Home
ಮೊಬೈಲ್

Redmi ಪ್ರಿಯರಿಗೆ ಹಬ್ಬ.. ಜುಲೈ 9 ರಂದು Redmi 13 5G ಲಾಂಚ್, ಬೊಂಬಾಟ್ ಫೀಚರ್‌!

ರೆಡ್ಮಿ ಕಂಪನಿ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡಲು ತಯಾರಿ ನಡೆಸಿದೆ. ಬಜೆಟ್‌ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ರೆಡ್ಮಿ ಮತ್ತೊಂದು ಫೋನ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ರೆಡ್ಮಿ ನೂತನ Redmi 13 5G ಪೋನ್‌ ಅನ್ನು ಮಾರುಕಟೆಗೆ ಬಿಡುಗಡೆ ಮಾಡಲಿದೆ. Redmi 13 5G ಸ್ಮಾರ್ಟ್‌ಫೋನ್ ನಿಜಕ್ಕೂ ಮೊಬೈಲ್‌ ಪ್ರಿಯರನ್ನು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. Vivo ಕಂಪನಿ Vivo Y58 5G ಅನ್ನು ಸ್ನಾಪ್‌ಡ್ರಾಗನ್ 4 Gen 2 ಜೊತೆಗೆ ಬಿಡುಗಡೆ ಮಾಡಿದೆ. ಇದೀಗ, ರೆಡ್ಮಿ ಕಂಪನಿ ರೆಡ್ಮಿ 13 5ಜಿ ಅನ್ನು ಭಾರತೀಯ ಮಾರುಕಟ್ಟೆಗೆ ತರಲು ಸಿದ್ಧವಾಗಿದೆ.

ಹೌದು, ರೆಡ್ಮಿ ಕಂಪನಿಯು ಈ ಹಿಂದೆ ಬಿಡುಗಡೆ ಮಾಡಿದ್ದ ಫೋನ್‌ಗಳಂತೆ ಈ ಮೊಬೈಲ್‌ ವಿನ್ಯಾಸದ ಮೇಲೆ ಕೆಲಸ ಮಾಡಿದೆ. ಮಿಡ್ ರೇಂಜ್‌ನಲ್ಲಿ ಕ್ಲಾಸಿಕ್‌ ಲುಕ್‌ನಲ್ಲಿ ಮೊಬೈಲ್‌ ಗ್ರಾಹಕರನ್ನು ಆಕರ್ಷಿಸಿದೆ. ಪ್ರೀಮಿಯಂ ಫೋನ್‌ಗಳನ್ನು ಹೊಂದಿರುವ ರೆಡ್ಮಿ ಬಜೆಟ್‌ ಫ್ರೆಂಡ್‌ ಸೆಗ್ಮೆಂಟ್‌ನಲ್ಲಿ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಬೇರೂರಲು ಪ್ಲ್ಯಾನ್ ಮಾಡಿದೆ. ಈ ಹೊಸ ರೆಡ್ಮಿ 13 5ಜಿ ಫೋನ್‌ ಇದೇ ಜುಲೈ 9 ರಂದು ಭಾರತದಲ್ಲಿ Snapdragon 4 Gen 2ನೊಂದಿಗೆ ಲಾಂಚ್ ಆಗಲಿದೆ.

Redmi: ಜುಲೈ 9 ರಂದು Redmi 13 5G ಲಾಂಚ್, ಬೊಂಬಾಟ್ ಫೀಚರ್‌!

ಈ ಮೊಬೈಲ್ ಈ ರೇಂಜ್‌ನಲ್ಲಿ ಸಿಗುವ ಹಲವು ಕಂಪನಿಗಳ ಸ್ಮಾರ್ಟ್‌ಪೋನ್‌ಗಳೊಗೆ ಭಾರೀ ಪೈಪೋಟಿ ನೀಡುವುದು ಪಕ್ಕಾ ಆಗಿದೆ. ಸಾಮಾನ್ಯವಾಗಿ ನೋಟ್‌ ಸೀರಿಸ್‌ನಲ್ಲಿ ಕಾಣಿಸಿಕೊಳ್ಳವ ಗ್ಲಾಸ್‌ ಫಿನಿಷ್‌, ರೆಡ್ಮಿ 13 5ಜಿ ಫೋನ್‌ನಲ್ಲಿ ಇರಲಿದೆ. ನಿಜಕ್ಕೂ ಈ ಸ್ಮಾರ್ಟ್‌ಫೋನ್‌ ಲುಕ್‌ ಯಾವುದೇ ಪ್ರೀಮಿಯಂ ಫೋನ್‌ನ ವಿನ್ಯಾಸಕ್ಕಿಂತ ಕಡಿಮೆ ಇಲ್ಲ. Amazon microsite ಮೂಲಕ, ರೆಡ್ಮಿ 13 5ಜಿ ಭಾರತದಲ್ಲಿ ಜುಲೈ 9, 2024 ರಂದು ಮಧ್ಯಾಹ್ನ 12 ಗಂಟೆಗೆ ಅನಾವರಣಗೊಳ್ಳಲಿದೆ.

ಈ ಫೋನ್ ಏನೆಲ್ಲಾ ಫೀಚರ್ಸ್‌ ಹೊಂದಿದೆ?

