Home
ಮೊಬೈಲ್

Redmi: ಈ ರಗಡ್ ಫೋನ್ ಖರೀದಿಗೆ ಲಭ್ಯ; 256GB ಸ್ಟೋರೇಜ್‌.. ಮೂರು ಅದ್ಭುತ ಕ್ಯಾಮೆರಾಗಳು.. ಬೆಲೆ ಇಷ್ಟೆನಾ?

ರೆಡ್ಮಿ ಇತ್ತೀಚೆಗೆ ಭಾರತದಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ರೆಡ್ಮಿ ನೋಟ್‌ 14 ಪ್ರೊ (Redmi Note 14 Pro) ಹೆಸರಿನೊಂದಿಗೆ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೌದು. ಕಂಪನಿಯು ತನ್ನ ರೆಡ್ಮಿ ನೋಟ್‌ 14 5G (Redmi Note 14 series) ಸರಣಿಯಲ್ಲಿ ಈ ಮೊಬೈಲ್‌ ಅನ್ನು ಪರಿಚಯಿಸಿದೆ. ಪ್ರಸ್ತುತ, ಈ ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯವಿದೆ. ಬನ್ನಿ ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ರೆಡ್ಮಿ ನೋಟ್‌ 14 ಪ್ರೊ ಸ್ಮಾರ್ಟ್‌ಫೋನ್ ತನ್ನ ಸ್ಟೈಲಿಶ್ ಲುಕ್ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಇದು ಎರಡು ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 256GB ಸ್ಟೋರೇಜ್, 5500mAh ಬ್ಯಾಟರಿ ಮತ್ತು 45W ಸ್ಪೀಡ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Redmi Note 14 Pro ಖರೀದಿಗೆ ಲಭ್ಯ; ಅದ್ಭುತ ವೈಶಿಷ್ಟ್ಯಗಳು.. ಕಡಿಮೆ ಬೆಲೆ!

ರೆಡ್ಮಿ ನೋಟ್‌ 14 ಪ್ರೊ ಫೋನಿನ ಬೆಲೆ

8GB RAM + 128GB ಸ್ಟೋರೇಜ್ ಬೆಲೆ = 24,999 ರೂ.
8GB RAM + 256GB ಸ್ಟೋರೇಜ್‌ ಬೆಲೆ = 26,999 ರೂ.

ರೆಡ್ಮಿ ನೋಟ್‌ 14 ಪ್ರೊ ಮೊಬೈಲ್ 24,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ನೀವು, ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಫೋನನ್ನು ಖರೀದಿಸಬಹುದು. ಐಸಿಐಸಿಐ ಬ್ಯಾಂಕ್ ಕಾರ್ಡ್‌ ಪಾವತಿ ಮೇಲೆ 1,000 ರೂ. ತ್ವರಿತ ರಿಯಾಯಿತಿ ಅಥವಾ 1,000 ರೂ. ಎಕ್ಸ್‌ಚೇಂಜ್‌ ಬೋನಸ್ ಲಭ್ಯವಿದೆ. ಇದು ಐವಿ ಗ್ರೀನ್, ಫ್ಯಾಂಟಮ್ ಪರ್ಪಲ್ ಮತ್ತು ಟೈಟಾನ್ ಬ್ಲಾಕ್ ಬಣ್ಣದಲ್ಲಿ ಲಭ್ಯವಿದೆ.

ರೆಡ್ಮಿ ನೋಟ್ 14 ಪ್ರೊ 5G: ಟಾಪ್ 5 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರೆಡ್ಮಿ ನೋಟ್ 14 ಪ್ರೊ 5G ಫೋನ್ 6.67 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು 3D ಕರ್ವ್‌ ಅಮೋಲೆಡ್‌ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 2712 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್‌, 120Hz ರಿಫ್ರೆಶ್ ದರ ಮತ್ತು 3000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?

ರೆಡ್ಮಿ ನೋಟ್ 14 ಪ್ರೊ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ ಹೊಂದಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ಹೈಪರ್ ಓಎಸ್‌ 1.0ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನಿನಲ್ಲಿ 8GB RAM, 128GB ಮತ್ತು 256GB ಸ್ಟೋರೇಜ್ ಇದೆ.

ಮೂರು ಅದ್ಭುತ ಕ್ಯಾಮೆರಾಗಳು

ರೆಡ್ಮಿ ನೋಟ್ 14 ಪ್ರೊ 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ದೊಡ್ಡ ಬ್ಯಾಟರಿ, ಸ್ಪೀಡ್ ಚಾರ್ಜಿಂಗ್

ರೆಡ್ಮಿ ನೋಟ್ 14 ಪ್ರೊ 5G ಫೋನ್ 5500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ಟರ್ಬೋ ಚಾರ್ಜಿಂಗ್ ಸೌಲಭ್ಯ ಕಲ್ಫಿಸಲಾಗಿದೆ.

Best Mobiles in India

English summary
Redmi Note 14 Pro Now Available for Purchase in India: offers, price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+