Just In
- 16 min ago
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- 18 min ago
ಒಪ್ಪೋ ಎನ್ಕೋ ಏರ್ 3 ಇಯರ್ಬಡ್ಸ್ ಅನಾವರಣ; ಬೆಲೆ ಹಾಗೂ ಫೀಚರ್ಸ್ ಬಗ್ಗೆ ತಿಳಿಯಿರಿ!
- 2 hrs ago
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- 2 hrs ago
DIZO Watch D2 : ಡಿಜೋ ಸಂಸ್ಥೆಯಿಂದ ಮತ್ತೊಂದು ಆಕರ್ಷಕ ಸ್ಮಾರ್ಟ್ವಾಚ್ ಬಿಡುಗಡೆ! ವಿಶೇಷತೆ ಏನು?
Don't Miss
- Automobiles
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- News
ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದಿನಿಂದ 'ರಿಯಲ್‌ಮಿ ಎಕ್ಸ್' ಫ್ಲಾಶ್‌ಸೇಲ್ ಆರಂಭ!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಗಮನಸೆಳೆದಿರುವ 'ರಿಯಲ್‌ಮಿ ಎಕ್ಸ್' ಸ್ಮಾರ್ಟ್‌ಫೋನ್ ಇಂದು ಫ್ಲಾಶ್‌ಸೇಲ್ ಮಾರಾಟಕ್ಕೆ ಬಂದಿದೆ. ಇಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ತಾಣಗಳಲ್ಲಿ ರಿಯಲ್ ಮಿ ಎಕ್ಸ್ ಫ್ಲಾಶ್‌ಸೇಲ್ ಮಾರಾಟ ಆರಂಭವಾಗುತ್ತಿದ್ದು, ಖರೀದಿದಾರರು ಸ್ಪೇಸ್ ಬ್ಲೂ ಮತ್ತು ಪೋಲಾರ್ ವೈಟ್ ಸೇರಿದಂತೆ ಎರಡು ಬಣ್ಣ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿಬಹುದು ಎಂದು ರಿಯಲ್‌ಮಿ ಕಂಪೆನಿ ತಿಳಿಸಿದೆ.

ರಿಯಲ್‌ಮಿ ಎಕ್ಸ್ ಬೆಲೆಗಳು 16,999 ರೂ.ಗಳಿಂದ ಆರಂಭವಾಗಿದ್ದು, 4 ಜಿಬಿ + 128 ಜಿಬಿ ರೂಪಾಂತರದ ಬೆಲೆಯನ್ನು 16,999 ರೂ.ಗಳಾಗಿವೆ. ಇನ್ನು 8 ಜಿಬಿ + 128 ಜಿಬಿ ಫೋನ್ ಬೆಲೆಯು 19,999 ರೂ.ಗಳಾಗಿವೆ. ಇವುಗಳ ಜೊತೆಗೆ ಬ್ರ್ಯಾಂಡ್ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಣ್ಣಗಳಲ್ಲಿ ಮಾಸ್ಟರ್ ಆವೃತ್ತಿಯನ್ನು 19,999 ರೂ.ಗಳಿಗೆ ಬಿಡುಗಡೆ ಮಾಡಿದ್ದರೆ, ಸ್ಪೈಡರ್ಮ್ಯಾನ್ ಫಾರ್ ಫ್ರಮ್ ಹೋಮ್ ವಿಶೇಷ ಆವೃತ್ತಿಯ ಉಡುಗೊರೆ ಪೆಟ್ಟಿಗೆಯನ್ನು 20,999 ರೂ.ಗಳಿಗೆ ಬಿಡುಗಡೆ ಮಾಡಲಾಗಿದೆ.
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 SoC, ಪಾಪ್-ಅಪ್ ಸೆಲ್ಫಿ ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಯ 3,765mAh ಬ್ಯಾಟರಿಯಂತಹ ಆಕರ್ಷಕ ವಿಶೇಷಣಗಳೊಂದಿಗೆ ಬಂದಿರುವ ರಿಯಲ್ ಮಿ ಎಕ್ಸ್ ಸ್ಮಾರ್ಟ್‌ಪೋನ್ ಮೊಬೈಲ್ ಪ್ರಿಯರನ್ನು ಸೆಳೆಯಲು ಸಫಲವಾಗಿದೆ. ಹಾಗಾದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿರುವ ರಿಯಲ್‌ಮಿ ಎಕ್ಸ್ ಸ್ಮಾರ್ಟ್‌ಪೋನ್ ಹೇಗಿದೆ?, ಫೀಚರ್ಸ್ ಯಾವುದು? ಬೆಲೆ ಎಷ್ಟು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ನೋಚ್‌ಲೆಸ್ ಡಿಸ್‌ಪ್ಲೇ
ರಿಯಲ್ ಮಿ ಎಕ್ಸ್ 6.53-ಇಂಚಿನ ಪೂರ್ಣ-ಎಚ್‌ಡಿ + (1080x2340 ಪಿಕ್ಸೆಲ್‌ಗಳು) AMOLED ನೋಚ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ ರೆಶಲ್ಯೂಶನ್ ಒಳಗೊಂಡಿದೆ. ಡಿಸ್‌ಪ್ಲೇಯ ಸುತ್ತಲೂ ಅತಿ ಕಡಿಮೆ ಅಂಚನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿದೆ. ಗೇಮ್ಸ್ ಆಡಲು ಮತ್ತು ವಿಡಿಯೊ ವೀಕ್ಷಿಸಲು ಡಿಸ್‌ಪ್ಲೇಯು ಅತ್ಯುತ್ತಮ ಎನಿಸಲಿದೆ.

