ಶಿಯೋಮಿ 'ರೆಡ್‌ಮಿ 7ಎ' ಫೋನಿನ ಮೊಟ್ಟ ಮೊದಲ ಸೇಲ್ ಇಂದಿನಿಂದ ಆರಂಭ!
ಭಾರತಕ್ಕೆ ಇತ್ತೀಚಿಗಷ್ಟೇ ಕಾಲಿಟ್ಟ ಶಿಯೋಮಿ 'ರೆಡ್‌ಮಿ 7ಎ' ಸ್ಮಾರ್ಟ್‌ಫೋನಿನ ಮೊದಲ ಸೇಲ್ ಇಂದಿನಿಂದ ಆರಂಭವಾಗುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್, ಮಿ.ಕಾಮ್ ಮತ್ತು ಮಿ ಹೋಮ್ ಮಳಿಗೆಗಳ ಮೂಲಕ ಸ್ಮಾರ್ಟ್‌ಫೋನ್ ಫ್ಲಾಶ್‌ಸೇಲ್ ಖರೀದಿಗೆ ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಆಫ್‌ಲೈನ್ ಮಳಿಗೆಗಳಲಲ್ಲೂ ಕೂಡ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ ಎಂದು ಶಿಯೋಮಿ ಕಂಪೆನಿ ಖಚಿತಪಡಿಸಿದೆ.

ದೇಶದಲ್ಲಿ ರೆಡ್‌ಮಿ 7ಎ' ಸ್ಮಾರ್ಟ್‌ಫೋನ 2 ಜಿಬಿ RAM + 16 ಜಿಬಿ ಸ್ಟೋರೇಜ್ ಸಾಮರ್ಥ್ಯದ ರೆಡ್‌ಮಿ ಆರಂಭಿಕ ಪೋನ್ ಬೆಲೆ 5,999 ರೂ.ಗೆ ನಿಗದಿಯಾಗಿದರೆ, 2GB + 32GB ಸ್ಟೋರೇಜ್ ಆವೃತ್ತಿಯ ಫೋನ್ ಬೆಲೆಯು 6,199.ರೂಪಾಯಿಗಳಿಗೆ ನಿಗದಿಯಾಗಿದೆ. ಇನ್ನು ಪರಿಚಯಾತ್ಮಕ ಪ್ರಸ್ತಾಪವಾಗಿ, ದೇಶದಲ್ಲಿ ಈ ಎರಡೂ ರೆಡ್‌ಮಿ 7A ರೂಪಾಂತರಗಳಿಗೆ ಶಿಯೋಮಿ ಜುಲೈ ಪೂರ್ತಿ 200 ರೂ. ರಿಯಾಯಿತಿ ನೀಡಿ ಗಮನಸೆಳೆದಿದೆ.
ಚೀನಾದಲ್ಲಿ ಮೇ ತಿಂಗಳಿನಲ್ಲಿಯೇ ಲಾಂಚ್ ಮಾಡಲಾಗಿದ್ದ ಮೂಲ ಮಾದರಿಯಲ್ಲೇ ಭಾರತದಲ್ಲಿ ಶಿಯೋಮಿ 'ರೆಡ್‌ಮಿ 7A' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಈ ಸ್ಮಾರ್ಟ್‌ಫೋನ್ ಮ್ಯಾಟ್ ಬ್ಲ್ಯಾಕ್, ಮ್ಯಾಟ್ ಬ್ಲೂ ಮತ್ತು ಮ್ಯಾಟ್ ಗೋಲ್ಡ್ ಕಲರ್‌ನ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಹಾಗಾದರೆ, ಭಾರತದಲ್ಲಿ ಇಂದು ಮಾರಾಟಕ್ಕೆ ಬರುತ್ತಿರುವ ಶಿಯೋಮಿ 'ರೆಡ್‌ಮಿ 7A' ಸ್ಮಾರ್ಟ್‌ಫೋನ್ ಹೇಗಿದೆ?, ಈ ಫೋನಿನ ಫೀಚರ್ಸ್ ಯಾವುವು? ಖರೀದಿಗೆ ಯೋಗ್ಯವೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ರೆಡ್‌ಮಿ 7A' ವಿನ್ಯಾಸ!
ಶಿಯೋಮಿಯ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ 'ರೆಡ್‌ಮಿ 7A' ಕೂಡ ಒಂದಾಗಿರುವುದರಿಂದ ಈ ಫೋನಿನ ವಿನ್ಯಾಸ ಸಾಮಾನ್ಯವಾಗಿದೆ. ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರದ ಈ ಫೋನಿನಲ್ಲಿ ಒಂದೇ ರಿಯರ್ ಕ್ಯಾಮೆರಾವಿರುವುದನ್ನು ನೋಡಬಹುದು. ಇನ್ನು ನೀವು ಡಿಸ್‌ಪ್ಲೇ ನೋಚ್ ಪ್ರಿಯರಾಗಿದ್ದರೆ ನಿಮಗೆ ಈ ಫೋನ್ ಹಳೆಯದಂತೆ ಕಾಣಬಹುದು.

