'ರೆಡ್ ಮ್ಯಾಜಿಕ್ 10 ಏರ್' ಗೇಮಿಂಗ್ ಫೋನ್ ಬಿಡುಗಡೆ: 9 ಪದರಗಳ ICE-X ಕೂಲಿಂಗ್!
ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಒಂದಾದ ರೆಡ್ ಮ್ಯಾಜಿಕ್ ತನ್ನ ಇತ್ತೀಚಿನ 'ರೆಡ್ ಮ್ಯಾಜಿಕ್ 10 ಏರ್' ಎಂಬ ಗೇಮಿಂಗ್ ಆಧರಿತ ಸ್ಮಾರ್ಟ್‌ಫೋನನ್ನು ಆಯ್ದ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಅತ್ಯಾಧುನಿಕ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಮತ್ತು ಒಂಬತ್ತು ಪದರಗಳ ICE-X ಕೂಲಿಂಗ್ ಪ್ರೀಮಿಯಂ ವ್ಯವಸ್ಥೆಯನ್ನು ಒಳಗೊಂಡಿರುವ ಈ ಹೊಸ ಸ್ಮಾರ್ಟ್‌ಫೋನ್, 50-ಮೆಗಾಪಿಕ್ಸೆಲ್ ಕ್ಯಾಮೆರಾ, R3 ಚಿಪ್ ಮತ್ತು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದ 6,000mAh ಬ್ಯಾಟರಿ ಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಸಹ ಹೊತ್ತು ಬಂದಿದೆ. ಹಾಗಾದರೆ, ಹೊಸ 'ರೆಡ್ ಮ್ಯಾಜಿಕ್ 10 ಏರ್' ಫೋನ್ ಹೇಗಿದೆ ಎಂಬುದನ್ನು ನೊಡೋಣ ಬನ್ನಿ.
ರೆಡ್ ಮ್ಯಾಜಿಕ್ 10 ಏರ್ ಸ್ಮಾರ್ಟ್‌ಫೋನ್ 6.8-ಇಂಚಿನ ಪೂರ್ಣ-HD+ (1,116×2,480 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 120Hz ವರೆಗಿನ ರಿಫ್ರೆಶ್ ದರ, 2,000Hz ವರೆಗಿನ ಟಚ್ ಸ್ಯಾಂಪ್ಲಿಂಗ್ ದರ ಮತ್ತು 1,600 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ. ಈ ಡಿಸ್ಪ್ಲೇಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ರಕ್ಷಣೆಯನ್ನೂ ನೀಡಲಾಗಿದೆ. ಕಾರ್ಯಕ್ಷಮತೆಗಾಗಿ ಈ ಫೋನ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಗೇಮಿಂಗ್ ಅನುಭವವನ್ನು ಉತ್ತಮಗೊಳಿಸಲು ರೆಡ್‌ಕೋರ್ R3 ಚಿಪ್‌ನೊಂದಿಗೆ ಜೋಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದು 16GB ವರೆಗಿನ LPDDR5X RAM ಮತ್ತು 512GB ವರೆಗಿನ UFS 4.0 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಬೆಂಬಲಿಸುತ್ತದೆ. ಆಪರೇಟಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಈ ಫೋನ್ ಆಂಡ್ರಾಯ್ಡ್ 15 ಆಧಾರಿತ RedMagicOS 10 ನೊಂದಿಗೆ ಬರುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ರೆಡ್ ಮ್ಯಾಜಿಕ್ 10 ಏರ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸುವ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಅನ್ನು ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇತರ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಈ ಹ್ಯಾಂಡ್‌ಸೆಟ್ DTS-X ಪ್ರಮಾಣೀಕೃತ ಸ್ಪೀಕರ್‌ಗಳು, ಕಸ್ಟಮೈಸ್ ಮಾಡಬಹುದಾದ ಮ್ಯಾಜಿಕ್ ಕೀ ಮತ್ತು RGB ಲೈಟಿಂಗ್ ಅನ್ನು ಒಳಗೊಂಡಿದೆ. ಗೇಮಿಂಗ್‌ಗೆ ಅನುಕೂಲವಾಗುವಂತೆ 520Hz ಸ್ಪಂದನಾ ದರದ ಕೆಪ್ಯಾಸಿಟಿವ್ ಭುಜದ ಟ್ರಿಗ್ಗರ್‌ಗಳನ್ನು ಮತ್ತು ಫೋನ್ ಬಿಸಿಯಾಗುವುದನ್ನು ತಡೆಯಲು ಒಂಬತ್ತು-ಲೇಯರ್ ICE-X ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ.
ಬ್ಯಾಟರಿ ವಿಷಯಕ್ಕೆ ಬಂದರೆ, ರೆಡ್ ಮ್ಯಾಜಿಕ್ 10 ಏರ್ ಸ್ಮಾರ್ಟ್‌ಫೊನ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಗೂಗಲ್‌ನ ಸರ್ಕಲ್ ಟು ಸರ್ಚ್ ಮತ್ತು ಜೆಮಿನಿ AI ನಂತಹ ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ. ಸಂಪರ್ಕಕ್ಕಾಗಿ 5G, 4G, Wi-Fi 7, ಬ್ಲೂಟೂತ್ 5.4, GPS, NFC ಮತ್ತು USB ಟೈಪ್-C ಪೋರ್ಟ್ ಆಯ್ಕೆಗಳನ್ನು ನೀಡಲಾಗಿದೆ. ಇನ್ನು ಈ ಫೋನ್ 164.3×76.6×7.85mm ಅಳತೆ ಮತ್ತು 205g ತೂಕವನ್ನು ಹೊಂದಿದೆ.
ರೆಡ್ ಮ್ಯಾಜಿಕ್ 10 ಏರ್ ಬೆಲೆ ಎಷ್ಟು?
RAM ಮತ್ತು 256GB ಸ್ಟೋರೇಜ್‌ನ ರೆಡ್ ಮ್ಯಾಜಿಕ್ 10 ಏರ್ ಮಾದರಿಯ ಬೆಲೆ $499 (ಸುಮಾರು ರೂ. 42,600) ಆಗಿದೆ. ಅದೇ ರೀತಿ, 16GB RAM ಮತ್ತು 512GB ಸ್ಟೋರೇಜ್‌ನ ಮಾದರಿಯ ಬೆಲೆ $649 (ಸುಮಾರು ರೂ. 55,400). 12GB RAM ಮಾದರಿಯು ಹೈಲ್‌ಸ್ಟೋನ್ (ಬಿಳಿ) ಮತ್ತು ಟ್ವಿಲೈಟ್ (ಕಪ್ಪು) ಬಣ್ಣಗಳಲ್ಲಿ ಲಭ್ಯವಿದ್ದರೆ, 16GB RAM ಮಾದರಿಯು ಫ್ಲೇರ್ (ಕಿತ್ತಳೆ) ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಮೇ 7 ರಿಂದ ಅಮೆರಿಕಾದಲ್ಲಿ ರೆಡ್ ಮ್ಯಾಜಿಕ್ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಬರಲಿದೆ. ಆದರೆ, ಇದು ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.


Click it and Unblock the Notifications








