'ರೆಡ್‌ಮಿ ಕೆ20' VS 'ರಿಯಲ್‌ಮಿ ಎಕ್ಸ್'!..ಜುಲೈ 22ರಿಂದ ಬಿಗ್‌ಫೈಟ್ ಆರಂಭ!

|

ಭಾರತದಲ್ಲಿ ಇತ್ತೀಚಿಗೆ ಬಿಡುಗಡೆಯಾಗಿರುವ 'ರೆಡ್‌ಮಿ ಕೆ20' ಮತ್ತು 'ರಿಯಲ್‌ಮಿ ಎಕ್ಸ್' ಫೋನ್‌ಗಳ ನಡುವೆ ಬಿಗ್‌ಫೈಟ್ ಶುರುವಾಗಿದೆ. ಶಿಯೋಮಿ ತನ್ನ ರೆಡ್‌ಮಿ ಕೆ20 ಸ್ಮಾರ್ಟ್‌ಪೋನ್‌ ಮೂಲಕ ಭಾರತದ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದರೆ, ಇತ್ತ ರಿಯಲ್‌ಮಿ ಮಾತ್ರ ಸದ್ದಿಲ್ಲದೆ ದೇಶದ ಮೊಬೈಲ್ ಮಾರುಕಟ್ಟೆಯನ್ನು ಬುಟ್ಟಿಗೆ ಹಾಕಿಕೊಳ್ಳಲು ತಯಾರಾಗಿದೆ.

'ರೆಡ್‌ಮಿ ಕೆ20' VS 'ರಿಯಲ್‌ಮಿ ಎಕ್ಸ್'!..ಜುಲೈ 22ರಿಂದ ಬಿಗ್‌ಫೈಟ್ ಆರಂಭ!

ಹೌದು, ಚೀನಾದಲ್ಲಿ ರೆಡ್‌ಮಿ ಕೆ20 ಮತ್ತು ರಿಯಲ್‌ಮಿ ಎಕ್ಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇದೇ ವಾರದಲ್ಲಿ ಒಟ್ಟಿಗೆ ಮಾರಾಟಕ್ಕೆ ಬರುತ್ತಿವೆ. ಇದರಿಂದ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಪೈಪೊಟಿಯೊಂದು ಎದುರಾಗಿದ್ದು, ಸ್ಮಾರ್ಟ್‌ಪೋನ್ ಪ್ರಿಯರಿಗೆ ಈ ಎರಡು ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂಬ ಗೊಂದಲ ಉಂಟಾಗಿದೆ.

ಗ್ರಾಹಕರಿಗೆ ಈ ಬಗ್ಗೆ ಗೊಂದಲವಾಗಿದ್ದರೆ, ಮಾರುಕಟ್ಟೆ ಮಾತ್ರ ರೆಡ್‌ಮಿ ಕೆ20 ಪೋನಿಗಿಂತ ರಿಯಲ್‌ಮಿ ಎಕ್ಸ್ ಪೋನ್ ಹೆಚ್ಚು ಮಾರಾಟವಾಗಲಿದೆ ಎಂದು ಅಂದಾಜಿಸಿದೆ. ಹಾಗಾದರೆ, ಇದೇ ವಾರ ಒಟ್ಟಿಗೆ ಮಾರಾಟಕ್ಕೆ ಬರುತ್ತಿರುವ ರೆಡ್‌ಮಿ ಕೆ20 ಮತ್ತು ರಿಯಲ್‌ಮಿ ಎಕ್ಸ್ ಎರಡೂ ಫೋನ್‌ಗಳು ಹೇಗಿವೆ?, ಯಾವುದು ಬೆಸ್ಟ್? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಬೆಲೆಗಳು ಎಷ್ಟು?

ಬೆಲೆಗಳು ಎಷ್ಟು?

ಭಾರತದಲ್ಲಿ 'ರಿಯಲ್‌ ಮಿ ಎಕ್ಸ್‌' ಸ್ಮಾರ್ಟ್‌ಪೋನ್ ಬೆಲೆಯು 16.999 ರೂಪಾಯಿಗಳಿಂದ ಆರಂಭವಾಗಿದೆ. ಜಿಬಿ ರ್ಯಾಮ್ + 128 ಜಿಬಿ ಶೇಖರಣಾ ಮಾದರಿಗೆ 16,999 ರೂ.ಗಳಾದರೆ, 8 ಜಿಬಿ ರ್ಯಾಮ್ + 128 ಜಿಬಿ ಶೇಖರಣಾ ರೂಪಾಂತರದ ಸ್ಮಾರ್ಟ್‌ಫೋನ್ ಬೆಲೆ 19,999 ರೂ.ಗಳಾಗಿವೆ.

