Home
ಮೊಬೈಲ್

ಮುಗಿಬಿದ್ದ ಗ್ರಾಹಕರು..! 6500ಕ್ಕಿಂತ ಕಡಿಮೆ ಬೆಲೆ.. ಹೊಸ Redmi A5 ಸೇಲ್ ಶುರು.. ವಿಶೇಷತೆಗಳೇನು?

ಶಿಯೋಮಿ ಇತ್ತೀಚೆಗೆ ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 6,500 ರೂ.ಗಿಂತ ಕಡಿಮೆ ಇದೆ. ಹೌದು, ಬಹುನಿರೀಕ್ಷಿತ ರೆಡ್ಮಿ A5 (Redmi A5) ಮೊಬೈಲ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಅಂದಹಾಗೆ, ಈ ಮೊಬೈಲ್ ಲಾಂಚ್ ಆಫರ್‌ಗಳೊಂದಿಗೆ ಮಾರಾಟವನ್ನು ಪ್ರಾರಂಭಿಸಿದೆ. ನೀವು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಈ ಮೊಬೈಲ್ ಖರೀದಿಸಬಹುದು. ಈ ಹೊಸ ರೆಡ್ಮಿ A5 ಫೋನಿನ ಬೆಲೆ, ಆಫರ್ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ರೆಡ್ಮಿ A5 ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ನೀವು ಮೂರು ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಈ ಫೋನಿನ ವಿಶೇಷತೆಗಳೆಂದರೆ, ಇದು 6.88 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಮೊಬೈಲ್ ಯುನಿಸಾಕ್ T7250 ಪ್ರೊಸೆಸರ್ ಒಳಗೊಂಡಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಹಾಗೆಯೇ 4GB RAM + 128GB ಸ್ಟೋರೇಜ್, 5200mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿದೆ.

ಮುಗಿಬಿದ್ದ ಗ್ರಾಹಕರು..! 6500ಕ್ಕಿಂತ ಕಡಿಮೆ ಬೆಲೆ.. ಹೊಸ Redmi A5 ಸೇಲ್ ಶುರು

ರೆಡ್ಮಿ A5 ಮೊಬೈಲ್ ಕೇವಲ 8.26 ಮಿಮೀ ದಪ್ಪ ಹೊಂದಿದೆ. ಈ ಫೋನ್ ಭದ್ರತೆಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಈ ಮೊಬೈಲ್ ಲೋ ಬ್ಲೂ ಲೈಟ್ ಪ್ರಮಾಣೀಕರಿಸಲ್ಪಟ್ಟಿದ್ದು, ಕಣ್ಣುಗಳನ್ನು ರಕ್ಷಿಸುತ್ತದೆ. ಇದಲ್ಲದೆ ಫೇಸ್ ಅನ್‌ಲಾಕ್ ವೈಶಿಷ್ಟ್ಯ ಸಹ ಲಭ್ಯವಿದೆ. ಈ ಮೊಬೈಲ್ ಯುಎಸ್‌ಬಿ ಟೈಪ್ ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಎಫ್‌ಎಂ ರೇಡಿಯೊವನ್ನು ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಇದು 5GHz ವೈ-ಫೈ ಮತ್ತು ಬ್ಲೂಟೂತ್ 5.2 ಅನ್ನು ಹೊಂದಿದೆ. ಈ ಫೋನ್ ಕಡಿಮೆ RAM ನಲ್ಲಿಯೂ ಸರಾಗವಾಗಿ ಕೆಲಸ ನಿರ್ವಹಿಸಲಿದೆ.

ರೆಡ್ಮಿ A5 ವೈಶಿಷ್ಟ್ಯಗಳು

ರೆಡ್ಮಿ A5 ಮೊಬೈಲ್ 6.88 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ವಾಟರ್‌ಡ್ರಾಪ್ ನಾಚ್ ಎಲ್‌ಸಿಡಿ ಡಿಸ್ಪ್ಲೇ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 1640 x 720 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಇದರೊಂದಿಗೆ 120Hz ರಿಫ್ರೆಶ್ ದರದ ಬೆಂಬಲ ಮತ್ತು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನನ್ನು ಯುನಿಸಾಕ್ T7250 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದನ್ನು 12 ನ್ಯಾನೋಮೀಟರ್ (ಆರ್ಕಿಟೆಕ್ಚರ್‌ನಲ್ಲಿ) ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಈ ರೆಡ್ಮಿ ಫೋನ್ ಆಂಡ್ರಾಯ್ಡ್ 15 'ಗೋ' ಆವೃತ್ತಿಯಲ್ಲಿ ಕೆಲಸ ಮಾಡುತ್ತದೆ.

ರೆಡ್ಮಿ A5 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಬರುತ್ತದೆ. ಇದರೊಂದಿಗೆ ದ್ವಿತೀಯ ಎಐ (AI) ಲೆನ್ಸ್‌ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ಈ ರೆಡ್ಮಿ A5 ಮೊಬೈಲ್ 5200mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, ಈ ಮೊಬೈಲ್ 15W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಮುಗಿಬಿದ್ದ ಗ್ರಾಹಕರು..! 6500ಕ್ಕಿಂತ ಕಡಿಮೆ ಬೆಲೆ.. ಹೊಸ Redmi A5 ಸೇಲ್ ಶುರು

ರೆಡ್ಮಿ A5 ಬೆಲೆ ಮತ್ತು ಆಫರ್

ರೆಡ್ಮಿ A5 ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ 3GB RAM + 64GB ಸ್ಟೋರೇಜ್ ವೇರಿಯಂಟ್ 6,499 ರೂ.ಗೆ ಮಾರಾಟವಾಗಲಿದೆ. ಹಾಗೆಯೇ 4GB RAM + 128GB ಸ್ಟೋರೇಜ್ ಮಾದರಿಯು 7,499 ರೂ.ಗೆ ಲಭ್ಯವಿದೆ. ಈ ಅಗ್ಗದ ರೆಡ್‌ಮಿ ಫೋನನ್ನು ಜೈಸಲ್ಮೇರ್ ಗೋಲ್ಡ್, ಪಾಂಡಿಚೇರಿ ಬ್ಲೂ ಮತ್ತು ಜಸ್ಟ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು. ನೀವು ಫ್ಲಿಪ್‌ಕಾರ್ಟ್, ಕಂಪನಿಯ ಅಧಿಕೃತ ವೆಬ್‌ಸೈಟ್ (Mi.com), ಶಿಯೋಮಿ ಚಿಲ್ಲರೆ ಮತ್ತು ಆಫ್‌ಲೈನ್ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Redmi A5 With 5200mAh battery goes on sale start in India with launch offers: Check Price, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+