'ರೆಡ್‌ಮಿ 7A' ಡಿಸ್‌ಪ್ಲೇ
ಕಡಿಮೆ ಬಜೆಟ್ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್ ನೋಡುತ್ತಿದ್ದರೆ 'ರೆಡ್‌ಮಿ 7A' ಪೋನ್ ಖರೀದಿಗೆ ಇದರ ಡಿಸ್‌ಪ್ಲೇ ಕಾರಣವಾಗಬಹುದು. ಏಕೆಂದರೆ, ರೆಡ್‌ಮಿ 7A' ಸ್ಮಾರ್ಟ್‌ಫೋನ್ 5.45-ಇಂಚಿನ ಎಚ್‌ಡಿ + (720x1440 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ಹೊಂದಿದೆ. 18: 9 ಆಕಾರ ಅನುಪಾತ ಡಿಸ್‌ಪ್ಲೇ ಇದಾಗಿರುವುದು ಬಜೆಟ್ ಫೋನ್ ಪ್ರಿಯರಿಗೆ ಇದು ಹೇಳಿ ಮಾಡಿಸಿದಂತಿದೆ.

'ರೆಡ್‌ಮಿ 7A' ಪ್ರೊಸೆಸರ್
ರೆಡ್‌ಮಿ 7A ಫೋನ್ 2GB RAM ನೊಂದಿಗೆ ಜೋಡಿಸಲಾಗಿರುವ ಒಕ್ಟಾ ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 439 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್ 9.0 ಪೈ ಒಎಸ್ ಆಧರಿಸಿ MIUI 10ನಲ್ಲಿ ಕೆಲಸ ಮಾಡುವು ಈ ಫೋನ್ ಪ್ರೊಸೆಸರ್ ವಿಭಾಗದಲ್ಲಿ ಶಕ್ತಿಶಾಲಿ. ಇನ್ನು 2GB RAM ಜೊತೆಗೆ 16GB ಮತ್ತು 32GB ಸಂಗ್ರಹಣಾ ಮಾದರಿಗಳನ್ನು ಹೊಂದಿದೆ.

ಕ್ಯಾಮೆರಾ ಹೇಗಿದೆ?
ಫೋಟೋಗಳು ಮತ್ತು ವೀಡಿಯೊಗಳಿಗಾಗಿ ರೆಡ್‌ಮಿ 7A ಸ್ಮಾರ್ಟ್‌ಪೋನಿನಲ್ಲಿ 12 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 486 ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಷ್ ಮತ್ತು ಪಿಡಿಎಎಫ್ ಲೆನ್ಸ್‌ನೊಂದಿಗೆ ಬಂದಿದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇದ್ದು, ಈ ಕ್ಯಾಮೆರಾವು AI ಫೇಸ್ ಅನ್ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.

ಇತರೆ ಫೀಚರ್ಸ್?
10W ಚಾರ್ಜಿಂಗ್ ಬೆಂಬಲ ಹೊಂದಿರುವ 4,000mAh ಸಾಮರ್ಥ್ಯದ ಬ್ಯಾಟರಿ, ಡ್ಯುಯಲ್ 4G, VoLTE, 3G, ವೈಫೈ, ಬ್ಲೂಟೂತ್ ಮತ್ತು ಜಿಪಿಎಸ್ ಸಂಪರ್ಕ ಆಯ್ಕೆಗಳ ಜೊತೆಗೆ ಎಐ ಸ್ಕ್ರೀನ್ ಡಿಟೆಕ್ಷನ್ ವೈಶಿಷ್ಟ್ಯವು ಈ ಫೋನಿನ ವಿಶೇಷತೆಗಳು ಎನ್ನಬಹುದು. ಇನ್ನು ಕಡಿಮೆ ಬೆಲೆಯಲ್ಲಿ ಸ್ನಾಪ್ಡ್ರಾಗನ್ 439 SoC ಪ್ರೊಸೆಸರ್ ಇರುವುದು ಫೋನ್ ಕಾರ್ಯನಿರ್ವಹಣೆಗೆ ಉತ್ತಮವಾಗಿದೆ.


Click it and Unblock the Notifications








