Home
ಮೊಬೈಲ್

Redmi 14C 5G ಬೆಲೆ ಲೀಕ್; 5060mAh ಬ್ಯಾಟರಿ, 512GB ಸ್ಟೋರೇಜ್; ಅತ್ಯಂತ ಅಗ್ಗದ ದರ!

ರೆಡ್ಮಿ ಸಂಸ್ಥೆಯು ಭಾರತದಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಜನವರಿ 6 ರಂದು ರೆಡ್ಮಿ 14C 5G (Redmi 14C 5G) ಭಾರತದಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಇದು 2025 ರಲ್ಲಿ ಬಿಡುಗಡೆಯಾಗಲಿರುವ ಮೊದಲ ಶಿಯೋಮಿ (Xiaomi) ಸ್ಮಾರ್ಟ್‌ಫೋನ್ ಆಗಿದೆ. ಇದು ಭಾರತೀಯ ಮಾರುಕಟ್ಟೆಯ ಮೂಲಕ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಂಪನಿಯು ಈ ಫೋನನ್ನು 'ನಂಬರ್ 1 5G' ಎಂಟರ್‌ಟೈನರ್ ಎಂದು ಹೆಸರಿಸಿದೆ. ಸದ್ಯ ಬಿಡುಗಡೆಗೂ ಮುನ್ನ ರೆಡ್ಮಿ 14C 5G ಫೋನಿನ ಬೆಲೆ ಬಹಿರಂಗವಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ರೆಡ್ಮಿ 14C 5G ಮೊಬೈಲ್ 6.99 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರಲಿದೆ. ಹಾಗೆಯೇ 4GB RAM + 128GB ಸ್ಟೋರೇಜ್‌, 5160mAh ಬ್ಯಾಟರಿ ಮತ್ತು 18W ಸ್ಪೀಡ್‌ ಚಾರ್ಜಿಂಗ್ ಒಳಗೊಂಡಿರುತ್ತದೆ. ಈ ಮೊಬೈಲ್ ನಾಲ್ಕು RAM ಮತ್ತು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ಜಸ್ಟ್ 10,999 ರೂ.! 5060mAh ಬ್ಯಾಟರಿ, 512GB ಸ್ಟೋರೇಜ್; ಅದೂ Redmi ಫೋನ್

ರೆಡ್ಮಿ 14C 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ 14C 5G ಮೊಬೈಲ್ 6.99 ಇಂಚಿನ ದೊಡ್ಡ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರುತ್ತದೆ. ಇದು ದೊಡ್ಡ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಫೋನ್ 720 x 1640 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರದ ಬೆಂಬಲ ಹೊಂದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ರೆಡ್ಮಿ 14C 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 2.36 GHz ಗಡಿಯಾರದ ವೇಗದ ಆಕ್ಟಾಕೋರ್ ಪ್ರೊಸೆಸರ್ ಆಗಿದೆ.

ಸ್ಟೋರೇಜ್ ಆಯ್ಕೆ

ರೆಡ್ಮಿ 14C 5G ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು RAM ಮತ್ತು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು 4GB, 6GB, 8GB ಮತ್ತು 12GB RAM ಹೊಂದಿದೆ. ಹಾಗೆಯೇ 64GB, 128GB, 256GB ಮತ್ತು 512GB ಸ್ಟೋರೇಜ್ ಲಭ್ಯವಿರುತ್ತದೆ. ಆದರೆ, ಈ ಫೋನ್ ಭಾರತೀಯ ಮಾರುಕಟ್ಟೆಗಳಲ್ಲಿ ಬೇರೆ ರೂಪಾಂತರಗಳಲ್ಲಿ ಮಾರಾಟವಾಗಲಿದೆ.

ಕ್ಯಾಮೆರಾ ಸೆಟಪ್

ರೆಡ್ಮಿ 14C 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಜೊತೆಗೆ 0.8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.

ಜಸ್ಟ್ 10,999 ರೂ.! 5060mAh ಬ್ಯಾಟರಿ, 512GB ಸ್ಟೋರೇಜ್; ಅದೂ Redmi ಫೋನ್

ಬ್ಯಾಟರಿ ಮತ್ತು ಚಾರ್ಜಿಂಗ್

ರೆಡ್ಮಿ 14C 5G ಫೋನ್ 5,060mAh ಅಥವಾ 5,160mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.

ಇತರೆ ವೈಶಿಷ್ಟ್ಯಗಳು

ರೆಡ್ಮಿ 14C 5G ಸ್ಮಾರ್ಟ್‌ಫೋನ್ 212.3 ಗ್ರಾಂ ತೂಕ ಹೊಂದಿರುತ್ತದೆ. ಈ ಮೊಬೈಲ್‌ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಒಳಗೊಂಡಿರಲಿದೆ. ಇದರಲ್ಲಿ 5G + 5G ಸಿಮ್ ಬೆಂಬಲ ಲಭ್ಯವಿದೆ. ಈ ಕಡಿಮೆ ದರದ ರೆಡ್ಮಿ 5G ಫೋನಿನಲ್ಲಿ ಇಂಟರ್ನೆಟ್ 2.5Gbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

ರೆಡ್ಮಿ 14C 5G ಫೋನಿನ ಬೆಲೆ

ರೆಡ್ಮಿ 14C 5G ಫೋನಿನ ಬೆಲೆ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಟಿಪ್‌ಸ್ಟರ್ ಪ್ರಕಾರ, ರೆಡ್ಮಿ 14C 5G MRP ಬೆಲೆ 13,999 ರೂ. ಆಗಿರಲಿದೆ. ಇದು ಫೋನಿನ 4GB RAM + 128GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ಈ ಮೊಬೈಲ್ ಮಾರುಕಟ್ಟೆಯಲ್ಲಿ ಎಂಆರ್‌ಪಿ (MRP) ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ. ನೀವು, ರೆಡ್ಮಿ 14C 5G ಫೋನನ್ನು 10,999 ರೂ. ಅಥವಾ 11,999 ರೂ.ಗೆ ಖರೀದಿಸಬಹುದು.

Best Mobiles in India

English summary
Redmi 14C 5G Price in india leaked before launch: Expected Price, Specs and More Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+