ಭಾರತದಲ್ಲಿ Redmi 15 5G ಲಾಂಚ್!..7000mAh ಬ್ಯಾಟರಿ, AI ಕ್ಯಾಮೆರಾ, ಕಡಿಮೆ ಬೆಲೆ!
ಭಾರತದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ನಿರೀಕ್ಷೆಯಿರುವ 'Redmi 15 5G' ಅನ್ನು ಇಂದು (19 ಆಗಸ್ಟ್) ದೇಶದಲ್ಲಿ ಬಿಡುಗಡೆಯಾಗಿದೆ. ಶಿಯೋಮಿಯ ಜನಪ್ರಿಯ ಸಬ್-ಬ್ರ್ಯಾಂಡ್ Redmi ತನ್ನ ಭರವಸೆಗಳನ್ನು ಉಳಿಸಿಕೊಂಡಿದ್ದು, ನಿರೀಕ್ಷೆಯಂತೆಯೇ 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ. Snapdragon 6s Gen 3 ಪ್ರೊಸೆಸರ್ ಮತ್ತು AI-ಬೆಂಬಲಿತ 50-ಮೆಗಾಪಿಕ್ಸೆಲ್ ಕ್ಯಾಮೆರಾದಂತಹ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ ಈ ಫೋನ್ ದೇಶದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Redmi 15 5G: ಪ್ರಮುಖ ವೈಶಿಷ್ಟ್ಯಗಳು
ಈ ಹೊಸ Redmi 15 5G ಪೋನ್ 144Hz ರಿಫ್ರೆಶ್ ರೇಟ್‌ನೊಂದಿಗೆ 6.9-ಇಂಚಿನ ಫುಲ್-HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ಕಡಿಮೆ ನೀಲಿ ಬೆಳಕು ಮತ್ತು ಫ್ಲಿಕರ್-ಮುಕ್ತವಾಗಿರುವ ಡಿಸ್ಪ್ಲೇಗಾಗಿ TÜV ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಸಹ ಪಡೆದುಕೊಂಡಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್ ಶಕ್ತಿಶಾಲಿ Qualcomm Snapdragon 6s Gen 3 SoC ಯಿಂದ ಚಾಲಿತವಾಗಿದ್ದು, 8GB ವರೆಗೆ LPDDR4x RAM ಮತ್ತು 256GB ವರೆಗೆ UFS 2.2 ಸಂಗ್ರಹಣೆಯೊಂದಿಗೆ ಲಭ್ಯವಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ Redmi 15 5G ಫೋನ್ AI-ಬೆಂಬಲಿತ 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಜೊತೆಗೆ, 8-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ AI ಸ್ಕೈ, AI ಬ್ಯೂಟಿ ಮತ್ತು AI ಎರೇಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಬ್ಯಾಟರಿ ವಿಭಾಗದಲ್ಲಿ ಈ ಫೋನ್ 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 18W ರಿವರ್ಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬೃಹತ್ 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನು ಹೊಂದಿದ್ದು, ಇದು ದೀರ್ಘ ಕಾಲ ನಿರಂತರ ಬಳಕೆಗೆ ಸೂಕ್ತವಾಗಿದೆ ಎಂದು ಕಂಪೆನಿಯು ತಿಳಿಸಿದೆ
ಈ Redmi 15 5G ಫೋನ್‌ನ ಪ್ರಮುಖ ಅಂಶವೆಂದರೆ ಅದರ AI ವೈಶಿಷ್ಟ್ಯಗಳು. ಇದು ಗೂಗಲ್‌ನ ಪ್ರಮುಖ AI ವೈಶಿಷ್ಟ್ಯಗಳಾದ Gemini ಮತ್ತು Circle to Search ಅನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ, ಈ ಪೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಇದರೊಂದಿಗೆ, ಧೂಳು ಮತ್ತು ನೀರಿನಿಂದ ರಕ್ಷಿಸಲು IP64 ರೇಟಿಂಗ್ ಅನ್ನು ಸಹ ಇದು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ, ಈ ಫೋನ್ 5G, 4G, Wi-Fi, ಬ್ಲೂಟೂತ್, ಮತ್ತು USB ಟೈಪ್-ಸಿ ಪೋರ್ಟ್‌ನಂತಹ ಎಲ್ಲಾ ಅಗತ್ಯ ಸಂಪರ್ಕ ಆಯ್ಕೆಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Redmi 15 5G ಫೋನಿನ ಬೆಲೆ 6GB RAM ಮತ್ತು 128GB ಮಾದರಿಯ ಆಯ್ಕೆಗೆ ₹14,999 ರಿಂದ ಪ್ರಾರಂಭವಾಗುತ್ತದೆ. ಇದರ ಜೊತೆಗೆ 8GB + 128GB ಮತ್ತು 8GB + 256GB ರೂಪಾಂತರಗಳು ಕ್ರಮವಾಗಿ ₹15,999 ಮತ್ತು ₹16,999 ಬೆಲೆಯಲ್ಲಿ ಲಭ್ಯವಿದೆ.
ಈ ಫೋನ್ ಆಗಸ್ಟ್ 28, 2025 ರಿಂದ Amazon, Xiaomi ಇಂಡಿಯಾ ವೆಬ್‌ಸೈಟ್ ಮತ್ತು ಅಧಿಕೃತ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಗ್ರಾಹಕರು ಈ ಫೋನ್ ಅನ್ನು ಫ್ರಾಸ್ಟೆಡ್ ವೈಟ್, ಮಿಡ್‌ನೈಟ್ ಬ್ಲಾಕ್, ಮತ್ತು ಸ್ಯಾಂಡಿ ಪರ್ಪಲ್ ಬಣ್ಣಗಳಲ್ಲಿ ಖರೀದಿಸಬಹುದು.
ಈ ಬೆಲೆ ಮತ್ತು ವೈಶಿಷ್ಟ್ಯಗಳೊಂದಿಗೆ, ಈ ಹೊಸ Redmi 15 5G ಫೋನ ದೇಶದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








