Home
ಮೊಬೈಲ್

'ರಿಯಲ್‌ಮಿ ಎಕ್ಸ್' ಖರೀದಿಗೆ 'ಬ್ಲೈಂಡ್ ಆರ್ಡರ್' ಬುಕ್ಕಿಂಗ್ ಆರಂಭ!

ನೀವು 'ರಿಯಲ್‌ಮಿ ಎಕ್ಸ್' ಫೋನ್ ಖರೀದಿಸಬೇಕೆ.? ಹಾಗಾದರೆ, ಈಗಲೇ 'ರಿಯಲ್‌ಮಿ ಎಕ್ಸ್' ಸ್ಮಾರ್ಟ್‌ಫೋನನ್ನು ಬುಕ್ ಮಾಡಿ.! ಏಕೆಂದರೆ, ಮೊಬೈಲ್ ಮಾರುಕಟ್ಟೆ ಬಹು ನಿರೀಕ್ಷೆಯಿಂದ ಕಾಯುತ್ತಿರುವ 'ರಿಯಲ್‌ಮಿ ಎಕ್ಸ್' ಫೋನನ್ನು ಬಿಡುಗಡೆಗೂ ಮುನ್ನವೇ ಖರೀದಿಸುವ ಅವಕಾಶವನ್ನು ನೀಡಲಾಗಿದೆ. ಇದಕ್ಕಾಗಿ ರಿಯಲ್‌ಮಿ ಕಂಪೆನಿ 'ಬ್ಲೈಂಡ್ ಆರ್ಡರ್' ಸೇಲ್ ಆಯೋಜಿಸಿದೆ.

'ರಿಯಲ್‌ಮಿ ಎಕ್ಸ್' ಖರೀದಿಗೆ 'ಬ್ಲೈಂಡ್ ಆರ್ಡರ್' ಬುಕ್ಕಿಂಗ್ ಆರಂಭ!

ಜುಲೈ 11ರ ಗುರುವಾರದಿಂದ ಜುಲೈ 14ರ ಭಾನುವಾರ ಮಧ್ಯರಾತ್ರಿಯವರೆಗೆ ಈ 'ಬ್ಲೈಂಡ್ ಆರ್ಡರ್' ಬುಕ್ಕಿಂಗ್ ಆಯೋಜನೆಯಾಗಿದ್ದು, realme.comಗೆ ಹೋಗಿ, ರಿಯಲ್‌ಮಿ ಐಡಿ ಮೂಲಕ ಲಾಗಿನ್ ಆಗಿ ಫೋನನ್ನು ಬುಕ್ ಮಾಡಬಹುದು. 1000 ರೂ. ಠೇವಣಿ ಪಾವತಿಸಿ ರಿಯಲ್‌ಮಿ ಎಕ್ಸ್ ಖರೀದಿಸುವ ಅವಕಾಶ ಖಚಿತಪಡಿಸಿಕೊಳ್ಳಬಹುದು ಎಂದು ರಿಯಲ್‌ಮಿ ಕಂಪೆನಿ ತಿಳಿಸಿದೆ.

ಹೀಗೆ 'ಬ್ಲೈಂಡ್ ಆರ್ಡರ್' ಬುಕ್ಕಿಂಗ್ ಮಾಡಿದರೆ ಜುಲೈ 22 ಮಧ್ಯಾಹ್ನ 12 ರಿಂದ ಜುಲೈ 26 ರವರೆಗೆ ಫೋನನ್ನು ಖರೀದಿಸಬಹುದು. ಇದಕ್ಕಾಗಿ ಠೇವಣಿ ನೀಡಿದ ಹಣಕ್ಕೆ ಹೆಚ್ಚುವರಿ 500 ರೂ. ಗಳನ್ನು ನೀಡಲಾಗುತ್ತಿದೆ. ಹಾಗಾದರೆ, ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದು ಮಾಡಿರುವ 'ರಿಯಲ್‌ಮಿ ಎಕ್ಸ್ ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ನೋಚ್‌ಲೆಸ್‌ ಡಿಸ್‌ಪ್ಲೇ

ನೋಚ್‌ಲೆಸ್‌ ಡಿಸ್‌ಪ್ಲೇ

6.5 ಇಂಚಿನ ವಿಶಾಲ AMOLED ನೋಚ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ ರೆಶಲ್ಯೂಶನ್‌ ಒಳಗೊಂಡಿದೆ. ಡಿಸ್‌ಪ್ಲೇಯ ಸುತ್ತಲೂ ಅತಿ ಕಡಿಮೆ ಅಂಚನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿದೆ. ಗೇಮ್ಸ್‌ ಆಡಲು ಮತ್ತು ವಿಡಿಯೊ ವೀಕ್ಷಿಸಲು ಡಿಸ್‌ಪ್ಲೇಯು ಅತ್ಯುತ್ತಮ ಎನಿಸಲಿದೆ.