ಸ್ನ್ಯಾಪ್‌ಡ್ರಾಗನ್ 710
ರಿಯಲ್ ಮಿ 3 ಪ್ರೊ ದಲ್ಲಿಯೂ ಸಹ ಕಂಪನಿಯು ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿತ್ತು. ಈಗ ರಿಯಲ್ ಮಿ ಎಕ್ಸ್ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿದೆ. ಮಲ್ಟಿಟಾಸ್ಕ್ ಕೆಲಸಗಳು ಸುಲಭವಾಗಿ ಮಾಡಬಹುದಾಗಿದ್ದು, ಗೇಮ್ ಆಡಲು ಸಹ ಪೂರಕವಾಗಿರಲಿದೆ.

48ಎಂಪಿ ಕ್ಯಾಮೆರಾ
ಸದ್ಯ ಟ್ರೆಂಡಿಂಗ್‌ನಲ್ಲಿರುವ ಫೀಚರ್ಸ್‌ಗಳಲ್ಲಿ 48ಎಂಪಿ ಕ್ಯಾಮೆರಾ ಆಯ್ಕೆಯು ಸಹ ಒಂದಾಗಿದೆ. ರಿಯಲ್ ಮಿ ಎಕ್ಸ್ ಸ್ಮಾರ್ಟ್‌ಫೋನ್ ಸಹ ಹಿಂಬದಿಯಲ್ಲಿ 48ಎಂಪಿ ಕ್ಯಾಮೆರಾ ಫೀಚರ್ ಅನ್ನು ಹೊಂದಿದ್ದು, ಸೋನಿಯ IMX586 ಸೆನ್ಸಾರ್ ಈ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಅದರ ಅಪರ್ಚರ್ f/1.7 ಸಾಮರ್ಥ್ಯದಲ್ಲಿದೆ.

ಪಾಪ್‌ಅಪ್ ಸೆಲ್ಫಿ
ಈಗಿನ ಪ್ರಮುಖ ಸ್ಮಾರ್ಟ್‌ಪೋನ್‌ಗಳಲ್ಲಿ ಸೆಲ್ಫಿಗಾಗಿ ಪಾಪ್‌ಅಪ್ ಕ್ಯಾಮೆರಾ ಆಯ್ಕೆಯನ್ನು ಒದಗಿಸಲಾಗುತ್ತಿದೆ. ರಿಯಲ್ ಮಿ ಎಕ್ಸ್ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನಿನ 16ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾವುನ್ನು ಒದಗಿಸಿದ್ದು, ಅದು 0.7 ಸೆಕೆಂಡ್ಸ್‌ನ ಒಳಗೆ ತೆರೆದುಕೊಳ್ಳುತ್ತದೆ.

VOOC 3.0
ರಿಯಲ್ ಮಿ ಎಕ್ಸ್ ಸ್ಮಾರ್ಟ್ಫೋನ್‌ನಲ್ಲಿ 3,765mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಬ್ಯಾಟರಿಯು ದೀರ್ಘಕಾಲದವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ VOOC 3.0 ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್ ಪಡೆದುಕೊಳ್ಳುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470