Home
ಮೊಬೈಲ್

ಜುಲೈ 9ಕ್ಕೆ Redmi 13 5G ಗ್ರ್ಯಾಂಡ್ ಎಂಟ್ರಿ: ಬಿಡುಗಡೆಗು ಮುನ್ನ ಈ 5 ವಿಷಯಗಳನ್ನು ತಿಳಿಯಿರಿ

ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿದ ಬೇಡಿಕೆಯ ಹಿನ್ನಲೆಯಲ್ಲಿ ಮೊಬೈಲ್‌ಗಳು ಒಂದರ ಹಿಂದೆ ಒಂದರಂತೆ ಲಾಂಚ್ ಆಗುತ್ತಿವೆ. ಜುಲೈ ತಿಂಗಳಲ್ಲಿ ವಿವಿಧ ಸ್ಮಾರ್ಟ್‌ಫೋನ್ ಕಂಪನಿಗಳು ಹೊಸ ಫೋನ್‌ಗಳನ್ನು ಲಾಂಚ್ ಮಾಡಲು ಸಜ್ಜಾಗಿವೆ. ಶಿಯೋಮಿ ಇಂಡಿಯಾ (Xiaomi) ಕೂಡ ತನ್ನ ಹೊಸ ಸ್ಮಾರ್ಟ್‌ಫೋನ್ Redmi 13 5G ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಕಂಪನಿಯು ಈ ಫೋನ್ ಅನ್ನು ಜುಲೈ 9 ರಂದು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ. Redmi 13 5G ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾದ Redmi 12 5Gಯ ಅಪ್ಡೇಟೆಡ್ ಆವೃತ್ತಿಯಾಗಿದೆ ಎಂದು ಹೇಳಲಾಗಿದೆ.

Redmi 13 5G ಅನ್ನು ಇತ್ತೀಚೆಗೆ ಅಮೆಜಾನ್ ಇಂಡಿಯಾದಲ್ಲಿ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ನ ಡಿಸೈನ್, ಪ್ರೊಸೆಸರ್ ಮತ್ತು ಬ್ಯಾಟರಿಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಆದರೆ, ನಾವು ಈ ಫೋನ್ ಅನ್ನು ಲಾಂಚ್ ಮಾಡುವ ಮೊದಲು ಪ್ರಮುಖ 5 ವಿಷಯಗಳನ್ನು ನಿಮಗೆ ತಿಳಿಸುತ್ತೇವೆ. ಇದರಿಂದ, ಈ ಫೋನ್ ಖರೀದಿಸುವಾಗ ನೀವು ಹೆಚ್ಚು ಯೋಚಿಸುವ ಅಗತ್ಯವೇ ಇರುವುದಿಲ್ಲ.

ಜುಲೈ 9 ರಂದು Redmi 13 5G ಲಾಂಚ್: ಇಲ್ಲಿವೆ 5 ವಿಶೇಷತೆಗಳು

Redmi 13 5G ವಿಶೇಷತೆಗಳು

  • 6.6″ 90Hz ಡಿಸ್ಪ್ಲೇ
  • ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್
  • 8GB RAM + 128GB ಮೆಮೊರಿ
  • 108 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ
  • 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ
  • 33Wh 5,030mAh ಬ್ಯಾಟರಿ

Redmi 13 5Gಯ 5 ಪ್ರಮುಖ ವಿಷಯಗಳು

ವಿನ್ಯಾಸ: ಈ ಫೋನ್ Redmi 12 5G ಯಂತೆಯೇ ಅದೇ ವಿನ್ಯಾಸವನ್ನು ಹೊಂದಿದೆ. ಆದರೆ, ಇದರಲ್ಲಿ ಕೆಲವು ಅಪ್ಡೇಟ್‌ಗಳನ್ನು ಸಹ ಮಾಡಲಾಗಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಾಕ್ಸ್ ವಿನ್ಯಾಸವನ್ನು ಹೊಂದಿದೆ. ಮತ್ತು ಈ ಫೋನ್ ಗುಲಾಬಿ ಮತ್ತು ನೀಲಿ ಬಣ್ಣಗಳಲ್ಲಿ ಬರುತ್ತದೆ. Amazon ನಲ್ಲಿನ ಪಟ್ಟಿಯ ಪ್ರಕಾರ, ಈ ಫೋನ್‌ನ ಸ್ಫಟಿಕ ಗಾಜಿನ ವಿನ್ಯಾಸವನ್ನು ಹೊಂದಿದೆ. ಇದು ಫೋನ್‌ಗೆ ಬಜೆಟ್‌ನಲ್ಲಿ ಪ್ರೀಮಿಯಂ ಅನುಭವವನ್ನು ನೀಡುತ್ತದೆ.