ರೆಡ್ಮಿಯ ಮುಂಬರುವ ಸ್ಮಾರ್ಟ್‌ಫೋನ್ ರೆಡ್ಮಿ 13 5ಜಿ ಫೀಚರ್‌ಗಳು ಬಹಿರಂಗವಾಗಿದೆ. ಈ ರೆಡ್ಮಿ 13 5ಜಿ ಮೊಬೈಲ್ ಕ್ವಾಲ್ಕಮ್‌ ಸ್ನ್ಯಾಪ್‌ಡ್ರ್ಯಾಗನ್‌ 4 Gen 2 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ನ ಪ್ರೊಸೆಸರ್‌ನಲ್ಲಿ ಕಂಪನಿಯು ಯಾವುದೇ ಅಪ್‌ಗ್ರೇಡ್ ಮಾಡುವುದಿಲ್ಲ. ಇದಲ್ಲದೆ, ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 33W USB ಟೈಪ್ C ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕಳೆದ ವರ್ಷ ಬಿಡುಗಡೆಯಾದ Redmi ಫೋನ್‌ನ ಚಾರ್ಜಿಂಗ್ ವೇಗವು 18W ಆಗಿತ್ತು.

ಈ ರೆಡ್ಮಿ 13 5ಜಿ ಮೊಬೈಲ್ 6.74 ಇಂಚಿನ FHD+ ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 90Hz ರಿಫ್ರೆಶ್ ರೇಟ್ ಮತ್ತು 550 nits ನ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದರ ರೆಸಲ್ಯೂಶನ್ 720×1600 ಪಿಕ್ಸೆಲ್‌ಗಳು. ಹಿಂಬಾಗದಲ್ಲಿ 50 ಮೆಗಾ ಪಿಕ್ಸಲ್‌ ಪ್ರೈಮರಿ ಕ್ಯಾಮೆರಾವನ್ನು ಹೊಂದಿರಲಿದೆ. ಇದು 8 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

Redmi: ಜುಲೈ 9 ರಂದು Redmi 13 5G ಲಾಂಚ್, ಬೊಂಬಾಟ್ ಫೀಚರ್‌!

ಮೂರು ವೇರಿಯಂಟ್‌ಗಳಲ್ಲಿ ಬಿಡುಗಡೆ

ರೆಡ್ಮಿ 13 5ಜಿ ಫೋನ್‌ ಮೂರು ಸ್ಟೋರೇಜ್‌ ಮಾದರಿಯಲ್ಲಿ ಲಭ್ಯವಿರಲಿದೆ. 4GB + 128GB ಇಂಟರ್ನಲ್‌ ಸ್ಟೋರೆಜ್‌, 6GB/128GB ರೂಪಾಂತರ ಮತ್ತು 8GB/256GB ವೇರಿಯಂಟ್‌ನಲ್ಲಿ ಬಿಡುಗಡೆಯಾಗಲಿದೆ. 4GB + 128GB ಮಾದರಿಯ ಬೆಲೆ 10,999 ರೂ., 6GB/128GB ಬೆಲೆ 12,499 ರೂ. ಮತ್ತು 8GB/256GB ರೂಪಾಂತರದ ಬೆಲೆ 14,499 ರೂ. ಇರುವ ಸಾಧ್ಯತೆಯಿದೆ. ಈ ಫೋನ್ ಎರಡು ಬಣ್ಣದ ಆಯ್ಕೆಗಳನ್ನು ಹೊಂದಿದೆ. ತಿಳಿ ನೀಲಿ ಮತ್ತು ತಿಳಿ ಗುಲಾಬಿಯಲ್ಲಿ ಬರಲಿದೆ.

Redmi 13 4G ಸಂಪೂರ್ಣ ಫೀಚರ್ಸ್‌

  • ಅಳತೆ: 6.79 ಇಂಚುಗಳು
  • ಡಿಸ್ಪ್ಲೇ: FHD+ ಡಿಸ್ಪ್ಲೇ (ಪೂರ್ಣ ಹೈ ಡೆಫಿನಿಷನ್ ಪ್ಲಸ್) ಮತ್ತು 550 nits ಗರಿಷ್ಠ ಬ್ರೈಟ್‌ನೆಸ್
  • ರಿಫ್ರೆಶ್ ದರ: 90Hz
  • ಪ್ರೊಸೆಸರ್: ಮೀಡಿಯಾ ಟೆಕ್ ಹೆಲಿಯೊ ಜಿ99 ಅಲ್ಟ್ರಾ
  • GPU: Mali-G52 MC2
  • ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 14 ಆಧಾರಿತ Xiaomi HyperOS
  • ಕ್ಯಾಮೆರಾ: ಹಿಂದಿನ ಮುಖ್ಯ ಕ್ಯಾಮೆರಾ 108MP (ಎಲ್ಇಡಿ ಫ್ಲ್ಯಾಷ್), ಹಿಂದಿನ ಆಳದ ಸಂವೇದಕ 2MP ಮತ್ತು ಫ್ರಂಟ್ ಕ್ಯಾಮರಾ 13MP.
  • ಬ್ಯಾಟರಿ: 5030 mAh ಸಾಮರ್ಥ್ಯ ಮತ್ತು 33W ವೇಗದ ಚಾರ್ಜಿಂಗ್
  • ಕನೆಕ್ಟಿವಿಟಿ ಆಯ್ಕೆಗಳು: ಬ್ಲೂಟೂತ್-ಆವೃತ್ತಿ 5.3, ಸಿಮ್-ಎರಡು ಸಿಮ್, ಜಿಪಿಎಸ್, ವೈಫೈ-ವೈಫೈ 5 ಮತ್ತು FM ರೇಡಿಯೋ
  • ರಕ್ಷಣೆ: ನೀರು ಮತ್ತು ಧೂಳು ನಿರೋಧಕ ಮತ್ತು IP53-ರೇಟೆಡ್ ರಕ್ಷಣೆ
Best Mobiles in India

English summary
Redmi 13 5G launching on 9th July in India with Snapdragon 4 Gen 2. Design & Key Specs revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+