ಸದ್ದಿಲ್ಲದೆ Redmi K80 Pro ಫೋನ್ ಲಾಂಚ್; 6000mAh ಬ್ಯಾಟರಿ.. 1TB ಸ್ಟೋರೇಜ್.. ಬೆಲೆ ಎಷ್ಟು ಗೊತ್ತಾ?
ಶಿಯೋಮಿಯ ಉಪ ಬ್ರಾಂಡ್ ರೆಡ್ಮಿ ತನ್ನ ರೆಡ್ಮಿ K80 ಸರಣಿಯನ್ನು (Redmi K80) ಬಿಡುಗಡೆ ಮಾಡಿದೆ. ಇದರಲ್ಲಿ ಎರಡು ಹೊಸ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳೇ, (ರೆಡ್ಮಿ K80) Redmi K80 ಮತ್ತು ರೆಡ್ಮಿ K80 ಪ್ರೊ (Redmi K80 Pro) ಮೊಬೈಲ್‌ಗಳು. ಈ ಪೈಕಿ, ರೆಡ್ಮಿ K80 ಪ್ರೊ ಫೋನ್ ಶಕ್ತಿಯುತ ಪ್ರೊಸೆಸರ್, ದೊಡ್ಡ ಬ್ಯಾಟರಿ ಮತ್ತು ಅದ್ಭುತ ಕ್ಯಾಮೆರಾ ಹೊಂದಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ಹೌದು, ಹೊಸ ರೆಡ್ಮಿ K80 ಪ್ರೊ ಮೊಬೈಲ್ ಸ್ಟೈಲಿಶ್ ಲುಕ್ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಕಂಪನಿಯು ಇದನ್ನು ನಾಲ್ಕು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಇದು 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಹೊಂದಿದೆ. ಈ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 16GB RAM, 6000mAh ಬ್ಯಾಟರಿ ಮತ್ತು 120W ವೈರ್ಡ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರೆಡ್ಮಿ K80 ಪ್ರೊ ಫೋನಿನ ಬೆಲೆ
12GB RAM + 256GB ಸ್ಟೋರೇಜ್ ಬೆಲೆ = 43,190 ರೂ.
12GB RAM + 512GB ಸ್ಟೋರೇಜ್ ಬೆಲೆ = 46,690 ರೂ.
16GB RAM + 512GB ಸ್ಟೋರೇಜ್ ಬೆಲೆ = 50,190 ರೂ.
16GB RAM + 1TB ಸ್ಟೋರೇಜ್ ಬೆಲೆ = 56,000 ರೂ.
ಕಂಪನಿಯು ರೆಡ್ಮಿ K80 ಪ್ರೊ ಫೋನನ್ನು ಚೀನಾದಲ್ಲಿ 12GB RAM ಮತ್ತು 16GB RAM ನೊಂದಿಗೆ ಬಿಡುಗಡೆ ಮಾಡಿದೆ. ನೀವು, ನಾಲ್ಕು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಸಬಹುದು. ಭಾರತೀಯ ಕರೆನ್ಸಿ ಪ್ರಕಾರ, ಈ ಮೊಬೈಲ್‌ನ ಆರಂಭಿಕ ಬೆಲೆ 43,190 ರೂ. ಮತ್ತು ಟಾಪ್ ವೇರಿಯಂಟ್ ಬೆಲೆ 56,000 ರೂ. ಆಗಿದೆ.
ರೆಡ್ಮಿ K80 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ K80 ಪ್ರೊ ಮೊಬೈಲ್ 6.67 ಇಂಚಿನ 2K ಡಿಸ್ಪ್ಲೇಯನ್ನು ಹೊಂದಿದೆ. ಇದು ಓಎಲ್‌ಇಡಿ ಪಂಚ್ ಹೋಲ್ ಶೈಲಿಯ ಅಲ್ಟ್ರಾ ನ್ಯಾರೋ ಎಡ್ಜ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 3,200 × 1,440 ಪಿಕ್ಸೆಲ್ ರೆಸಲ್ಯೂಶ್ ಹೊಂದಿದೆ. ಇದು 120Hz ರಿಫ್ರೆಶ್ ದರ, 3200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ 3D ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ವೆಟ್ ಹ್ಯಾಂಡ್ ಟಚ್ ಗ್ಲಾಸ್ ಕವರ್ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ರೆಡ್ಮಿ K80 ಪ್ರೊ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಇದನ್ನು 3ನ್ಯಾನೊಮೀಟರ್ ಫ್ಯಾಬ್ರಿಕೇಶನ್ ಮತ್ತು ಓರಿಯನ್ ಸಿಪಿಯು ಆರ್ಕಿಟೆಕ್ಚರ್‌ನಲ್ಲಿ ತಯಾರಿಸಲಾಗಿದೆ. ಈ ಫೋನ್ ಗೇಮಿಂಗ್‌ಗಾಗಿ, ಡ್ಯುಯಲ್ ಲೂಪ್ 3D ಐಸ್ ಕೂಲಿಂಗ್ ಮತ್ತು ರೇಜ್ ಎಂಜಿನ್ 4.0 ತಂತ್ರಜ್ಞಾನದೊಂದಿಗೆ D1 ಗೇಮಿಂಗ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ ಆಧಾರಿತ ಹೈಪರ್ ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಹೊಸ ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ ಶಕ್ತಿಯುತ RAM ಹೊಂದಿದೆ. ಇದು 12GB RAM ಮತ್ತು 16GB RAM ನೊಂದಿಗೆ ಬಿಡುಗಡೆಯಾಗಿದೆ. ಈ ಫೋನಿನಲ್ಲಿ 256GB, 512GB ಮತ್ತು 1 TB ಸ್ಟೋರೇಜ್ ಲಭ್ಯವಿದೆ.
ಕ್ಯಾಮೆರಾ ಸೆಟಪ್
ರೆಡ್ಮಿ K80 ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದು ಲಿಥಿಯಂ ಐಯಾನ್ ಪಾಲಿಮರ್ ಬ್ಯಾಟರಿಯಾಗಿದೆ. ಇದನ್ನು ಚಾರ್ಜ್ ಮಾಡಲು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವೂ ಲಭ್ಯವಿದೆ. ಕೇವಲ 28 ನಿಮಿಷಗಳಲ್ಲಿ ಸಂಪೂರ್ಣವಾಗಿ (ಶೇ.100 ರಷ್ಟು) ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಈ ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP69 ರೇಟಿಂಗ್ ಪಡೆದಿದೆ.


Click it and Unblock the Notifications








