ಬಜೆಟ್ ಬೆಲೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಶಿಯೋಮಿ..! ರೆಡ್‌ಮಿ 6 ಬೆಲೆ ಕೇಳಿದ್ರೆ ಬುಕಿಂಗ್ ಪಕ್ಕಾ..!
ಭಾರತೀಯ ಮಾರುಕಟ್ಟೆಗೆ ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳನ್ನು ಶಿಯೋಮಿ ಲಾಂಚ್ ಮಾಡಿದ್ದು, ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ರೆಡ್‌ಮಿ 6A, ರೆಡ್‌ಮಿ 6 ಮತ್ತು ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ. ಒಂದೇ ಬಾರಿಗೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಾಗಿದೆ. ಬೆಲೆಯ ವಿಚಾರ ಸೇರಿದಂತೆ ಸಾಕಷ್ಟು ವಿಭಾಗದಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯೂ ಮುಂದಿದೆ.

ಈ ಸ್ಮಾರ್ಟ್‌ಫೋನ್‌ಗಳು ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದೆ ಎನ್ನಲಾಗಿದೆ. ಮೊದಲಿಗೆ ರೆಡ್‌ಮಿ 6A ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ. ಬಜೆಟ್ ಬೆಲೆಯಲ್ಲಿ ದೊರೆಯಲಿರುವ ರೆಡ್‌ಮಿ 6A ಸ್ಮಾರ್ಟ್‌ಫೋನ್, ಈ ಹಿಂದೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ರೆಡ್‌ಮಿ 5A ಸ್ಮಾರ್ಟ್‌ಫೋನಿನ ಮುಂದುವರೆದ ಆವೃತ್ತಿಯಾಗಿದೆ. ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗಿತಂತ ಇದು ಬೆಸ್ಟ್ ಎನ್ನಬಹುದಾಗಿದೆ.

5.45 ಇಂಚಿನ HD+ ಡಿಸ್‌ಪ್ಲೇ:
ರೆಡ್‌ಮಿ 6A ಸ್ಮಾರ್ಟ್‌ಫೋನಿನಲ್ಲಿ 18:9 ಅನುಪಾತದ 5.45 ಇಂಚಿನ HD+ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು ಹಿಂದಿನ ಸ್ಮಾರ್ಟ್‌ಫೋನ್‌ಗಿಂತಲೂ ಡಿಸ್‌ಪ್ಲೇ ದೊಡ್ಡದಾಗಿದೆ ಎನ್ನಬಹುದಾಗಿದೆ. ಇದು ಪುಲ್ ಸ್ಕ್ರಿನ್ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ.

ಪ್ರೋಸೆಸರ್;
ಇದೇ ಮೊದಲ ಬಾರಿಗೆ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಬಿಟ್ಟು ಹೆಲಿಯೊ A22 ಪ್ರೋಸೆಸರ್ ಅನ್ನು ರೆಡ್‌ಮಿ 6A ಸ್ಮಾರ್ಟ್‌ಫೋನಿನ್ಲಲಿ ಅಳವಡಿಸಲು ಮುಂದಾಗಿದೆ. ಕ್ವಾಡ್ ಕೋರ್ ಪ್ರೋಸೆಸರ್ ಇದಾಗಿದೆ. ಇದು 2.0 GHz ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಕ್ಯಾಮೆರಾ:
ರೆಡ್‌ಮಿ 6A ಸ್ಮಾರ್ಟ್‌ಫೋನಿನಲ್ಲಿ 13 MP ಹಿಂಬದಿಯ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ AI ಫೇಸ್ ಲಾಕ್ ಅನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳಲು AI ಪೋಟ್ರೆಟ್ ಅನ್ನು ಕ್ಲಿಕ್ ಮಾಡಬಹುದಾಗಿದೆ.

ಆಂಡ್ರಾಯ್ಡ್ ಒರಿಯೋ:
ರೆಡ್‌ಮಿ 6A ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ MIUI 9.6 ಅನ್ನು ನೋಡಬಹುದಾಗಿದೆ. ಅಲ್ಲದೇ 3000mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ ಡ್ಯುಯಲ್ VoLTE ಸಪೋರ್ಟ್ ಮಾಡಲಿದೆ. ಅಲ್ಲದೇ ಇದರಲ್ಲಿ ಎರಡು ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವು ಇದೆ.

ನಾಲ್ಕು ಬಣ್ಣ:
ಒಟ್ಟು ನಾಲ್ಕು ಬಣ್ಣದಲ್ಲಿ ರೆಡ್‌ಮಿ 6A ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಬ್ಲಾಕ್, ಗೊಲ್ಡ್, ರೋಸ್ ಗೋಲ್ಡ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದೆ. ಆದರೆ ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಿಲ್ಲ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

ಬೆಲೆ:
ರೆಡ್‌ಮಿ 6A ಸ್ಮಾರ್ಟ್‌ಫೋನ್ ಎರಡು ಮಾದರಿಯಲ್ಲಿ ಕಾಣಿಸಿಕೊಂಡಿದೆ. 2GB RAM ಮತ್ತು 16 GB ಇಂಟರ್ನಲ್ ಮೆಮೊರಿಯ ಆವೃತ್ತಿ ರೂ.5999ಕ್ಕೆ ಮಾರಾಟವಾಗಲಿದೆ. 2GB RAM ಮತ್ತು 32 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.6999ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿ ಲಾಂಚ್ ಆಗಲಿದೆ. ಮಿ.ಕಾಮ್ ಮತ್ತು ಅಮೆಜಾನ್ ನಲ್ಲಿ ಸೆಪ್ಟೆಂಬರ್ 19 ರಂದು ಮಧ್ಯಾಹ್ನ 12ಕ್ಕೆ ಫಸ್ಟ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.


Click it and Unblock the Notifications








