6,999ಕ್ಕೆ ಸಿಗುತ್ತೆ..! Redmi A3x ಫೋನ್ ಬಿಡುಗಡೆ; ರಾಶಿ ಫೀಚರ್ಸ್
ರೆಡ್ಮಿ ಮೊಬೈಲ್ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್! ಸದ್ದಿಲ್ಲದೇ, ಅಗ್ಗದ ಸ್ಮಾರ್ಟ್‌ಫೋನ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಹೌದು, ರೆಡ್ಮಿ (Redmi) ಕಂಪನಿಯು ರೆಡ್ಮಿ A3x (Redmi A3x) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆಫ್‌ಲೈನ್ ಮಾರುಕಟ್ಟೆಯಲ್ಲಿ ಅಗ್ಗದ ಮೊಬೈಲ್ ರೆಡ್ಮಿ A3X ಮಾರಾಟ ಪ್ರಾರಂಭವಾಗಿದೆ. ಇಂದಿನಿಂದ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿಯೂ ಲಭ್ಯವಿದೆ. ನೀವು 7,000 ರೂ.ಗಳಿಗಿಂತ ಕಡಿಮೆ ಬಜೆಟ್‌ನಲ್ಲಿ ಹೊಸ ಫೋನ್ ಖರೀದಿಸಲು ಮನಸ್ಸು ಮಾಡಿದ್ದರೆ, ಈ ಹೊಸ ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಿದೆ. ಬನ್ನಿ, ರೆಡ್ಮಿ A3X ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ರೆಡ್ಮಿ A3x (Redmi A3x) ಫೋನ್ 90Hz ರಿಫ್ರೆಶ್ ದರದೊಂದಿಗೆ 6.71 ಡಿಸ್ಪ್ಲೇಯನ್ನು ಹೊಂದಿದೆ. ಇದು UUnisoc T603 ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. GB RAM ಮತ್ತು 64GB ಸ್ಟೋರೇಜ್ ಒಳಗೊಂಡಿದೆ. ಇದು 8MP ಡ್ಯುಯಲ್ ಹಿಂಬದಿಯ ಕ್ಯಾಮೆರಾ, 5MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನ್ 5,000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.

ರೆಡ್ಮಿ A3x ಫೋನಿನ ಬೆಲೆ ಎಷ್ಟು?
ರೆಡ್ಮಿ A3x ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ 3GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 6,999 ರೂ. ಇದೆ. ಆದರೆ, 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 7,999 ರೂ. ಇದೆ. ಈ ಫೋನಿನ ಮೂಲ ಮಾದರಿಯನ್ನು ಅಮೆಜಾನ್ ಇಂಡಿಯಾ (Amazon) ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದನ್ನು ಮಿಡ್‌ನೈಟ್ ಬ್ಲಾಕ್, ಓಷನ್ ಗ್ರೀನ್, ಆಲಿವ್ ಗ್ರೀನ್ ಮತ್ತು ಮೂನ್‌ಲೈಟ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದು.
ರೆಡ್ಮಿ A3x ಫೋನಿನ ಫೀಚರ್ಸ್
ಡಿಸ್ಪ್ಲೇ: ರೆಡ್ಮಿ A3x ಸ್ಮಾರ್ಟ್‌ಫೋನ್ 6.71 ಇಂಚಿನ IPS LCD HD+ ಡಿಸ್ಪ್ಲೇ ಹೊಂದಿದೆ. ಈ ಫೋನ್ 90Hz ರಿಫ್ರೆಶ್ ದರವನ್ನು ಹೊಂದಿದೆ. 720 x 1650 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 500nits ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ. ಫೋನ್ ಡಿಸ್ಲ್ಪೇಯನ್ನು ಗೊರಿಲ್ಲಾ ಗ್ಲಾಸ್ 3 ನೊಂದಿಗೆ ರಕ್ಷಿಸಲಾಗಿದೆ.
ಪ್ರೊಸೆಸರ್: ರೆಡ್ಮಿ A3x ಫೋನನ್ನು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ Unisoc T603 ಪ್ರೊಸೆಸರ್ ಅನ್ನು ಹೊಂದಿದೆ. 1.8GHz ಗಡಿಯಾರದ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಇದೆ.
ಸ್ಟೋರೇಜ್: ರೆಡ್ಮಿ A3x ಫೋನನ್ನು ಸಿಂಗಲ್ ಸ್ಟೋರೇಜ್ ರೂಪಾಂತರದಲ್ಲಿ ಪರಿಚಯಿಸಲಾಗಿದೆ. ಈ ಮೊಬೈಲ್ 3GB RAM ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ 64GB ಇಂಟರ್ನಲ್ ಸ್ಟೋರೇಜ್ ಒದಗಿಸಲಾಗಿದೆ. ಫೋನ್‌ನಲ್ಲಿ ಮೆಮೊರಿ ಕಾರ್ಡ್ ಅನ್ನು ಸಹ ಬಳಸಬಹುದು. ಮೈಕ್ರೋ SD ಕಾರ್ಡ್ ಸಹಾಯದಿಂದ ಇದನ್ನು 1TB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ: ಹೊಸ ರೆಡ್ಮಿ ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು ಡ್ಯುಯಲ್ AI ಕ್ಯಾಮೆರಾ ಸೆಟಪ್‌ನಲ್ಲಿ ಬರುತ್ತದೆ. ಇದರೊಂದಿಗೆ ಸೆಕೆಂಡರಿ ಲೆನ್ಸ್ ಕೂಡ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಬ್ಯಾಟರಿ: ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ 15W ಚಾರ್ಜರ್ ಅನ್ನು ಒದಗಿಸಲಾಗಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ. ಇದಲ್ಲದೆ, 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ಇದರಲ್ಲಿ ನೀಡಲಾಗಿದೆ.
ಇತರೆ ಫೀಚರ್ಸ್: ಭದ್ರತೆಗಾಗಿ, ಇದು ಫಿಜಿಕಲ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ಈ ಮೊಬೈಲ್ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಬೆಂಬಲಿಸುತ್ತದೆ. ಇದರ ದಪ್ಪ 8.3 ಮಿಮೀ ಮತ್ತು 193 ಗ್ರಾಂ ತೂಕ ಹೊಂದಿದೆ.


Click it and Unblock the Notifications








