ಶಿಯೋಮಿ 'ರೆಡ್ಮಿ 8ಎ' ಬಿಡುಗಡೆಗೆ ಬೆಚ್ಚಿಬಿತ್ತು ಮಾರುಕಟ್ಟೆ!..ಖರೀದಿಗೆ ಕ್ಯೂ ಗ್ಯಾರಂಟಿ!

|

'ಭಾರತದ ನೆಚ್ಚಿನ ಸರಣಿ' ಎಂದು ಶಿಯೋಮಿ ಹೇಳಿಕೊಂಡಿರುವ ಜನಪ್ರಿಯ ರೆಡ್ಮಿ 7ಎ ಫೋನಿನ ಉತ್ತರಾಧಿಕಾರಿಯಾಗಿ 'ರೆಡ್ಮಿ 8 ಎ' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ವಾಟರ್‌ಡ್ರಾಪ್-ಶೈಲಿಯ ಡಿಸ್ಪ್ಲೇ ನೋಚ್, ಯುವ ಗ್ರಾಹಕರನ್ನು ಆಕರ್ಷಿಸಲು ವೈರ್‌ಲೆಸ್ ಎಫ್‌ಎಂ ರೇಡಿಯೊ, 5,000mAh ಬ್ಯಾಟರಿಯ ಜೊತೆಗೆ ವೇಗದ ಚಾರ್ಜಿಂಗ್ ಬೆಂಬಲ ಹೊಂದಿರುವ ಈ ನೂತನ ಸ್ಮಾರ್ಟ್‌ಫೋನ್ ಬೆಲೆ ಕೇವಲ 6,499 ರೂ.ಗಳಿಂದ ಆರಂಭವಾಗಿದ್ದು, ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸುವ ಭರವಸೆ ಮೂಡಿಸಿದೆ.

ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5

ಹೌದು, ಹೊಸ 'ರೆಡ್ಮಿ 8 ಎ' ಶಿಯೋಮಿಯ ಎಂಟ್ರಿ ಲೆವೆಲ್ ರೆಡ್‌ಮಿ ಸ್ಮಾರ್ಟ್‌ಫೋನ್ ಆಗಿ ಇಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಆದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್ ಆಗಿ 'ರೆಡ್ಮಿ 8 ಎ' ಕಾಣಿಸಿಕೊಂಡಿದೆ. ಏಕೆಂದರೆ, 6,499 ರೂ.ಗಳ ಬೆಲೆಯಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ನೊಂದಿಗೆ ನೋಚ್ ಶೈಲಿಯ 6.22 ಇಂಚಿನ ಎಚ್‌ಡಿ + ಡಿಸ್ಪ್ಲೇ, 5,000mAh ಬ್ಯಾಟರಿ, ವೈರ್‌ಲೆಸ್ ಎಫ್‌ಎಂ ರೇಡಿಯೊ ಮತ್ತು ವೇಗದ ಚಾರ್ಜಿಂಗ್ ಬೆಂಬಲ ಹೊಂದಿರುವ ಏಕೈಕ ಸ್ಮಾರ್ಟ್‌ಫೋನ್ ಇದಾಗಿದೆ.

ಆಂಡ್ರಾಯ್ಡ್ 9 ಪೈ

ರೆಡ್ಮಿ 8 ಎ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು ಈ ಕೆಳಕಂಡಂಡತಿದ್ದು, ರೆಡ್ಮಿ 8 ಎ ಫೋನ್ ಡ್ಯುಯಲ್-ಸಿಮ್ (ನ್ಯಾನೋ) ಆಂಡ್ರಾಯ್ಡ್ 9 ಪೈ ಅನ್ನು ಎಂಐಯುಐ 10 ನೊಂದಿಗೆ ಚಾಲನೆ ಮಾಡುತ್ತದೆ. ಹಾಗೆಯೇ, 19: 9 ಆಕಾರ ಅನುಪಾತ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ನೊಂದಿಗೆ 6.22 ಇಂಚಿನ ಎಚ್‌ಡಿ + ಡಿಸ್ಪ್ಲೇ ಹೊಂದಿದೆ. ರೆಡ್ಮಿ 7 ಎ ಗೆ ಶಕ್ತಿ ತುಂಬುತ್ತಿದ್ದ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 439 SoC ( 3GB ವರೆಗೆ RAM) ಪ್ರೊಸೆಸರ್ ಅನ್ನು ಈ ಫೋನಿನಲ್ಲೂ ಉಳಿಸಿಕೊಂಡಿರುವುದು ಒಂದು ಕೊರತೆಯಾಗಿ ಕಾಣುತ್ತಿದೆ.

