Redmi 13C vs Poco C61 ಟಾಪ್ 5 ಫೀಚರ್ಸ್: ಇವೆರಡರಲ್ಲಿ ಯಾವ ಫೋನ್ ಬೆಸ್ಟ್?
ಪ್ರತಿ ತಿಂಗಳು ಹತ್ತಾರು ಹೊಸ ಸ್ಮಾರ್ಟ್‌ಫೋನ್‌ಗಳು(smartphone) ಮಾರುಕಟ್ಟೆಗೆ ಎಂಟ್ರಿ ಕೊಡುತ್ತವೆ. ವಿವಿಧ ಬೆಲೆ ಮತ್ತು ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತವೆ. ಕೆಲವು ಮೊಬೈಲ್‌ಗಳು ಒಂದೇ ರೀತಿಯ ಬೆಲೆಯನ್ನು ಹೊಂದಿರುತ್ತವೆ. ಇದಕ್ಕೆ ಉದಾಹರಣೆ Redmi 13C ಮತ್ತು Poco C61 ಸ್ಮಾರ್ಟ್‌ಫೋನ್‌ಗಳು. ಭಾರತದಲ್ಲಿ ಒಂದೇ ರೀತಿಯ ದರದಲ್ಲಿ ಮಾರಾಟವಾಗುತ್ತಿವೆ. ಹಾಗಿದ್ರೆ, ಈ ಎರಡೂ ಮೊಬೈಲ್‌ಗಳ ಟಾಪ್ 5 ಫೀಚರ್ಸ್‌ಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Xiaomi Redmi ಮತ್ತು 13C, Poco C61 ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಕ್ರಮವಾಗಿ 7,699 ರೂ. ಹಾಗೂ 6,499 ರೂ.ಗೆ (8,000 ರೂ.ಒಳಗೆ) ಲಭ್ಯವಿದೆ. ಈ ಮೊಬೈಲ್‌ಗಳು ಅದ್ಭುತ ಬ್ಯಾಟರಿ ಬ್ಯಾಕಪ್, ಡಿಸ್ಪ್ಲೇ, ಕ್ಯಾಮೆರಾ, ಪ್ರೊಸೆಸರ್ ಜೊತೆಗೆ ಲೇಟೆಸ್ಟ್ ಫೀಚರ್‌ಗಳನ್ನು ಹೊಂದಿವೆ. Redmi 13C ಮತ್ತು Poco C61 ಮೊಬೈಲ್‌ನಲ್ಲಿ ಯಾವುದಾದರೂ ಒಂದನ್ನು ಖರೀದಿಸಲು ಇಚ್ಛಿಸಿದರೆ, ನಾವು ತಿಳಿಸುವ ಟಾಪ್ 5 ಫೀಚರ್ ಹೋಲಿಕೆ ಮಾಡಿ. ನಿಮಗೆ ಬೆಸ್ಟ್ ಎನಿಸುವ ಸ್ಮಾರ್ಟ್‌ಫೋನ್ ಆಯ್ಕೆ ಮಾಡಿಕೊಳ್ಳಿ.

Redmi 13C ಮತ್ತು Poco C61 ಬೆಲೆ ಎಷ್ಟು?
ನೀವು ಮೊಬೈಲ್ ಖರೀದಿಸುವಾಗ ಬೆಲೆ ಗಮನಿಸಬೇಕು. 8,000 ರೂ.ನಲ್ಲಿ ಮೊಬೈಲ್ ಕೊಂಡುಕೊಳ್ಳವವರಿಗೆ Redmi 13C, Poco C61 ಬೆಸ್ಟ್ ಚಾಯ್ಸ್. Redmi 13C ಆನ್‌ಲೈನ್‌ನಲ್ಲಿ ಪ್ಲಾಟ್ ಫಾರ್ಮ್‌ನಲ್ಲಿ 7,699 ರೂ.ಗೆ ಲಭ್ಯವಿದೆ. ಈ ಫೋನ್ ಹೈಪರ್ ಬ್ಲೂ ಮತ್ತು ಹೈಪರ್ ಬ್ಲಾಕ್ ಕಲರ್‌ಗಳಲ್ಲಿ ಲಭ್ಯವಿದೆ. Poco C61 ಮೊಬೈಲ್ ಆನ್‌ಲೈನ್‌ನಲ್ಲಿ ಪ್ಲಾಟ್ ಫಾರ್ಮ್‌ನಲ್ಲಿ 6,499 ರೂ.ಗೆ ಲಭ್ಯವಿದೆ. ನೀವು ನಾರ್ವೆ ಬ್ಲೂ, ಪೆಸಿಫಿಕ್ ನೈಟ್ ಕಲರ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
Redmi 13C & Poco C61 ಪ್ರೊಸೆಸರ್ ಏನು?
