ಕೇವಲ 10 ಸಾವಿರಕ್ಕೆ 'ಐಫೋನ್ ಎಕ್ಸ್' ವಿನ್ಯಾಸದ ಶಿಯೋಮಿ 'ರೆಡ್‌ ಮಿ 6 ಪ್ರೊ' ಏಕಾಏಕಿ ಲಾಂಚ್!

|

ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಯಶಸ್ಸಿನಲ್ಲಿ ತೇಲುತ್ತಿರುವ ಶಿಯೋಮಿ ಮೊಬೈಲ್ ಕಂಪೆನಿ ಏಕಾಏಕಿ ಶಿಯೋಮಿ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ರೆಡ್‌ ಮಿ 5 ಪ್ರೊ ಫೋನ್ ಹೊಂದಿರುವ ಬಹುತೇಕ ಫೀಚರ್ಸ್‌ಗಳನ್ನು 'ರೆಡ್‌ ಮಿ 6 ಪ್ರೊ' ಫೋನಿನಲ್ಲಿ ನೀಡಲಾಗಿದ್ದು, ಬೆಲೆ ಮಾತ್ರ ಅತ್ಯಂತ ಕಡಿಮೆ ಮಾಡಿ ಆಶ್ಚರ್ಯ ಮೂಡಿಸಿದೆ.

19:9 ಅನುಪಾತದಲ್ಲಿ 5.84-ಇಂಚಿನ ಡಿಸ್‌ಪ್ಲೇ, ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾಗಳು, ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 625 SoC ಪ್ರೊಸೆಸರ್ ನಂತರ ಫೀಚರ್ಸ್ ಜೊತೆಗೆ ಮೀಸಲಾದ ಮೈಕ್ರೊ ಕಾರ್ಡ್ ಸ್ಲಾಟ್ ಮತ್ತು AI ಫೇಸ್‌ ಅನ್ಲಾಕ್ ಫೀಚರ್ಸ್ ಅಂತಹ ಅತ್ಯುತ್ತಮ ವಿಶೇಷತೆಗಳನ್ನು ನೂತನ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಅಳವಡಿಲಾಗಿದೆ.

10 ಸಾವಿರಕ್ಕೆ 'ಐಫೋನ್ ಎಕ್ಸ್' ವಿನ್ಯಾಸದ ಶಿಯೋಮಿ 'ರೆಡ್‌ ಮಿ 6 ಪ್ರೊ' ಲಾಂಚ್!

'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ ಬೆಲೆ ಕೇವಲ 10 ಸಾವಿರ ರೂಪಾಯಿಗಳಿಂದ ಆರಂಭವಾಗಿದ್ದು, ನಾಳೆಯಿಂದಲೇ ಚೀನಾದಲ್ಲಿ ಮಾರಾಟಕ್ಕೆ ಬರಲಿದೆ. ಹಾಗಾದರೆ, ಚೀನಾದಲ್ಲಿ ಇಂದು ಬಿಡುಗಡೆಯಾಗಿ ವಿಶ್ವ ಮೊಬೈಲ್ ಮಾರುಕಟ್ಟೆಗೆ ಆಶ್ಚರ್ಯ ಮೂಡಿಸಿರುವ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ ಬಗೆಗಿನ ಪೂರ್ತಿ ವಿಶೇಷತೆಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

 ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

ಮೊದಲೇ ಹೇಳಿದಂತೆ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನ್ 19:9 ಅನುಪಾತದಲ್ಲಿ 5.84-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ.ಶೇಕಡಾ 84ರಷ್ಟು ಎನ್‌ಟಿಎಸ್‌ಸಿ ಬಣ್ಣದ ಗ್ಯಾಮಟ್‌ನೊಂದಿಗೆ 1080x2280 ಪಿಕ್ಸೆಲ್‌ ಸಾಮರ್ಥ್ಯದ ಡಿಸ್‌ಪ್ಲೇ ಗುಣಟ್ಟಕ್ಕೆ ಸಾಕ್ಷಿಯಾಗಿದೆ. 'ಆಪಲ್ ಎಕ್ಸ್' ವಿನ್ಯಾಸದ ನೋಚ್ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಮೊಬೈಲ್ ಅಂದವನ್ನು ಹೆಚ್ಚಿಸಿವೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಇಂದು ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ 'ರೆಡ್‌ ಮಿ 6 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 625 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ ಬೇಸ್ MIUI 9 ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ ಆಡ್ರೆನೊ 506 ಜಿಪಿಯು ಹಾಗೂ 3GB ಮತ್ತು 4GB RAM ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ರೆಡ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ ಹೊಂದಿದೆ. ಎಫ್ / 2.2 ಅಪರ್ಚರ್, ಪಿಡಿಎಎಫ್, ಎಲ್ಇಡಿ ಫ್ಲಾಶ್ ಫೀಚರ್ಸ್ ಜೊತೆಗೆ 5MP ಮತ್ತು 12 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಹಿಂಬಾಗದಲ್ಲಿವೆ. AI ತಂತ್ರಜ್ಞಾನವನ್ನು ಹೊಂದಿರುವ HDR ನೊಂದಿಗೆ 5-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್!

