Home
ಮೊಬೈಲ್

ಕಣ್ಣು ಕುಕ್ಕುವ ಬಣ್ಣಗಳಲ್ಲಿ ಈ ಎರಡು ಫೋನ್‌ ಲಾಂಚ್.. ಆಕರ್ಷಕ ಬೆಲೆ, ಬೊಂಬಾಟ್ ಫೀಚರ್ಸ್!

ರೆಡ್ಮಿ ಕಂಪನಿಯು ಮೊಬೈಲ್ ಪ್ರಿಯರಿಗೆ ಡಬಲ್ ಖುಷಿ ಸುದ್ದಿ ನೀಡಿದೆ! ಕಣ್ಣು ಕುಕ್ಕುವ ಬಣ್ಣಗಳಲ್ಲಿ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೌದು, Redmi Note 13 Pro ಮತ್ತು Redmi Note 13 5G ಮೊಬೈಲ್‌ಗಳನ್ನು ಹೊಸ ಕಲರ್‌ನಲ್ಲಿ ಭಾರತದಲ್ಲಿ ಲಾಂಚ್‌ ಮಾಡಲಾಗಿದೆ. Redmi Note 13 Pro 5G ಅನ್ನು ಜನವರಿಯಲ್ಲಿ Redmi Note 13 5G ಮತ್ತು Note 13 Pro Plus 5G ಜೊತೆಗೆ ಪರಿಚಯಿಸಲಾಗಿತ್ತು. ಈಗ, Redmi Note 13 5G ಅನ್ನು ಹೊಸ ಸ್ಕಾರ್ಲೆಟ್ ರೆಡ್ ಕಲರ್ ಮತ್ತು Note 13 5G ಅನ್ನು ಹೊಸ ಕ್ರೋಮ್ಯಾಟಿಕ್ ಪರ್ಪಲ್ ಬಣ್ಣದಲ್ಲಿ ಬಿಡುಗಡೆಯಾಗಿದೆ.

ಶಿಯೋಮಿ (Xiaomi) ರೆಡ್ಮಿ ನೋಟ್ 13 ಪ್ರೊ ಮತ್ತು ರೆಡ್ಮಿ ನೋಟ್ 13 5G ಅನ್ನು ಸದ್ದಿಲ್ಲದೆ ರಿಫ್ರೆಶ್ ಮಾಡಿದೆ. ಸ್ಕಾರ್ಲೆಟ್ ರೆಡ್‌ ಬಣ್ಣದ ರೆಡ್ಮಿ ನೋಟ್ 13 ಪ್ರೊ 5Gಯ 8GB/128GB ಸ್ಟೋರೇಜ್‌ ವೇರಿಯಂಟ್‌ ಬೆಲೆ ಭಾರತದಲ್ಲಿ 24,999 ರೂ. ಇದೆ. ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಈ ಫೋನ್‌ ಖರೀದಿಸಿದರೆ 3,000 ರೂ.ವರೆಗೆ ಡಿಸ್ಕೌಂಟ್‌ ಪಡೆಯಬಹುದು.

ಕಣ್ಣು ಕುಕ್ಕುವ ಬಣ್ಣಗಳಲ್ಲಿ ಈ ಎರಡು ಫೋನ್‌ ಲಾಂಚ್.. ಬೊಂಬಾಟ್ ಫೀಚರ್ಸ್!

ಬಂಪರ್ ಆಫರ್‌.. ಭರ್ಜರಿ ಡಿಸ್ಕೌಂಟ್..!

ಕ್ರೋಮ್ಯಾಟಿಕ್ ಪರ್ಪಲ್‌ ಬಣ್ಣದಲ್ಲಿರುವ ರೆಡ್ಮಿ ನೋಟ್ 13 5G ಫೋನ್‌ನ 6GB/128GB ಸ್ಟೋರೇಜ್‌ ಮಾದರಿಯ ಬೆಲೆ ಭಾರತದಲ್ಲಿ 16,999 ರೂ. ಇದೆ. ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಈ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರು 1,500 ರೂ. ವರೆಗೆ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಇಂದಿನಿಂದ, ಈ ಎರಡು ಸ್ಮಾರ್ಟ್‌ಫೋನ್‌ಗಳು Mi.com, Flipkart.com, Amazon.com, Mi Home ಮತ್ತು ಅಧಿಕೃತ ಚಿಲ್ಲರೆ ಪಾಲುದಾರರ ಮೂಲಕ ಖರೀದಿಗೆ ಲಭ್ಯವಿವೆ. Redmi Note 13 5G ಮತ್ತು Note 13 Pro 5Gಯ ​​ಪ್ರಮುಖ ವಿಶೇಷತೆಗಳು ಇಲ್ಲಿವೆ ನೋಡಿ.

