ಪೂರ್ಣ-ಎಚ್‌ಡಿ + (1080x2340 ಪಿಕ್ಸೆಲ್‌ಗಳು) AMOLED ನೋಚ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ ರೆಶಲ್ಯೂಶನ್‌ ಒಳಗೊಂಡಿದೆ. ಡಿಸ್‌ಪ್ಲೇಯ ಸುತ್ತಲೂ ಅತಿ ಕಡಿಮೆ ಅಂಚನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿದೆ. ಗೇಮ್ಸ್‌ ಆಡಲು ಮತ್ತು ವಿಡಿಯೊ ವೀಕ್ಷಿಸಲು ಡಿಸ್‌ಪ್ಲೇಯು ಅತ್ಯುತ್ತಮ ಎನಿಸಲಿದೆ.

ಸ್ನ್ಯಾಪ್‌ಡ್ರಾಗನ್ 710

ಸ್ನ್ಯಾಪ್‌ಡ್ರಾಗನ್ 710

ರಿಯಲ್ ಮಿ 3 ಪ್ರೊ ದಲ್ಲಿಯೂ ಸಹ ಕಂಪನಿಯು ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿತ್ತು. ಈಗ ರಿಯಲ್ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿದೆ. ಮಲ್ಟಿಟಾಸ್ಕ್‌ ಕೆಲಸಗಳು ಸುಲಭವಾಗಿ ಮಾಡಬಹುದಾಗಿದ್ದು, ಗೇಮ್‌ ಆಡಲು ಸಹ ಪೂರಕವಾಗಿರಲಿದೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ಸದ್ಯ ಟ್ರೆಂಡಿಂಗ್‌ನಲ್ಲಿರುವ ಫೀಚರ್ಸ್‌ಗಳಲ್ಲಿ 48ಎಂಪಿ ಕ್ಯಾಮೆರಾ ಆಯ್ಕೆಯು ಸಹ ಒಂದಾಗಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನ್ ಸಹ ಹಿಂಬದಿಯಲ್ಲಿ 48ಎಂಪಿ ಕ್ಯಾಮೆರಾ ಫೀಚರ್‌ ಅನ್ನು ಹೊಂದಿದ್ದು, ಸೋನಿಯ IMX586 ಸೆನ್ಸಾರ್‌ ಈ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಅದರ ಅಪರ್ಚರ್ f/1.7 ಸಾಮರ್ಥ್ಯದಲ್ಲಿದೆ.

ಪಾಪ್‌ಅಪ್‌ ಸೆಲ್ಫಿ

ಪಾಪ್‌ಅಪ್‌ ಸೆಲ್ಫಿ

ಈಗಿನ ಪ್ರಮುಖ ಸ್ಮಾರ್ಟ್‌ಪೋನ್‌ಗಳಲ್ಲಿ ಸೆಲ್ಫಿಗಾಗಿ ಪಾಪ್‌ಅಪ್‌ ಕ್ಯಾಮೆರಾ ಆಯ್ಕೆಯನ್ನು ಒದಗಿಸಲಾಗುತ್ತಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನಿನ 16ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾವುನ್ನು ಒದಗಿಸಿದ್ದು, ಅದು 0.7 ಸೆಕೆಂಡ್ಸ್‌ನ ಒಳಗೆ ತೆರೆದುಕೊಳ್ಳುತ್ತದೆ.

VOOC 3.0

VOOC 3.0

ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್ಫೋನ್‌ನಲ್ಲಿ 3,765mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಬ್ಯಾಟರಿಯು ದೀರ್ಘಕಾಲದವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ VOOC 3.0 ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್‌ ಪಡೆದುಕೊಳ್ಳುತ್ತದೆ.

Best Mobiles in India

English summary
Realme X With Pop-Up Selfie Camera, 48-Megapixel Primary Camera Launched in India: Price, Specifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+