ಬ್ಯಾಟರಿ ಮತ್ತು ಇತರೆ ಫೀಚರ್ಸ್!

ಆಪಲ್ ನೋಟ್ ವಿನ್ಯಾಸವನ್ನು ಹೊಂದಿರುವ ರೆಡ್‌ ಮಿ 6 ಪ್ರೊ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಫೇಸ್‌ ಅನ್‌ಲಾಕ್ ಫೀಚರ್, 256GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಈ ಫೋನಿನಲ್ಲಿ 4 ಜಿ ವೋಲ್ಟ್, ವೈ-ಫೈ 802.11 ಡ್ಯುಯಲ್-ಬ್ಯಾಂಡ್ 2.4GHz, 5GHz), ಬ್ಲೂಟೂತ್ v4.2, ಜಿಪಿಎಸ್, ಮೈಕ್ರೋ-ಯುಎಸ್‌ಬಿ ಮತ್ತು 3.5 ಎಂಎಂ ಹೆಡ್‌ಫೀನ್ ಜ್ಯಾಕ್ ನೀಡಲಾಗಿದೆ.

ರೆಡ್‌ ಮಿ 6 ಪ್ರೊ ಬೆಲೆ ಮತ್ತು ಮಾರಾಟ!

ರೆಡ್‌ ಮಿ 6 ಪ್ರೊ ಬೆಲೆ ಮತ್ತು ಮಾರಾಟ!

4ಜಿಬಿ RAM ಮತ್ತು 64 ಜಿಬಿ ಮೆಮೊರಿ ವೆರಿಯಂಟ್ ರೂಪಾಂತರದ ರೆಡ್‌ ಮಿ 6 ಪ್ರೊ ಬೆಲೆ ಚೀನಾದಲ್ಲಿ 999 ಸಿಎನ್‌ವೈಗಳಾಗಿವೆ (ಸರಿಸುಮಾರು 13,600 ರೂ.). 3ಜಿಬಿ RAM ಮತ್ತು 32 ಜಿಬಿ ಮೆಮೊರಿ ವೆರಿಯಂಟ್ ರೂಪಾಂತರದ ರೆಡ್‌ ಮಿ 6 ಪ್ರೊ ಬೆಲೆ 1,299 ಸಿಎನ್‌ವೈಗಳಾಗಿವೆ (ಸರಿಸುಮಾರು 10,400 ರೂ.). ಬ್ಲಾಕ್, ಬ್ಲೂ, ಗೋಲ್ಡ್, ಪಿಂಕ್, ಮತ್ತು ಕೆಂಪು ಬಣ್ಣದಲ್ಲಿ ರೆಡ್‌ ಮಿ 6 ಪ್ರೊ ನಾಳೆಯಿಂದ ಚೀನಾದಲ್ಲಿ ಮಾರಾಟಕ್ಕಿದೆ.

ಈ ಒಂದು ವಿಚಿತ್ರ ಘಟನೆಯ ನಂತರ ಎಲ್ಲರೂ 'ಟ್ರೂ ಕಾಲರ್' ಆಪ್ ಡಿಲೀಟ್ ಮಾಡುತ್ತಿದ್ದಾರೆ!!

ಈ ಒಂದು ವಿಚಿತ್ರ ಘಟನೆಯ ನಂತರ ಎಲ್ಲರೂ 'ಟ್ರೂ ಕಾಲರ್' ಆಪ್ ಡಿಲೀಟ್ ಮಾಡುತ್ತಿದ್ದಾರೆ!!

