Home
ಮೊಬೈಲ್

Redmiಯ ಈ ಫೋನ್ ಹಸಿರು ಕಲರ್‌ನಲ್ಲಿ ಲಭ್ಯ: ಬೆಲೆ ಎಷ್ಟು? ಬಿಡುಗಡೆ ಯಾವಾಗ?

ರೆಡ್ಮಿ (Redmi) ಕಂಪನಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಹೊಂದಿವೆ. ತನ್ನ ವಿಭಿನ್ನವಾದ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ರೆಡ್ಮಿ ಕಂಪನಿಯು ಭಾರತದಲ್ಲಿ ತನ್ನ Note ಸರಣಿಯ 5G ಸ್ಮಾರ್ಟ್‌ಫೋನ್ ಆಗಿರುವ Redmi Note 13 Pro 5G ಸ್ಮಾರ್ಟ್‌ಫೋನ್‌ ಅನ್ನು ಕಳೆದ ವರ್ಷ ಬಿಡುಗಡೆ ಮಾಡಿತ್ತು. ಆಗ ಮಿಡ್ನೈಟ್ ಬ್ಲ್ಯಾಕ್, ಅರೋರಾ ಪರ್ಪಲ್ ಮತ್ತು ಓಷನ್ ಟೀಲ್ ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಿತ್ತು. ಇದೀಗ, Olive Green ಬಣ್ಣದ ರೂಪಾಂತರವನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ, ಬನ್ನಿ ಈ ನೂತನ ವೇರಿಯಂಟ್‌ನ ಬೆಲೆ, ಲಭ್ಯತೆ ಹಾಗೂ ಫೀಚರ್ಸ್‌ಗಳಲ್ಲಿ ಏನೆಲ್ಲಾ ಬದಲಾವಣೆ ಆಗಿದೆ? ಅನ್ನೋದನ್ನು ತಿಳಿಯೋಣ ಬನ್ನಿ.

ಆಲಿವ್ ಗ್ರೀನ್ ಬಣ್ಣದ ರೆಡ್ಮಿ ನೋಟ್ 13 ಪ್ರೊ 5G ಫೋನ್ ಮೂರು ವೇರಿಯಂಟ್‌ ಪಡೆದಿದೆ. 8GB+128, 12GB+256, 16GB+512GB ಸ್ಟೋರೇಜ್‌ ವೇರಿಯಂಟ್‌ ಹೊಂದಿದೆ. ಆಲಿವ್ ಗ್ರೀನ್ ರೆಡ್ಮಿ ನೋಟ್ 13 ಪ್ರೊ 5G ಆಯ್ದ ದೇಶಗಳು ಮತ್ತು ಪ್ರದೇಶಗಳಲ್ಲಿ ಸುಮಾರು 33,330 ರೂ. (USD 399) ಬೆಲೆಯಲ್ಲಿ ಲಭ್ಯವಿರಲಿದೆ. Xiaomi ಯ ಅಧಿಕೃತ ಮಾರಾಟದ ಚಾನಲ್‌ಗಳ ಮೂಲಕ ಖರೀದಿಸಬಹುದು ಮತ್ತು ಪ್ರದೇಶವಾರು ಬೆಲೆಗಳು ಬದಲಾಗುತ್ತವೆ.

Redmiಯ ಈ ಫೋನ್ ಹಸಿರು ಕಲರ್‌ನಲ್ಲಿ ಲಭ್ಯ: ಬೆಲೆ ಎಷ್ಟು? ಬಿಡುಗಡೆ ಯಾವಾಗ?

ಶಿಯೋಮಿ (Xiaomi) ರೆಡ್ಮಿ ನೋಟ್ 13 ಪ್ರೊ 5G ಅನ್ನು ಸದ್ದಿಲ್ಲದೆ ರಿಫ್ರೆಶ್ ಮಾಡಿದೆ. ಜಾಗತಿಕವಾಗಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದು ಪ್ರಪಂಚದಾದ್ಯಂತ ಮಾರಾಟವಾಗುವ ಅನೇಕ ರೆಡ್ಮಿ ನೋಟ್ 13 ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇತ್ತೀಚಿನ ರಿಫ್ರೆಶ್ ಅಸ್ತಿತ್ವದಲ್ಲಿರುವ ರೆಡ್ಮಿ ನೋಟ್ 13 ಪ್ರೊ 5G ಲೈನ್‌ಅಪ್‌ಗೆ ಹೆಚ್ಚು ಮ್ಯೂಟ್ ಮಾಡಲಾದ ಬಣ್ಣದ ಆಯ್ಕೆಯಲ್ಲಿದೆ. ಕಂಪನಿಯು ರೆಡ್ಮಿ ನೋಟ್ 13 ಪ್ರೊ 5G ಬಿಡುಗಡೆ ದಿನಾಂಕ ಬಹಿರಂಗಪಡಿಸಿಲ್ಲ, ಆದಾಗ್ಯೂ ಶೀಘ್ರದಲ್ಲೇ ಇದು ಲಭ್ಯವಿರುತ್ತದೆ.

ರೆಡ್ಮಿ ನೋಟ್ 13 ಪ್ರೊ 5G ಫೀಚರ್ಸ್‌

ಬಣ್ಣ ಹೊರತುಪಡಿಸಿ, ಈ ರೆಡ್ಮಿ ನೋಟ್ 13 ಪ್ರೊ 5G ಫೋನ್‌ನ ಫೀಚರ್ಸ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ರೆಡ್ಮಿ ನೋಟ್ 13 ಪ್ರೊ 5G ಸ್ಮಾರ್ಟ್‌ಫೋನ್‌ 6.67-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿವೆ. ಈ ಡಿಸ್‌ಪ್ಲೇಯು 1,220x2,712 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ 1,800nits ಗರಿಷ್ಠ ಬ್ರೈಟ್‌ನೆಸ್‌ ನೀಡಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಹೊಂದಿದೆ.

ಅದ್ಭುತ ಕ್ಯಾಮೆರಾ ಸೆಟಪ್

ರೆಡ್ಮಿ ನೋಟ್‌ 13 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಒಳಗೊಂಡಿದೆ. 200MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಈ ಫೋನ್‌ನ ಪ್ರೊಸೆಸರ್ ಏನು?

ರೆಡ್ಮಿ ನೋಟ್ 13 ಪ್ರೊ 5G Snapdragon 7s Gen 2 SoC ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದೆ. Samsung ISOCELL HP3 ಸಂವೇದಕ, OIS ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ 5.3, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಈ ಫೋನ್‌ನ ಬ್ಯಾಟರಿ ಬ್ಯಾಕಪ್ ಸೂಪರ್!

ಈ ಫೋನ್ ಆಂಡ್ರಾಯ್ಡ್ 13 ಆಧಾರಿತ MIUI 14 ಅನ್ನು ರನ್ ಮಾಡುತ್ತದೆ. ಇದಲ್ಲದೆ, ಇತ್ತೀಚೆಗೆ ಹೈಪರ್ ಓಎಸ್‌ನೊಂದಿಗೆ ಆಂಡ್ರಾಯ್ಡ್ 14 ನವೀಕರಣವನ್ನು ಪಡೆದುಕೊಂಡಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್‌ಗಳನ್ನು ಪಡೆದಿದೆ. AG ಮ್ಯಾಟ್ ಗ್ಲಾಸ್ ಬ್ಯಾಕ್ ಕವರ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ.

Best Mobiles in India

English summary
Redmi Note 13 Pro 5G gets a new Olive Green variant. The Olive Green Redmi Note 13 Pro 5G will be available in select countries and regions starting from Rs 33,330 approx
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+