Home
ಮೊಬೈಲ್

ಭರ್ಜರಿ ಡಿಸ್ಕೌಂಟ್! 6200mAh ಬ್ಯಾಟರಿ.. 512GB ಸ್ಟೋರೇಜ್‌.. ಹೊಸ Redmi ಫೋನ್ ಮತ್ತಷ್ಟು ಅಗ್ಗ!

ಹೊಸ ವರ್ಷದ ಪ್ರಯುಕ್ತ ಫ್ಲಿಪ್‌ಕಾರ್ಟ್ ಬಂಪರ್ ಆಫರ್‌ ಘೋಷಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ರೆಡ್ಮಿ ಫೋನಿನ ಮೇಲೆ ಆಕರ್ಷಕ ರಿಯಾಯಿತಿ ನೀಡುತ್ತಿದೆ. ಹೌದು, ರೆಡ್ಮಿ ನೋಟ್ 14 ಪ್ರೊ+ 5G (Redmi Note 14 Pro+ 5G) ಫೋನ್ ಶೇ.11 ರಷ್ಟು ಡಿಸ್ಕೌಂಟ್ ಲಭ್ಯವಿದೆ. ಈ ಮೊಬೈಲ್ ಅನ್ನು Redmi Note 14 ಸರಣಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಸೂಪರ್ ಎಐ ಸ್ಮಾರ್ಟ್‌ಫೋನ್‌ ಆಗಿದೆ. ಬನ್ನಿ, ಈ ಹೊಸ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ರೆಡ್ಮಿ ನೋಟ್ 14 ಪ್ರೊ+ 5G ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 7S ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 12GB RAM + 512GB ಸ್ಟೋರೇಜ್, 6200mAh ಬ್ಯಾಟರಿ ಮತ್ತು 90W ಸ್ಪೀಡ್ ಚಾರ್ಜಿಂಗ್ ಸೇರಿದಂತೆ ಮುಂತಾದ ಫೀಚರ್ಸ್ ಒಳಗೊಂಡಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಭರ್ಜರಿ ಡಿಸ್ಕೌಂಟ್! 6200mAh ಬ್ಯಾಟರಿ, 512GB ಸ್ಟೋರೇಜ್‌..ಅದೂ ಹೊಸ Redmi ಫೋನ್

ರೆಡ್ಮಿ ನೋಟ್ 14 ಪ್ರೊ+ 5G ವೈಶಿಷ್ಟ್ಯಗಳು

ದೊಡ್ಡ ಡಿಸ್ಪ್ಲೇ

ರೆಡ್ಮಿ ನೋಟ್ 14 ಪ್ರೊ+ ಮೊಬೈಲ್ 6.67 ಇಂಚಿನ 1.5K ಓಎಲ್‌ಇಡಿ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಇದು 2712 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 3000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡಾಲ್ಬಿ ವಿಷನ್ ತಂತ್ರಜ್ಞಾನ ಹೊಂದಿದೆ. ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಸಹ ಹೊಂದಿದೆ.

ಸ್ನಾಪ್‌ಡ್ರಾಗನ್ ಪ್ರೊಸೆಸರ್

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ಹೈಪರ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.

ಮೂರು ಬೊಂಬಾಟ್ ಕ್ಯಾಮೆರಾಗಳು

ರೆಡ್ಮಿ ನೋಟ್ 14 ಪ್ರೊ+ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

6200mAh ಸಾಮರ್ಥ್ಯದ ಬ್ಯಾಟರಿ

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಮೊಬೈಲ್ 6200mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ಸೂಪರ್ ಎಐ (SuperAI) ಸ್ಮಾರ್ಟ್‌ಫೋನ್ ಆಗಿದೆ. ಈ ಮೊಬೈಲ್ 20ಕ್ಕೂ ಹೆಚ್ಚು ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ.

ಇತರೆ ವೈಶಿಷ್ಟ್ಯಗಳು

ರೆಡ್ಮಿ ನೋಟ್ 14 ಪ್ರೊ+ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್‌ ಪಡೆದಿದೆ. ಜೊತೆಗೆ ಐಆರ್ ಬ್ಲಾಸ್ಟರ್ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ರೆಡ್ಮಿ ನೋಟ್ 14 ಪ್ರೊ+ 5G ಬೆಲೆ ಮತ್ತು ಆಫರ್‌ಗಳು

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಫೋನಿನ 8GB + 12GB ಸ್ಟೋರೇಜ್‌ ರೂಪಾಂತರವು 30,999 ರೂ.ಗೆ ಬಿಡುಗಡೆಯಾಗಿತ್ತು. ಪ್ರಸ್ತುತ, ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ 1,000 ರೂ. ತ್ವರಿತ ರಿಯಾಯಿತಿ ನೀಡಲಾಗುತ್ತದೆ. ನೀವು ಈ ಫೋನನ್ನು 29,999 ರೂ.ಗೆ ಖರೀದಿ ಮಾಡಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಪಾವತಿ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಜೊತೆಗೆ ನೋ ಕಾಸ್ಟ್‌ ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್‌ ಸಹ ನೀಡಲಾಗುತ್ತಿದೆ.

Best Mobiles in India

English summary
Redmi Note 14 Pro+ 5G Available With 11 Percent Discount on Flipkart Sale: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+