ಭಾರತದಲ್ಲಿ ರೆಡ್‌ಮಿ ಕೆ 20 ಸ್ಮಾರ್ಟ್‌ಪೋನ್ ಬೆಲೆಯು 21,999 ರೂ.ಗಳಿಂದ ಆರಂಭವಾಗಿದೆ. 6 ಜಿಬಿ ರ್ಯಾಮ್ + 64 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 21,999 ರೂ. ಹಾಗೂ 6 ಜಿಬಿ ರ್ಯಾಮ್ + 128 ಜಿಬಿ ಸ್ಟೋರೇಜ್ ಮಾದರಿಯ ಬೆಲೆ ರೂ. 23,999. ಗಳಾಗಿವೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ರಿಯಲ್‌ಮಿ ಎಕ್ಸ್ ಸ್ಮಾರ್ಟ್‌ಫೋನ್ 6.5 ಇಂಚಿನ ವಿಶಾಲ AMOLED ನೋಚ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ ರೆಶಲ್ಯೂಶನ್‌ ಒಳಗೊಂಡಿದೆ. ಡಿಸ್‌ಪ್ಲೇಯ ಸುತ್ತಲೂ ಅತಿ ಕಡಿಮೆ ಅಂಚನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿದೆ. ಗೇಮ್ಸ್‌ ಆಡಲು ಮತ್ತು ವಿಡಿಯೊ ವೀಕ್ಷಿಸಲು ಡಿಸ್‌ಪ್ಲೇಯು ಅತ್ಯುತ್ತಮ ಎನಿಸಲಿದೆ.

ಶಿಯೋಮಿಯ K20 ಸ್ಮಾರ್ಟ್‌ಫೋನ್ 6.39 ಇಂಚಿನ ಹಾರಿಜೋನ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 19.5:9ರಷ್ಟು ಅನುಪಾತವನ್ನು ಹೊಂದಿದ್ದು, ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ 5 ಪಡೆದಿದೆ. ಅತ್ಯುತ್ತಮ ರೆಸಲ್ಯೂಶನ ಜೊತೆಗೆ ವಿಶಾಲವಾದ ಡಿಸ್‌ಪ್ಲೇಯು ವಿಡಿಯೊ ವೀಕ್ಷಣೆಗೆ ಉತ್ತಮ ಎನಿಸಲಿದೆ.

ಪ್ರೊಸೆಸರ್

ಪ್ರೊಸೆಸರ್

ರಿಯಲ್ ಕಂಪೆನಿಯು ತನ್ನ ಮಿ 3 ಪ್ರೊ ದಲ್ಲಿಯೂ ಸಹ ಕಂಪನಿಯು ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿತ್ತು. ಈಗ ರಿಯಲ್ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿದೆ. ಮಲ್ಟಿಟಾಸ್ಕ್‌ ಕೆಲಸಗಳು ಸುಲಭವಾಗಿ ಮಾಡಬಹುದಾಗಿದ್ದು, ಗೇಮ್‌ ಆಡಲು ಸಹ ಪೂರಕವಾಗಿರಲಿದೆ.

ಶಿಯೋಮಿಯ K20 ಸ್ಮಾರ್ಟ್‌ಫೋನ್ ಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಶಕ್ತಿಯನ್ನು ಒಳಗೊಂಡಿದ್ದು, ಪ್ರೊಸೆಸರ್ 6 ಕೋರ್‌ ಕ್ಲಾಕ್ಡ್‌1.8 ಗಿಗಾಹರ್ಡ್ಜ ವೇಗವನ್ನು ಪಡೆದಿದೆ. ಪ್ರೊಸೆಸರ್‌ನಲ್ಲಿ‌ 8nm ತಂತ್ರಾಜ್ಞಾನವಿದ್ದು, ಇದು ಬ್ಯಾಟರಿ ಉಳಿಕೆಗೆ ಮತ್ತು ಮಲ್ಟಿಟಾಸ್ಕ್ ಕೆಲಸಗಳಿಗೆ ನೆರವಾಗಲಿದೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಹಿಂಬದಿಯಲ್ಲಿ ಸೋನಿಯ IMX586 ಸೆನ್ಸಾರ್ 48ಎಂಪಿ (f/1.7) ಕ್ಯಾಮೆರಾ ಹಾಗೂ ಎಫ್ / 2.4 ದ್ಯುತಿರಂಧ್ರದೊಂದಿಗೆ 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಕೆಂಡರಿ ಕ್ಯಾಮೆರಾವನ್ನು ನೋಡಬಹುದಾಗಿದೆ. ಇನ್ನುಳಿದಂತೆ ಕ್ಯಾಮೆರಾ ತಂತ್ರಜ್ಞಾನಗಳಲ್ಲಿ ಸ್ಮಾರ್ಟ್‌ಪೋನ್ ಮುಂದಿದೆ ಎನ್ನಬಹುದು.