ಸ್ನ್ಯಾಪ್‌ಡ್ರಾಗನ್ 710

ಸ್ನ್ಯಾಪ್‌ಡ್ರಾಗನ್ 710

ರಿಯಲ್ ಮಿ 3 ಪ್ರೊ ದಲ್ಲಿಯೂ ಸಹ ಕಂಪನಿಯು ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿತ್ತು. ಈಗ ರಿಯಲ್ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿದೆ. ಮಲ್ಟಿಟಾಸ್ಕ್‌ ಕೆಲಸಗಳು ಸುಲಭವಾಗಿ ಮಾಡಬಹುದಾಗಿದ್ದು, ಗೇಮ್‌ ಆಡಲು ಸಹ ಪೂರಕವಾಗಿರಲಿದೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ಸದ್ಯ ಟ್ರೆಂಡಿಂಗ್‌ನಲ್ಲಿರುವ ಫೀಚರ್ಸ್‌ಗಳಲ್ಲಿ 48ಎಂಪಿ ಕ್ಯಾಮೆರಾ ಆಯ್ಕೆಯು ಸಹ ಒಂದಾಗಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನ್ ಸಹ ಹಿಂಬದಿಯಲ್ಲಿ 48ಎಂಪಿ ಕ್ಯಾಮೆರಾ ಫೀಚರ್‌ ಅನ್ನು ಹೊಂದಿದ್ದು, ಸೋನಿಯ IMX586 ಸೆನ್ಸಾರ್‌ ಈ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಅದರ ಅಪರ್ಚರ್ f/1.7 ಸಾಮರ್ಥ್ಯದಲ್ಲಿದೆ.

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ಈಗಿನ ಪ್ರಮುಖ ಸ್ಮಾರ್ಟ್‌ಪೋನ್‌ಗಳಲ್ಲಿ ಸೆಲ್ಫಿಗಾಗಿ ಪಾಪ್‌ಅಪ್‌ ಕ್ಯಾಮೆರಾ ಆಯ್ಕೆಯನ್ನು ಒದಗಿಸಲಾಗುತ್ತಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನಿನ 16ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾವುನ್ನು ಒದಗಿಸಿದ್ದು, ಅದು 0.7 ಸೆಕೆಂಡ್ಸ್‌ನ ಒಳಗೆ ತೆರೆದುಕೊಳ್ಳುತ್ತದೆ.

VOOC 3.0

VOOC 3.0

ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್ಫೋನ್‌ನಲ್ಲಿ 3,765mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಬ್ಯಾಟರಿಯು ದೀರ್ಘಕಾಲದವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ VOOC 3.0 ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್‌ ಪಡೆದುಕೊಳ್ಳುತ್ತದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಚೀನಾದಲ್ಲಿ ಭರ್ಜರಿ ಮಾರಾಟ ಕಾಣುತ್ತಿರುವ 'ರಿಯಲ್‌ ಮಿ ಎಕ್ಸ್‌' ಬೆಲೆಯು ಭಾರತದಲ್ಲಿ ಅಧಿಕೃತವಾಗಿದೆ. ರಿಯಲ್‌ಮಿ ಇಂಡಿಯಾ ಸಿಇಒ ಮಾಧವ್ ಶೇಥ್ ಅವರು ತಿಳಿಸಿರುವಂತೆ, ಭಾರತದಲ್ಲಿ ರಿಯಲ್‌ ಮಿ ಕಂಪನಿಯ ಮೊದಲ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಫೋನ್ 'ರಿಯಲ್‌ ಮಿ ಎಕ್ಸ್‌' ಕೇವಲ 18,000 ರೂ.ಗಳಿಗೆ ಬಿಡುಗಡೆಯಾಗಲಿದೆ.

Best Mobiles in India

English summary
Realme X is all set to launch in India on July 15, and now the company has announced that the phone will be up for grabs ahead of launch in a blind-order sale. This sale will allow buyers to pre-order the Realme X by a simple registration process, and a small deposit fee.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+