Home
ಮೊಬೈಲ್

ಜಸ್ಟ್ 6499 ರೂ.! ಭಾರತಕ್ಕೆ Redmi A5 ಗ್ರ್ಯಾಂಡ್ ಎಂಟ್ರಿ.. ವಿಶೇಷತೆಗಳೇನು? ಸೇಲ್ ಯಾವಾಗ?

ಶಿಯೋಮಿ (Xiaomi) ಇಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದನ್ನು 6,500 ರೂ.ಗಿಂತ ಅಗ್ಗದ ಬೆಲೆಗೆ ಪರಿಚಯಿಸಲಾಗಿದೆ. ಹೌದು, ಕಂಪನಿಯು ರೆಡ್ಮಿ A5 (Redmi A5) ಫೋನನ್ನು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಭಾರತೀಯ ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡಿದೆ. ನೀವು ಫ್ಲಿಪ್‌ಕಾರ್ಟ್ ಮೂಲಕ ಈ ನೂತನ ಮೊಬೈಲ್ ಖರೀದಿಸಬಹುದು. ಬನ್ನಿ, ಈ ಹೊಸ ರೆಡ್ಮಿ A5 ಫೋನಿನ ಬೆಲೆ, ಮಾರಾಟದ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರೆಡ್ಮಿ A5 ಮೊಬೈಲ್ ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಇದು ಮೂರು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಯುನಿಸಾಕ್ T7250 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.88 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 4GB RAM + 128GB ಸ್ಟೋರೇಜ್, 5200mAh ಬ್ಯಾಟರಿ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಕಡಿಮೆ ಬೆಲೆಯ ಕೈಗೆಟುಕುವ ಫೋನ್ ಆಗಿದೆ.

ಜಸ್ಟ್ 6499 ರೂ.! ಭಾರತಕ್ಕೆ Redmi A5 ಗ್ರ್ಯಾಂಡ್ ಎಂಟ್ರಿ.. ವಿಶೇಷತೆಗಳೇನು?

ರೆಡ್ಮಿ A5 ಫೋನಿನ ಬೆಲೆ

3GB RAM + 64GB ಸ್ಟೋರೇಜ್ ಬೆಲೆ = 6,499 ರೂ.
4GB RAM + 128GB ಸ್ಟೋರೇಜ್ ಬೆಲೆ = 7,499 ರೂ.

ರೆಡ್ಮಿ A5 ಸ್ಮಾರ್ಟ್‌ಫೋನ್ ಎರಡು ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಇದರ ಮೂಲ ರೂಪಾಂತರವು 3GB RAM + 64GB ಸ್ಟೋರೇಜ್ ಹೊಂದಿದೆ. ಇದರ ಬೆಲೆ 6,499 ರೂ. ಆಗಿದೆ. ಟಾಪ್ ವೇರಿಯಂಟ್ ಬೆಲೆ 7,499 ರೂ. ಆಗಿದೆ. ಈ ಅಗ್ಗದ ರೆಡ್‌ಮಿ ಫೋನನ್ನು ಜೈಸಲ್ಮೇರ್ ಗೋಲ್ಡ್, ಪಾಂಡಿಚೇರಿ ಬ್ಲೂ ಮತ್ತು ಜಸ್ಟ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು. ಇದು ನಾಳೆಯಿಂದ (ಏಪ್ರಿಲ್ 16) ಫ್ಲಿಪ್‌ಕಾರ್ಟ್, Mi.com, ಶಿಯೋಮಿ ಚಿಲ್ಲರೆ ಮತ್ತು ಆಫ್‌ಲೈನ್ ಅಂಗಡಿಗಳಲ್ಲಿ ಮಾರಾಟವಾಗಲಿದೆ.

ರೆಡ್ಮಿ A5 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ A5 ಮೊಬೈಲ್ 6.88 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ವಾಟರ್‌ಡ್ರಾಪ್ ನಾಚ್ ಎಲ್‌ಸಿಡಿ ಡಿಸ್ಪ್ಲೇ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 1640 x 720 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 120Hz ರಿಫ್ರೆಶ್ ದರದ ಬೆಂಬಲ ಮತ್ತು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಮೊಬೈಲ್ ಲೋ ಬ್ಲೂ ಲೈಟ್ ಪ್ರಮಾಣೀಕರಿಸಲ್ಪಟ್ಟಿದ್ದು, ಕಣ್ಣುಗಳನ್ನು ರಕ್ಷಿಸುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ರೆಡ್ಮಿ A5 ಫೋನನ್ನು ಯುನಿಸಾಕ್ T7250 ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದನ್ನು 12 ನ್ಯಾನೋಮೀಟರ್ (ಆರ್ಕಿಟೆಕ್ಚರ್‌ನಲ್ಲಿ) ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಇದರಲ್ಲಿ 1.6GHz ಗಡಿಯಾರದ ವೇಗದೊಂದಿಗೆ ಆರು ಕಾರ್ಟೆಕ್ಸ್-A55 ಕೋರ್‌ಗಳು ಮತ್ತು 1.8GHz ಗಡಿಯಾರದ ವೇಗದೊಂದಿಗೆ ಎರಡು ಕಾರ್ಟೆಕ್ಸ್-A75 ಕೋರ್‌ಗಳು ಸೇರಿವೆ. ಈ ರೆಡ್ಮಿ ಫೋನ್ ಆಂಡ್ರಾಯ್ಡ್ 15 'ಗೋ' ಆವೃತ್ತಿಯಲ್ಲಿ ಕೆಲಸ ಮಾಡುತ್ತದೆ. ಈ ಫೋನ್ ಕಡಿಮೆ RAM ನಲ್ಲಿಯೂ ಸರಾಗವಾಗಿ ಕಾರ್ಯ ನಿರ್ವಹಿಸಲಿದೆ.

ಜಸ್ಟ್ 6499 ರೂ.! ಭಾರತಕ್ಕೆ Redmi A5 ಗ್ರ್ಯಾಂಡ್ ಎಂಟ್ರಿ.. ವಿಶೇಷತೆಗಳೇನು?

ಕ್ಯಾಮೆರಾ ಸೆಟಪ್

ರೆಡ್ಮಿ A5 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಬರುತ್ತದೆ. ಇದರೊಂದಿಗೆ ದ್ವಿತೀಯ ಎಐ (AI) ಲೆನ್ಸ್‌ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರೆಡ್ಮಿ A5 ಮೊಬೈಲ್ 5200mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, ಈ ಮೊಬೈಲ್ 15W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ರೆಡ್ಮಿ A5 ಸ್ಮಾರ್ಟ್‌ಫೋನ್ ಭದ್ರತೆಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಹಾಗೆಯೇ ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಇದು 5GHz ವೈ-ಫೈ ಮತ್ತು ಬ್ಲೂಟೂತ್ 5.2 ಅನ್ನು ಹೊಂದಿದೆ. ಈ ಮೊಬೈಲ್ ಯುಎಸ್‌ಬಿ ಟೈಪ್ ಸಿ ಪೋರ್ಟ್, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಎಫ್‌ಎಂ ರೇಡಿಯೊವನ್ನು ಒಳಗೊಂಡಿದೆ. ಈ ಫೋನ್ ಕೇವಲ 8.26 ಮಿಮೀ ದಪ್ಪ ಹೊಂದಿದೆ.

Best Mobiles in India

English summary
Redmi A5 With 120Hz Display and 32MP Camera Launched in India starting at Rs. 6499
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+