Redmi 13C ಮೀಡಿಯಾ ಟೆಕ್ Helio G85 ಪ್ರೊಸೆಸರ್ ಸ್ಪೀಡ್‌ನಲ್ಲಿ ವರ್ಕ್ ಆಗುತ್ತದೆ. ಇದು 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಧಾರಿತ MIUI 14 ರನ್ ಮಾಡುತ್ತದೆ. Poco C61 ಮೊಬೈಲ್ ಆಕ್ಟಾ-ಕೋರ್ Mediatek Helio G36 ಪ್ರೊಸೆಸರ್ ಹೊಂದಿದೆ. ಇದು 6GB ವರೆಗೆ ಮೆಮೊರಿ, 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. Android 14 ಆಧರಿಸಿದ MIUI ಸ್ಕಿನ್ ಅನ್ನು ಹೊಂದಿದೆ.
Redmi 13C ಮತ್ತು Poco C61 ಬ್ಯಾಟರಿ ಬ್ಯಾಕಪ್ ಹೇಗೆ?
ಮೊಬೈಲ್ ಖರೀದಿಸುವಾಗ ಮುಖ್ಯವಾಗಿ ನೀವು ಬ್ಯಾಟರಿ ಬ್ಯಾಕಪ್ ಹೆಚ್ಚು ಒತ್ತು ನೀಡುತ್ತೀರಿ. Redmi 13C ಸ್ಮಾರ್ಟ್‌ಫೋನ್ 18W ಡಾರ್ಟ್ ಚಾರ್ಜ್ ತಂತ್ರಜ್ಞಾನದೊಂದಿಗೆ 5000mAh ಬ್ಯಾಟರಿ ಬ್ಯಾಕಪ್ ಒದಗಿಸಲಿದೆ. ಈ ಬ್ಯಾಟರಿಯನ್ನು ಕೇವಲ 31 ನಿಮಿಷಗಳಲ್ಲಿ ಶೇ.50% ಮತ್ತು ಕೇವಲ 70 ನಿಮಿಷಗಳಲ್ಲಿ ಸಂಪೂರ್ಣ (100%) ಚಾರ್ಜ್ ಮಾಡಬಹುದು. Poco C61 ಮೊಬೈಲ್ 5000mAh ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು USB ಟೈಪ್-C ಕನೆಕ್ಟರ್‌ನಲ್ಲಿ 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Redmi 13C & Poco C61: ಯಾವ ಡಿಸ್ಪ್ಲೇ ಬೆಸ್ಟ್?
Redmi 13C ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ದರ ಮತ್ತು 450 nits ಗರಿಷ್ಠ ಬ್ರೈಟ್‌ನೆಸ್ ಜೊತೆಗೆ 6.74 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. Poco C61 ಮೊಬೈಲ್ 6.71 ಇಂಚಿನ ಫುಲ್ IPS LCD ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 720x1650 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್ ಒಳಗೊಂಡಿದೆ. ಇದು 268 PPI ಡೆನ್ಸಿಟಿಯನ್ನು ಹೊಂದಿದೆ. ಈ ಎರಡೂ ಡಿಸ್ಪ್ಲೇ ಪ್ರೊಟೆಕ್ಷನ್‌ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಹೊಂದಿವೆ.
Redmi 13C & Poco C61: ಅದ್ಭುತ ಕ್ಯಾಮೆರಾ
ಮೊಬೈಲ್ ಖರೀದಿಸುವಾಗ ನಮ್ಮ ಕಣ್ಣು ಹೋಗುವುದೇ ಕ್ಯಾಮೆರಾ ಕಡೆ. Redmi 13C 50MP ಪ್ರಾಥಮಿಕ ಶೂಟರ್ ಅನ್ನು 2MP ಮ್ಯಾಕ್ರೋ ಸೆನ್ಸರ್‌ನಿಂದ ಬೆಂಬಲಿಸುತ್ತದೆ. ಇದರ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. Poco C61 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8MP ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2MP ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಜೊತೆಗೆ, 5MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಒಟ್ಟಾರೆ, Redmi 13C ಹಾಗೂ Poco C61 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಒಂದೇ ರೀತಿಯಾಗಿದ್ದರೂ, ಮೇಲೆ ತಿಳಿಸಿರುವಂತೆ ವಿಭಿನ್ನವಾದ ಫೀಚರ್ಸ್‌ಗಳನ್ನು ಹೊಂದಿವೆ. ನಾವು ತಿಳಿಸಿರುವ ಫಿಚರ್ಸ್‌ಗಳನ್ನು ಎರಡೂ ಮೊಬೈಲ್‌ಗಳೊಂದಿಗೆ ಹೋಲಿಕೆ ಮಾಡಿ. ಬಳಿಕ, ಇವೆರಡರಲ್ಲಿ ನಿಮಗೆ ಯಾವ ಮೊಬೈಲ್ ಬೆಸ್ಟ್ ಎನಿಸುತ್ತದೆ ಅಂತ ತಿಳಿಸಿ. ನಿಮಗೆ ಇಷ್ಟವಾದ ಸ್ಮಾರ್ಟ್‌ಫೋನ್ ಖರೀದಿಸಿ.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








