Home
ಮೊಬೈಲ್

ಭಾರತದಲ್ಲಿ Redmi 15C 5G ಲಾಂಚ್ ಡೇಟ್ ಫಿಕ್ಸ್: ಬೆಲೆ ₹12,499 ಮಾತ್ರ?!

Xiaomi ಒಡೆತನದ ಸಬ್‌ಬ್ರ್ಯಾಂಡ್ Redmi ಭಾರತದಲ್ಲಿ ತನ್ನ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್ Redmi 15C 5G ಅನ್ನು ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವುದನ್ನು ದೃಢಪಡಿಸಿದೆ. ಕಂಪನಿಯು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಈ ಬಹುನಿರೀಕ್ಷಿತ ಮಾಹಿತಿಯನ್ನು ದೃಢಪಡಿಸಿದೆ.! Amazon ಮತ್ತು Xiaomi India ವೆಬ್‌ಸೈಟ್‌ಗಳಲ್ಲಿ Redmi 15C 5G ಫೋನ್‌ಗೆ ಸಂಬಂಧಿಸಿದ ವಿಶೇಷ ಪುಟಗಳು ಲೈವ್ ಆಗಿರುವುದರಿಂದ, ಇದು ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟಕ್ಕೆ ಲಭ್ಯವಾಗುವುದೂ ಸಹ ಖಚಿತವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಕೆಳಕಂಡಂತಿದೆ.

Redmi 15C 5G :ಭಾರತದಲ್ಲಿ ಡಿಸೆಂಬರ್ 3 ರಂದು ಬಿಡುಗಡೆ
Redmi ತನ್ನ ಇತ್ತೀಚಿನ ಅಧಿಕೃತ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ Redmi 15C 5G ಡಿಸೆಂಬರ್ 3ರಂದು ಅಧಿಕೃತವಾಗಿ ಲಾಂಚ್ ಆಗಲಿದೆ ಎಂದು ಘೋಷಿಸಿದೆ. ಈ ಹೊಸ ಫೋನ್ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್‌ನೊಳಗೆ ಇರಿಸಲಾದ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ ಎಂಬುದನ್ನು ಕಂಪನಿ ಟೀಸರ್‌ಗಳು ಸೂಚಿಸುತ್ತವೆ. ಈ ಫೋನಿನ ಫೀಚರ್ಸ್, ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳು ಇನ್ನೂ ಗೌಪ್ಯವಾಗಿದ್ದರೂ, ಹೆಚ್ಚಿನ ಮಾಹಿತಿಯನ್ನು ಯಾವಾಗ ಸಾರ್ವಜನಿಕಗೊಳಿಸಲಾಗುತ್ತದೆ ಎಂಬುದರ ಕುರಿತು ಕಂಪನಿಯು ಟೈಮ್‌ಲೈನ್ ಅನ್ನು ಬಹಿರಂಗಪಡಿಸಿದೆ.

ನವೆಂಬರ್ 28 ರಂದು, ಕಂಪನಿಯು ಫೋನ್‌ನ Redmi 15C 5G ವಿನ್ಯಾಸವನ್ನು ಬಹಿರಂಗಪಡಿಸುತ್ತದೆ. ನಂತರ, Redmi 15C 5G ಯ ​​ಬ್ಯಾಟರಿ ಸಾಮರ್ಥ್ಯ ಮತ್ತು ಡಿಸ್‌ಪ್ಲೇ ವೈಶಿಷ್ಟ್ಯಗಳನ್ನು ಕ್ರಮವಾಗಿ ನವೆಂಬರ್ 29 ಮತ್ತು ನವೆಂಬರ್ 30 ರಂದು ಅನಾವರಣಗೊಳಿಸಲಾಗುತ್ತದೆ. ನಂತರ, ಡಿಸೆಂಬರ್ 1 ಮತ್ತು ಡಿಸೆಂಬರ್ 2 ರಂದು ಮಲ್ಟಿಟಾಸ್ಕಿಂಗ್ ಸಾಮರ್ಥ್ಯ ಹಾಗೂ "ಕೋರ್ ಮೆಮರೀಸ್" ವೈಶಿಷ್ಟ್ಯಗಳು ಪ್ರಕಟವಾಗಲಿವೆ. ಬಹುಶಃ ಅದು RAM ಮತ್ತು ಶೇಖರಣಾ ಸಾಮರ್ಥ್ಯ ಅಥವಾ ಕ್ಯಾಮೆರಾ ಕಾನ್ಫಿಗರೇಶನ್ ಆಗಿರಬಹುದು. ಇನ್ನು ಸಾಮಾನ್ಯವಾಗಿ ಬಿಡುಗಡೆಯ ದಿನ ಬೆಲೆ ಮಾಹಿತಿಯು ಹೊರಬೀಳಲಿದೆ.