ಶಿಯೋಮಿಯ K20 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 1.6 ಮೈಕ್ರಾನ್ ಮತ್ತು f/1.75 ಅಪಾರ್ಚರ್ ನೊಂದಿಗೆ 48ಎಂಪಿ ಸೆನ್ಸಾರ್. 1.12 ಮೈಕ್ರಾನ್ ಮತ್ತು f/2.4 ಅಪರ್ಚರ್ ನೊಂದಿಗೆ 8ಎಂಪಿ ಸೆನ್ಸಾರ್ ಹಾಗೂ ತೃತೀಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದ್ದು, 1.12 ಮೈಕ್ರಾನ್ ಮತ್ತು f/2.4 ಅಪರ್ಚರ್ ಸಾಮರ್ಥ್ಯವನ್ನು ಈ ಸಂವೇದಕ ಪಡೆದಿದೆ.

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ರಿಯಲ್‌ ಮಿ ಎಕ್ಸ್‌ ಫೋನಿನಲ್ಲಿ ಈಗಿನ ಪ್ರಮುಖ ಸ್ಮಾರ್ಟ್‌ಪೋನ್‌ಗಳಲ್ಲಿ ಸೆಲ್ಫಿಗಾಗಿ ಪಾಪ್‌ಅಪ್‌ ಕ್ಯಾಮೆರಾ ಆಯ್ಕೆಯನ್ನು ಒದಗಿಸಲಾಗುತ್ತಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನಿನ 16ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾವುನ್ನು ಒದಗಿಸಿದ್ದು, ಅದು 0.7 ಸೆಕೆಂಡ್ಸ್‌ನ ಒಳಗೆ ತೆರೆದುಕೊಳ್ಳುತ್ತದೆ.

ಶಿಯೋಮಿಯ K20 ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿಗಾಗಿ 20ಎಂಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾವು ಪಾಪ್‌ಅಪ್‌ ಮಾದರಿಯಲ್ಲಿದೆ. ಎಲಿಗಂಟ್ ಪನೋರಮಾ ಸೆಲ್ಫಿ ಫೋಟೊ ಸೆರೆಹಿಡಿಯಬಹುದಾಗಿದ್ದು, ಪಾಪ್‌ಅಪ್‌ ಕ್ಯಾಮೆರಾಗೆ ಬಾಹ್ಯ ದಕ್ಕೆಗಳಿಂದ ರಕ್ಷಣೆಯ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇಎಡಿಟಿಂಗ್, ಫಿಲ್ಟರ್, ಆಯ್ಕೆಗಳು ಸೇರಿಕೊಂಡಿವೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್ಫೋನಿನಲ್ಲಿ 3,765mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಬ್ಯಾಟರಿಯು ದೀರ್ಘಕಾಲದವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ VOOC 3.0 ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್‌ ಪಡೆದುಕೊಳ್ಳುತ್ತದೆ ಎಂದು ರಿಯಲ್‌ಮಿ ಕಂಪೆನಿ ತಿಳಿಸಿದೆ. .

ಶಿಯೋಮಿಯ K20 ಸ್ಮಾರ್ಟ್‌ಫೋನ್‌ 4000mAh ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಇದರೊಂದಿಗೆ 18W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಚಾರ್ಜರ್ ಸೌಲಭ್ಯವನ್ನು ನೀಡಲಾಗಿದ್ದು, ಹೀಗಾಗಿ ಸ್ಮಾರ್ಟ್‌ಫೋನ್ ಬಹುಬೇಗನೆ ಚಾರ್ಜ್ ಪಡೆದುಕೊಳ್ಳುತ್ತದೆ. ಗೇಮ್‌ ಆಡಲು 'ಗೇಮ್‌ ಟರ್ಬೋ 2.0' ಸಹ ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ.

Best Mobiles in India

English summary
In this article, we compare the specifications and price of the Redmi K20 with e Realme X to showcase the major differences among these three new mid-range phones. yo know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X