ಹೊಸ Redmi 13x ಫೋನ್ ಲಾಂಚ್; 108MP ಕ್ಯಾಮೆರಾ.. 5,030mAh ಬ್ಯಾಟರಿ.. 15,000ಕ್ಕಿಂತ ಕಡಿಮೆ!
ರೆಡ್ಮಿ ಸಂಸ್ಥೆಯು ಇಂದು ಮತ್ತೊಂದು ಹೊಸ ಮೊಬೈಲ್ ಪರಿಚಯಿಸಿದೆ. ಇದು 15 ಸಾವಿರ ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಈ ಫೋನಿನ ಸೊಗಸಾದ ವಿನ್ಯಾಸ ಮತ್ಯು ವೈಶಿಷ್ಟ್ಯಗಳು ಮೊಬೈಲ್ ಪ್ರಿಯರ ಗಮನ ಸೆಳೆದಿವೆ. ಹೌದು, ಬಹುನಿರೀಕ್ಷಿತ ರೆಡ್ಮಿ 13x (Redmi 13x) ಸ್ಮಾರ್ಟ್‌ಫೋನ್ ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಮೊಬೈಲ್ IP53 ರೇಟಿಂಗ್ ಪಡೆದಿದೆ. ಬನ್ನಿ, ಈ ಹೊಸ ರೆಡ್‌ಮಿ 13x ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಶಿಯೋಮಿ ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್ ರೆಡ್‌ಮಿ 13x ಅನ್ನು ಪರಿಚಯಿಸಿದೆ. ಈ ಹೊಸ ರೆಡ್ಮಿ ಸ್ಮಾರ್ಟ್‌ಫೋನ್ 108MP ಕ್ಯಾಮೆರಾದೊಂದಿಗೆ ಬರುತ್ತದೆ. ಇದು ಮೀಡಿಯಾ ಟೆಕ್ ಹೆಲಿಯೊ G91 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.79 ಇಂಚಿನ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಿದೆ. ಇದರೊಂದಿಗೆ 5,030mAh ಬ್ಯಾಟರಿ, 13MP ಸೆಲ್ಫಿ ಕ್ಯಾಮೆರಾ, 8GB RAM ಮತ್ತು 128GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಆಫರ್ ಮತ್ತು ಮಾರಾಟದ ವಿವರಗಳನ್ನು ತಿಳಿಯಲು ಮುಂದೆ ಓದಿ.

ರೆಡ್ಮಿ 13x ಫೋನಿನ ವೈಶಿಷ್ಟ್ಯಗಳು
ರೆಡ್ಮಿ 13x ಫೋನಿನ ಡಿಸ್ಪ್ಲೇ
ರೆಡ್ಮಿ 13X ಸ್ಮಾರ್ಟ್‌ಫೋನ್ 6.79 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 1,800 × 2,400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು 90Hz ರಿಫ್ರೆಶ್ ದರ ಮತ್ತು 550 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ರೆಡ್ಮಿ 13x ಫೋನಿನ ಪ್ರೊಸೆಸರ್
ರೆಡ್ಮಿ 13x ಮೊಬೈಲ್‌ನ ಪ್ರೊಸೆಸರ್ ಬಗ್ಗೆ ಹೇಳುವುದಾದರೆ, ಇದು ಮೀಡಿಯಾ ಟೆಕ್ ಹೆಲಿಯೊ G91 ಅಲ್ಟ್ರಾ ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದನ್ನು 12 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಮೊಬೈಲ್ 6GB RAM ಮತ್ತು 8GB RAM ಹೊಂದಿದೆ. ಈ ಎರಡೂ ಮಾದರಿಗಳು 128GB ಆಂತರಿಕ ಸ್ಟೋರೇಜ್ ಹೊಂದಿವೆ. ನೀವು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ಹೆಚ್ಚಿಸಬಹುದು.
ರೆಡ್ಮಿ 13x ಫೋನಿನ ಕ್ಯಾಮೆರಾ ಸೆಟಪ್
ರೆಡ್ಮಿ 13x ಫೋನ್ ಡ್ಯುಯಲ್ ಕ್ಯಾಮೆರಾ ರಚೆನೆ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್ ಹೊಂದಿದ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 13 ಮೆಗಾಪಿಕ್ಸೆಲ್ ಶೂಟರ್ ಸಹ ಹೊಂದಿದೆ.

ರೆಡ್ಮಿ 13x ಫೋನಿನ ಬ್ಯಾಟರಿ ಬ್ಯಾಕಪ್
ರೆಡ್ಮಿ 13X ಸ್ಮಾರ್ಟ್‌ಫೋನ್ ಅಗ್ಗದ ಬೆಲೆ ಹೊಂದಿದ್ದರೂ ಸಹ ದೊಡ್ಡ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು 5,030mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಹಾಗೆಯೇ 3.5 ಎಂಎಂ ಹೆಡ್‌ಫೋನ್ ಜ್ಯಾಕ್, IP53 ರೇಟಿಂಗ್ ಮತ್ತು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, ಬ್ಲೂಟೂತ್ 5.3 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ರೆಡ್ಮಿ 13x ಫೋನಿನ ಬೆಲೆ
ರೆಡ್ಮಿ 13X 4G ಫೋನ್ ಎರಡು ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ್ ಮೂಲ ಮಾದರಿಯು 6GB RAM + 128GB ಸ್ಟೋರೇಜ್ ಬೆಲೆ 14,300 ರೂ. ಆಗಿದೆ. ಹಾಗೆಯೇ 8GB RAM + 128GB ಸ್ಟೋರೇಜ್ ವೇರಿಯಂಟ್ ಅನ್ನು 15,590 ರೂ.ಗೆ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಈ ಮೊಬೈಲ್ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. ಶೀಘ್ರವೇ ಈ ಫೋನ್ ಭಾರತೀಯ ಮಾರುಕಟ್ಟೆಗೂ ಬರಲಿದೆ.


Click it and Unblock the Notifications








