Home
ಮೊಬೈಲ್

Redmi: ಧೂಳೆಬ್ಬಿಸಲು ಬರ್ತಿವೆ 3 ಶಕ್ತಿಶಾಲಿ ಫೋನ್; OnePlus 13 ಗಿಂತ ಕಡಿಮೆ ಬೆಲೆ.. ಹೇಗಿವೆ ಫೀಚರ್ಸ್‌

ಸ್ಮಾರ್ಟ್‌ಫೋನ್ ಪ್ರಿಯರಿಗೆ ಹಬ್ಬವೇ ಸರಿ. ಪ್ರಸಿದ್ಧ ಕಂಪನಿಗಳು ಒಂದರ ಹಿಂದೆ ಒಂದರಂತೆ ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಅದರಂತೆ, ರೆಡ್ಮಿ (Redmi) ತನ್ನ 'K' ಸರಣಿಯಲ್ಲಿ ಹೊಸ ಮೊಬೈಲ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ Redmi K80, Redmi K80 Pro ಮತ್ತು Redmi K80 Pro Plus ಮೊಬೈಲ್‌ಗಳು ಮಾರುಕಟ್ಟೆಗೆ ಬರಲಿವೆ. ಕಂಪನಿಯು ಇತ್ತೀಚೆಗೆ, Redmi K80 ಫೋನಿನ ಫೋಟೋವನ್ನು ಬಹಿರಂಗಪಡಿಸಿತ್ತು. ಇದೀಗ, Redmi K80 Pro ಮೊಬೈಲ್‌ನ ಫೋಟೋವನ್ನು ಅಧಿಕೃತವಾಗಿ ಹಂಚಿಕೊಂಡಿದೆ.

ಹೌದು, ಕಂಪನಿಯು ಮುಂಬರುವ ರೆಡ್ಮಿ K80 ಪ್ರೊ (Redmi K80 Pro) ಫೋನಿನ ವಿನ್ಯಾಸ, ಬೆಲೆ ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 4 ಪ್ರೊಸೆಸರ್‌ ಹೊಂದಿದೆ. ಇದರಲ್ಲಿ 6.67 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ, 120W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

Redmi: ಬರ್ತಿವೆ 3 ಸೊಗಸಾದ ಫೋನ್; OnePlus 13 ಗಿಂತ ಕಡಿಮೆ ಬೆಲೆ.. ಫೀಚರ್ ಲೀಕ್!

ರೆಡ್ಮಿ K80 ಪ್ರೊ ಫೋನಿನ ಬೆಲೆ (ನಿರೀಕ್ಷಿತ)

ರೆಡ್ಮಿ K80 ಪ್ರೊ ಮೊಬೈಲ್ iQOO 13 ಮತ್ತು OnePlus 13 ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಲಿದೆ. ಐಕ್ಯೂ 13 ಫೋನಿನ 12GB + 256GB ಸ್ಟೋರೇಜ್‌ ರೂಪಾಂತರದ ಬೆಲೆ 47,160 ರೂ. ಆಗಿದೆ. ಒನ್‌ಪ್ಲಸ್‌ 13 ಮೊಬೈಲ್‌ ಅನ್ನು 53,200 ರೂ.ಗೆ ಬಿಡುಗಡೆ ಮಾಡಲಾಗಿದೆ. ಮುಂಬರುವ ರೆಡ್ಮಿ K80 ಪ್ರೊ ಬೆಲೆ 4,499 ಯುವಾನ್‌ಗಿಂತ ಕಡಿಮೆ ಇರಬಹುದು.

ರೆಡ್ಮಿ K80 ಪ್ರೊ ಒನ್‌ಪ್ಲಸ್‌ ಫೋನ್‌ಗಳಿಗಿಂತ ಹೆಚ್ಚಿನ ಸ್ಟೋರೇಜ್‌ ಹೊಂದಿರುತ್ತದೆ. ಈ ಹಿಂದೆ ಬಿಡುಗಡೆಯಾಗಿದ್ದ Redmi K70 Pro ಮೊಬೈಲ್ 24GB RAM ಮತ್ತು 1TB ಸ್ಟೋರೇಜ್ ಹೊಂದಿದೆ. ಹೊಸ ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ ಸಹ ಇದೇ ರೀತಿ ಸ್ಟೋರೇಜ್‌ ಹೊಂದಿರುವ ಸಾಧ್ಯತೆಯಿದೆ. ಈ ಬಾರಿ ರೆಡ್ಮಿ K80 ಮತ್ತು ರೆಡ್ಮಿ K80 ಪ್ರೊ ಜೊತೆಗೆ ರೆಡ್ಮಿ K80E ಫೋನ್‌ ಬಿಡುಗಡೆಯಾಗುವುದಿಲ್ಲ.

ರೆಡ್ಮಿ K80 ಪ್ರೊ ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ K80 ಪ್ರೊ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 2K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆಯುವ ನಿರೀಕ್ಷೆಯಿದೆ. ಜೊತೆಗೆ ಕಣ್ಣಿನ ರಕ್ಷಣೆ, ಎಐ (AI) ಫ್ರೇಮ್ ಮತ್ತು ರೆಸಲ್ಯೂಶನ್ ಅಪ್‌ಸ್ಕೇಲಿಂಗ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ರೆಡ್ಮಿ K80 ಪ್ರೊ ಅನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಮೊಬೈಲ್‌ 24GB RAM ಮತ್ತು 1TB ಇಂಟರ್ನಲ್ ಸ್ಟೋರೇಜ್‌ ಹೊಂದಿದೆ. ರೆಡ್ಮಿ K80 ಪ್ರೊ ಫೋನ್ HyperOS 2 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಇದು ಗೇಮಿಂಗ್ ಆಧಾರಿತ ಆಪ್ಟಿಮೈಸೇಶನ್‌, ಸ್ಪರ್ಶ ವರ್ಧನೆ ಮತ್ತು ಹೊಸ ಸಿಸ್ಟಂ ಅನಿಮೇಷನ್‌ಗಳನ್ನು ಹೊಂದಿರುತ್ತದೆ.

ಕ್ಯಾಮೆರಾ ಸೆಟಪ್

ರೆಡ್ಮಿ K80 ಪ್ರೊ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದು OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಮುಂಬರುವ ರೆಡ್ಮಿ K80 ಪ್ರೊ ಮೊಬೈಲ್ 5500mAh ಅಥವಾ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ರೆಡ್ಮಿ K80 ಪ್ರೊ ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, ವೈ ಫೈ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Redmi K80 Pro price and key specifications leaked before launch. ರೆಡ್ಮಿ K80 ಪ್ರೊ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳು ಸೋರಿಕೆಯಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+