Redmi Note 13 5G, Note 13 Pro 5Gನ ವಿಶೇಷತೆಗಳು

Redmi Note 13 Pro 5G ಮೊಬೈಲ್ ಸ್ನಾಪ್‌ಡ್ರಾಗನ್ 7s Gen 2 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 1.5K 120Hz AMOLED ಡಿಸ್ಪ್ಲೇ, 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,100 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. HyperOS ಆಧಾರಿತ ಮತ್ತು 200 MP ಟ್ರಿಪಲ್ ಕ್ಯಾಮೆರಾ ಮತ್ತು O14IS ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಕ್ರೋಮ್ಯಾಟಿಕ್ ಪರ್ಪಲ್‌ ಬಣ್ಣದ Redmi Note 13 5Gಯು MediaTek ಡೈಮೆನ್ಸಿಟಿ 6080 SoC ಪ್ರೊಸೆಸರ್ ಹೊಂದಿದೆ. FHD+ 120Hz AMOLED ಡಿಸ್ಪ್ಲೇ, 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ ಪಡೆದಿದೆ. 108 MP ಟ್ರಿಪಲ್-ಕ್ಯಾಮೆರಾ ಸೆಟಪ್ ಮತ್ತು Android 14 ಆಧಾರಿತ ಹೈಪರ್ ಓಎಸ್ ಒಳಗೊಂಡಿದೆ.

ಕಣ್ಣು ಕುಕ್ಕುವ ಬಣ್ಣಗಳಲ್ಲಿ ಈ ಎರಡು ಫೋನ್‌ ಲಾಂಚ್.. ಬೊಂಬಾಟ್ ಫೀಚರ್ಸ್!

Redmi Note 13 5G ಸಂಪೂರ್ಣ ಫೀಚರ್ಸ್

  • ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC
  • ಡಿಸ್ಪ್ಲೇ: 6.67-ಇಂಚಿನ FHD+ AMOLED ಡಿಸ್ಪ್ಲೇ
  • ರಿಫ್ರೆಶ್ ರೇಟ್: 120Hz ರಿಫ್ರೆಶ್ ರೇಟ್
  • RAM: 6GB/8GB/12GB LPDDR4X RAM
  • ಸ್ಟೋರೇಜ್: 128GB/256GB UFS 2.2 ಸ್ಟೋರೇಜ್
  • ಕ್ಯಾಮೆರಾ: 108 MP ಜೊತೆಗೆ OIS (ಮುಖ್ಯ) + 8 MP (ಅಲ್ಟ್ರಾವೈಡ್) + 2 MP (ಆಳ), 16 MP, 30fps ನಲ್ಲಿ 1080p ವಿಡಿಯೋ
  • ಬ್ಯಾಟರಿ: 5,000 mAh ಬ್ಯಾಟರಿ, 33W ಚಾರ್ಜಿಂಗ್
  • ರೇಟಿಂಗ್: IP54 ರೇಟಿಂಗ್
  • ಬೆಲೆ: ಆರಂಭಿಕ ಬೆಲೆ 17,999 ರೂ.

Redmi Note 13 Pro 5G ಸಂಪೂರ್ಣ ಫೀಚರ್ಸ್

  • ಪ್ರೊಸೆಸರ್: Snapdragon 7s Gen 2 SoC
  • ಡಿಸ್ಪ್ಲೇ: 6.67-ಇಂಚಿನ 1.5K AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್, ಡಾಲ್ಬಿ ವಿಷನ್
  • RAM: 8GB/12GB LPDDR4X RAM
  • ಸ್ಟೋರೇಜ್: 128GB/256GB UFS 2.2 ಸ್ಟೋರೇಜ್
  • ಕ್ಯಾಮೆರಾ: 200 MP ಜೊತೆಗೆ OIS (ಮುಖ್ಯ) + 8 MP (ಅಲ್ಟ್ರಾವೈಡ್) + 2 MP (ಮ್ಯಾಕ್ರೋ), 16 MP, 30/60fps ನಲ್ಲಿ 1080p ವಿಡಿಯೋ
  • ಬ್ಯಾಟರಿ: 5,100 mAh ಬ್ಯಾಟರಿ, 67W ಚಾರ್ಜಿಂಗ್
  • ರೇಟಿಂಗ್: IP54 ರೇಟಿಂಗ್
  • ಬೆಲೆ: ಆರಂಭಿಕ ಬೆಲೆ 25,999 ರೂ.
Best Mobiles in India

English summary
Redmi Note 13 Pro And Redmi Note 13 New Color Options Launched in India: Check Price, Specs, Offers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+