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟ್ರೂ ಕಾಲರ್ ಆಪ್ ಬಳಸುತ್ತಿದ್ದರೆ ಈಗಲೇ ಡಿಲೀಟ್ ಮಾಡಿಬಿಡಿ. ಹೌದು, ಸ್ಮಾರ್ಟ್‌ಫೋನ್ ಬಳಸುತ್ತಿರುವ ಹೆಚ್ಚಿನವರಿಗೆ ಟ್ರೂ ಕಾಲರ್ ಆಪ್ ಹೆಚ್ಚು ಉಪಯೋಗ ಎಂದು ಅನಿಸಬಹುದು. ಆದರೆ, ಟ್ರೂ ಕಾಲರ್ ಆಪ್ ಬಳಕೆಯೇ ಸ್ಮಾರ್ಟ್‌ಪೋನ್ ಬಳಕೆದಾರರಿಗೆ ಹೆಚ್ಚು ತೊಂದರೆ ಎಂದರೆ ನೀವು ನಂಬಲೇಬೇಕು.!
ಇತ್ತೀಚಿಗೆ ಟ್ರೂಕಾಲರ್ ಮತ್ತು ಫೇಸ್‌ಬುಕ್ ನಂಬಿಕೊಂಡು ಕನ್ನಡ ನಿರ್ದೇಶಕನ ಮೇಲೆ ಹಲ್ಲೆ ನಡೆದಿರುವ ವಿಚಿತ್ರ ಘಟನೆಯೊಂದು ನಡೆದ ನಂತರ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಶಿವಕುಮಾರ್.ಎನ್ ಎಂಬುವರನ್ನು ಹುಡುಕಲು ಹೋಗಿ ಕನ್ನಡದ ಓರ್ವ ನಿರ್ದೇಶಕನ ಮೇಲೆ ಹಲ್ಲೆ ನಡೆದಿರುವ ವಿಚಿತ್ರ ಘಟನೆಗೆ ಬೆಂಗಳೂರು ನಗರವೇ ಸಾಕ್ಷಿ ಆಗಿದೆ.!

ಹಾಗಾಗಿ, ಇಂದಿನ ಲೇಖನದಲ್ಲಿ, ಟ್ರೂ ಕಾಲರ್ ಆಪ್ ಬಳಕೆ ಏಕೆ ಒಳ್ಳೆಯದಲ್ಲ? ಟ್ರೂಕಾಲರ್ ಮತ್ತು ಫೇಸ್‌ಬುಕ್ನಿಂದ ಬೆಂಗಳೂರಿನಲ್ಲಿ ನಡೆದ ವಿಚಿತ್ರ ಘಟನೆ ಏನು? ಟ್ರೂ ಕಾಲರ್ ಆಪ್ ಬಳಸಿದರೆ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಗಬುಹುದಾದ ತೊಂದರೆಗಳು ಏನೇನು? ಎಂಬೆಲ್ಲಾ ಮಾಹಿತಿಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ನಾವು ತಿಳಿಯೋಣ.

ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ!!

ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ!!

ಶಿವಕುಮಾರ್ ಎಂಬುವರನ್ನು ಹುಡುಕಿ ಎರಡು ಲಕ್ಷ ಸಾಲ ವಸೂಲಿ ಮಾಡುವಂತೆ ರಂಗನಾಥ್ ಎಂಬುವವರು ಇಬ್ಬರು ಹುಡುಗರಿಗೆ ಸೂಚಿಸಿದ್ದರು. ಹಾಗೇ ಅವರ ಫೋನ್ ನಂಬರ್ ಕೊಟ್ಟಿದ್ದರು. ರಂಗನಾಥ್ ಕೊಟ್ಟ ಫೋನ್ ನಂಬರ್ ನ ಟ್ರೂ ಕಾಲರ್ ಗೆ ಹಾಕಿದಾಗ, 'ಶಿವಕುಮಾರ್.ಎನ್.ಎಸ್' ಎಂಬ ಹೆಸರು ಬಂದಿದೆ. ಅದೇ ಹೆಸರನ್ನ ಫೇಸ್‌ಬುಕ್ ನಲ್ಲಿ ಹುಡುಕಿದಾಗ ಆ ಇಬ್ಬರು ಹುಡುಗರಿಗೆ ಕಾಣಿಸಿದ್ದು ಕನ್ನಡ ನಿರ್ದೇಶಕ ಶಿವಕುಮಾರ್.ಎನ್.ಎಸ್ ರವರ ಫೋಟೋ.! ಹೀಗಾಗಿ, ಹಿಂದು ಮುಂದು ನೋಡದೆ, ಹೊಟ್ಟೆ ತುಂಬ ಎಣ್ಣೆ ಇಳಿಸಿ ಶಿವಕುಮಾರ್.ಎನ್.ಎಸ್ ಮೇಲೆ ಹಲ್ಲೆ ನಡೆಸಿದ್ದಾರೆ.!