ಡಿಸ್ಲ್ಪೇ: ಈ ಫೋನ್‌ನ ಡಿಸ್ಲ್ಪೇಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಫೋನ್ ಬಜೆಟ್‌ನಲ್ಲಿದ್ದರೂ, ಇದು ದೊಡ್ಡ ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. Redmi 13 5G ಪಂಚ್ ಹೋಲ್ ನಾಚ್ ವಿನ್ಯಾಸ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿರುತ್ತದೆ. ಕಂಪನಿಯು Redmi 12 5G ನಲ್ಲಿ 6.79 ಇಂಚಿನ LCD ಡಿಸ್ಲ್ಪೇಯನ್ನು ನೀಡಿರುವುದನ್ನು ನೀವು ಕಾಣಬಹುದು. ಅದರಂತೆ, ಕಂಪನಿಯು Redmi 13 5G ನಲ್ಲಿ ಇದೇ ರೀತಿಯ ದೊಡ್ಡ ಡಿಸ್ಲ್ಪೇಯನ್ನು ಅಳವಡಿಸಿರುವ ಸಾಧ್ಯತೆಯಿದೆ.

ಜುಲೈ 9 ರಂದು Redmi 13 5G ಲಾಂಚ್: ಇಲ್ಲಿವೆ 5 ವಿಶೇಷತೆಗಳು

ಪ್ರೊಸೆಸರ್: Redmi 13 5G ನಲ್ಲಿ Qualcomm Snapdragon 4 Gen 2 ಪ್ರೊಸೆಸರ್ ಅನ್ನು ಅಳವಡಿಸಿರುವುದು ಖಚಿತವಾಗಿದೆ. ಇದು ಹಿಂದಿನ ಮಾದರಿಯ Redmi 12 5G ಸ್ಮಾರ್ಟ್‌ಫೋನ್‌ನಲ್ಲಿ ಬಳಸಲಾದ ಅದೇ ಪ್ರೊಸೆಸರ್ ಆಗಿದೆ. ಕಂಪನಿಯ ಹಿಂದಿನ ಮಾದರಿಯ Redmi 12 5G ಫೋನ್ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಹೊಸ ಮಾದರಿಯು ಕಂಪನಿಯ ಹೊಸ HyperOS ನೊಂದಿಗೆ ಬರುತ್ತದೆ.

ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5,030mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಪಡೆಯಬಹುದು. ವೇಗವಾಗಿ ಚಾರ್ಜ್ ಮಾಡಲು, Redmi 13 5G ಫೋನ್ 33W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುತ್ತದೆ.

ಬೆಲೆ: Redmi 13 5G ಬೆಲೆಯು 15,000 ರೂ.ಗಳಿಂದ ಪ್ರಾರಂಭವಾಗಬಹುದು. ಇದು Redmi 12 5G ಮಾದರಿಯಂತೆಯೇ ಇರುತ್ತದೆ. Redmi 12 5G ಬೆಲೆ 10,999 ರೂ.ಗಳಿಂದ ಪ್ರಾರಂಭವಾಯಿತು. ಆದರೆ, ಸದ್ಯಕ್ಕೆ ಈ ಫೋನ್‌ನ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಫೋನ್‌ನ ನಿಖರವಾದ ಬೆಲೆ ಜುಲೈ 9 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗುವ ಸಮಯದಲ್ಲಿ ಬಹಿರಂಗಗೊಳ್ಳುತ್ತದೆ.

ಎದುರಾಳಿಗಳಿಗೆ ಪೈಪೋಟಿ ನೀಡುವುದು ಫಿಕ್ಸ್!

ಪ್ರಸ್ತುತ, Redmi 13 5G ಫೋನ್‌ನ ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಬೆಲೆ ಶ್ರೇಣಿಯನ್ನು ನೋಡಿದರೆ, Vivo T3 Lite, realme NARZO 70x ಮತ್ತು iQOO Z9 Lite ಸೇರಿದಂತೆ Redmi 13C ನಂತಹ ಸ್ಮಾರ್ಟ್‌ಫೋನ್‌ಗಳು Redmi 13 5G ಫೋನ್‌ಗೆ ಪೈಪೋಟಿ ನೀಡಬಹುದು ಎಂದು ಹೇಳಲಾಗುತ್ತಿದೆ.

Best Mobiles in India

English summary
Redmi 13 5G launching on 9th July in India. take a look at its 5 key points before the launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+