Home
ಮೊಬೈಲ್

ಬರ್ತಿದೆ ಹೊಸ Redmi ಫೋನ್.. ಬಿಡುಗಡೆ ವಿವರ ಲೀಕ್; 256GB ಸ್ಟೋರೇಜ್‌ ಖಚಿತ!

ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರೆಡ್ಮಿ ಶೀಘ್ರದಲ್ಲೇ ತನ್ನ 14 ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಫೋನ್ ರೆಡ್ಮಿ 14C 4G (Redmi 14C 4G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದು ಈ ಹಿಂದೆ ಬಿಡುಗಡೆಯಾಗಿದ್ದ Redmi 13C 4G ಫೋನಿಗೆ ಉತ್ತರಾಧಿಕಾರಿಯಾಗಿ ಬರುತ್ತಿದೆ. ಈ ಫೋನಿನ ಜಾಗತಿಕ ಲಾಂಚ್ ವಿವರಗಳು (ಟೈಮ್‌ಲೈನ್), ಸ್ಟೋರೇಜ್ ಮತ್ತು ಬಣ್ಣಗಳ ಆಯ್ಕೆಯನ್ನು ಬಹಿರಂಗಪಡಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹೌದು, ಮುಂಬರುವ ಹೊಸ ರೆಡ್ಮಿ 14C 4G ಮೊಬೈಲ್ ಈ ತಿಂಗಳ ಅಂತ್ಯದ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ಶೀಘ್ರದಲ್ಲೇ ಈ ಫೋನಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಬಹುದು ಎಂದು ಹೇಳಲಾಗುತ್ತಿದೆ. ಖ್ಯಾತ ಟಿಪ್‌ಸ್ಟರ್ ಸುಧಾಂಶು ಪ್ರಕಾರ, ಕಂಪನಿಯು ಹಿಂದಿನ ಮಾದರಿ 13C ನಂತೆಯೇ ಕಡಿಮೆ ಬೆಲೆಗೆ ಈ ಫೋನನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ರೆಡ್ಮಿ 14C ಅನ್ನು ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಬರ್ತಿದೆ ಹೊಸ Redmi ಫೋನ್.. ಬಿಡುಗಡೆ ವಿವರ ಲೀಕ್; 256GB ಸ್ಟೋರೇಜ್‌ ಖಚಿತ!

ರೆಡ್ಮಿ 14C ಸ್ಟೋರೇಜ್, RAM ಮತ್ತು ಕಲರ್ ಲೀಕ್

ವರದಿಯ ಪ್ರಕಾರ, ರೆಡ್ಮಿ 14C 4G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಫೋನನ್ನು 4GB RAM ಮತ್ತು 128 GB ಸ್ಟೋರೇಜ್‌, 4GB RAM ಮತ್ತು 256 GB ಇಂಟರ್ನಲ್ ಸ್ಟೋರೇಜ್‌ ಆಯ್ಕೆಯೊಂದಿಗೆ ಪರಿಚಯಿಸಬಹುದು. ಬಣ್ಣದ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಈ ಮೊಬೈಲ್ ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುವ ಸಾಧ್ಯತೆಯಿದೆ.

ರೆಡ್ಮಿ 14C 4G ಅಲ್ಲದೆ Redmi 14C 5G ಫೋನ್ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ. IMEI ಡೇಟಾಬೇಸ್‌ನಲ್ಲಿ ಬಹು ಮಾದರಿ ಸಂಖ್ಯೆಗಳೊಂದಿಗೆ ರೆಡ್ಮಿ 14C 5G ಫೋನನ್ನು ಗುರುತಿಸಲಾಗಿದೆ. ಚೀನಾ ಮಾತ್ರವಲ್ಲದೆ, ಜಾಗತಿಕ ಬಿಡುಗಡೆಗಾಗಿ ರೆಡ್ಮಿ 4G ಜೊತೆಗೆ 5G ರೂಪಾಂತರವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

ರೆಡ್ಮಿ 14C ಫೋನಿನ ನಿರೀಕ್ಷಿತ ವೈಶಿಷ್ಟ್ಯಗಳು

ರೆಡ್ಮಿ 14C ಫೋನಿನ ಚಿಪ್‌ಸೆಟ್‌ಗೆ ಸಂಬಂಧಿಸಿದಂತೆ, ಕಂಪನಿಯು ಇದರಲ್ಲಿ Helio G91 ಅಲ್ಟ್ರಾ ಚಿಪ್‌ಸೆಟ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸಲಾಗಿದೆ. ಫೋನಿನ ಕ್ಯಾಮೆರಾ ಲೆನ್ಸ್‌ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದು ಹಿಂದಿನ ಮಾದರಿಯಂತೆ ಮುಖ್ಯ ಕ್ಯಾಮೆರಾ ಮತ್ತು LED ಫ್ಲ್ಯಾಷ್‌ನೊಂದಿಗೆ ಬರಬಹುದು ಎಂದು ಹೇಳಲಾಗುತ್ತಿದೆ.

ಮುಂಬರುವ ಈ ಹೊಸ ಫೋನ್ ಆಂಡ್ರಾಯ್ಡ್ 14 ಆಧಾರಿತ ಹೈಪರ್ 1.0 ಓಎಸ್‌ನಲ್ಲಿ ಕೆಲಸ ಮಾಡಲಿದೆ. ಇತರೆ ವೈಶಿಷ್ಟ್ಯಗಳಲ್ಲಿ ಈ ಫೋನ್ 4G, NFC, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈ-ಫೈ, ಬ್ಲೂಟೂತ್‌ನಂತಹ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಬರ್ತಿದೆ ಹೊಸ Redmi ಫೋನ್.. ಬಿಡುಗಡೆ ವಿವರ ಲೀಕ್; 256GB ಸ್ಟೋರೇಜ್‌ ಖಚಿತ!

Redmi 13C 4G ಫೋನಿನ ಫೀಚರ್ಸ್

Redmi 13C 4G ಫೊನನ್ನು ಕಳೆದ ವರ್ಷ ಬಿಡುಗಡೆ ಮಾಡಲಾಯಿತು. ಈ ಫೋನ್ 6.74 ಇಂಚಿನ HD Plus ಡಿಸ್ಲ್ಪೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಬೆಂಬಲದ ಸೌಲಭ್ಯವನ್ನು ಹೊಂದಿದೆ. ಕಂಪನಿಯು ಈ ಫೋನಿನಲ್ಲಿ MediaTek Helio G85 ಚಿಪ್‌ಸೆಟ್ ಅನ್ನು ಒದಗಿಸಿದೆ. ರೆಡ್ಮಿ 13C ಫೋನ್ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. ಇದು RAM ಪ್ಲಸ್ ವೈಶಿಷ್ಟ್ಯವನ್ನು ಸಹ ಹೊಂದಿದೆ.

ರೆಡ್ಮಿ 13C ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಎರಡು ಇತರ 2 ಮೆಗಾಪಿಕ್ಸೆಲ್ ಲೆನ್ಸ್‌ಗಳನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಚಾರ್ಜ್ ಮಾಡಲು 18W ವೇಗದ ಚಾರ್ಜಿಂಗ್ ಹೊಂದಿದೆ.

Best Mobiles in India

English summary
Redmi 14C 4G launch timeline, colour options revealed: Check specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+