3 ದಿನಗಳಷ್ಟೇ ಬಾಕಿ..! ಹೊಸ Redmi ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್: ವಿಶೇಷತೆಗಳೇನು?
ಶಿಯೋಮಿ (Xiaomi) ಕಂಪನಿಯ ಮುಂಬರುವ ಸ್ಮಾರ್ಟ್‌ಫೋನ್ Redmi K70 Ultra ಭಾರೀ ಸದ್ದು ಮಾಡುತ್ತಿದೆ. ಇದೀಗ, ಅಧಿಕೃತವಾಗಿ ಕಂಪನಿಯು ಈ ಫೋನ್‌ಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಅಪ್ಡೇಟ್ ಒಂದನ್ನು ನೀಡಿದೆ. ಹೌದು, ಶಿಯೋಮಿ ಅಧಿಕೃತವಾಗಿ Redmi K70 Ultra ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಸ್ಮಾರ್ಟ್‌ಫೋನ್ ಇದೇ ಜುಲೈ 19 ರಂದು ಅದ್ಧೂರಿಯಾಗಿ ಲಾಂಚ್ ಆಗಲಿದೆ. ಮುಂಬರುವ ಫೋನಿನ ಕೆಲವು ಪ್ರಮುಖ ವಿಶೇಷತೆಗಳನ್ನು ಸಹ ಬಿಡುಗಡೆಗೂ ಮೊದಲೇ ಬಹಿರಂಗಪಡಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Xiaomi Mix Fold 4 ಮತ್ತು Xiaomi Smart Band 9 ಜೊತೆಗೆ ಈ ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ರೆಡ್ಮಿ ಕೆ 70 ಅಲ್ಟ್ರಾ ಮೊಬೈಲ್ ಉತ್ತಮ ಗುಣಮಟ್ಟದ ಫೀಚರ್ಸ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ. ಇದು 50MP ಕ್ಯಾಮೆರಾ, 5500mAh ಬ್ಯಾಟರಿ ಮತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ಕಂಪನಿಯು ಮೊಬೈಲ್‌ನ 24GB RAM ಮಾದರಿಯನ್ನು ಸಹ ಬಿಡುಗಡೆ ಮಾಡಲಿದೆ. ಇದನ್ನು ಸ್ವತಃ ಶಿಯೋಮಿ ಬಹಿರಂಗಪಡಿಸಿದೆ.

Redmi K70 Ultra ಪೋನಿನ ವಿಶೇಷತೆಗಳೇನು?
ಈ ಸ್ಮಾರ್ಟ್‌ಫೋನ್ 144Hz ರಿಫ್ರೆಶ್ ದರದೊಂದಿಗೆ ಫ್ಲಾಟ್ 1.5K ರೆಸಲ್ಯೂಶನ್ OLED ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯು 3840Hz PWM ಮಬ್ಬಾಗಿಸುವಿಕೆಯನ್ನು ಬಳಸುತ್ತದೆ. ಡಿಸ್ಲ್ಪೇಯು ಕಿರಿದಾದ ಬೆಜೆಲ್‌ಗಳನ್ನು ಪಡೆಯುತ್ತದೆ. ಇದು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಕಣ್ಣಿನ ರಕ್ಷಣೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಆದರೆ, ಡಿಸ್ಪ್ಲೇಯ ನಿಖರವಾದ ಗಾತ್ರವನ್ನು ಇನ್ನೂ ಖಚಿತಪಡಿಸಿಲ್ಲ.
ಪ್ರೊಸೆಸರ್ ಯಾವುದು? ಸ್ಟೋರೇಜ್ ಎಷ್ಟು?
ರೆಡ್ಮಿ ಕೆ 70 ಅಲ್ಟ್ರಾ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ. ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಸ್ಟೋರೇಜ್ ಆಯ್ಕೆಗಳಿಗೆ ಸಂಬಂಧಿಸಿದಂತೆ, ಇದು ಉನ್ನತ ಮಟ್ಟದ 24GB RAM ಮತ್ತು 1TB ಸ್ಟೋರೇಜ್ ವೇರಿಯಂಟ್ ಅನ್ನು ಒಳಗೊಂಡಿರುತ್ತದೆ ಎಂದು ರೆಡ್ಮಿ ಜನರಲ್ ಮ್ಯಾನೇಜರ್ ಥಾಮಸ್ ವಾಂಗ್ ದೃಢಪಡಿಸಿದ್ದಾರೆ.

