Home
ಮೊಬೈಲ್

ಭಾರತಕ್ಕೆ Redmi Note 14 Pro+ 5G ಗ್ರ್ಯಾಂಡ್ ಎಂಟ್ರಿ; 6200mAh ಬ್ಯಾಟರಿ.. 512GB ಸ್ಟೋರೇಜ್‌.. ಬೆಲೆ ಇಷ್ಟೆನಾ?

ರೆಡ್ಮಿ ಪ್ರಿಯರ ಕಾಯುವಿಕೆ ಮುಗಿಯಿತು! ಬಹುನಿರೀಕ್ಷಿತ ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G (Redmi Note 14 Pro+ 5G) ಫೋನ್ ಬಿಡುಗಡೆಯಾಗಿದೆ. ಹೌದು, ಕಂಪನಿಯು Redmi Note 14 ಸರಣಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದರಲ್ಲಿ ಮೂರು ಹೊಸ ಮೊಬೈಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಈ ಪೈಕಿ ರೆಡ್ಮಿ ನೋಟ್ 14 ಪ್ರೊ + 5G ಸೂಪರ್ ಎಐ ಸ್ಮಾರ್ಟ್‌ಫೋನ್‌ ಆಗಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಮೊಬೈಲ್ ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಸ್ನಾಪ್‌ಡ್ರಾಗನ್ 7S ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 12GB RAM + 512GB ಸ್ಟೋರೇಜ್, 6200mAh ಬ್ಯಾಟರಿ ಮತ್ತು 90W ಸ್ಪೀಡ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Redmi Note 14 Pro+ ಲಾಂಚ್; 6200mAh ಬ್ಯಾಟರಿ, 512GB ಸ್ಟೋರೇಜ್‌.. ಬೆಲೆ ನೋಡಿ

20ಕ್ಕೂ ಹೆಚ್ಚು ಎಐ ವೈಶಿಷ್ಟ್ಯಗಳು

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಸೂಪರ್ ಎಐ (SuperAI) ಸ್ಮಾರ್ಟ್‌ಫೋನ್ ಆಗಿದೆ. ಈ ಮೊಬೈಲ್ 20ಕ್ಕೂ ಹೆಚ್ಚು ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋಟೋ ಕ್ಲಿಕ್ಕಿಸಲು, ಫೋಟೋ ಮತ್ತು ವಿಡಿಯೋ ಎಡಿಟಿಂಗ್, ಟ್ರಾನ್ಸ್‌ಲೇಟ್, ಇಂಟರ್ನೆಟ್ ಸರ್ಚ್‌ ಸೇರಿದಂತೆ ಹಲವು ಕೆಲಸಗಳನ್ನು ಎಐ ಸಹಾಯದಿಂದ ವೇಗವಾಗಿ ಮಾಡಬಹುದು.

ಎಐ ಇಮೇಜ್ ವಿಸ್ತರಣೆ, ಎಐ ಎರೇಸ್ ಪ್ರೊ, ಎಐ ಸ್ಮಾರ್ಟ್ ಕ್ಲಿಪ್, ಎಐ ಕಟೌಟ್, ಎಐ ಸ್ಕೈ, ಎಐ ಇಂಟರ್ಪ್ರಿಟರ್, ಎಐ ಲೈವ್ ಟ್ರಾನ್ಸ್‌ಲೇಟ್, ಎಐ ಉಪಶೀರ್ಷಿಕೆಗಳು, ಅಂತರ್ನಿರ್ಮಿತ ಜೆಮಿನಿ, ಜೋನ್‌ ಟು ಸರ್ಚ್‌ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿದೆ.

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಮೊಬೈಲ್ 6.67 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು ಓಎಲ್‌ಇಡಿ ಪಂಚ್ ಹೋಲ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 2712 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ದರ ಮತ್ತು 3000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡಾಲ್ಬಿ ವಿಷನ್ ತಂತ್ರಜ್ಞಾನ ಹೊಂದಿದೆ. ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7S ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ಹೈಪರ್ ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಕ್ಯಾಮೆರಾ ಸೆಟಪ್

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಮೊಬೈಲ್, 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಮೊಬೈಲ್ 6200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಲಿಕಾನ್ ಕಾರ್ಬನ್ ಬ್ಯಾಟರಿಯಾಗಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್‌ ಪಡೆದಿದೆ. ಜೊತೆಗೆ ಐಆರ್ ಬ್ಲಾಸ್ಟರ್ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಬೆಲೆ

8GB + 12GB ಸ್ಟೋರೇಜ್‌ = 29,999 ರೂ.
8GB + 256GB ಸ್ಟೋರೇಜ್‌ = 31,999 ರೂ.
8GB + 512GB ಸ್ಟೋರೇಜ್‌ = 34,999 ರೂ.

ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಫೋನಿನ ಆರಂಭಿಕ ಬೆಲೆ 29,999 ರೂ. ಆಗಿದೆ. ಇದು ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ಚೇಂಜ್ ಆಫರ್‌ಗಳನ್ನು ಒಳಗೊಂಡಿದೆ. ರೆಡ್ಮಿ ನೋಟ್ 14 ಪ್ರೊ ಪ್ಲಸ್ 5G ಫೋನಿನ ಮಾರಾಟವು ಡಿಸೆಂಬರ್ 13 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ನೀವು ಕಂಪನಿಯ ವೆಬ್‌ಸೈಟ್ (Mi.com), ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು.

Best Mobiles in India

English summary
Redmi Note 14 Pro Plus Launched in india: know price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+