ಎಲ್ಲರನ್ನು ದಡ್ಡರನ್ನಾಗಿಸುತ್ತಿದೆ ಟ್ರೂ ಕಾಲರ್.!

ಎಲ್ಲರನ್ನು ದಡ್ಡರನ್ನಾಗಿಸುತ್ತಿದೆ ಟ್ರೂ ಕಾಲರ್.!

ನಿಮ್ಮ ಅತ್ಯಂತ ವ್ಯಕ್ತಿಗತವಾಗಿರುವ ಫೋನ್‌ಗೆ ಅಪರಿಚಿತರ ಕರೆ ಬರುವುದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎನ್ನುತ್ತಎಲ್ಲರನ್ನು ದಡ್ಡರನ್ನಾಗಿಸುತ್ತಿದೆ ಟ್ರೂ ಕಾಲರ್. ಇನ್ನು ಈ ಆಪ್‌ ಬಗ್ಗೆ ಸರಿಯಾಗಿ ತಿಳಿಯದ ಬಳಕೆದಾರರ ಸಂಖ್ಯೆಯೂ ಕೂಡ ಹೆಚ್ಚಿದೆ.!

ಟ್ರೂ ಕಾಲರ್ ಆಪ್ ಕಾರ್ಯವೇ ಸರಿಯಾಗಿಲ್ಲ.!

ಟ್ರೂ ಕಾಲರ್ ಆಪ್ ಕಾರ್ಯವೇ ಸರಿಯಾಗಿಲ್ಲ.!

ನಿಜವಾಗಿಯೂ ಟ್ರೂ ಕಾಲರ್ ಆಪ್ ಸರಿಯಾಗಿ ಕಾರ್ಯನಿರ್ವಹಣೆ ನೀಡುವುದಿಲ್ಲ. ಕೆಲವೊಂದು ಸರಿಯಾದ ಕಾಂಟಾಕ್ಟ್ಸ್ ಹೆಸರನ್ನು ತೋರಿಸಿದರೆ, ಹಲವು ಬಾರಿ ತಪ್ಪು ತಪ್ಪು ಮಾಹಿತಿಯನ್ನೇ ನೀಡುತ್ತದೆ. ಯಾವ ಟ್ರೂ ಕಾಲರ್ ಬಳಕೆದಾರನು ಸರಿಯಾದ ಮಾಹಿತಿ ಪಡೆಯಲು ಅಸಾಧ್ಯ.!

ನಿಮ್ಮ ಕಾಂಟ್ಯಾಕ್ಟ್ ಬಾಚಿಕೊಳ್ಳುತ್ತಿದೆ ಟ್ರೂ ಕಾಲರ್!

ನಿಮ್ಮ ಕಾಂಟ್ಯಾಕ್ಟ್ ಬಾಚಿಕೊಳ್ಳುತ್ತಿದೆ ಟ್ರೂ ಕಾಲರ್!

ಟ್ರೂ ಕಾಲರ್ ಆಪ್ ಇನ್‌ಸ್ಟಾಲ್ ಮಾಡಿದ ನಮ್ಮ ಮೊಬೈಲ್‌ನಲ್ಲಿ ಸಂಗ್ರಹವಾಗಿರುವ ಸಂಪರ್ಕ ಸಂಖ್ಯೆಗಳ (ಕಾಂಟಾಕ್ಟ್ಸ್) ಒಳಪ್ರವೇಶಿಸಿಬಿಡುತ್ತದೆ ಮತ್ತು ಯಾವೆಲ್ಲಾ ಸಂಖ್ಯೆಗಳಿವೆಯೋ, ಅವನ್ನೆಲ್ಲಾ ಅನಾಮತ್ತಾಗಿ ಎತ್ತಿಕೊಂಡು, ತನ್ನ ಮೆಮೊರಿಗೆ ಅವುಗಳನ್ನು ಕಾಪಿ ಮಾಡಿಕೊಂಡುಬಿಟ್ಟಿರುತ್ತದೆ.!

ಪ್ರೈವೆಸಿಗೆ ಅರ್ಥವೇ ಇಲ್ಲಾ!

ಪ್ರೈವೆಸಿಗೆ ಅರ್ಥವೇ ಇಲ್ಲಾ!

