21,999 ರೂ.ಗೆ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಫೋನ್ 'ರೆಡ್‌ಮಿ ಕೆ20' ರಿಲೀಸ್!

|

ಚೀನಾದಲ್ಲಿ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡುತ್ತಿರುವ ಶಿಯೋಮಿ "ರೆಡ್‌ಮಿ ಕೆ'' ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿಂದು ಬಿಡುಗಡೆಯಾಗಿವೆ. ಶಿಯೋಮಿ ಆಯೋಜಿಸಿದ್ದ ಅದ್ದೂರಿ ಮೊಬೈಲ್ ಬಿಡುಗಡೆ ಸಮಾರಂಭದಲ್ಲಿ ರೆಡ್‌ಮಿ ಕೆ ಸರಣಿಯ ''ರೆಡ್‌ಮಿ ಕೆ20'' ಮತ್ತು ''ರೆಡ್‌ಮಿ ಕೆ20 ಪ್ರೊ'' ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಅತ್ಯಂತ ಕಡಿಮೆ ಬೆಲೆಗೆ ರೆಡ್‌ಮಿ ಕೆ'' ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಶಿಯೋಮಿ ಕಂಪೆನಿ ಯಶಸ್ವಿಯಾಗಿದೆ.

21,999 ರೂ.ಗೆ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಫೋನ್ 'ರೆಡ್‌ಮಿ ಕೆ20' ರಿಲೀಸ್!

ಹೌದು, ಒನ್‌ಪ್ಲಸ್ 7 ಕಿಲ್ಲರ್ ಎಂದೇ ಕರೆಸಿಕೊಂಡಿರುವ ಶಿಯೋಮಿ ರೆಡ್‌ಮಿ ಕೆ ಸರಣಿಯ ''ರೆಡ್‌ಮಿ ಕೆ20'' ಮತ್ತು ''ರೆಡ್‌ಮಿ ಕೆ20 ಪ್ರೊ'' ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆ ನಿರೀಕ್ಷಿಸಿದಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ. ರೆಡ್‌ಮಿ ರೆಡ್‌ಮಿ ಕೆ20 ಸ್ಮಾರ್ಟ್‌ಫೋನಿನ ಬೆಲೆ 21,999 ರೂ.ಗಳಿಂದ ಆರಂಭವಾಗಿದ್ದರೆ, ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಪೋನ್ ಬೆಲೆ ಕೇವಲ 27,999 ರೂ.ಗಳಿಂದ ಆರಂಭವಾಗಿದೆ. ಈ ಮೂಲಕ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅತ್ಯಂತ ಕಡಿಮೆ ಬೆಲೆಯ ಫೋನ್‌ಗೂ ಬಂದಂತಾಗಿದೆ.

ರೆಡ್ಮಿ ಕೆ 20 ಮತ್ತು ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಪೋನ್‌ಗಳ ಮೊದಲ ಮಾರಾಟ ಜುಲೈ 22 ರಂದು ಫ್ಲಿಪ್ಕಾರ್ಟ್, ಮಿ.ಕಾಮ್ ಮತ್ತು ಮಿ ಹೋಮ್ ಸ್ಟೋರ್ಗಳ ಮೂಲಕ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಹ್ಯಾಂಡ್ಸೆಟ್ಗಳು ಶೀಘ್ರದಲ್ಲೇ ಮಿ ಪಾಲುದಾರ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಿರುತ್ತವೆ. ಇದಲ್ಲದೆ, ರೆಡ್ಮಿ ಕೆ 20-ಸರಣಿಯ ಎರಡೂ ಫೋನ್‌ಗಳು ಚಿಲ್ಲರೆ ಪೆಟ್ಟಿಗೆಯಲ್ಲಿ ಪ್ರೀಮಿಯಂ ಹಾರ್ಡ್ ಕವರ್ ಪಡೆಯುತ್ತವೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.

21,999 ರೂ.ಗೆ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಫೋನ್ 'ರೆಡ್‌ಮಿ ಕೆ20' ರಿಲೀಸ್!

ಇನ್ನು ರೆಡ್‌ಮಿ ಕೆ20 ಸ್ಮಾರ್ಟ್‌ಫೋನ್ ಎರಡು ಮಾದರಿಯಲ್ಲಿ ಬಿಡುಗಡೆಯಾಗಿದ್ದರೆ, ರೆಡ್‌‌ಮಿ ಕೆ20 ಪ್ರೊ ಫೋನ್ ಕೂಡ ಎರಡು ಮಾದರಿಯಲ್ಲಿ ಬಿಡುಗಡೆಯಾಗಿದೆ. ಈ ಲೇಖನದಲ್ಲಿ ನಾವು "ರೆಡ್‌‌ಮಿ ಕೆ20 ಪ್ರೊ" ಸ್ಮಾರ್ಟ್‌ಫೋನಿನ ಬಗೆಗೆ ಮೊದಲು ಸಂಪೂರ್ಣ ಮಾಹಿತಿ ನೀಡುತ್ತಿದ್ದು, ಹಾಗಾದರೆ, ಇಂದು ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ 'ರೆಡ್‌ಮಿ ಕೆ20 ಪ್ರೊ' ಸ್ಮಾರ್ಟ್‌ಫೋನ್ ಹೇಗಿದೆ?, ಫೀಚರ್ಸ್ ಯಾವುವು? ಮತ್ತು ಭಾರತದಲ್ಲಿ ಈ ಸ್ಮಾರ್ಟ್‌ಫೋನಿನ ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

