Subscribe to Gizbot

ಇಂದು ''ಶಿಯೋಮಿ ರೆಡ್‌ ಮಿ 5'' ಮೊದಲ ಸೇಲ್ ಆರಂಭ!!..ಖರೀದಿಸಲು ಭಾರೀ ಕೊಡುಗೆಗಳು!!

Written By:

ಕಳೆದ ವರ್ಷ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಶಿಯೋಮಿ ಕಂಪೆನಿಯ ಬಜೆಟ್ ಸ್ಮಾರ್ಟ್‌ಫೋನ್ ''ಶಿಯೋಮಿ ರೆಡ್‌ಮಿ 4' ಮುಂದಿನ ಸರಣಿ ಸ್ಮಾರ್ಟ್‌ಫೋನ್ ಇದೀಗ ಭಾರತೀಯರನ್ನು ಗೆಲ್ಲಲು ಬರುತ್ತಿದೆ.! ಶಿಯೋಮಿ ಕಂಪೆನಿಯ ಭಾರೀ ನಿರೀಕ್ಷಿತ ಸ್ಮಾರ್ಟ್‌ಫೋನ್ ಶಿಯೋಮಿ ರೆಡ್‌ ಮಿ 5 ಮೊದಲ ಸೇಲ್ ನಾಳೆಯಿಂದ ಆರಂಭವಾಗಲಿದೆ.!!

ಹೌದು, ಕಳೆದ ವರ್ಷ ಮಾರ್ಚ್ 20 ರಂದು ಶಿಯೋಮಿ ರೆಡ್‌ಮಿ 4 ಮಾರಾಟಕ್ಕಿಟ್ಟಿದ್ದ ಶೀಯೋಮಿ ಕಂಪೆನಿ ಈ ವರ್ಷ ಅದೇ ದಿನದಂದು 'ಶಿಯೋಮಿ ರೆಡ್‌ ಮಿ 5' ಮೊದಲ ಸೇಲ್ ಅನ್ನು ಆಯೋಜಿಸಿ ಆಶ್ಚರ್ಯ ಮೂಡಿಸಿದೆ! ರೆಡ್‌ ಮಿ 5 ಸ್ಮಾರ್ಟ್‌ಫೋನ್ ಬೆಲೆ 7,999 ರೂಪಾಯಿಗಳಿಂದ ಶುರುವಾಗಿರುವುದರಿಂದ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ತಯಾರಾಗಿದೆ.!!

ಇಂದು ''ಶಿಯೋಮಿ ರೆಡ್‌ ಮಿ 5'' ಮೊದಲ ಸೇಲ್ ಆರಂಭ!!

ಈಗಾಗಲೇ ರೆಡ್‌ಮಿ ನೋಟ್ 5 ಯಶಸ್ಸಿನಲ್ಲಿ ತೇಲಾಡುತ್ತಿರುವ ಶಿಯೋಮಿ ಇದೀಗ ರೆಡ್‌ ಮಿ 5 ಸ್ಮಾರ್ಟ್‌ಫೋನಿನ ಮಾರಾಟಕ್ಕೆಜಿಯೋ ಜೊತೆ ಸೇರಿ ಭಾರೀ ಕೊಡುಗೆ ನೀಡಿ ಗಮನಸೆಳೆದಿದೆ.! ಹಾಗಾದರೆ, ಶಿಯೋಮಿ ರೆಡ್‌ ಮಿ 5 ಸೇಲ್ ಆರಂಭ ಯಾವಾಗ? ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಯಾವ ಯಾವ ವೆರಿಯಂಟ್ ಫೋನ್ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾಳೆ 12 ಗಂಟೆಗೆ ಸೇಲ್!!

ನಾಳೆ 12 ಗಂಟೆಗೆ ಸೇಲ್!!

ಮಾರ್ಚ್ 20 ರಂದು ಅಂದರೆ ನಾಳೆ 12 ಗಂಟೆಗೆ ಅಮೆಜಾನ್ ಏಕ್ಸ್‌ಕ್ಲೂಸಿವ್ ಸೇಲ್‌ನಲ್ಲಿ ಶಿಯೋಮಿ ರೆಡ್‌ 5 ಸ್ಮಾರ್ಟ್‌ಫೋನ್ ಮಾರಾಟಕ್ಕಿದೆ. ಭಾರತದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೇಲ್‌ಗೆ ಬರುತ್ತಿರುವ ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಪೋನ್ ಮಿ.ಕಾಮ್ ಮತ್ತು ಮಿ ಸ್ಟೋರ್‌ಗಳಲ್ಲಿಯೂ ಕಾಣಿಸಿಕೊಳ್ಳಲಿದೆ.

 ಜಿಯೋ ಕ್ಯಾಷ್ ಬ್ಯಾಕ್!!