ಯಾರು ಬೇಕಾದರೂ ಟ್ರೂಕಾಲರ್ ಡೇಟಾಬೇಸ್‌ಗೆ ನಿಮ್ಮ ಸಂಖ್ಯೆ, ಹೆಸರನ್ನು ಸೇರಿಸಬಹುದಾಗಿದೆ. ಮತ್ತು ಯಾರು ಸೇರಿಸದಿದ್ದರೂ ಟ್ರೂಕಾಲರ್ ನಿಮ್ಮ ಮಾಹಿತಿಯನ್ನು ನಿಮ್ಮ ಪರ್ಮಿಷನ್ ಇಲ್ಲದೆಯೇ ಸೇರಿಸಿಕೊಳ್ಳುತ್ತದೆ.!ಇನ್ನು ನಿಮ್ಮ ನಂಬರ್ ಟ್ರೂಕಾಲರ್‌ನಿಂದ ತೆರೆಯಲು ನೀವೆ ಆಪ್‌ ಡೌನ್‌ಲೋಡ್ ಮಾಡಿ ಸೆಟ್ಟಿಂಗ್ಸ್ ಮಾಡಿಕೊಳ್ಳಬೇಕಾಗುತ್ತದೆ. ಹೇಗಿದೆ ನೋಡಿ!!

ಯುನೈಟೆಡ್ ಕಿಂಗ್‌ಡಂನಲ್ಲಿ ನಿಷೇಧ

ಯುನೈಟೆಡ್ ಕಿಂಗ್‌ಡಂನಲ್ಲಿ ನಿಷೇಧ

ಟ್ರೂಕಾಲರ್‌ನಲ್ಲಿ ನಮ್ಮ ಹೆಸರನ್ನು ಸೇರಿಸಿಕೊಳ್ಳದಂತೆ ಮಾಡುವುದು ನಮ್ಮ ಕೈಯಲ್ಲಿರುವುದಿಲ್ಲವಾದುದರಿಂದ, ಪ್ರೈವೆಸಿಗೆ ಧಕ್ಕೆ ಎಂಬ ಕಾರಣಕ್ಕೆ ಟ್ರೂ ಕಾಲರ್ ಅನ್ನು ಯುನೈಟೆಡ್ ಕಿಂಗ್‌ಡಂನಲ್ಲಿ ನಿಷೇಧ ಮಾಡಲಾಗಿತ್ತು. ಆದರೆ, ಇಂಡಿಯಾದಲ್ಲಿ ಇದಿನ್ನು ಚೆನ್ನಾಗಿಯೇ ಬೆಳೆಯುತ್ತಿದೆ.!

ಸುಮ್ನೆ ಮತ್ತೊಂದು ಒಂದು ಉದಾಹರಣೆ

ಸುಮ್ನೆ ಮತ್ತೊಂದು ಒಂದು ಉದಾಹರಣೆ

ಟಿಫಿನ್ ಮಾಡ್ತಾ ಇದ್ದೆ..
ಪಕ್ಕದಲ್ಲೇ ಫೋನ್ ಕೂಡ ಇತ್ತು.
ಫೋನ್ ರಿಂಗಾಯ್ತು,
ಪೂಜಾ ಅಂತ ಟ್ರೂ ಕಾಲರ್ ಹೇಳ್ತಾ ಇತ್ತು.
ಪಟ್ಟನೆ ರಿಸೀವ್ ಮಾಡ್ದೆ,
"ನಾನು ದತ್ತು ಮಾವ ಮಾತಾಡೋದು" ಅಂತು ಆ ಕಡೆ ಪಾರ್ಟಿ..ಇದೇನಪ್ಪ ಹೊಸ ಮಾವ ಹುಟ್ಕಂಡ ಅಂತ ಅಂದ್ಕೊಂಡು,ಹೇಳಿ ಅಂದೆ..
ನಿನ್ನತ್ತೆಗೆ ನೀನು ಕೊಟ್ಟಿದ್ದ ಕೊಲೆಸ್ಟರಾಲ್ ಚೀಟಿ ಕಳೆದು ಹೋಗಿದೆ,ಬೇರೆ ಕೊಡೊಕಾಗತ್ತಾ ಅಂತ ಕೇಳಿದ್ರು.
wrong number ಅಂತ ಕಟ್ ಮಾಡ್ದೆ..
ಟ್ರೂ ಕಾಲರ್ ಕೂಡ ಸುಳ್ಳು ಹೇಳ್ತು ಮುಂಡೇದು!!

Best Mobiles in India

English summary
Redmi 6 Pro With 4000mAh Battery, 19:9 Display, Dual Rear Cameras Launched: Price, Specifications . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X