ಅದ್ಭುತವಾಗಿ ಕ್ಯಾಮೆರಾ ಸೆಟಪ್
ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 50MP ಸೋನಿ IMX906 ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಬಹುಶಃ 8MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಇರುತ್ತದೆ. ವಿಶೇಷವೆಂದರೆ, ರೆಡ್ಮಿ ಕೆ 70 ಅಲ್ಟ್ರಾಯು ಸ್ವಯಂ-ಅಭಿವೃದ್ಧಿಪಡಿಸಿದ AISP ಇಮೇಜಿಂಗ್ ಅಲ್ಗಾರಿದಮ್ ಅನ್ನು ಬಳಸಿದ ಮೊದಲ ರೆಡ್ಮಿ ಫೋನ್ ಆಗಿದೆ. ಈ ವಿಶೇಷ ಫೀಚರ್ಸ್‌ಗಳ ಮೂಲಕ, ಕಂಪನಿಯು ತನ್ನ ಕ್ಯಾಮೆರಾ ಕಾರ್ಯಕ್ಷಮತೆಯನ್ನು ಸುಧಾರಿಸಲು ಮುಂದಾಗಿದೆ.
5500mAh ಬ್ಯಾಟರಿ, 120W ಸ್ಪೀಡ್ ಚಾರ್ಜಿಂಗ್
ರೆಡ್ಮಿ ಕೆ 70 ಅಲ್ಟ್ರಾ 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರುವ ನಿರೀಕ್ಷೆಯಿದೆ. ಜೊತೆಗೆ, ಈ ಫೋನ್ 120W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ ಎಂದು ಖಚಿತಪಡಿಸಲಾಗಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಪ್ರಮಾಣೀಕರಣವನ್ನು ಸಹ ಹೊಂದಿದೆ.

5G ವೈಫೈ ಸಿಗ್ನಲ್ ಸಾಮರ್ಥ್ಯ 58% ಹೆಚ್ಚಳ
Redmi K70 Ultraನ ಮತ್ತೊಂದು ದೊಡ್ಡ ವಿಶೇಷತೆಯೆಂದರೆ, ಶಿಯೋಮಿನ Pengpai T1 ಸಿಗ್ನಲ್ ವರ್ಧನೆ ಚಿಪ್ ಅನ್ನು ಸೇರಿಸುವುದು. ಇದು ವೈಫೈ ಕಾರ್ಯಕ್ಷಮತೆಯಲ್ಲಿ 12% ಹೆಚ್ಚಳ, GPS ಕಾರ್ಯಕ್ಷಮತೆಯಲ್ಲಿ 20% ಸುಧಾರಣೆ ಮತ್ತು 5G ವೈಫೈ ಸಿಗ್ನಲ್ ಸಾಮರ್ಥ್ಯದಲ್ಲಿ 58% ಹೆಚ್ಚಳವನ್ನು ನೀಡುತ್ತದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ Redmi K70 Ultra ಲಾಂಚ್ ಯಾವಾಗ?
ಶಿಯೋಮಿ ಬಹುಶಃ Redmi K70 Ultra ಅನ್ನು ಚೀನಾದಲ್ಲಿ ಮಾತ್ರ ಬಿಡುಗಡೆ ಮಾಡಬಹುದು. ಆದರೆ, ಉತ್ತಮ ಕ್ಯಾಮೆರಾಗಳನ್ನು ಹೊಂದಿರುವ ಈ ಫೋನ್‌ನ ಹೊಸ ಆವೃತ್ತಿಯು ಜಾಗತಿಕವಾಗಿ Xiaomi 14T ಪ್ರೊ ಆಗಿ ಬಿಡುಗಡೆಯಾಗಬಹುದು.


Click it and Unblock the Notifications