12 ಮೆಗಾಪಿಕ್ಸೆಲ್

ಕ್ಯಾಮೆರಾ ವಿಷಯಕ್ಕೆ ಬಂದರೆ, ರೆಡ್ಮಿ 8 ಎ ಸ್ಮಾರ್ಟ್‌ಫೋನಿನಲ್ಲಿ ಎಫ್ / 1.8 ಲೆನ್ಸ್ ಸಾಮರ್ಥ್ಯದ 12 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 363 ಸಂವೇದಕವನ್ನು ಹಿಂಭಾಗದಲ್ಲಿ ನೀಡಲಾಗಿದೆ. ಇದು ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಎಐ ಪೋರ್ಟ್ರೇಟ್ ಮೋಡ್ ಮತ್ತು ಎಐ ಸೀನ್ ಡಿಟೆಕ್ಷನ್ ನಂತಹ ಪೂರ್ವ ಲೋಡ್ ಮಾಡಲಾದ ಹಲವು ಕ್ಯಾಂಎರಾ ವೈಶಿಷ್ಟ್ಯಗಳಿವೆ. ಫೋನ್ ಎಐ ಫೇಸ್ ಅನ್ಲಾಕ್ ವೈಶಿಷ್ಟ್ಯವನ್ನು ಸಹ ಒಳಗೊಂಡಿರುವುದು ಕೂಡ ವಿಶೇಷ ಎಂದು ಹೇಳಬಹುದು.

18W ವೇಗದ ಚಾರ್ಜಿಂಗ್‌

ಇನ್ನು ರೆಡ್‌ಮಿ 8 ಎ 32 ಜಿಬಿ ಆನ್‌ಬೋರ್ಡ್ ಸಂಗ್ರಹವನ್ನು ಹೊಂದಿದ್ದು, ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ (512 ಜಿಬಿ ವರೆಗೆ) ಮೀಸಲಾದ ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಫೋನ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ವೋಲ್ಟಿಇ, ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಎಫ್‌ಎಂ ರೇಡಿಯೋ, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ. ವಿಶೇಷವಾಗಿ 18W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಲಿ-ಪಾಲಿಮರ್ ಬ್ಯಾಟರಿಯನ್ನು ಫೋನ್ ಪ್ಯಾಕ್ ಮಾಡುತ್ತದೆ.

ಮಿಡ್ನೈಟ್ ಬ್ಲ್ಯಾಕ್, ಓಷನ್ ಬ್ಲೂ

ಭಾರತದಲ್ಲಿ ರೆಡ್‌ಮಿ 8 ಎ ಬೆಲೆಯನ್ನು (2 ಜಿಬಿ RAM + 32 ಜಿಬಿ ಸ್ಟೋರೇಜ್) 6,499 ರೂ.ಗಳಿಂದ ಆರಂಭಿಸಲಾಗದ್ದು, ಇದರ 3 ಜಿಬಿ ರಾಮ್ + 32 ಜಿಬಿ ಸ್ಟೋರೇಜ್ ಆಯ್ಕೆಯ ಫೋನ್ ಬೆಲೆ ಕೂಡ ಕೇವಲ 6,999 ರೂ.ಗಳಾಗಿವೆ. ಮಿಡ್ನೈಟ್ ಬ್ಲ್ಯಾಕ್, ಓಷನ್ ಬ್ಲೂ ಮತ್ತು ಸನ್ಸೆಟ್ ರೆಡ್ ಬಣ್ಣಗಳಲ್ಲಿ ಸೆಪ್ಟೆಂಬರ್ 29 ರ ಭಾನುವಾರ ರಾತ್ರಿ 11:59 ಕ್ಕೆ ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಮ್ ಮೂಲಕ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಬರುತ್ತಿದೆ. ಸೆಪ್ಟೆಂಬರ್ 30 ರಿಂದ ಮಿ ಹೋಮ್ ಸ್ಟೋರ್‌ಗಳಲ್ಲಿಯೂ ಸಹ ರೆಡ್‌ಮಿ 8 ಎ ಸ್ಮಾರ್ಟ್‌ಫೋನ್ ಲಭ್ಯವಿರುವುದಾಗಿ ಶಿಯೋಮಿ ತಿಳಿಸಿದೆ.

Best Mobiles in India

English summary
The Redmi 8A price in India is set at Rs. 6,499 for the 2GB RAM + 32GB storage variant, while its 3GB RAM + 32GB storage option is priced at Rs. 6,999. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X