ನಾಳೆ Redmi A5 ಬಿಡುಗಡೆ; ಅತ್ಯಂತ ಅಗ್ಗದ ಬೆಲೆ.. ಸಾಟಿ ಇಲ್ಲದ ಫೀಚರ್ಸ್
ಶಿಯೋಮಿಯ ಉಪ ಬ್ರಾಂಡ್ ರೆಡ್‌ಮಿ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ಇದನ್ನು ಕಡಿಮೆ ಬಜೆಟ್‌ನಲ್ಲಿ ಮಾರುಕಟ್ಟೆಗೆ ತರುತ್ತಿದೆ. ಹೌದು, ಕಂಪನಿಯು ಬಹುನಿರೀಕ್ಷಿತ ರೆಡ್ಮಿ A5 (Redmi A5) ಫೋನನ್ನು ನಾಳೆ (ಏಪ್ರಿಲ್ 15) ಭಾರದಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ ಕಂಪನಿಯ ವೆಬ್‌ಸೈಟ್‌ನಲ್ಲಿ ಈ ಫೋನಿನ ಮೈಕ್ರೋ ಸೈಟ್ ಸಹ ಲೈವ್ ಆಗಿದೆ. ಈ ಹೊಸ ರೆಡ್ಮಿ A5 ಫೋನಿನ ನಿರೀಕ್ಷಿತ ಬೆಲೆ, ಮಾರಾಟದ ವಿವರಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ಶಿಯೋಮಿ ತನ್ನ ಅಭಿಮಾನಿಗಳಿಗೆ ಅಗ್ಗದ ರೆಡ್ಮಿ A5 ಫೋನ್ ತರುತ್ತಿದೆ. ವಿಶೇಷವೆಂದರೆ, ಈಗಾಗಲೇ, ಈ ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದೀಗ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಇದು ಯುನಿಸಾಕ್ T7250 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.88 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಜೊತೆಗೆ 4GB RAM + 128GB ಸ್ಟೋರೇಜ್, 5200mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರೆಡ್ಮಿ A5 ಬಿಡುಗಡೆ ವಿವರಗಳು
ಶೀಯೋಮಿ ನಾಳೆ (ಏಪ್ರಿಲ್ 15) ಭಾರತದಲ್ಲಿ ರೆಡ್ಮಿ A5 ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಿದೆ. ಕಂಪನಿಯ ವೆಬ್‌ಸೈಟ್ ಮೂಲಕ ಈ ಫೋನನ್ನು ಲಾಂಚ್ ಮಾಡಲಾಗುವುದು. ಈ ಮೂಲಕ ಇದರ ಫೋಟೋ ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗುತ್ತದೆ. ಇದು ಸಾಫ್ಟ್ ಲಾಂಚ್ ಆಗಿದ್ದು, ನಾಳೆ ಮಧ್ಯಾಹ್ನ 12 ಗಂಟೆಗೆ ನೂತನ ರೆಡ್ಮಿ A5 ಫೋನಿನ ಬೆಲೆ ಮತ್ತು ಮಾರಾಟದ ವಿವರಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ರೆಡ್ಮಿ A5 ಫೋನಿನ ಬೆಲೆ
ರೆಡ್ಮಿ A5 ಸ್ಮಾರ್ಟ್‌ಫೋನ್ ಜೈಸಲ್ಮೇರ್ ಗೋಲ್ಡ್, ಪಾಂಡಿಚೇರಿ ಬ್ಲೂ ಮತ್ತು ಜಸ್ಟ್ ಬ್ಲಾಕ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಈ ಅಗ್ಗದ ರೆಡ್‌ಮಿ ಫೋನಿನ ಬೆಲೆ ಸುಮಾರು 7 ಸಾವಿರ ರೂ. ಆಗಿರಲಿದೆ. ಈ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ. ನಾಳೆ (ಏಪ್ರಿಲ್ 15) ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ರೆಡ್ಮಿ A5 ವೈಶಿಷ್ಟ್ಯಗಳು
ರೆಡ್ಮಿ A5 ಸ್ಮಾರ್ಟ್‌ಫೋನ್ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದು 6.88 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1640 x 720 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಮತ್ತು 1500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಮೊಬೈಲ್ ಯುನಿಸಾಕ್ T7250 ಪ್ರೊಸೆಸರ್ ಹೊಂದಿದೆ. ಇದು 12nm ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾದ ಆಕ್ಟಾ ಕೋರ್ ಸಿಪಿಯು ಆಗಿದೆ. ಇದರಲ್ಲಿ ಆರು ಕಾರ್ಟೆಕ್ಸ್-A55 ಕೋರ್‌ಗಳು ಮತ್ತು ಎರಡು ಕಾರ್ಟೆಕ್ಸ್-A75 ಕೋರ್‌ಗಳು ಇವೆ.
ರೆಡ್ಮಿ A5 ಫೋನ್ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ಈ ರೆಡ್ಮಿ A5 ಸ್ಮಾರ್ಟ್‌ಫೋನ್ ಶಕ್ತಿಯುತ 5,200mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, ಈ ಮೊಬೈಲ್ 18W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ರೆಡ್ಮಿ A5 4G ಫೋನ್ ಬ್ಲೂಟೂತ್ 5.2, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸಹ ಹೊಂದಿದೆ. ಹಾಗೆಯೇ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಒಳಗೊಂಡಿದೆ.


Click it and Unblock the Notifications








