'ಕೆ20 ಪ್ರೊ' ಪ್ರೀ ಬುಕ್ಕಿಂಗ್ ಆರಂಭಿಸಿ ಶಿಯೋಮಿ ಶಾಕ್ ನೀಡಿದ್ದು ಹೀಗೆ!!

|

ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿರುವ 'ರೆಡ್‌ಮಿ ಕೆ' ಸರಣಿ ಫೋನ್‌ಗಳ ವದಂತಿಗಳಿಗೆ ಬ್ರೇಕ್ ಬಿದ್ದಿದೆ. ಏಕೆಂದರೆ, ಚೀನಾದಲ್ಲಿ ನಡೆದ ಸಮಾರಂಭ ಒಂದರಲ್ಲಿ ರೆಡ್ಮಿ ಕೆ ಸರಣಿ ಸ್ಮಾರ್ಟ್‌ಪೋನ್‌ಗಳನ್ನು ರೆಡ್‌ಮಿ ಘೋಷಿಸಿದೆ ಮತ್ತು ಪ್ರೀ ಬುಕ್ ಆಯ್ಕೆ ನೀಡಿ ಶಾಕ್ ನೀಡಿದೆ.! ಹೌದು, ವಿಶ್ವ ಮೊಬೈಲ್ ಮಾರುಕಟ್ಟೆ ಭಾರೀ ನಿರೀಕ್ಷೆ ಹೊತ್ತಿರುವ ರೆಡ್‌ಮಿ ಕೆ20 ಮತ್ತು ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಮತ್ತು ಬೆಲೆಗಳು ಎಷ್ಟು ಎಂಬುದು ಇದೀಗ ಅಧಿಕೃತವಾಗಿ ಅನಾವರಣಗೊಂಡಿದೆ.!

ನಿರೀಕ್ಷೆಯಂತೆಯೇ ರೆಡ್‌ಮಿ ಕೆ20 ಮತ್ತು ಕೆ20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ಒಂದೇ ವಿನ್ಯಾಸವನ್ನು ಹೊಂದಿವೆ. ಅತ್ಯಂತ ಕಡಿಮೆ ಬೆಜೆಲ್ ಹೊಂದಿರುವ ಸ್ಮಾರ್ಟ್‌ಪೋನ್‌ಗಳ ಸ್ಕ್ರೀನ್-ಟು-ಬಾಡಿ ಅನುಪಾತವು ಶೇ 92% ರಷ್ಟಿದ್ದು, 3D ಕರ್ವ್ಡ್ ಗ್ಲಾಸ್ ಪ್ರೊಟೆಕ್ಷನ್ ಅನ್ನು ತರಲಾಗಿದೆ. ಇದೇ ಮೊದಲ ಬಾರಿಗೆ ಶಿಯೋಮಿ ರೆಡ್‌ಮಿ ಕಂಪೆನಿ ಇತ್ತೀಚಿನ 7ನೇ ಪೀಳಿಗೆಯ ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕದೊಂದಿಗೆ ಈ ಎರಡೂ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡುವುದನ್ನು ಸ್ಪಷ್ಟಪಡಿಸಿದೆ.!

'ಕೆ20 ಪ್ರೊ' ಪ್ರೀ ಬುಕ್ಕಿಂಗ್ ಆರಂಭಿಸಿ ಶಿಯೋಮಿ ಶಾಕ್ ನೀಡಿದ್ದು ಹೀಗೆ!!

ರೆಡ್‌ಮಿ ಕೆ20 ಮತ್ತು ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಚೀನಾದಲ್ಲಿ ಪ್ರೀ ಬುಕ್ ಮಾಡಲು ಆಯ್ಕೆ ನಿಡಲಾಗಿದ್ದು, ಎರಡೂ ಸ್ಮಾರ್ಟ್ಫೋನ್‌ಗಳು ಕಾರ್ಬನ್ ಬ್ಲಾಕ್, ರೆಡ್ ಮತ್ತು ಗ್ಲೇಸಿಯರ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೆ, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿರುವ ಶಿಯೋಮಿ 'ರೆಡ್‌ಮಿ ಕೆ' ಸರಣಿಯ 'ಕೆ20 ಪ್ರೊ' ಸ್ಮಾರ್ಟ್‌ಪೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಮತ್ತು ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

6.39-ಇಂಚಿನ AMOLED ಡಿಸ್‌ಪ್ಲೇ

6.39-ಇಂಚಿನ AMOLED ಡಿಸ್‌ಪ್ಲೇ

ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.

ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್

ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್

ರೆಡ್‌ಮಿ ಕೆ20 ಪ್ರೊ ರೂಪಾಂತದ ಸ್ಮಾರ್ಟ್‌ಫೋನ್ 8GB RAM ನೋಂದಿಗೆ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿದೆ. 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನ್ ಮೆಮೊರಿ ವಿಸ್ತರಣೆಗೆ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು ಇತ್ತೀಚಿನ MIUI 10 ಆಂಡ್ರಾಯ್ಡ್ 9 ಪೈ ರೊಂದಿಗೆ ಫೋನ್ ರನ್ ಆಗಲಿದೆ.

4,000mAh ಬ್ಯಾಟರಿ

4,000mAh ಬ್ಯಾಟರಿ

ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿದೆ. ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ . ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ರೆಡ್ಮಿ ಕೆ20 ಪ್ರೊನಲ್ಲಿ (ಪೊಕೊ ಫೋನ್ 2 ) 32 ಎಂಪಿ ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇರುವ ವದಂತಿಗಳು ಖಚಿತವಾಗಿದೆ. ಫೋನಿನಲ್ಲಿ ಟ್ರಿಪಲ್ ಲೆನ್ಸ್ ಸೆಟಪ್ ಹಿಂಭಾಗದಲ್ಲಿದ್ದು 48ಎಂಪಿ ಪ್ರೈಮರಿ ಸೆನ್ಸರ್, 8ಎಂಪಿ ಡೆಪ್ತ್ ಸೆನ್ಸರ್ ಹಾಗೂ ವೈಡ್ ಆಂಗಲ್‌ಗೆ ಸಹಕಾರಿಯಾಗುವಂತಹ ಕ್ಯಾಮೆರಾ ಅಳವಡಿಸಲಾಗಿದೆ. ಸುಧಾರಿತ ಕ್ಯಾಮೆರಾ ತಂತ್ರಜ್ಞಾನಗಳು ಇರಲಿವೆ.

ಇತರೆ ಎಲ್ಲಾ ಫೀಚರ್ಸ್

ಇತರೆ ಎಲ್ಲಾ ಫೀಚರ್ಸ್

ರೆಡ್ಮಿ ಕೆ20 ಪ್ರೊ ಫೋನಿನಲ್ಲಿ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೊಡಬಹುದು.

ಬೆಲೆಗಳು ಎಷ್ಟು?

ಬೆಲೆಗಳು ಎಷ್ಟು?

ರೆಡ್‌ಮಿ ಕೆ ಪ್ರೊ ಮೂರು ಮಾದರಿಗಳಲ್ಲಿ ಪ್ರೀ ಬುಕ್ಕಿಂಗ್‌ಗೆ ಬಂದಿದ್ದು, ಬೆಲೆಗಳು ಇಂತಿವೆ. 6 ಜಿಬಿ RAM + 128 ಜಿಬಿ ಮೆಮೊರಿ- 2,599 ಯುವಾನ್ (ಅಂದಾಜು ರೂ. 26,000), 8 ಜಿಬಿ RAM + 128 ಜಿಬಿ ಮೆಮೊರಿ- 2,799 ಯುವಾನ್ (ಅಂದಾಜು ರೂ. ರೂ. 28,000), ಹಾಗೂ 8 ಜಿಬಿ RAM + 256 ಜಿಬಿ ಮೆಮೊರಿ- 2,999 ಯುವಾನ್ (ಸುಮಾರು ರೂ 30,000) ರೂ.ಗಳಾಗಿವೆ.

Best Mobiles in India

English summary
Redmi K20 Pro pricing 6 GB RAM + 64 GB storage - 2,499 yuan (approx. Rs. 25,000) 6 GB RAM + 128 GB storage - 2,599 yuan (approx. Rs. 26,000) 8 GB RAM + 128 GB storage - 2,799 yuan (approx. Rs. 28,000) 8 GB RAM + 256 GB storage - 2,999 yuan (approx. Rs. 30,000)

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X