ಇದೇ ಮೇ 28ಕ್ಕೆ ರೆಡ್ಮಿಕೆ 20 ಪ್ರೊ ರಿಲೀಸ್!..ಮೊದಲ ಚಿತ್ರ ಕೂಡ ಬಹಿರಂಗ!!

|

ಕಳೆದ ಎರಡು ವಾರಗಳಿಂದ ಸುದ್ದಿಯಲ್ಲಿರುವ ಶಿಯೋಮಿ ರೆಡ್ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳು ಇದೇ ಮೇ 28ಕ್ಕೆ ಬಿಡುಗಡೆಯಾಗುವುದನ್ನು ಶಿಯೋಮಿ ಕಂಪೆನಿ ಖಚಿತಪಡಿಸಿದೆ. ಚೀನಾ ಪ್ರಮುಖ ಗ್ಯಾಜೆಟ್ ತಾಣ ಗಿಜ್ಮೋ ಚೈನಾ ಈ ಬಗ್ಗೆ ವರದಿ ಮಾಡಿದ್ದು, ಮೂರು ರಿಯರ್ ಕ್ಯಾಮೆರಾಗಳುಳ್ಳ ಮೊದಲ ಶಿಯೋಮಿ ರೆಡ್ಮಿಕೆ 20 ಪ್ರೊ ಫೋನ್‌ ಚಿತ್ರವನ್ನು ಪ್ರಕಟಿಸಿದೆ. ಚಿತ್ರದಲ್ಲಿ ಕಾಣುವಂತೆ ರೆಡ್ಮಿ ಕೆ 20 ಪ್ರೊ ಹೈ ಎಂಡ್ ವಿನ್ಯಾಸವನ್ನು ಹೊಂದಿದೆ.

ಇದೇ ಮೇ 28ಕ್ಕೆ ರೆಡ್ಮಿಕೆ 20 ಪ್ರೊ ರಿಲೀಸ್!..ಮೊದಲ ಚಿತ್ರ ಕೂಡ ಬಹಿರಂಗ!!
(ಮೊದಲ ಚಿತ್ರ)

ಹೌದು, ಮೊನ್ನೆ ಮೊನ್ನೆಯಷ್ಟೇ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟ ಒನ್‌ಪ್ಲಸ್ 7 ಪ್ರೊಗೆ ಶುಭಕೋರಿ ಎಚ್ಚರಿಕೆಯೊಂದನ್ನು ರವಾನಿಸಿದ್ದ ಶಿಯೋಮಿ ತನ್ನ ಇತ್ತೀಚಿನ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಿಡುಗಡೆ ಸುದ್ದಿಯನ್ನು ಬಹಿರಂಗಪಡಿಸಿದೆ. ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್‌ನಿಂದ ರನ್ ಆಗಲಿರುವ ಶಿಯೋಮಿ ರೆಡ್ಮಿಕೆ 20 ಪ್ರೊ ಫೋನ್‌ ಬಗ್ಗೆ ವೈಬೋ ಪೋಸ್ಟ್ ನಲ್ಲಿ ರೆಡ್ಮಿಯ ಜನರಲ್ ಮ್ಯಾನೇಜರ್ ಲು ವಯಬಿಂಗ್ ಅವರು ಹೊಸ ರೆಡ್ಮಿ ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಮಾಹಿತಿಗಳನ್ನು ಖಾತ್ರಿಗೊಳಿಸಿದ್ದಾರೆ.

ಇದೇ ಮೇ 28ಕ್ಕೆ ರೆಡ್ಮಿಕೆ 20 ಪ್ರೊ ರಿಲೀಸ್!..ಮೊದಲ ಚಿತ್ರ ಕೂಡ ಬಹಿರಂಗ!!

ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್, 6.39- ಇಂಚಿನ AMOLED ಸ್ಕ್ರೀನ್ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಶಿಯೋಮಿ ಪೊಕೊ ಫೋನ್ 2 ಆಗಿ ಎಂಟ್ರಿ ನೀಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹಾಗಾದರೆ, ಬಜೆಟ್ ಬೆಲೆಯಲ್ಲೇ ಪ್ರೀಮಿಯಂ ಸ್ಮಾರ್ಟ್‌ಪೋನ್‌ಗಳ ತಯಾರಿಕೆಗೆ ಮುಂದಾಗಿರುವ ಶಿಯೋಮಿಯ ನೂತನ ರೆಡ್ಮಿ ಕೆ20 ಪ್ರೊ( ಶಿಯೋಮಿ ಪೊಕೊ ಫೋನ್ 2) ಸ್ಮಾರ್ಟ್‌ಪೋನ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಶಿಯೋಮಿ ಪೊಕೊ ಫೋನ್ 2!

ಶಿಯೋಮಿ ಪೊಕೊ ಫೋನ್ 2!