ಭಾರತದಲ್ಲಿ Redmi 15C 5G ಲಾಂಚ್ ಡೇಟ್ ಫಿಕ್ಸ್: ಬೆಲೆ ₹12,499 ಮಾತ್ರ?!

Redmi 15C 5G : ನಿರೀಕ್ಷಿತ ವೈಶಿಷ್ಟ್ಯಗಳು
ಇತ್ತೀಚೆಗಷ್ಟೇ Redmi 15C 5G ಪೋನಿನ ಭಾರತದಲ್ಲಿನ ಬೆಲೆ ಫೀಚರ್ಸ್‌ಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಜನಪ್ರಿಯ ಟಿಪ್‌ಸ್ಟಾರ್‌ಗಳು ಸೋರಿಕೆ ಮಾಡಿರುವಂತೆ, Redmi 15C 5G ಭಾರತದಲ್ಲಿ ಮೂರು ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. 4GB RAM + 128GB ಸ್ಟೋರೇಜ್ ಮಾದರಿಯ ಬೆಲೆ ₹12,499 ಎಂದು ಅಂದಾಜಿಸಲಾಗಿದೆ. 6GB RAM + 128GB ಆವೃತ್ತಿಯು ₹13,999, ಹಾಗು 8GB RAM + 128GB ಮಾದರಿಯು ₹14,999 ದರಕ್ಕೆ ಬರುವ ಸಾಧ್ಯತೆ ಇದೆ.

ಪ್ರಮುಖ ವೈಶಿಷ್ಟ್ಯಗಳಲ್ಲಿ, Redmi 15C 5G ಪೋನಿನಲ್ಲಿ 6.9 ಇಂಚಿನ LCD ಡಿಸ್ಪ್ಲೇ, HD+ ರೆಸಲ್ಯೂಷನ್ ಮತ್ತು 120Hz ರಿಫ್ರೆಶ್ ರೇಟ್ ಇರಬಹುದು. ಫೋನ್‌ MediaTek Dimensity 6300 ಚಿಪ್‌ಸೆಟ್ ಚಾಲಿತವಾಗಿರಲಿದೆ ಎಂದು ವರದಿಯಾಗಿದೆ. ಗರಿಷ್ಠ 8GB LPDDR4x RAM ಮತ್ತು 128GB UFS 2.2 ಸ್ಟೋರೇಜ್ ಇರಬಹುದು.ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್‌ Android 15 ಆಧಾರಿತ HyperOS 2 ಮೇಲೆ ಕಾರ್ಯನಿರ್ವಹಿಸಬಹುದು. ಹಾಗೂ 6,000mAh ಬ್ಯಾಟರಿ ಇರಲಿದೆ ಎನ್ನಲಾಗಿದೆ.

Redmi 15C 5G ಫೋನ್‌ನ ಅಧಿಕೃತ ವೈಶಿಷ್ಟ್ಯಗಳು ಮತ್ತು ಬೆಲೆಯ ಕುರಿತು ಕಂಪನಿ ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳನ್ನು ಪ್ರಕಟಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ಕನ್ನಡ ಗಿಜ್‌ಬಾಟ್ ಅನ್ನು ಫಾಲೊ ಮಾಡುತ್ತಿರಿ.

Best Mobiles in India

English summary
Redmi, in its latest official social media announcement, has confirmed that the Redmi 15C 5G will officially launch on December 3. The company’s teaser posts reveal that the upcoming smartphone will sport a dual rear camera setup, neatly arranged within a rectangular camera module.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+