ಜಿಯೋ ಕ್ಯಾಷ್ ಬ್ಯಾಕ್!!

ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಘೋಷಣೆ ಮಾಡುತ್ತಿರುವ ಜಿಯೋ ಶಿಯೋಮಿ ರೆಡ್‌ 5 ಸ್ಮಾರ್ಟ್‌ಫೋನ್‌ ಮೇಲೆಯೂ ಕ್ಯಾಷ್ ಬ್ಯಾಕ್ ಘೋಷಸಿದೆ. ಈ ರೆಡ್‌ಮಿ 5 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಜಿಯೋ ರೂ.2200 ಇನ್‌ಸ್ಟೆಂಟ್ ಕ್ಯಾಷ್ ಬ್ಯಾಕ್ ಸಿಗಲಿದೆ.!!

ಅಮೆಜಾನ್ ಆಫರ್!!

ಅಮೆಜಾನ್ ಆಫರ್!!

ಅಮೆಜಾನ್‌ನಲ್ಲಿ ಎಕ್ಸಕ್ಲೂಸಿವ್ ಆಗಿ ಮಾರಾಟವಾಗುವ ರೆಡ್‌ಮಿ 5 ಸ್ಮಾರ್ಟ್‌ಫೋನ್ ಖರೀದಿಸುವವರಿಗಾಗಿ ಅಮೆಜಾನ್ ಕಂಪೆನಿ ಬೆಸ್ಟ್ ಆಫರ್ ಒಂದನ್ನು ನೀಡಿದೆ. ರೆಡ್‌ಮಿ 5 ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಕಿಂಡಲ್ ಇ ಬುಕ್ ಅನ್ನು ಶೇ.90% ಕಡಿಮೆ ಬೆಲೆಗೆ ನೀಡಲಾಗುವುದು ಎಂದು ಅಮೆಜಾನ್ ತಿಳಿಸಿದೆ.!!

SBI ಕ್ಯಾಷ್ ಬ್ಯಾಕ್!!

SBI ಕ್ಯಾಷ್ ಬ್ಯಾಕ್!!

ರೆಡ್‌ಮಿ 5 ಸ್ಮಾರ್ಟ್‌ಫೋನ್ ಖರೀದಿಗೆ ಎಸ್‌ಬಿಐ ಕಾರ್ಡುದಾರರು ಶೇ.5 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ. SBI ಬ್ಯಾಂಕಿನ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಕೆದಾರರಿಗೆಲ್ಲರಿಗೂ ಈ ಆಫರ್ ಲಭ್ಯವಿದೆ. ಇನ್ನು ಸ್ಮಾರ್ಟ್‌ಫೋನ್ ಮೇಲೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಇಎಮ್ಐ ಆಫರ್ ಅನ್ನು ಸಹ ಎಸ್‌ಬಿಐ ನೀಡಿದೆ.!!

ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು?

ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು?

18:9 ಅನುಪಾತದ 5.7ಇಂಚ್ ಡಿಸ್‌ಪ್ಲೇ, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 450 ಆಕ್ಟಕೋರ್ ಪ್ರೊಸೆಸರ್, ಆಂಡ್ರಾಯ್ಡ್ 7.1.2ನೌಗಾಟ್, 12MP ಮತ್ತು 5MP ಕ್ಯಾಮೆರಾ ಮತ್ತು 3300mAh ಬ್ಯಾಟರಿ ಶಕ್ತಿಯ ವಿಶೇಷತೆಗಳನ್ನು ಹೊಂದಿರುವ ರೆಡ್‌ಮಿ 5 ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಹೊಂದಿರಬಹುದಾದ ಫೀಚರ್ಸ್‌ಗಳನ್ನು ಹೊಂದಿದೆ.!!

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಮೂರು ಆವೃತ್ತಿಯಲ್ಲಿ ರೆಡ್‌ಮಿ 5!!

ಮೂರು ಆವೃತ್ತಿಯಲ್ಲಿ ರೆಡ್‌ಮಿ 5!!

ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನ್ ಒಟ್ಟು ಮೂರು ಆವೃತ್ತಿಯಲ್ಲಿ ಖರೀದಿಸಲು ಲಭ್ಯವಿದೆ. 2GB RAM ಮತ್ತು 16GB ಮೆಮೊರಿಯ ಸ್ಮಾರ್ಟ್‌ಫೋನ್ ರೂ.7,999, 3GB RAM ಮತ್ತು 32GB ಇಂಟರ್ನಲ್ ಮೊಮೆರಿಯ ಫೋನ್ ರೂ.8999 ಹಾಗೂ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಫೋನ್ ರೂ.10,999 ರೂ. ಬೆಲೆಯನ್ನು ಹೊಂದಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Redmi 5 is on Surprise Open Sale: Check out the details, Price in India, Specifications, Features. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot