ಮೊಬೈಲ್ ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರುತ್ತಿದೆ 'ರಿಯಲ್ ಮಿ ಎಕ್ಸ್2 ಪ್ರೊ'!
ಚೀನಾ ಮೂಲದ ಜನಪ್ರಿಯ ಮೊಬೈಲ್ ಕಂಪೆನಿ 'ರಿಯಲ್ ಮಿ' ಕಂಪನಿಯು ಇತ್ತೀಚಿಗಷ್ಟೇ 'ರಿಯಲ್ ಮಿ ಎಕ್ಸ್‌ಟಿ', 'ರಿಯಲ್ ಮಿ 5 ಪ್ರೊ' ಗಳಂತಹ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗಮನಸೆಳೆದಿದೆ. ಆದರೆ, ಇದೀಗ ಬಂದಿರುವ ಸಿಹಿಸುದ್ದಿ ಏನೆಂದರೆ, 'ರಿಯಲ್ ಮಿ ಎಕ್ಸ್2 ಪ್ರೊ' ಹೆಸರಿನ ಪವರ್‌ಫುಲ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆಗೆ ಮಾಡಲು ರಿಯಲ್‌ಮಿ ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ ದೈತ್ಯ ಬ್ಯಾಟರಿ ಲೈಫ್ ಮತ್ತು 64ಎಂಪಿ ಕ್ಯಾಮೆರಾ ಫೀಚರ್ ಅನ್ನು ಒಳಗೊಂಡಿರುವ ಸೂಚನೆಯನ್ನು ಹೊರಬಿದ್ದಿದೆ.

ಹೌದು, ರಿಯಲ್ ಮಿ ಸಂಸ್ಥೆಯು 'ರಿಯಲ್ ಮಿ ಎಕ್ಸ್2 ಪ್ರೊ' ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಲಾಂಚ್‌ಗೆ ಸಕಲ ತಯಾರಿ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಗೆ ಎಂಟ್ರಿ ಕೊಡುವ ಮಾಹಿತಿ ಟೀಸ್ ಮಾಡಿದೆ. ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಬ್ಬರಿಸಲು ತಯಾರಾಗಿರುವ ಕಂಪೆನಿ, ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 855 ಪ್ಲಸ್ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ, 90Hz ಡಿಸ್‌ಪ್ಲೇ ರಿಫ್ರೇಶ್ ರೇಟ್ ಮತ್ತು 64ಎಂಪಿ ಕ್ಯಾಮೆರಾ ಸೆನ್ಸಾರ್ ನಂತಹ ಪ್ರಮುಖ ಕೀ ಹೈಲೈಟ್ಸ್ ಫೀಚರ್ಸ್‌ಗಳನ್ನು ನೀಡುವುದಾಗಿ ಹೇಳಿ ಗಮನಸೆಳೆದಿದೆ.

ಇವಿಷ್ಟು ಪ್ರೀಮಿಯಂ ಫೀಚರ್ಸ್‌ಗಳಾದರೆ, ರಿಯಲ್ ಮಿ ಎಕ್ಸ್2 ಪ್ರೊ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಇದರೊಂದಿಗೆ 65W SuperVOOC 2.0 ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದು ಕೇವಲ 30 ನಿಮಿಷದಲ್ಲಿ ಶೇ.100% ಚಾರ್ಜ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಈ ಕುರಿತು ಕಳೆದ ತಿಂಗಳು ಲೀಕ್ ಮಾಹಿತಿಗಳು ಹರಿದಾಡಿದ್ದವು. ಆ ಮಾಹಿತಿಯಂತೆ ಪವರ್‌ಫುಲ್ ಬ್ಯಾಟರಿ ಈ ಸ್ಮಾರ್ಟ್‌ಫೋನ್ ಒಳಗೊಂಡಿರಲಿರುವುದು ಬಹುತೇಕ ಖಚಿತವಾಗಿದೆ.

'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್‌ಫೋನಿನ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 855 ಪ್ಲಸ್ ಚಿಪ್‌ಸೆಟ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಪ್ರೊಸೆಸರ್ 2.96GHz ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಮಲ್ಟಿಟಾಸ್ಕ್ ಕೆಲಸಗಳನ್ನು ಮತ್ತು ಪಬ್‌ಜಿ ಅಂತಹ ದೊಡ್ಡ ಡೇಟಾ ಗೇಮ್ಸ್‌ಗಳನ್ನು ಆರಾಮವಾಗಿ ಆಡಬಹುದಾಗಿದೆ. ನೂತನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಪ್ರೊಸೆಸರ್ ವೇಗಕ್ಕೆ ಬೆಂಬಲ ನೀಡಲಿದೆ. ಇಷ್ಟೇಲ್ಲಾ ಫೀಚರ್ಸ್ ಹೊಂದಿದ್ದರೂ ಸಹ ಈ ಸ್ಮಾರ್ಟ್‌ಫೋನ್ ಮಧ್ಯಮ ಬೆಲೆಯ ಮೊಬೈಲ್ ಆಗಿರಲಿದೆ ಎಂದು ಹೇಳಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಸಹ ಹೈ ಎಂಡ್ ಮಾದರಿಯಲ್ಲಿದ್ದು, ಡಿಸ್‌ಪ್ಲೇಯ ರಿಫ್ರೇಶ್ ರೇಟ್ 90Hz ಆಗಿರಲಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಹ ಉನ್ನತ ಮಟ್ಟದಲ್ಲಿರಲಿದೆ. ಡಿಸ್‌ಪ್ಲೇ ಎಷ್ಟು ಇಂಚಿನಲ್ಲಿರಲಿದೆ ಎನ್ನುವ ಬಗ್ಗೆ ಕಂಪನಿಯು ನಿಖರ ಮಾಹಿತಿ ಹೊರಹಾಕಿಲ್ಲ. ಆದರೆ 6.4 ಇಂಚು ಇರಬಹುದು ಎಂದು ಊಹಿಸಲಾಗಿದೆ. ಇಷ್ಟೆಲ್ಲಾ ಮಾಹಿತಿ ಹೊರಬಿದ್ದಿದ್ದರೂ ಸಹ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ದಿನಾಂಕ ಯಾವುದು ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.


Click it and Unblock the Notifications