ಹೊಸದಾಗಿ ಲೀಕ್ ಆಗಿರುವ ಸುದ್ದಿಯ ಪ್ರಕಾರ, ಶಿಯೋಮಿಯ ಮುಂಬರುವ ಬಜೆಟ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ರೆಡ್ಮಿ ಕೆ20 ಪ್ರೊ ಎಂದು ಕರೆಯಲಾಗಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಎಸ್‌ಒಸಿ ಪ್ರೊಸೆಸರ್ ಚಿತ್ರವೊಂದು ಈಗಾಗಲೇ ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಇದು ಭಾರತದಲ್ಲಿ ಶಿಯೋಮಿ ಪೊಕೊ ಫೋನ್ 2 ಹೆಸರಿನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಹೇಗಿರಲಿದೆ ಪೊಕೊ ಫೋನ್ 2?

ಹೇಗಿರಲಿದೆ ಪೊಕೊ ಫೋನ್ 2?

ಶಿಯೋಮಿ ಪೊಕೊ ಫೋನ್ 2 ಫೋನ್ ಚೀನಾದಲ್ಲಿ K20 ಪ್ರೊ ರೂಪಾಂತರದಲ್ಲಿ ಇರುವುದನ್ನು ಶಿಯೋಮಿ ಈವರೆಗೂ ದೃಢೀಕರಿಸಲ್ಪಟ್ಟಿಲ್ಲ. ಆದರೆ, ಈ ಹ್ಯಾಂಡ್ಸೆಟ್ 6.39- ಇಂಚಿನ AMOLED ಸ್ಕ್ರೀನ್ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದು ಬಹುತೇಕ ಪ್ರೀಮಿಯಂ ಲುಕ್ ಹೊಂದಿರಲಿದೆ ಎಂದು ವರದಿಗಳು ತಿಳಿಸಿವೆ.

4,000mAh ಬ್ಯಾಟರಿ

4,000mAh ಬ್ಯಾಟರಿ

ಶಿಯೋಮಿ ಪೊಕೊ ಫೋನ್ 2 ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿರಲಿದ್ದು, ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ ಎಂದು ಹೇಳಲಾಗಿದೆ. ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿರುವುದನ್ನು ವರದಿಗಳಲ್ಲಿ ತಿಳಿಸಲಾಗಿದೆ.

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ರೆಡ್ಮಿ ಕೆ20 ಪ್ರೊನಲ್ಲಿ (ಪೊಕೊ ಫೋನ್ 2 ) 32 ಎಂಪಿ ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇರಲಿದೆ ಎಂದು ವದಂತಿಗಳಿವೆ. ಜೊತೆಗೆ ಇದರಲ್ಲಿ ಟ್ರಿಪಲ್ ಲೆನ್ಸ್ ಸೆಟಪ್ ಹಿಂಭಾಗದಲ್ಲಿದ್ದು 48ಎಂಪಿ ಪ್ರೈಮರಿ ಸೆನ್ಸರ್, 8ಎಂಪಿ ಡೆಪ್ತ್ ಸೆನ್ಸರ್ ಹಾಗೂ ವೈಡ್ ಆಂಗಲ್‌ಗೆ ಸಹಕಾರಿಯಾಗುವಂತಹ ಅನ್ನು ಅಳವಡಿಸಲಾಗಿದೆ. ಆದರೆ, ಕಂಪೆನಿಯು ಇದನ್ನು ಇನ್ನೂ ಖಾತ್ರಿಪಡಿಸಿಲ್ಲ.

ಬೆಲೆ ಎಷ್ಟಿರಬಹುದು?

ಬೆಲೆ ಎಷ್ಟಿರಬಹುದು?

ಒನ್‌ಪ್ಲಸ್ 7 ಪ್ರೊನಲ್ಲಿ ತಂದಿರುವ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್, ಸ್ನ್ಯಾಪ್ ಡ್ರ್ಯಾಗನ್ 855, ಪಾಪ್-ಅಪ್ ಸೆಲ್ಫೀ ಕ್ಯಾಮರಾ ಮತ್ತು ಟ್ರಿಪಲ್ ಲೆನ್ಸ್ ಸೆಟಪ್ ಫೀಚರ್ಸ್‌ಗಳು ಈ ನೂತನ ಸ್ಮಾರ್ಟ್‌ಫೋನಿನಲ್ಲೂ ತರಲಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಎಲ್ಲಾ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ 30 ಸಾವಿರ ರೂ.ಗಳನ್ನು ದಾಟುವುದಿಲ್ಲ ಎಂದು ವರದಿಗಳು ಹೇಳುತ್ತಿವೆ.

Best Mobiles in India

English summary
The Redmi K20 series will launch on May 28. The two phones – the Redmi K20 and Redmi K20 Pro – have been in the news a lot in the past couple of weeks. Redmi has confirmed some key specs and features but today it has shared an official render of the Redmi K20. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X