ಸೆ.13 ರಂದು ದೇಶದಲ್ಲಿ 64MP ಕ್ಯಾಮೆರಾ ಪರಿಚಯಿಸುತ್ತಿದೆ 'ರಿಯಲ್‌ಮಿ'!

|

ಶಿಯೋಮಿಗೆ ಸೆಡ್ಡು ಹೊಡೆಯುತ್ತಲೇ ಬಂದಿರುವ ಚೀನಾದ ರಿಯಲ್‌ಮಿ ಇದೀಗ ತನ್ನ ಮೊದಲ 64 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಒಂದನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದಲ್ಲಿ ಸೆಪ್ಟೆಂಬರ್ 13ರಂದು ರಿಯಲ್‌ಮಿ ಕಂಪೆನಿ ಬಹುನಿರೀಕ್ಷಿತ 'ರಿಯಲ್‌ಮಿ XT' ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಕಂಪೆನಿಯು ಈಗಾಗಲೇ ಅಭಿಮಾನಿಗಳಿಗೆ ಮತ್ತು ಮಾಧ್ಯಮಗಳಿಗೆ ಆಹ್ವಾನಗಳನ್ನು ರವಾನಿಸಿದೆ.

64 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ

ಹೌದು, ರಿಯಲ್‌ಮಿ ಇತ್ತೀಚೆಗಷ್ಟೇ ರಿಯಲ್‌ಮಿ 5 ಹಾಗೂ ರಿಯಲ್‌ಮಿ 5 ಪ್ರೋ ಎಂಬ ಹೆಸರಿನ ಕ್ವಾಡ್ (ನಾಲ್ಕು) ಕ್ಯಾಮೆರಾ ಫೋನ್‌ಗಳನ್ನು ಬಿಡುಗಡೆಗೊಳಿಸಿತ್ತು. ಇವುಗಳ ಬೆನ್ನಲ್ಲೇ ರಿಯಲ್‌ಮಿ ಎಕ್ಸ್‌ಟಿ ಮಾದರಿಯ 64 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಾಗಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್ ತಾಣದಲ್ಲಿ ಹೊಸ ಸ್ಮಾರ್ಟ್‌ಫೋನ್ ಕುರಿತು ಕೆಲವು ಪ್ರಮುಖ ಮುಖ್ಯಾಂಶಗಳನ್ನು ಸಹ ಬಹಿರಂಗಪಡಿಸಿ ಮೊಬೈಲ್ ಮಾರುಕಟ್ಟೆಯ ಗಮನಸೆಳೆದಿದೆ.

ಹೆಚ್ಚಿನ ರೆಸಲ್ಯೂಶನ್ ಫೋಟೋ

ರಿಯಲ್ಮೆ ಎಕ್ಸ್‌ಟಿಯ 64 ಎಂಪಿ ಮುಖ್ಯ ಕ್ಯಾಮೆರಾ ಮೂಲಕ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ಟೀಸ್ ಮಾಡಿರುವ ಕಂಪೆನಿ, 48 ಎಂಪಿ ಸಂವೇದಕಕ್ಕಿಂತ ಶೇಕಡಾ 34 ರಷ್ಟು ಹೆಚ್ಚಿನ ಪಿಕ್ಸೆಲ್‌ಗಳನ್ನು ನೀಡುವ ಗುರಿ ಹೊಂದಿದೆ. ರಿಯಲ್ಮೆ ಎಕ್ಸ್‌ಟಿ ಕ್ಯೂಡಿ ಕ್ಯಾಮೆರಾ ಸೆಟಪ್ 64 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಜಿಡಬ್ಲ್ಯೂ 1 ಸಂವೇದಕ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.

ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

ರಿಯಲ್‌ಮಿ ಎಕ್ಸ್‌ಟಿ ಮಾದರಿಯ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ. ಈ ಜಾಲತಾಣದಲ್ಲಿ ಈಗಾಗಲೇ ರಿಯಲ್‌ಮಿ XT ಗಾಗಿ ಮೈಕ್ರೋಸೈಟ್ ರಚಿಸಲಾಗಿದ್ದು, ಅದರಲ್ಲಿ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಲಾಗಿದೆ. ರಿಯಲ್‌ಮಿ XT ಎಂಬುದು ಭಾರತದಲ್ಲಿ ಹೊಸ ಸರಣಿಯಾಗಿದ್ದು, ಇದು ರಿಯಲ್‌ಮಿ Xನ ಸುಧಾರಿತ ರೂಪವೇನಲ್ಲ. ಬಹುಶಃ ಇದರ ಬೆಲೆಯು ರಿಯಲ್‌ಮಿ Xಗಿಂತ ಹೆಚ್ಚು ಇರುವ ಸಾಧ್ಯತೆಗಳಿವೆ. ಬೆಲೆಯನ್ನು ಸೆಪ್ಟೆಂಬರ್ 13ರಂದು ಅಧಿಕೃತವಾಗಿ ಘೋಷಿಸಲಾಗುತ್ತದೆ.

4GB, 6GB ಹಾಗೂ 8GB ಮಾಡೆಲ್‌ಗಳು

ಇದೀಗ ಬಹಿರಂಗವಾಗಿರುವ ಇತರ ಸ್ಪೆಸಿಫಿಕೇಶನ್‌ಗಳೆಂದರೆ, 4000mAh ಬ್ಯಾಟರಿ, VOOC 3.0 ವೇಗದ ಚಾರ್ಜಿಂಗ್ ಬೆಂಬಲ, ಟೈಪ್ ಸಿ ಚಾರ್ಜಿಂಗ್ ಪೋರ್ಟ್, 64 ಹಾಗೂ 128 GB ಸಾಮರ್ಥ್ಯದ ಆಂತರಿಕ ಸ್ಟೋರೇಜ್‌ಗಳೊಂದಿಗೆ 4GB, 6GB ಹಾಗೂ 8GB ಮಾಡೆಲ್‌ಗಳು ಮಾರಾಟಕ್ಕೆ ದೊರೆಯಲಿವೆ. ಬಿಳಿ ಹಾಗೂ ನೀಲಿ - ಹೀಗೆ ಎರಡು ಬಣ್ಣಗಳಲ್ಲಿ ಗ್ರೇಡಿಯಂಟ್ ವಿನ್ಯಾಸಗಳಲ್ಲಿ ಲಭ್ಯವಿದೆ. ಇಷ್ಟಲ್ಲದೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಇರುವ ಪ್ರೀಮಿಯಂ ವಿನ್ಯಾಸ ಇರುತ್ತದೆ.

Best Mobiles in India

English summary
Realme XT will go on sale on Flipkart as the e-commerce platform has set up a microsite teasing the smartphone's arrival.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X