6.39-ಇಂಚಿನ AMOLED ಡಿಸ್‌ಪ್ಲೇ

6.39-ಇಂಚಿನ AMOLED ಡಿಸ್‌ಪ್ಲೇ

ರೆಡ್‌ಮಿ ಕೆ20 ಪ್ರೊ ಫೋನ್ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.

ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್

ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್

ರೆಡ್‌ಮಿ ಕೆ20 ಪ್ರೊ ರೂಪಾಂತದ ಸ್ಮಾರ್ಟ್‌ಫೋನ್ 8GB RAM ನೋಂದಿಗೆ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿದೆ. 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನ್ ಮೆಮೊರಿ ವಿಸ್ತರಣೆಗೆ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು ಇತ್ತೀಚಿನ MIUI 10 ಆಂಡ್ರಾಯ್ಡ್ 9 ಪೈ ರೊಂದಿಗೆ ಫೋನ್ ರನ್ ಆಗಲಿದೆ.

ಟ್ರಿಪಲ್ ರಿಯರ್ ಕ್ಯಾಮೆರಾ

ಟ್ರಿಪಲ್ ರಿಯರ್ ಕ್ಯಾಮೆರಾ

ರೆಡ್ಮಿ ಕೆ 20 ಪ್ರೊ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 586 ಪ್ರಾಥಮಿಕ ಸಂವೇದಕದೊಂದಿಗೆ ಎಫ್ / 1.75 ಲೆನ್ಸ್, 13 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ವೈಡ್-ಆಂಗಲ್ ಲೆನ್ಸ್ ಮತ್ತು ಎಫ್ / 2.4 ನೊಂದಿಗೆ 8 ಮೆಗಾಪಿಕ್ಸೆಲ್ ತೃತೀಯ ಸಂವೇದಕವನ್ನು ಹೊಂದಿದೆ.

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ರೆಡ್ಮಿ ಕೆ 20 ಪ್ರೊ ಫೋನ್‌ನಲ್ಲಿ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದ್ದು, ಈ ಕ್ಯಾಮೆರಾವು ಪಾಪ್‌ಅಪ್‌ ಮಾದರಿಯಲ್ಲಿದೆ. ಎಲಿಗಂಟ್ ಪನೋರಮಾ ಸೆಲ್ಫಿ ಫೋಟೊ ಸೆರೆಹಿಡಿಯಬಹುದಾಗಿದ್ದು, ಪಾಪ್‌ಅಪ್‌ ಕ್ಯಾಮೆರಾಗೆ ದಕ್ಕೆಗಳಿಂದ ರಕ್ಷಣೆಯ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಪೋಟೊ ಎಡಿಟಿಂಗ್, ಫಿಲ್ಟರ್, ಆಯ್ಕೆಗಳು ಸೇರಿಕೊಂಡಿವೆ

4,000mAh ಬ್ಯಾಟರಿ ಶಕ್ತಿ

4,000mAh ಬ್ಯಾಟರಿ ಶಕ್ತಿ

ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿದೆ. ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ . ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.

ಇತರೆ ಎಲ್ಲಾ ಫೀಚರ್ಸ್

ಇತರೆ ಎಲ್ಲಾ ಫೀಚರ್ಸ್

ರೆಡ್ಮಿ ಕೆ20 ಪ್ರೊ ಫೋನಿನಲ್ಲಿ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೋಡಬಹುದು.

ಬೆಲೆಗಳು ಮತ್ತು ಬಣ್ಣ

ಬೆಲೆಗಳು ಮತ್ತು ಬಣ್ಣ

ಭಾರತದಲ್ಲಿ ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಫೋನಿನ ಬೆಲೆಯು 6 ಜಿಬಿ RAM + 128 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 27,999 ರೂ. ಇದ್ದರೆ, ಇದರ 8 ಜಿಬಿ RAM + 256 ಜಿಬಿ ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಫೋನ್ ಬೆಲೆ ರೂ. 30,999 ರೂ.ಗಳಾಗಿವೆ. ಕಾರ್ಬನ್ ಬ್ಲ್ಯಾಕ್, ಫ್ಲೇಮ್ ರೆಡ್ ಮತ್ತು ಗ್ಲೇಸಿಯರ್ ಬ್ಲೂ ಎಂಬ ಮೂರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಫೋನ್ ಲಭ್ಯವಿದೆ.

Most Read Articles
Best Mobiles in India

English summary
Redmi K20, Redmi K20 Pro With Pop-Up Selfie Camera, 4,000mAh Battery Launched in India: Price, Specifications, Launch Offers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more